ಪರಿಚಯ
ಶ್ರೀ ರವೀ ಸಾಸನೂರ್ (ನಾರಾಯಣ ಸಾಸನೂರ್)
ಮಾಸ್ಟರ್‌ನ್ಯೂಸ್365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದ್ದು,ಇದರ CEO ಆಗಿ ಕಿರುತೆರೆ,ಬೆಳ್ಳಿತೆರೆ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸಮೃದ್ಧ ಅನುಭವ ಹೊಂದಿರುವ ಶ್ರೀ ರವೀ ಸಾಸನೂರ್ ವಹಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಹತ್ತು ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಅವರು ದೂರದರ್ಶನ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಸಹಾಯಕ ನಿರ್ದೇಶಕ (Assistant Director) ಹಾಗೂ ಸಹ ನಿರ್ದೇಶಕ (Associate Director) ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ‘ನನ್ ಸೆಲೆಬ್ರಿಟೀಸ್ 108’ ಮತ್ತು ‘ಜರ್ನಿ ವಿತ್ ಮಹಾನದಿ’ ಕೃತಿಗಳ ಲೇಖಕರಾಗಿದ್ದು, ‘ರಂಗ ಸಾರ್ಥಕ’ ಪುಸ್ತಕಕ್ಕೆ ಸಹ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸ್ವತಂತ್ರ ನಿರೂಪಕ (Freelance Anchor) ಹಾಗೂ ವಿಷಯ ಬರಹಗಾರ (Content Writer) ಆಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದ್ದಿಮನೆ, ರಾಘವೆಂದ್ರ ಚಿತ್ರವಾಣಿ, ಪಿಚ್ಚರ್ ಪ್ರಚಾರ ಮತ್ತು ಕನ್ನಡ ಪಿಚ್ಚರ್ ಡಿಜಿಟಲ್ ಸೇರಿದಂತೆ ಹಲವು ಪ್ರಮುಖ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ 600 ರಕ್ಕು ಹೆಚ್ಚು ಸಂದರ್ಶನಗಳನ್ನು ಮಾಡಿದ ಅನುಭವ ಹೊಂದಿದ್ದಾರೆ
ಅದರ ಜೊತೆಗೆ, ಅವರು ‘ಲಕ್ಷ್ಯ’ ಎಂಬ ಕನ್ನಡ ಚಲನಚಿತ್ರದ ಕಥೆಗಾರ ಹಾಗೂ ನಿರ್ದೇಶಕರಾಗಿದ್ದು, ಈ ಚಿತ್ರವು 2021ರ ನವೆಂಬರ್ 18ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಿದೆ.
ಮಾಸ್ಟರ್‌ನ್ಯೂಸ್365 ವಿಶ್ವಾಸಾರ್ಹತೆ, ನಿಷ್ಪಕ್ಷಪಾತತೆ ಮತ್ತು ಗುಣಮಟ್ಟದ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ. ಸಮಾಜಕ್ಕೆ ಉಪಯುಕ್ತವಾಗುವ ಸುದ್ದಿಗಳು, ವಿಶೇಷ ವರದಿಗಳು, ವಿಶ್ಲೇಷಣೆಗಳು ಹಾಗೂ ವೈವಿಧ್ಯಮಯ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಓದುಗರ ವಿಶ್ವಾಸವನ್ನು ಗಳಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ.
ನಮ್ಮ ಓದುಗರಿಗೆ ನಿಖರ, ವೇಗವಾದ ಮತ್ತು ಮೌಲ್ಯಯುತ ಮಾಹಿತಿಯನ್ನು ಒದಗಿಸುತ್ತಾ, ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಒಂದಾಗಿ ಬೆಳೆಯುವುದು ಮಾಸ್ಟರ್‌ನ್ಯೂಸ್365ರ ದೃಷ್ಟಿಯಾಗಿದೆ.
