Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರಾಯಚೂರು To ಪ್ಯಾನ್ ಇಂಡಿಯಾ *ಜನ್ಮೋತ್ಸವ*
- ಸಿನಿಮಾ

ರಾಯಚೂರು To ಪ್ಯಾನ್ ಇಂಡಿಯಾ *ಜನ್ಮೋತ್ಸವ*

ಭಾರತದಲ್ಲಿ ಚಳುವಳಿಗಳ ಹುಟ್ಟಿಗೆ ಕಾರಣರಾದ, ನಾಯಕಲೋಕಮಾನ್ಯ ಬಾಲಗಂಗಾಧರ ತಿಲಕರನ್ನ ನೆನೆಯುತ್ತಾ.ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ,ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು.ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ,ಇಂದಿಗೂ ಮುಂದುವರಿಯುತ್ತಿದೆ. ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು, ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ, […]

ಭಾರತದಲ್ಲಿ ಚಳುವಳಿಗಳ ಹುಟ್ಟಿಗೆ ಕಾರಣರಾದ, ನಾಯಕ
ಲೋಕಮಾನ್ಯ ಬಾಲಗಂಗಾಧರ ತಿಲಕರನ್ನ ನೆನೆಯುತ್ತಾ.
ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ,ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು.ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ,ಇಂದಿಗೂ ಮುಂದುವರಿಯುತ್ತಿದೆ. ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.

ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು, ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ, ವಿಶೇಷವಾಗಿ ಹೇಳುವುದಾದರೆ ಉತ್ತರ ಕರ್ನಾಟಕದ ಕಡೆ ಗಣೇಶನನ್ನು ಮಾತ್ರ ಕೂಡಿಸಲಾಗುತ್ತದೆ, ಕೆಲವು ಮನೆಯಲ್ಲಿ ಒಂದು ದಿನ, ಐದು ದಿನ, ಒಂಬತ್ತು ದಿನ, 11 ದಿನ ಹೀಗೆ.

ಆದರೆ ಉತ್ತರ ಕರ್ನಾಟಕದ ಬಹುತೇಕ ಊರುಗಳ ಗಲ್ಲಿ ಗಲ್ಲಿಗಳಲ್ಲಿ ತುಂಬಾ ವಿಭಿನ್ನವಾದ ಅಂತಹ ಗಣಪತಿಯನ್ನು ತರಲಾಗುತ್ತದೆ, ಗಣೇಶ ತರುವಾಗಲೂ ಡಿಜೆ ಸೌಂಡುಗಳ ದೊಡ್ಡ ಹವಾ ಹಾಗೇ ಗಣೇಶನ ವಿಸರ್ಜನೆಯ ಸಮಯದಲ್ಲಂತೂ ಡಿಜೆ ಸೌಂಡ್ ಜತೆಗೆ ಸಾಂಗ್ ಗಳ ಮಹಾಸಂಭ್ರಮ.

ಗಣಪತಿ ಕೂತ ಸಮಯದಿಂದ ಗಣೇಶನ ವಿಸರ್ಜನೆಯ ತನಕ, ಬಹಳಷ್ಟು ಕಥೆಗಳು ನಡೆಯುತ್ತವೆ ಆ ಕಥೆಗಳು ರೋಮಾಂಚನಕಾರಿಯಾಗಿಯೂ ಇರುತ್ತವೆ, ಅದರಲ್ಲೂ ಗಣೇಶನ ವಿಸರ್ಜನೆಯ ಸಮಯದಲ್ಲಿ ಎಲ್ಲ ಕಡೆಗಳಲ್ಲೂ ಸಣ್ಣಪುಟ್ಟ ಗಲಾಟೆಗಳು ಗೊಂದಲಗಳು ಆಗುತ್ತಲೇ ಇರುತ್ತವೆ,ಅವು ಸರ್ವೇಸಾಮಾನ್ಯ.

ಯುವ ನಿರ್ದೇಶಕ ರಾಯಚೂರಿನ ಹುಡುಗ ರಾಮಾಚಾರಿಯ ಜನ್ಮೋತ್ಸವ ಚಿತ್ರವು ಇದೆ ರೀತಿಯ ಗಟ್ಟಿ ಕಂಟೆಂಟ್ ಹೊಂದಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಕಿರುತೆರೆ ಹಿರಿತೆರೆಯ ಹಿರಿಯ ನಟ ನಿರ್ದೇಶಕ ಸುನಿಲ್ ಪುರಾಣಿಕ್ ಮಾತನಾಡಿ, ತಾವು ಮಾಡಿದಂತಹ ಪಾತ್ರ ತುಂಬಾ ಒಳ್ಳೆಯ ಪಾತ್ರ,ಈ ತಂಡದ ಜೊತೆಗೆ ಸಮಯ ಕಳೆದಿದ್ದು ಕಡಿಮೆ ಆದರೂ ಚಿತ್ರತಂಡ ಮಾಡಿಕೊಂಡ ಕಂಟೆಂಟ್ ಬಗ್ಗೆ ನನಗೆ ಭರವಸೆ ಇದೆ, ಗಣಪತಿಯ ಉತ್ಸವ ಮತ್ತು ಗಣಪತಿಯ ವಿಸರ್ಜನೆಯ ಸುತ್ತಮುತ್ತಲು ನಡೆಯುವಂತಹ ಘಟನೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದ್ದು,
ನಿರ್ದೇಶಕ ಮತ್ತು ಛಾಯಾಗ್ರಾಹಕರ ಮಧ್ಯ ಇದ್ದಂತಹ ಆ ಹೊಂದಾಣಿಕೆ ಸಿನಿಮಾ ಚಿತ್ರೀಕರಣದ ಕೆಲಸದಲ್ಲಿಯೂ ಕೂಡ ಕಾಣುತ್ತಿತ್ತು, ಒಂದೊಂದು ಫ್ರೇಮ್ ಕೂಡಾ ಅದ್ಭುತ,
ರಾಯರ ಸಂಪೂರ್ಣ ಅನುಗ್ರಹ ಈ ತಂಡದ ಮೇಲೆ ಇರುತ್ತೆ, ಜನ್ಮೋತ್ಸವ ಚಿತ್ರಕ್ಕೆ ಶುಭವಾಗುತ್ತೆ ಎಂದು ಹಾರೈಸಿದರು,

ಜನ್ಮೋತ್ಸವ ಚಿತ್ರದ ಟ್ರೈಲರ್ ನೋಡಿದಾಗ ನನಗೆ ಅನಿಸಿದ್ದು, ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರ ಎಂದು, ಜನ್ಮೋತ್ಸವ ಚಿತ್ರದಲ್ಲಿ,
ಗಣೇಶನಂಬ ಶಕ್ತಿ ದೇವನಿದ್ದಾನೆ, ಅವನನ್ನ ಪೂಜಿಸುವ ಭಕ್ತರ ಸಮೂಹವಿದೆ, ಗಣೇಶ ಕೂತಂತಹ ಸಮಯದಲ್ಲಿ ಆಗುವಂತಹ ಪೂಜೆ ಪುನಸ್ಕಾರ, ಸಣ್ಣಪುಟ್ಟ ಜಗಳಗಳು ಒಳ ಜಗಳಗಳು, ಒಂದಷ್ಟು ರಾಜಕೀಯ, ಇದರ ಮಧ್ಯೆ ಅಮಾಯಕರು ಅನುಭವಿಸುವ ಯಾತನೆ ಸಂಕಟ ನೋವು ಸಮಸ್ಯೆಗಳು ಹಾಗೆ ಇಂತಹ ಸಮಯಕ್ಕಾಗಿಯೇ ಕಾದು ಕುಳಿತಂತಹ ಚಿಕ್ಕಪುಟ್ಟ ಹಾಗೂ ರೌಡಿಗಳ ಸಂಚುಕೋರರ ಹಟ್ಟಹಾಸ ಸಹಿತ, ಗಣಪತಿ ವಿಸರ್ಜನೆ ಸಮಯದಲ್ಲಿ ಆಗುವಂತಹ ಒಂದಷ್ಟು ಘಟನೆಗಳ ಮೇಲೆ ಕೆಲವು ವಿಚಾರಗಳ ಮೇಲೆ ಜನ್ಮೋತ್ಸವ ಚಿತ್ರ ಸಿದ್ಧವಾಗಿದೆ.

22 ವರ್ಷಗಳ ಹಿಂದೆ ಲೈಟ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡ ನಾನು,ಇಲ್ಲಿಯ ತನಕ ಬಹಳಷ್ಟು ಪ್ರಾಜೆಕ್ಟ್ ಗಳಿಗೆ ಕೆಲಸ ಮಾಡಿದ್ದೇನೆ, ತುಂಬಾ ಒಳ್ಳೊಳ್ಳೆಯ ಕಥೆಗಳನ್ನು ಕೇಳಿದ್ದೇನೆ, ಆದರೆ ಬೇಸರದ ಸಂಗತಿ ಒಳ್ಳೆಯ ಬಹಳಷ್ಟು ಕಥೆಗಳು ಸಿನಿಮಾ ಆಗೋದೇ ಇಲ್ಲ, ಇಂತಹ ವಿಚಾರದಲ್ಲಿಯೇ ನನಗೆ ಸಿಕ್ಕ ಒಂದೊಳ್ಳೆಯ ಕಥೆ ರಾಮಾಚಾರಿ ಬರೆದ ಜನ್ಮೋತ್ಸವ, ಹೀಗಾಗಿ ಈ ಚಿತ್ರವನ್ನ ರಾಮಾಚಾರಿ,ಅಣ್ಣ ಪವನ್ ಆಚಾರ್ಯ ರವರ ಜೊತೆ ಸೇರಿ ನಾನು ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದೇನೆ ಜೊತೆಗೆ ಈ ಚಿತ್ರಕ್ಕೆ ನಾನೇ ಡಿ ಓ ಪಿ ಎಂದರು.

2018 ರಲ್ಲಿ ಮಾಡಿದ್ದ ಚೀಟರ್ ರಾಮಾಚಾರಿ ಚಿತ್ರ ನಿರ್ದೇಶನ ಮಾಡಿದ್ದ ರಾಮಾಚಾರಿ ಕೆಲವು ವರ್ಷಗಳ ಗ್ಯಾಪ್ ನಂತರ, ಒಂದೊಳ್ಳೆ ಕಥೆಯೊಂದಿಗೆ ಮರಳಿದ್ದಾರೆ, ಈ ಬಗ್ಗೆ ಮಾತನಾಡಿದ ನಿರ್ದೇಶಕ ರಾಮಾಚಾರಿ,
ಗಣಪತಿ ಉತ್ಸವ ಅಂದ್ರೆ ನಮ್ಮ ರಾಯಚೂರಿನಲ್ಲಿ ಮಹಾ ಸಂಭ್ರಮ, ಗಣಪನ ವಿಸರ್ಜನೆಯ ಸಮಯ ಡಿಜೆ ಸೌಂಡ್ ಗಳ ಹಾಡುಗಳ ಮಹಾ ಹಬ್ಬ ಇದ್ದೇ ಇರುತ್ತದೆ, ಅಂದು ಸುಮಾರು 500 ರಿಂದ 600 ಗಣಪತಿಗಳ ವಿಸರ್ಜನೆಯ ಕಾರ್ಯಕ್ರಮ ನಡೆಯುತ್ತದೆ,
ಅದನ್ನು ಕಣ್ಣಾರೆ ಕಂಡಿದ್ದ ನನಗೆ ಒಂದು ಕಥೆ ಹೊಳೆಯುತ್ತದೆ ಅದುವೇ ಜನ್ಮೋತ್ಸವ.

ಚಿತ್ರೀಕರಣದ ಸಮಯದಲ್ಲಾದ ಒಂದು ಸತ್ಯ ಘಟನೆಯನ್ನು ವಿವರಿಸಿದ ನಿರ್ದೇಶಕ ರಾಮಾಚಾರಿ, ಚಿತ್ರದಲ್ಲಿ ಅದು ಗಣೇಶ ವಿಸರ್ಜನೆಯ ದೃಶ್ಯ, ಮಳೆ ಬೇಕಾಗಿತ್ತು, ಆದರೆ ಅದು ಸಾಧ್ಯವಾಗಿರಲಿಲ್ಲ, ಇದ್ದ ಹಾಗೆ ಇರಲಿ ಶೂಟಿಂಗ್ ಮಾಡಿಬಿಡೋಣ ಎನ್ನುವಷ್ಟರಲ್ಲಿಯೇ ಒಂದು ಮಿರಾಕಲ್ ನಡೆಯುತ್ತದೆ,

ಜೋರಾಗಿ ವರುಣನ ಕೃಪೆ ಜನ್ಮೋತ್ಸವ ಚಿತ್ರತಂಡದ ಮೇಲೆ ಆದಾಗ, ನಿರ್ದೇಶಕರು ತಾವಂದುಕೊಂಡ ದೃಶ್ಯ ಮುಗಿಸುವ ತನಕ ನಿರಂತರವಾಗಿ ಮಳೆ ಬರುತ್ತಿತ್ತು ಎಂಬುದನ್ನು ರಾಮಾಚಾರಿ ಹೇಳುವಾಗ, ಅವರ ಕಣ್ಣಲ್ಲಿ ಭಕ್ತಿ ಭಾವ ಎದ್ದು ಕಾಣುತ್ತಿತ್ತು.

ಛಾಯಾಗ್ರಹಣದ ಜೊತೆಗೆ ಜನ್ಮೋತ್ಸವ ಚಿತ್ರದ ಮತ್ತೊಂದು ಹೈಲೈಟ್ ಮತ್ತು ಹೀರೋ ಎಂದರೆ,ಸಂಗೀತ ನಿರ್ದೇಶಕ ಪ್ರದ್ಯುತ್ತನ.

ಉತ್ತರ ಕರ್ನಾಟಕದ ರಾಯಚೂರು ಎಂಬ ಊರಿನಲ್ಲಿ, ಮಧ್ಯಮ ರೇಂಜಿನ ಕ್ಯಾನ್ವಾಸ್ ನಲ್ಲಿ ಸಿದ್ಧವಾದ ಜನ್ಮೋತ್ಸವ ಚಿತ್ರ, ಭಾರತದಾದ್ಯಂತ ಇರುವ ಗಣೇಶನನ್ನು ಪೂಜಿಸುವ ಎಲ್ಲ ಭಕ್ತರಿಗೂ ತಲುಪುತ್ತದೆ ಹಾಗೂ ಅದನ್ನು ಸ್ವತ: ಗಣಪತಿ ದೇವ ತಲುಪಿಸುತ್ತಾನೆ ಎನ್ನುವ ನಂಬಿಕೆ ಭರವಸೆ ಚಿತ್ರ ತಂಡಕ್ಕಿದೆ.

ಜನ್ಮೋತ್ಸವ ಚಿತ್ರದ ತಾರಾಗಣದಲ್ಲಿ,,ಸುನಿಲ್ ಪುರಾಣಿಕ್, ಐಶ್ವರ್ಯ ಎಚ್,ಕೃಷ್ಣ ಸಿಂಗ್, ಅವಿನಾಶ್ ತ್ಯಾಗಿ, ರಕ್ಷಿತ್ ರಾಮಚಂದ್ರ, ಮಹಾಂತೇಶ್ ಹಿರೇಮಠ್, ರಾಮಾಚಾರಿ ಸೇರಿದಂತೆ ಬಹಳಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ ಜೊತೆಗೆ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಬಹಳಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ, ಎಂದು ಹೇಳಬಹುದು

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.