ಕಳೆದ ಎರಡುವರೆ ಮೂರು ದಶಕಗಳಿಂದ, ಅಸಂಖ್ಯಾತ ಜನರು ನೋಡುತ್ತಾ ಬಂದಿರುವ ವ್ಯಕ್ತಿಯೊಬ್ಬ, ತನ್ನ ದೇಹವನ್ನ ಎಷ್ಟು ಕಟ್ಟು ಮಸ್ತಾಗಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಹೇಗೆ ಸಾಧ್ಯ ಗುರುವೇ ??
ಎಂಬ ಪ್ರಶ್ನೆ ಮೂಡಲೇಬೇಕು.
ವ್ಯಕ್ತಿ ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರಲಿ, ಅದರಲ್ಲೂ ವಿಶೇಷವಾಗಿ ಹೇಳುವುದಾದರೆ ಧಾರಾವಾಹಿ ಕಲಾವಿದರು ಸಿನಿಮಾ ಕಲಾವಿದರು, ಕ್ರಿಕೆಟ್ ಆಟಗಾರರು ಫುಟ್ಬಾಲ್ ಆಟಗಾರರು ಹೀಗೆ ಎಲ್ಲಾ ಕ್ಷೇತ್ರದ ಆಟಗಾರರನ್ನು ಸೇರಿಸಿ ಮಾತನಾಡುವುದಾದರೆ ಈ ಕ್ಷೇತ್ರ ದಲ್ಲಿರುವ ಬಹುತೇಕ ಎಲ್ಲರೂ ತಮ್ಮ ಆರೋಗ್ಯದ ಕಡೆ ತಮ್ಮ ದೇಹವನ್ನು ( ಬಾಡಿಯನ್ನು ) ಗಟ್ಟಿ ಮುಟ್ಟಾಗಿ ಇಟ್ಟುಕೊಳ್ಳುವುದರ ಕಡೆಗೆ ಬಹುತೇಕ ಗಮನವನ್ನು ವಹಿಸುತ್ತಾರೆ ಇದು ಅವರಿಗೆ ಬೇಕು ಕೂಡ..
ನಾನೀಗ ಮಾತನಾಡಲು ಹೊರಟಿರುವ ವ್ಯಕ್ತಿಯ ಹೆಸರು ರವಿ,ಜಿಮ್ ರವಿ.
ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ನಮ್ಮ ಹೆಮ್ಮೆಯ ಕನ್ನಡಿಗ ಜಿಮ್ ರವಿ, ಕಿರುತೆರೆ,ಹಿರಿತೆರೆ ಹಾಗೂ ಬಿಗ್ ಬಾಸ್ ನಂತಹ ದೊಡ್ಡ ರಿಯಾಲಿಟಿ ಶೋಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಂದು ವಿಶೇಷ ವ್ಯಕ್ತಿತ್ವವಾಗಿ ನಮ್ಮ ಕನ್ನಡಿಗರ ಕಣ್ಮುಂದೆ ಹಾಗೂ ಇಡೀ ಭಾರತೀಯರ ಕಣ್ಮುಂದೆ ನಿಲ್ಲುತ್ತಾರೆ.
ಇವರನ್ನ ಕಾಣಲು ಇವರ ಮನೆ ಅಥವಾ ಜಿಮ್ ಬಳಿ ಹೋದಾಗ ಎಲ್ಲರನ್ನ ಪ್ರೀತಿ ಹಾಗೂ ಅಕ್ಕರೆಯಿಂದ ಮಾತನಾಡುವುದರ ಜೊತೆಗೆ ಯಾರಾದರೂ ಫೋಟೋ ಕೇಳಿದರೆ ಫೋಟೋ ತೆಗೆಸಿಕೊಳ್ಳುವವನ ಭುಜದ ಮೇಲೆ ಕೈ ಹಾಕಿ ತಾವೇ ಒಂದು ಸುಮಧುರವಾದ ನಗುವದನ್ನ ಕೊಡುತ್ತಾರೆ ಇದು ಜಿಮ್ ರವಿಯವರ ಸ್ಪೆಷಾಲಿಟಿ.
ಕನ್ನಡ,ತೆಲುಗು,ತಮಿಳು ಆಸೆಗಳಲ್ಲಿ ನಟಿಸಿರುವ ಜಿಮ್ ರವಿ ಇಲ್ಲಿಯ ತನಕ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದು ನಮಗೆ ಸಿಕ್ಕ ಮಾಹಿತಿ ಇನ್ನೂ ಹೆಚ್ಚು ಕೂಡ ಇರಬಹುದು.
ಬಿಗ್ ಬಾಸ್ ನಂತಹ ದೇಶದ ಅತಿ ದೊಡ್ಡ ರಿಯಾಲಿಟಿ ಶೋ ನಲ್ಲಿ ಯಾವಾಗ ಜಿಮ್ ರವಿ ಹೋಗುತ್ತಾರೆ ಎನ್ನುವ ಚರ್ಚೆ ಶುರುವಾಯಿತು ಅಲ್ಲಿ ನೋಡುಗರಲ್ಲಿ ಹೊಸದೊಂದು ಅಭಿಪ್ರಾಯ ಮೂಡತೊಡಗಿತು.
ತಮ್ಮ ಮೇಲಿಟ್ಟ ಪ್ರೀತಿ ಅಭಿಮಾನ ಮತ್ತು ನಿರೀಕ್ಷೆಗೆ ತಕ್ಕಂತೆ ಆಟವಾಡಿದ ಜಿಮ್ ರವಿ ಬಿಗ್ ಬಾಸ್ ನಿಂದ ಬರುವಾಗ ಒಳ್ಳೆಯ ಹೆಸರಿನೊಂದಿಗೆ ನೊಂದಿಗೆ ಆಚೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಬೆಂಗಳೂರಿನ ನಾಗರಬಾವಿಯ ಬಳಿ ತಮ್ಮದೇ ಆದ ಜಿಮ್ ಹೊಂದಿರುವ,ಜಿಮ್ ರವಿಯವರು ಬಹಳ ಸಜ್ಜನ ಮತ್ತು ಸಹನಾ ಮೂರ್ತಿ.
ಚಂದನವನದಲ್ಲಿ ತಾವು ಶುರು ಮಾಡಿದ ಮೊದಲ ಸಿನಿಮಾದಿಂದ ಇಲ್ಲಿಯ ತನಕದ ಅವರ ಸಿನಿ ಜರ್ನಿಯನ್ನ ನೋಡಿದಾಗ ಚಿಕ್ಕ ಜಾಗದಿಂದ ಆಕಾಶದೆತ್ತರಕ್ಕೆ ಬೆಳೆದ ಒಬ್ಬ ಹೆಮ್ಮೆಯ ಕನ್ನಡಿಗ ತಾನು ಎಂಬುದನ್ನು, ಎಲ್ಲಿಯೂ ಯಾರ ಮುಂದೆಯೂ ತೋರ್ಪಡಿಸದೆ ಅತ್ಯಂತ ಸರಳ ವ್ಯಕ್ತಿಯಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಬಡತನದಲ್ಲಿ ಬೆಳೆದ ರವಿಗೆ ತಾಯಿಯೇ ಮೊದಲ ಗುರು ಮೊದಲ ದೇವರು, ತಾಯಿಯ ಮೇಲೆ ಅಪಾರ ಪ್ರೀತಿ ಗೌರವವನ್ನು ಹೊಂದಿರುವ ಜಿಮ್ ರವಿಯವರು ತಮ್ಮ ತಾಯಿಯವರಿಗೆ ಕೊಟ್ಟ ಮಾತಿನಂತೆ ಇವತ್ತಿಗೂ ಬದುಕುತ್ತಿದ್ದಾರೆ ಹಿರಿಯರೇ ಬರಲಿ ಕಿರಿಯರೆ ಬರಲಿ ಎಲ್ಲರ ಮುಂದೆ ಗೌರವ ಹಾಗೂ ಸೌಜನ್ಯತೆಯಿಂದ ಇರು ಯಾವತ್ತೂ ಅಹಂಕಾರ ಬೇಡ,
ಹುಟ್ಟಿದ ಹಬ್ಬ, ಸಂಭ್ರಮದ ಹಬ್ಬ, ಹಾಗೂ ಸಂತೋಷದ ಹಬ್ಬಗಳಿಗೆ ಹೋದರೂ ಸರಿ ಬಿಟ್ಟರು ಸರಿ ಆದರೆ ಯಾವುದೇ ಕಾರಣಕ್ಕೂ,ತೀರಿ ಹೋದವರ ( ಸ್ವರ್ಗಸ್ಥರಾದ ) ಮನೆಗೆ ಹೋಗುವುದನ್ನು ಮಾತ್ರ ತಪ್ಪಿಸಬೇಡ, ಎಂಬ ತಾಯಿ ದೇವರ ಮಾತಿನಂತೆ ಜಿಮ್ ರವಿ ಇವತ್ತಿಗೂ ಹಾಗೆ ಬದುಕುತ್ತಿದ್ದಾರೆ,
ಜಿಮ್ ರವಿ ಅವರೇ ಹೇಳುವ ಲೆಕ್ಕದಂತೆ, ಅಂದಾಜು ಇಲ್ಲಿಯ ತನಕ 10,000ಕ್ಕೂ ಹೆಚ್ಚು ಶವಗಳ ಅಂತಿಮ ಸಂಸ್ಕಾರ ಮಾಡಿದ್ದು, ಅವರ ಹೃದಯ ಶ್ರೀಮಂತಿಕೆ ಮತ್ತು ತಾಯಿಗೆ ಕೊಟ್ಟ ಮಾತಿಗೆ ಪ್ರತೀಕವಾಗಿ ನಿಂತಿದೆ. ಇದಷ್ಟೇ ಅಲ್ಲದೆ ತುಂಬಾ ಜನರಿಗೆ ಹಾಗೂ ಯಾರಿಗೂ ಗೊತ್ತಾಗದಂತೆ ರವಿಯವರು ಮಾಡುವಂತಹ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳ ಪಟ್ಟಿ ತುಂಬಾ ದೊಡ್ಡದಿದೆ ಅದು ಯಾವತ್ತೂ ಮಾಧ್ಯಮದವರಿಗಾಗಲಿ ಅಥವಾ ಅವರ ಸ್ನೇಹಿತರಿಗಾಗಲಿ ಗೊತ್ತಿಲ್ಲ ಅದೆಲ್ಲವೂ ಗೌಪ್ಯವಾಗಿಯೇ ನಡೆಯುತ್ತಿದೆ ಮುಂದೆಯೂ ಕೂಡ ನಡೆಯುತ್ತದೆ.
ಇಂತಹ ಸರಳ ಸಜ್ಜನ ನಟ ವ್ಯಕ್ತಿ ಜಿಮ್ ಟ್ರೈನರ್ ಜಿಮ್ ಮಾಸ್ಟರ್ ಜಿಮ್ ರವಿಯವರ ಬದುಕಿನಲ್ಲಿ ಮತ್ತೊಂದು ಸುಮಧುರ ಅಮೋಘಗಳಿಗೆ ನಡೆದಿದ್ದು ಆ ಒಂದು ಗಳಿಗೆಯಲ್ಲಿ ಸಾಕ್ಷಿಯಾದವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು.

ಜಿಮ್ ರವಿ ಅವರ ಕುರಿತು “ರವಿ ನೀನು ಆಗಸದಲ್ಲಿ” ಎಂಬ ಪುಸ್ತಕ ಲೋಕಾರ್ಪಣೆಗೊಂಡಿದೆ.
ಆ ಪುಸ್ತಕದಲ್ಲಿ ಜಿಮ್ ರವಿಯವರ ಕುರಿತಾದ ಮತ್ತಷ್ಟು ಇಂಟರೆಸ್ಟಿಂಗ್ ಆದಂತಹ ಘಟನೆಗಳು ಹಾಗೂ ಯುವಕರಿಗೆ ಪ್ರೇರಣೆಯನ್ನು ನೀಡುವಂತಹ ಒಂದಷ್ಟು ವಿಚಾರಗಳು ಸಿಗುತ್ತವೆ ಎಂಬ ಆಶಯ ನಮ್ಮದು.
ಕೆಲಸ ಯಾವುದೇ ಇರಲಿ ಸಣ್ಣದು ಅಥವಾ ದೊಡ್ಡದು ಆದರೆ ನಾವು ಮಾಡುವಂತಹ ಕೆಲಸದಲ್ಲಿ ಶ್ರದ್ಧೆ ಭಕ್ತಿ ಪ್ರೀತಿ ತುಂಬಿದ್ದರೆ ನಾವು ಮಾಡುವಂತ ಎಂತದ್ದೇ ಕೆಲಸವು ನಮ್ಮನ್ನ ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಹಾಗೂ ಅವಕಾಶ ನಮ್ಮನ್ನ ದೊಡ್ಡ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂಬುದಕ್ಕೆ ದೇಶದ ಇತಿಹಾಸದ ಪುಟಗಳಲ್ಲಿ ಬಹಳಷ್ಟು ನಿದರ್ಶನಗಳನ್ನ ನಾವು ಕಂಡಿದ್ದೇವೆ ಆ ಎಲ್ಲ ನಿದರ್ಶನಗಳ ಆ ಎಲ್ಲ ಉದಾಹರಣೆಗಳ ಜೊತೆಯಲ್ಲಿ ನಿಲ್ಲುವ ನಮ್ಮ ಹೆಮ್ಮೆಯ ಕನ್ನಡಿಗ ಜಿಮ್ ರವಿ ಕೂಡ ಒಬ್ಬರು ಎಂಬುವುದೇ ನಮ್ಮ ಹೆಮ್ಮೆ.
ನೂರಕ್ಕೂ ಹೆಚ್ಚು ಬಂಗಾರದ ಪ್ರಶಸ್ತಿಗಳನ್ನ ಗೆದ್ದಿರುವ ಜಿಮ್ನಾಸ್ಟಿಕ್ ಮ್ಯಾನ್, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ್ ಶ್ರೀ, ಭಾರತ್ ಶ್ರೇಷ್ಠ, ಕರ್ನಾಟಕದ ಪ್ರಮುಖ ಪ್ರಶಸ್ತಿ, ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಪ್ರಶಸ್ತಿ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ,
ಇಂತಹ ಪ್ರತಿಭಾವಂತ ನಟ,ಜಿಮ್ನಾಸ್ಟಿಕ್ ಮ್ಯಾನ್ ಮತ್ತು ಸಾಮಾಜಿಕ ಸೇವಾ ವ್ಯಕ್ತಿ ಎಂದೇ ಹೆಸರು ಪಡೆದಿರುವ ( A V ರವಿ ) ಜಿಮ್ ರವಿಯವರ ಮೇಲೆ ಬಂದಿರುವ ಈ ಮಹಾನ್ ಜೀವನ ಚರಿತ್ರೆ “ರವಿ ನೀನು ಆಗಸದಲ್ಲಿ” ಇಂತಹ ಮುದ್ದಾದ ಪುಸ್ತಕವನ್ನು ಬರೆದವರು ಡಾಕ್ಟರ್ ಮಂಜುನಾಥ್ ಮಾಗೋದಿ.
ಎಲ್ಲರ ಬದುಕಿನಲ್ಲಿ ಪ್ರೇರಣೆ ಸಿಗುವಂತಹ ಪುಸ್ತಕಗಳನ್ನ ನಾವು ನೀವೆಲ್ಲರೂ ಓದಬೇಕು, ಅದು ನಟರದ್ದೆ, ಆಗಿರಲಿ ರಾಜಕಾರಣಿಗಳದ್ದೇ ಆಗಿರಲಿ, ಆಟಗಾರರದ್ದೆ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿ ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಂತಹ ವ್ಯಕ್ತಿಗಳ ಜೀವನ ಚರಿತ್ರೆಗಳು ಆಗಿರಲಿ ಬದುಕನ್ನ ಬದಲಿಸಬಲ್ಲ ಪುಸ್ತಕಗಳು ನಮ್ಮ ಭವಿಷ್ಯದ ಅಸ್ತಿತ್ವಕ್ಕೆ ದೊಡ್ಡ ಆಧಾರ ಸ್ತಂಭಗಳಾಗಿ ನಿಲ್ಲುತ್ತವೆ ಹಾಗೂ ನಿಲ್ಲಲು ನಾವೆಲ್ಲರೂ ಒಂದು ಹೆಜ್ಜೆ ಮುಂದೆ ಇಡಬೇಕು ಕೂಡ.
ಆದಷ್ಟು ಬೇಗ ನಾವು ನೀವೆಲ್ಲರೂ ರವಿ ನೀನು ಆಗಸದಲ್ಲಿ ಎಂಬ ಮುದ್ದಾದ ಸೊಗಸಾದ ಪುಸ್ತಕವನ್ನು ಓದೋಣ ಜಿಮ್ ರವಿಯವರು ಸಿಕ್ಕಾಗ ಅವರಿಗೊಂದು ಪ್ರೀತಿಯ ನಮಸ್ಕಾರ ಹೇಳೋಣ… ಏನಂತೀರಿ… ??
ರವೀ ಸಾಸನೂರ್ MasterNews365
