Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಜಾಕ್ ಪಾಟ್ ಗುರುನಂದನ್
- ಸಿನಿಮಾ

ಜಾಕ್ ಪಾಟ್ ಗುರುನಂದನ್

ಕನ್ನಡ ಚಲನಚಿತ್ರ ರಂಗದಲ್ಲಿ ಬಹಳಷ್ಟು ನಾಯಕನಟರು ತಮ್ಮ ವಿಶಿಷ್ಟ ಅಭಿನಯ ಹಾಗೂ ವಿನೂತನ ಪ್ರಯತ್ನಗಳೊಂದಿಗೆ ತಮ್ಮದೇ ಆದಂತಹ ಸಿನಿ ಕೇರಿಯರನ್ನು ಕಟ್ಟಿಕೊಂಡು ಮಾಡಿಕೊಂಡು ಬಂದಿರುತ್ತಾರೆ, ಕೆಲವು ನಾಯಕನಟರು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಗಮನ ಸೆಡೆದರೆ, ಕೆಲವು ನಾಯಕನಟರು ಸಾಹಸಮಯ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ, ಇನ್ನೂ ಕೆಲವರು ಪೊಲೀಸ್ ಆಫೀಸರ್ ಪಾತ್ರಧಾರಿಗಳಾಗಿ, ಕೆಲವರು ಸಸ್ಪೆನ್ಸ್ ಮಿಶ್ರಿತ ಹಾರರ್ ಶೈಲಿಯ ಚಿತ್ರಗಳನ್ನು ಮಾಡುತ್ತಾ ತಮ್ಮದೇ ಆದಂತಹ ಟ್ರೆಂಡ್ ಸೆಟ್ ಮಾಡುವುದರ ಜೊತೆಗೆ, ವೀಕ್ಷಕರ […]

ಕನ್ನಡ ಚಲನಚಿತ್ರ ರಂಗದಲ್ಲಿ ಬಹಳಷ್ಟು ನಾಯಕನಟರು ತಮ್ಮ ವಿಶಿಷ್ಟ ಅಭಿನಯ ಹಾಗೂ ವಿನೂತನ ಪ್ರಯತ್ನಗಳೊಂದಿಗೆ ತಮ್ಮದೇ ಆದಂತಹ ಸಿನಿ ಕೇರಿಯರನ್ನು ಕಟ್ಟಿಕೊಂಡು ಮಾಡಿಕೊಂಡು ಬಂದಿರುತ್ತಾರೆ, ಕೆಲವು ನಾಯಕನಟರು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಗಮನ ಸೆಡೆದರೆ, ಕೆಲವು ನಾಯಕನಟರು ಸಾಹಸಮಯ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ, ಇನ್ನೂ ಕೆಲವರು ಪೊಲೀಸ್ ಆಫೀಸರ್ ಪಾತ್ರಧಾರಿಗಳಾಗಿ, ಕೆಲವರು ಸಸ್ಪೆನ್ಸ್ ಮಿಶ್ರಿತ ಹಾರರ್ ಶೈಲಿಯ ಚಿತ್ರಗಳನ್ನು ಮಾಡುತ್ತಾ ತಮ್ಮದೇ ಆದಂತಹ ಟ್ರೆಂಡ್ ಸೆಟ್ ಮಾಡುವುದರ ಜೊತೆಗೆ, ವೀಕ್ಷಕರ ಜೊತೆಗೆ ನೇರವಾದ ಕನೆಕ್ಷನ್ ಹೊಂದಿರುತ್ತಾರೆ.

ಅದೇ ರೀತಿಯ ಅಭಿಮಾನಿಗಳನ್ನು ಹೊಂದಿರುವ ನಾಯಕನಟ ಗುರುನಂದನ, ಫಸ್ಟ್ ರಾಂಕ್ ರಾಜು ಗುರುನಂದನ್ ಸಿನಿಮಾ ಜರ್ನಿಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ ಚಿತ್ರ, ಅದರ ನಂತರ ಗುರುನಂದನ್ ಮಾಡಿದ ಎಲ್ಲ ಸಿನಿಮಾಗಳಲ್ಲಿ ಆ ಒಂದು ಎಸ್ಸೆನ್ಸ್ ಇದ್ದೇ ಇರುತ್ತದೆ, ಒಂದು ಚಿತ್ರ ಪ್ರೇಕ್ಷಕರ ಹೃದಯವನ್ನು ತಟ್ಟಬೇಕೆಂದರೆ, ಕಥೆ ಜೊತೆಗೆ ಹಾಡುಗಳು ಸಹ ತುಂಬಾ ದೊಡ್ಡ ಪಾತ್ರವನ್ನು ವಹಿಸುತ್ತವೆ.

ಸದ್ದು ಗದ್ದಲವಿಲ್ಲದೆ ಗುರುನಂದನ್ ಮತ್ತೊಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ, ಅದು ಅವರ ಪಾಲಿಗೆ ಮತ್ತೊಂದು ಜಾಕ್ಪಾಟ್ ಆಗೋದ್ರಲ್ಲಿ ಸಂದೇಹವಿಲ್ಲ ಚಿತ್ರದ ಹೆಸರು ಮಿಸ್ಟರ್ ಜಾಕ್, ಇದರ ಮೊದಲ ಹಾಡು ಬಿಡುಗಡೆಯಾಗಿದೆ

ಎಂ.ಸಿ.ಬಿಜ್ಜು ಕಂಠಸಿರಿಗೆ ಫಿದಾ ಆದ ಅಭಿಮಾನಿಗಳು .

“ಫಸ್ಟ್ rank ರಾಜು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ, ಸುಮಂತ್ ಗೌಡ ನಿರ್ದೇಶನದ ಹಾಗೂ ಮಂಡಿಮನೆ ಟಾಕೀಸ್ ಲಾಂಛನದಲ್ಲಿ ಗುರುನಂದನ್ ಅವರು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿರುವ “MR ಜಾಕ್” ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಅನಾವರಣವಾಗಿದೆ. ನಿರ್ದೇಶಕ ಸುಮಂತ್ ಗೌಡ ಅವರೆ ಬರೆದಿರುವ ಈ ಹಾಡನ್ನು ಹೆಸರಾಂತ ಗಾಯಕ ಎಂ.ಸಿ.ಬಿಜ್ಜು ಹಾಡಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಇದು ಚಿತ್ರದ ಮೊದಲ ಹಾಗೂ ನಾಯಕನ ಪರಿಚಯದ ಗೀತೆಯಾಗಿದೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

“MR ಜಾಕ್” ಚಿತ್ರದಲ್ಲಿ ಹಾಸ್ಯವೇ ಪ್ರಧಾನ. ಎಮೋಷನ್ ಸಹ ಇದೆ. ಅಷ್ಟೇ ಅಲ್ಲ. ಈಗಿನ ಜನರು ಬಯಸುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಗುರುನಂದನ್ ಅವರಿಗೆ ನಾಯಕಿಯಾಗಿ ತಪಸ್ವಿನಿ ಪೂಣಚ್ಛ ಅಭಿನಯಿಸಿದ್ದಾರೆ. ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶಿವಸೇನ ಛಾಯಾಗ್ರಾಹಕರಾಗಿ, ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶಕರಾಗಿ ಹಾಗೂ ವಿಜಯ್ ರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಗೂ ಪ್ರಶಂಸೆ ವ್ಯಕ್ತವಾಗಿದೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.