ಈಗ ಎಲ್ಲಾ 25 ತತ್ವಗಳು ಸಮ ಅದಾವು ಕೈ ಕೆಲಸ ಮಾಡುತ್ತದೆ ಕಿವಿ ಕೇಳ್ತದ ಕಣ್ಣು ನೋಡ್ತದೆ ಬಾಯಿ ಮಾತನಾಡುತ್ತದೆಮೂಗು ಉಸಿರಾಡ್ತದ ಕಾಲು ಅಡ್ಡಾಡ್ತಾವು. ಈ ವಿಶ್ವ ಜೀವ ಕಣ್ಣಿಗೆ ಕಾಣಿಸುತ್ತದೆ ಅಂದ್ರ ವಿಶ್ವ ಕಣ್ಣಿಗೆ ಕಾಣಿಸುತ್ತದೆ ಅದಕ್ಕ ವಿಶ್ವ ಜೀವ ಅಂದ್ರು
ನೇತ್ರ ಅಂದ್ರ ಕರ್ಣ. ಇಲ್ಲಿ ಬೃಕುಟಿಯ ಮದ್ಯ ಇರ್ತಾನ ಕಣ್ಣೀಲಿ ನೋಡ್ತೀವಿ ಅಂದ್ರೆ ಇದು ವಿಶ್ವ ಜೀವ. ಇದು ದಾಟಿ 17 ತತ್ವ ಅದಾವು. ಸೂಕ್ಷ್ಮ ಶರೀರಅವಾಗ ತೇಜಸ್ಸು ಜೀವ ಮನೋ ಕರ್ಣ.
17 ತತ್ವಗಳು ಯಾವವು ಅಂದರೆ –
ಪಂಚಪ್ರಾಣಗಳು, ದಶ ಇಂದ್ರಿಯಗಳು, ಮನಸ್ಸು, ಬುದ್ಧಿ ಇವೆ.
ಪಂಚಪ್ರಾಣಗಳು :
ಸಮಾನ, ವ್ಯಾನ, , ಉದಾನ,ಅಪಾನ, ಪ್ರಾಣ, ಅಂದರೆ ಸಮಾನವಾಯು, ವ್ಯಾನವಾಯು, ಉದಾನವಾಯು ,ಅಪಾನವಾಯು, ಪ್ರಾಣವಾಯು .
” ಸಮಾನವಾಯು ಇದು ಆಕಾಶದೊಳಗೈತಿ
ವ್ಯಾನವಾಯು ಇದು ವಾಯುದೊಳಗೈತಿ,
ಉದಾನ ವಾಯು ಇದು ಅಗ್ನಿ ಒಳಗೈತಿ
ಅಪಾನ ವಾಯು ಇದು ಜಲ ಜೋಳದೈತಿ
ಪ್ರಾಣವಾಯು ಇದು ಭೂಮಿಯೊಳಗೆ ಐತಿ “
ಕೆಳಗೆ ಇದೆಲ್ಲ ಭೂಮ್ಯಾಗ (ಪೃಥ್ವಿತತ್ವ) ಪಂಚ ಭೂತಗಳಿಂದಾಗಿದ್ದು,
ದಶ ಇಂದ್ರಿಯಗಳು :
ವಾಕ್, ಪಾಣಿ, ಪಾದ ,ಗುಹ್ಯ, ಗುಧ, ಇವು ಪಂಚ ಕರ್ಮೇಂದ್ರಿಯಗಳು.
ಶೋತ್ರ, ತೊಕ್ಕು, ನೇತ್ರ, ,ರಸನೆ, ನಾಸಿಕ,
ಶ್ರೋತ್ರ ಅಂದ್ರೆ ಕಿವಿ
ತೊಕ್ಕು ಅಂದ್ರೆ ಚರ್ಮ
ನೇತ್ರ ಅಂದ್ರೆ ಕಣ್ಣು
ರಸನೆ ಅಂದ್ರೆ ನಾಲಿಗೆ
ನಾಸಿಕ ಅಂದ್ರೆ ಮೂಗು ನೀವು ಧರ್ಮೇಂದ್ರಿಯಗಳು. ಇವುಗಳಿಂದ ಪಾಪ ಆಗುವುದಿಲ್ಲ. ಕರ್ಮ ಹೋಗಿ ಯಾರಿಗೂ ಹೊಡೆಯಂಗಿಲ್ಲ. ಕಿವಿ ಹೋಗಿ ಯಾರಿಗೂ ಏನು ಮಾತಾಡಂಗಿಲ್ಲ. ಕಣ್ಣಿಂದ ಯಾರಿಗೂ ಏನು ಮಾಡಕ್ಕಾಗೋದಿಲ್ಲ. ಮೂಗಿನಿಂದ ಏನು ಮಾಡಕ್ಕಾಗೋದಿಲ್ಲ. ನಾಲಿಗೆ ಏನು ಮಾಡುವುದಿಲ್ಲ. ಅಂದರೆ ಕೆಟ್ಟ ಕೆಲಸ ಮಾಡುವುದಿಲ್ಲ. ಇಲ್ಲಿ ಕೇವಲ ಮನಸ್ಸು ಕೆಲಸ ಮಾಡುತ್ತದೆ. ಇವು ಧರ್ಮೇಂದ್ರಿಯಗಳು.
ಯಾಕಂದ್ರೆ ಇವುಕರ ಕಡೆಯಿಂದ ಕರ್ಮ ಆಗೋದಿಲ್ಲ. ಕೈಯಿಂದ ಒಬ್ಬರಿಗೆ ಹೊಡೆದರೆ ಪಾಪ ಬರುತ್ತದೆ. ದಾನ ಮಾಡಿದರ ಪುಣ್ಯ ಬರುತ್ತದೆ. ಬಾಯಲ್ಲಿ ಹೊಲಸು ಮಾತಾಡಿದರೆ ಪಾಪ ಬರುತ್ತದೆ. ಒಂದೆರಡು ಒಳ್ಳೆಯ ಮಾತು ಮಾತಾಡಿದ್ರೆ ಪುಣ್ಯ ಬರುತ್ತದೆ. ಪಾದ ಅಂದ್ರೆ ಕಾಲುಗಳಿಂದ ಒಳ್ಳೆಯ ಕ್ಷೇತ್ರ ದರ್ಶನ ಮಾಡಿದ್ರ ಪುಣ್ಯ ಬರುತ್ತದೆ. ಅದು ಕಾಲಿಂದ ಯಾರಿಗಾದರೂ ಒದ್ದುಬಿಟ್ಟರೆ ಪಾಪ ಬರುತ್ತದೆ. ಇನ್ನು ಗುಹ್ಯ, ಗುದ ಇವು ಅಂತೂ ಹೊಲಸು - ಪಾಪದ್ದು ಅದಾವು. ಇವುಕ್ಕ ಕರ್ಮೇಂದ್ರಿಯಗಳು ಅಂದಾರ.
ದಶ ಇಂದ್ರಿಯಗಳು, ಪಂಚಪ್ರಾಣಗಳು, ಮತ್ತು ಮನಸ್ಸು ಬುದ್ದಿ ಇವೆಲ್ಲ 17 ತತ್ವಗಳು ಕನಸಿನ್ಯಾಗ ಅದಾವು. ಅದಕ್ಕ ಸ್ವಪ್ನ ಬಿದ್ದಿದ್ದು ಹೇಳುತ್ತದೆ. ಈ ಸ್ಥೂಲ ದೇಹ ಇರಂಗಿಲ್ಲ . ಒಳಗ ಪಂಚಪ್ರಾಣಗಳು, ದಶ ಇಂದ್ರಿಯಗಳು , ಮನಸ್ಸು ಬುದ್ದಿ ಕೂಡಿಕೊಂಡು ಅಲ್ಲಿ ಕೆಲಸ ಮಾಡ್ಯಾವು .. ಆ ಕನಸಿನ್ಯಾಗ ಇದನ್ನ ಮಾಡಿನಿ , ಇಲ್ಲೇ ಮಾಡಿನೀ ಅಂತ ಅದು ಎಲ್ಲಾ ಹೇಳುತ್ತದೆ.
ಅವಾಗ ಜೀವ ಎಲ್ಲಿದ್ದಾನೆ ಅಂದ್ರೆ ಕಂಠಸ್ಸ್ಥಾನಕ ಬಂದಾಗ ಸ್ವಪ್ನ ಬೀಳುತ್ತದೆ. ಇದನ್ನ ದಾಟಿ ಹೃದಯ ಸ್ಥಾನಕ್ಕೆ ಬಂದ್ರೆ ನಿದ್ದಿ ಹತ್ತದ . ಅವಾಗ ಏನಿಲ್ಲಾ ನೆನಪೊಂದೆ . ಏನು ಆನಂದದಿಂದ ಮಲಗಿದ್ದೆ ನಾನು. ನನಗೇನು ಗೊತ್ತಿಲ್ಲ ಅಲ್ಲಿ ಪ್ರಜ್ಞೆ ಒಂದು ಆದ. ಇದೆಲ್ಲ ಬಿಡಿಸಿ ಹೇಳ್ರಿ ಅಂತ ಅಂದ್ರ ಅವರಿಗೆ ಬಿಡಸಾಕ್ಕ ಆಗ್ಲಿಲ್ಲ.
" ನೋವಾದರಿ0ಗೆನಲು ಕೇಳ್ ಮಹ
ಜೀವನಿಂಗಿದ ಲಿಂಗದೇಹಕ್ಕೆ
ಭಾವಿಸಲು ದಶಕೇಂದ್ರ
ಪಂಚಪ್ರಾಣ ಮನಬುದ್ಧಿ
ಕೋವಿ ಕರೆಸಿತು ಲಿಂಗ ದೇಹವು
ನೋವು ಲಿಂಗ ಶರೀರಕಲ್ಲದಾರಿಗಿಲ್ಲೆಂದ ll "
ಚಿದಾನಂದ ಅವಧೂತರು ದೇವಿ ಪುರಾಣದಲ್ಲಿ ಇದನ್ನು ಬರದಾರ್ರಿ.
ಅ ಮೃತ್ಯು ಆದಾಗ ಈ ದೇಹ ಇಲ್ಲೇ ಇರುತ್ತದೆ. ಪ್ರಾಣ ಮಾತ್ರಒಯ್ಯುತ್ತಾನೆ. ಅದಕ್ಕೆ ಸಾಯುವಾಗ ಮರಗೆಟ್ಟು ನೋಡುತ್ತಿರುತ್ತಾನೆ. ಅವಂಗ ಏನು ಹೇಳಕ್ಕಾಗೋದಿಲ್ಲ. ಲಿಂಗ ಶರೀರ ಹೋಯಿತು. ಇದನ್ನು ಸಿದ್ದಾರೂಢರು ಸಂಶೋಧನೆ ಮಾಡಿದ್ದಾರೆ.
ಲಿಂಗ ದೇಹಕ್ಕೆ ಯಮಯಾತನೆಯಾಗಿ ಸ್ಥೂಲ ದೇಹ ಇಲ್ಲೇ ಬೀಳತದ . ಅದನ್ನು ಬೇರೊಬ್ಬರಿಗೆ ಲಿಂಗ ದೇಹ ಪ್ರವೇಶ ನೀಡಿ ಮರುಜನ್ಮ ಮಾಡ್ತಾನ ಆ ದೇವರು. ನಾವು ಸದ್ದ ಮಾಡ್ಕೊಂಡು ಹೊಂಟೀವಿ ದೇವರು ಸದ್ದು ಮಾಡದೆ ತನ್ನೆಲ್ಲ ಕಾರ್ಯ ನಿಭಾಯಿಸುತ್ತಾ ಹೊಂಟಾನ ಅಷ್ಟೇ.
ಲಿಂಗ ಶರೀರಕ್ಕೆ ಸೂಕ್ಷ್ಮ ಶರೀರ ಅಂತಲೂ ಕರೆಯುವರು.
ಮುಂದುವರೆಯುತ್ತದೆ …..
ಜಲಪುರಕ್ಕೆ ಹೋದಾಗಿನ ಘಟನೆ ನೋಡಿ ನಾಳೆಯ ಸಂಚಿಕೆಯಲ್ಲಿ –

