ಭಾರತೀಯ ಸಿನಿಮಾ ಉದ್ಯಮದಲ್ಲಿ,ಇಡೀ ಭಾರತ ಮತ್ತು ಭಾರತೀಯರು ಹೆಮ್ಮೆ ಪಡುವಂತಹ ಪ್ರಸಿದ್ಧ ಗಾಯಕಿಯರ ಪಟ್ಟಿಯಲ್ಲಿ ಲತಾ ಮಂಗೇಶ್ಕರ್ ಹೆಸರು ಅಗ್ರಗಣ್ಯ, ಹಿಂದಿಯಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿರುವ ಇವರು ಹಿಂದಿ ಸೇರಿ ಎಲ್ಲ ಭಾಷೆಗಳಲ್ಲೂ ಸಹ ಇವರು ಹಾಡುಗಳನ್ನು ಹಾಡಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಬಹುತೇಕ ಎಲ್ಲಾ ನಿರ್ದೇಶಕರ ಚಿತ್ರಗಳಿಗೆ ಹಾಡು ಹಾಡಿರುವ ಲತಾ ಮಂಗೇಶ್ಕರ್,ತಮ್ಮ ವೃತ್ತಿ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ, ಸಿನಿಮಾಗಾಗಿ ಸಿನಿಮಾ ಹಾಡುಗಳಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟ ಈ ದಿಟ್ಟ ಮಹಿಳೆಗೆ ಸಲ್ಲಬೇಕಾದ ಎಲ್ಲ ಪ್ರಶಸ್ತಿಗಳು ಎಲ್ಲ ಗೌರವಗಳು ಸಂದಿವೆ.
ಲತಾ ದೀದಿಗೆ ಬ್ರೇಕ್ ಕೊಟ್ಟಿದ್ದು ಹಿಂದಿ ಚಿತ್ರರಂಗವಾದರೂ ಸಹ,ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಸಹ ನೆಲೆಸಿರುವ ಕನ್ನಡ ಸೇರಿ ಎಲ್ಲ ಭಾಷೆಯ ಸಿನಿಮಾ ಅಭಿಮಾನಿಗಳು ಲತಾ ಮಂಗೇಶ್ಕರ್ ಅವರ ಧ್ವನಿಗೆ ಅಭಿಮಾನಿಯಾಗಿದ್ದು ಸತ್ಯ.
ಇಂತಹ ಕೋಟ್ಯಾಂತರ ಅಭಿಮಾನಿಗಳಲ್ಲಿ ಒಬ್ಬರು ಡಾಕ್ಟರ್ ಕಲೀಮ್ ಪಾಷಾ ಅಂದ್ರೆ ಕಮಲ್ ರಾಜ್ ( ನಾಯಕ ನಟ,ಗಝಲ್ ಸಿಂಗರ್ ) ಇವರು
2010 ರಲ್ಲಿಯೇ ಲತಾ ಮಂಗೇಶ್ಕರ್ ಅವರನ್ನು ಭೇಟಿ ಮಾಡಿ ಅವ್ರ ಅಮೃತ ಹಸ್ತದಿಂದ, *ಜಿಂದಗಿ ಕೀ ದಾಸ್ತಾನ” ಬಿಡುಗಡೆ ಮಾಡಿಸಿದ್ದು ಅತ್ಯಂತ ಹೆಮ್ಮೆಯ ಸಂಗತಿ.ಅದರ ನಂತರವೂ ಕನ್ನಡಿಗ ಕಮಲ್ ರಾಜ್ ಒಬ್ಬ ಪಕ್ಕ ಸಂಗೀತದ ಅಭಿಮಾನಿಯಾಗಿರುವ ಕಾರಣ, ಹೋದಲ್ಲಿ ಬಂದಲ್ಲಿ ಸಂಗೀತದ ಕಾರ್ಯಕ್ರಮಗಳನ್ನ ಕೊಟ್ಟ ಜಾಗದಲ್ಲಿ ಕನ್ನಡದ ಡಾ. ರಾಜಕುಮಾರ್ ಅವರ ಹಾಡುಗಳನ್ನು ಹಾಗೂ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಹಾಗೂ ಇನ್ನಿತರ ಎಲ್ಲ ದಿಗ್ಗಜರ ಹಾಡುಗಳನ್ನು ಗಝಲ್ ಗಳನ್ನ ಹಾಡಿ ತಮ್ಮ ಸಂಗೀತ ಪ್ರೇಮವನ್ನು ಮೆರೆದಿದ್ದು ಹಾಗೂ ಬಹಳಷ್ಟು ಗೌರವ ಪ್ರಶಸ್ತಿಗಳನ್ನು ಪಡೆದದ್ದು ನಮ್ಮೆಲ್ಲರಿಗೂ ಹೆಮ್ಮೆ..

ಈಗ ಇದೇ ಕಮಲ್ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ ಅದುವೇ “ಚಿಟ್ಟಿ ಆಯಿ ಹೈ”
ಖ್ಯಾತ ಗಾಯಕಿ ಉಷಾ ಮಂಗೇಶ್ಕರ್ ಮತ್ತು ಅನೇಕ ಜನಪ್ರಿಯ ಗಾಯಕರು ಭಾಗಿಯಾಗಲಿರುವ ಈ ಕಾರ್ಯಕ್ರಮದ ’ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಕುರಿತಾದ ಪೋಸ್ಟರ್ ಅನಾವರಣ ಮಾಡಿ ಪತ್ರಿಕಾಗೋಷ್ಠಿಯ ಮೂಲಕ,
ಕನ್ನಡ ಚಿತ್ರರಂಗದ ನಟ, ನಿರ್ಮಾಪಕರ ಮತ್ತು ವಿತರಕರ ಕಮಲ್ ರಾಜ್ (ಕಲೀಂ ಪಾಷಾ) ಮಾಹಿತಿಯನ್ನು ಹಂಚಿಕೊಂಡು,
ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯೊಂದಿಗೆ,ತಮ್ಮ ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರುತ್ತಾರೆ, ಚಿತ್ರರಂಗದ ಸಹಕಾರ ಹೇಗಿರುತ್ತದೆ ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಈ ಕುರಿತಾಗಿ ಮಾಹಿತಿ ನೀಡುವುದಾಗಿ ಮಾಧ್ಯಮ ಮಿತ್ರರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಹಿರಿಯ ಕಲಾವಿದ ಭವ್ಯ ಮಾತನಾಡಿ, ತಾವು ಲತಾ ಮಂಗೇಶ್ಕರ್ ಅವರ ದೊಡ್ಡ ಅಭಿಮಾನಿ, ಕಮಲ್ ರಾಜ್ ಅವರ ಈ ಪ್ರಯತ್ನಕ್ಕೆ ನನ್ನ ಬೆಂಬಲವಿದೆ, ಸಂಗೀತಕ್ಕೆ ಭಾಷೆ ಇಲ್ಲ ಅದು ಎಲ್ಲ ಕೇಳುಗರ ಮನಸ್ಸಲ್ಲಿ ಶಾಶ್ವತವಾಗಿ ಜಾಗವನ್ನು ಮಾಡಿಕೊಂಡಿರುತ್ತದೆ ಎಂದು, ಲತಾ ಮಂಗೇಶ್ಕರ್ ರವರಿಗೆ ಹಾಗೂ ಸಂಗೀತ ಕ್ಷೇತ್ರದಲ್ಲಿರುವ ಎಲ್ಲ ದಿಗ್ಗಜರಿಗೆ ಧನ್ಯವಾದ ಹೇಳಿದರು, ನಂತರ ಮಾತನಾಡಿದ ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್,ತಾನು ಕನ್ನಡ ಚಿತ್ರರಂಗದ ಅಭಿಮಾನಿ ಕಮಲ್ ರಾಜ್ ನಮ್ಮ ಕನ್ನಡದವರು, ಅದರಲ್ಲೂ ವಿಶೇಷವಾಗಿ ಡಾಕ್ಟರ್ ರಾಜಕುಮಾರ್ ಶಿವರಾಜ್ ಕುಮಾರ್ ಹಾಗೂ ದೊಡ್ಡ ಮನೆಯ ದೊಡ್ಡ ಅಭಿಮಾನಿ, ಇವರು ಮಾಡುತ್ತಿರುವ ಸಂಗೀತದ ಆ ಕಾರ್ಯಕ್ರಮಕ್ಕೆ ನನ್ನ ಸಹಕಾರ ಬೆಂಬಲವಿರುತ್ತದೆ ಎಂದರು.
ಇನ್ನುಳಿದಂತೆ ವೇದಿಕೆಯ ಮೇಲೆ,ಕಮಲ್ ರಾಜ್, ಭವ್ಯ, ಪ್ರಥಮ್ ಸೇರಿ ಇವೆಂಟ್ ಮಾಡುವ ತಂಡ ಇದ್ದು, ಅವತ್ತು ನಡೆಯುವ ಕಾರ್ಯಕ್ರಮಗಳ ಬಗ್ಗೆ ಒಂದು ಮಾಹಿತಿಯನ್ನು ನೀಡಿದರು.
ರವೀ ಸಾಸನೂರ್
MasterNews365.Com
