Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅನಿರೀಕ್ಷಿತ ಅತಿಥಿಗಳು –Review
- ರಿವ್ಯೂ - ಸಿನಿಮಾ

ಅನಿರೀಕ್ಷಿತ ಅತಿಥಿಗಳು –Review

ಜಗತ್ತಿನಲ್ಲಿರುವ ಅತ್ಯಂತ ಶ್ರೇಷ್ಠವಾದ ಕೆಲವೇ ಕೆಲವು ವಿಷಯಗಳಲ್ಲಿ, ಪ್ರೀತಿಯು ಸಹ ಒಂದು, ತನ್ನನ್ನ ಮನಸಾರೆ ಪ್ರೀತಿಸಿದೆ ಹುಡುಗನ ಜೊತೆಗೆ ಒಂದು ಡ್ಯೂಟಿಗೆ ಎಂದು ಹೋಗಲು ಸಿದ್ಧವಾಗುವ ಹುಡುಗಿ ತಾಶ್ವಿ, ತನ್ನ ಫ್ರೆಂಡ್ಸ್ಗಳಿಗೆ Bye ಹೇಳಿ ಬಂತು ಕಾರ್ ಹತ್ತುವ ವಿಭು, ಇನ್ನೇನು ಕಾರು ಆಗುವ ಹೊತ್ತಿಗೆ ಉಳಿದ ಮೂರು ಜನ,ಶಕ್ತಿ ರಾಬಿನ್ ಮತ್ತು ಚಿರು ಬಂದು ತಮಗೂ ಕಾರಲ್ಲಿ ಡ್ರಾಪ್ ಕೊಡುವಂತೆ ಗೆಳೆಯ ವಿಭೂಗೆ ಕೇಳುತ್ತಾರೆ, ಕಾರಲ್ಲಿದ್ದ ವಿಭೂ ಗೆಳತಿ ತಾಶ್ವಿಗೆ ( ಹರಿತಾ ಷಾ) ಒಂತರ […]

ಜಗತ್ತಿನಲ್ಲಿರುವ ಅತ್ಯಂತ ಶ್ರೇಷ್ಠವಾದ ಕೆಲವೇ ಕೆಲವು ವಿಷಯಗಳಲ್ಲಿ, ಪ್ರೀತಿಯು ಸಹ ಒಂದು, ತನ್ನನ್ನ ಮನಸಾರೆ ಪ್ರೀತಿಸಿದೆ ಹುಡುಗನ ಜೊತೆಗೆ ಒಂದು ಡ್ಯೂಟಿಗೆ ಎಂದು ಹೋಗಲು ಸಿದ್ಧವಾಗುವ ಹುಡುಗಿ ತಾಶ್ವಿ, ತನ್ನ ಫ್ರೆಂಡ್ಸ್ಗಳಿಗೆ Bye ಹೇಳಿ ಬಂತು ಕಾರ್ ಹತ್ತುವ ವಿಭು,

ಇನ್ನೇನು ಕಾರು ಆಗುವ ಹೊತ್ತಿಗೆ ಉಳಿದ ಮೂರು ಜನ,ಶಕ್ತಿ ರಾಬಿನ್ ಮತ್ತು ಚಿರು ಬಂದು ತಮಗೂ ಕಾರಲ್ಲಿ ಡ್ರಾಪ್ ಕೊಡುವಂತೆ ಗೆಳೆಯ ವಿಭೂಗೆ ಕೇಳುತ್ತಾರೆ, ಕಾರಲ್ಲಿದ್ದ ವಿಭೂ ಗೆಳತಿ ತಾಶ್ವಿಗೆ ( ಹರಿತಾ ಷಾ) ಒಂತರ ಮುಜುಗರ ಭಯ ಆದರೂ ಅಲ್ಲಿನ ಪರಿಸ್ಥಿತಿ ಇಲ್ಲ ಎನ್ನಲಾಗದೆ ಉಳಿದ ಮೂರು ಜನರನ್ನು ಕಾರಲ್ಲಿ ಹಚ್ಚಿಕೊಂಡು ಕಾರಣ ಓಡಿಸಲು ಶುರುಮಾಡುವ ವಿಭೂ.

ಚಲಿಸುತ್ತಿದ್ದ ಕಾರಿನಲ್ಲಿ ಒಂದು ಹುಡುಗಿ ಮತ್ತು ನಾಲ್ಕು ಜನ ಹುಡುಗರು, ಅದರಲ್ಲಿದ್ದ ಶಕ್ತಿ ಸೈಕೋಪ ಪ್ರೀತಿಯಲ್ಲಿ ಮಾತನಾಡುತ್ತಾ ತಾಶ್ವಿಗೆ ಭಯ ಹುಟ್ಟಿಸುತ್ತಿರುತ್ತಾನೆ, ಸ್ವಲ್ಪ ಸಮಯ ತಮಾಷೆ ಗೊಂದಲ ವಾತಾವರಣ ಉಂಟಾಗುತ್ತದೆ, ಇದರ ಮಧ್ಯೆ ಒಂದು ಹಂತದಲ್ಲಿ ಕಾರಿನಲ್ಲಿದ್ದ ತಾಶ್ವಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಶಕ್ತಿಗೇ ಇನ್ನುಳಿದ ಇಬ್ಬರು ಸ್ನೇಹಿತರು ಸಹಾಯ ಮಾಡುತ್ತಾರೆ, ಆಕೆ ಮೂರ್ಛೆ ತಪ್ಪಿ ಹೋಗುವ ಸಮಯ, ನೋಡುಗರಿಗೆ ಗೊತ್ತಾಗುತ್ತದೆ ಈ ಕಾಲದಲ್ಲಿ ಆಕೆಯ ಸ್ನೇಹಿತ ವಿಭು ಕೂಡ ಇರುತ್ತಾನೆ ಎಂದು, ಇದೊಂದು ಕಂಪ್ಲೀಟ್ ಕಿಡ್ನಾಪ್ ಪ್ಲಾನ್ ಆಗಿರುತ್ತದೆ. ಕಾರಣ ತಾವೊಂದು ಕೊಂಡ ಗೆಸ್ಟ್ ಹೌಸ್ ಕಡೆಗೆ ಓಡಿಸುವಂತೆ ಶಕ್ತಿ ವಿಭೂಗೆ ಹೇಳುತ್ತಾನೆ ಕಾರ್ ಮೂವ್ ಆಗುತ್ತದೆ ಕಥೆ ಇಲ್ಲಿ ಟ್ವಿಸ್ಟ್ ತೆಗೆದುಕೊಳ್ಳುತ್ತದೆ.

ಇದರ ಇಂಟರ್ ಕಟ್ನಲ್ಲಿ, ತುಂಬಾ ನಿಯತ್ತಿನ ಹುಡುಗ ಚಕ್ರಿ (ಮೈತ್ರಿ ಜಗ್ಗಿ ) ತನ್ನ ಪ್ರಾಮಾಣಿಕತೆ ಮತ್ತು ಒಳ್ಳೆಯತನದಿಂದ ವೈನ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಲೇ, ಅದರ ಮಾಲೀಕ ರವಿ ಅಣ್ಣನ ಪ್ರೀತಿಗೆ ಪಾತ್ರನಾಗಿ ವೈನ್ ಶಾಪ್ ನ ಒಂದರ ಇನ್ ಚಾರ್ಜ್ ಆಗಿ ಕೆಲಸ ಮಾಡುತ್ತಿರುತ್ತಾನೆ, ಈತನಿಗೆ ಕೋಳಿ ಹೆಸರಿನ ನಿಕ್ ನೇಮ್ ಹೊಂದಿರುವ ಗಿರಿಜಾ ( ಸಂಪ್ರತಿ ಆಳ್ವ ) ಮೇಲೆ ಲವ್ವೂ ಲವ್ವು, ಆಕೆಯನ್ನು ಇಂಪ್ರೆಸ್ ಮಾಡಲು ಕನ್ನಡದ ಎಲ್ಲ ಸೂಪರ್ ಸ್ಟಾರ್ ಗಳ ಗೆಟಪ್ ಹಾಕಿ ನಟನೆ ಮತ್ತು ಸಂಭಾಷಣೆ ಹೇಳುತ್ತಿರುತ್ತಾನೆ, ಇಷ್ಟಾದ ಮೇಲೆ ಅವರಿಬ್ಬರ ಮಧ್ಯೆ ಪ್ರೀತಿ ಆಗದೆ ಇರುತ್ತಾ ??
ಪ್ರೀತಿ ಚಿಗುರುಡೆದು ಪ್ರೇಮ ಕುರ ಮಿತಿಮೀರಿ ದಾದಾ ಇನ್ನೇನು ಮುಂದಿನ ತಪ್ಪು ಆಗುವ ಸಂದರ್ಭದಲ್ಲಿ ಚಕ್ರಿ ಮತ್ತು ಗಿರಿಜಾ ಇಬ್ಬರು ಒಂದು ಗೆಸ್ಟ್ ಹೌಸ್ ಬಳಿ ತೆರೆಳುತ್ತಾರೆ, ಇಲ್ಲೊಂದು ಟ್ವಿಸ್ಟ್.

ತಾಶ್ವಿಯನ್ನು ಕಿಡ್ನಾಪ್ ಮಾಡಿಕೊಂಡು ಯಾವ ಗೆಸ್ಟ್ ಹೌಸ್ ಗೇ ಹೋಗಲು ಪ್ಲಾನ್ ಮಾಡಿದ್ದರೋ,ಅದೇ ಗೆಸ್ಟ್ ಹೌಸ್ ಗೇ ಈ ಚಕ್ರೀ ಮತ್ತು ಗಿರಿಜಾ ಹೋಗಿರುತ್ತಾರೆ,ಆ ಗೆಸ್ಟ್ ಹೌಸ್ ನ ಓನರ್ ರವಿ ಅಣ್ಣ,ತಮ್ಮ ಗೆಸ್ಟ್ ಹೌಸ್ ಗೆ ಇವರೆಲ್ಲರೂ ಬರುತ್ತಿರುವ ವಿಷ್ಯ ಅಸಲಿಗೆ ರವಿ ಅಣ್ಣನಿಗೆ ಗೊತ್ತೇ ಇಲ್ಲ,ಇಲ್ಲೊಂದು ಟ್ವಿಸ್ಟ್..

ಇನ್ನೇನು ತಾವು ಬಂದ ಕೆಲಸ ಮುಗಿಸಿಕೊಂಡು ಇನ್ನೇನು ಹೊರಡಬೇಕು ಎಂದು ಸಿದ್ದರಾಗಿದ್ದ ಚಕ್ರಿ ಮತ್ತು ಗಿರಿಜಾ ಕಣ್ಣಿಗೆ,ಅಲ್ಲಿಗೆ ಅದೇ ತಾನೇ ಬಂದ
ನಾಲ್ಕು ಜನ ಹುಡುಗರು ಮತ್ತು ಮೂರ್ಛೆ ತಪ್ಪಿದ್ದ ಹುಡುಗಿ ಕಂಡು, ಏನೋ ಅನಾಹುತವಾಗುವ ಸಂಭವವಿದೇ, ಏನಾದರೂ ಮಾಡಿ ಪಾಪಾ ಆ ಹುಡುಗಿಯನ್ನು ರಕ್ಷಿಸಬೇಕು ಎಂದು, ಪ್ಲಾನ್ ಮಾಡಿ ತಾಶ್ವಿಯನ್ನು ಅಲ್ಲಿಂದ ಎಸ್ಕೇಪ್ ಆಗುವ ಹಾಗೆ ಮಾಡುತ್ತಾರೆ,
ಇಲ್ಲೊಂದು ಟ್ವಿಸ್ಟ್..

ತಾಶ್ವಿ ಕಾಣದೇ ಇದ್ದಾಗ, ಕಂಗಾಲಾದ ಹುಡುಗರು ತಮ್ಮ ತಮ್ಮಲ್ಲಿ ಗಲಾಟೆ, ಜಗಳ ಮಾಡಿಕೊಂಡು, ಇನ್ನೇನು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ,ಚಕ್ರಿ ಹಾಗೂ ಗಿರಿಜಾ ಆ ಕಾಮುಕ ದುಷ್ಟ ಸೈಕೊಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ.

ನಾಲ್ಕು ಜನರು ತಂದಿದ್ದ ಹುಡುಗಿ ಎಸ್ಕೇಪ್ ಆದರೆ ಈ ಯುವ ಪ್ರೇಮಿಗಳು ಲಾಕ್ ಆಗುತ್ತಾರೆ, ಇಲ್ಲಿಂದ ಕತೆ ಕಂಪ್ಲೀಟ್ ಟ್ವಿಸ್ಟ್..

ಒಬ್ಬ ಪ್ರೇಮಿ ತಾನು ಪ್ರೀತಿಸಿದ ಹುಡುಗಿಗಾಗಿ ತನ್ನ ಜೀವ ಕೊಡಲು ಸಿದ್ಧನಾದರೆ

ಇನ್ನೊಬ್ಬ ಪ್ರೇಮಿ,ತಾನು ಪ್ರೀತಿಸಿದ ಹುಡುಗಿಯನ್ನೇ ಮೋಸ ಮಾಡಿ,ಸಾಯಿಸುವ ಪ್ರಯತ್ನಕ್ಕೆ ಗೆಳೆಯರ ಜೊತೆ ಸೇರಿ ಪ್ಲಾನ್ ಮಾಡುವ ಕಥೆ ಇನ್ನೊಂದಡೆ

ಎರಡು ಟ್ರ್ಯಾಕ್ ಗಳ ಮಧ್ಯ ಇರುವ ಅಂತರ,ಅವಾಂತರಗಳ ಕಥೆಯನ್ನು ನಿರ್ದೇಶಕ ಮನೋಜ್ ಅಣ್ಣಯ್ಯ ಸಾಧ್ಯವಾದಷ್ಟು ಟೈಟ್ ಸ್ಕ್ರೀನ್ ಪ್ಲೇ ಮೂಲಕ ಪ್ರೇಕ್ಷಕರನ್ನು ಹಿಡಿದು ಕುಡಿಸುವ ಪ್ರಯತ್ನ ಮಾಡಿದ್ದಾರೆ,ಚಿತ್ರದ ಮೊದಲ ಹಾಫ್ ಬಹಳ ಇಂಟ್ರೆಸ್ಟಿಂಗ್ ಆಗಿ ಹೋಗುತ್ತದೆ ಆದರೆ ದ್ವಿತೀಯಾರ್ಧ ಸ್ವಲ್ಪ ಲ್ಯಾಗ್ ಫೀಲ್ ಆಗುತ್ತದೆ,
ಸಂಭಾಷಣೆ ಓಕೇ,ಮ್ಯೂಸಿಕ್ ಮಾತ್ರ ಸೂಪರ್,
ಛಾಯಾಗ್ರಹಣ ಕೂಡಾ ಚೆನ್ನಾಗಿ ಮಾಡಿದ್ದಾರೆ,ಇಂತದೊಂದು ಒಳ್ಳೆಯ ಕಂಟೆಂಟ್ ಮೇಲೆ ಹಣ ಹಾಕಿದ ವಿನೋದ್ ಬಸವರಾಜ್ ಸಿನಿ ಪ್ರೀತಿಗೆ ಭೇಷ್ ಹೇಳಲೇಬೇಕು.

ಇನ್ನು ನಟನೆ ವಿಚಾರದಲ್ಲಿ,ಮೊದಲ ಫ್ರೇಮ್ ನಿಂದ ಕೊನೆಯ ಫ್ರೇಮ್ ತನಕ ಅಬ್ಬರಿಸಿದ್ದು ಶಕ್ತಿಯಾಗಿ ವಿವೇಕ್ ಸಿಂಹ ಮತ್ತು ಚಕ್ರಿ ಮೈತ್ರಿ ಜಗ್ಗಿ ಇಬ್ಬರು ಹಠಕ್ಕೆ ಬಿದ್ದಂತೆ ನಟಿಸಿ ಹೈ ಸ್ಕೋರ್ ಮಾಡಿದ್ದಾರೆ,
ಇನ್ನುಳಿದಂತೆ ಗಿರಿಜಾ ಆಗಿ ಸಂಪ್ರತಿ ಆಳ್ವ ನಟನೆ ವೇರಿ ಸೆನ್ಸಿಬಲ್,ಚಿರು ಆಗಿ ದಯಾ ಪಲ್ಲವಗೆರೆ, ವಿಭೂ ಆಗಿ ಶ್ರೀದತ್ತ, ರಾಬಿನ್ ಆಗಿ ದೈವಿಕ ನಾಗ್ ಸೇರಿ ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕಷ್ಟು ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅನಿರೀಕ್ಷಿತ ಅತಿಥಿಗಳು,ಚಿತ್ರದ ಆರಂಭದಿಂದ ಚಿತ್ರದ ಕ್ಲೈಮಾಕ್ಸ್ ತನಕ ಸುಮಾರು ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ,ಚಿತ್ರ ನೋಡುವ ಪ್ರೇಕ್ಷಕರನ್ನು ಆಗಾಗ ಥ್ರಿಲ್ ಮಾಡುತ್ತವೆ.

ಅನಿರೀಕ್ಷಿತ ಅತಿಥಿಗಳು,ಒಂದೊಳ್ಳೆಯ ಪ್ರಯತ್ನ,,ಒಮ್ಮೆ ನೋಡಬಹುದು.


ರವೀ ಸಾಸನೂರ್ MasterNews365

ರೇಟಿಂಗ್ 3.5 / 5

ಚಿತ್ರ : ಅನಿರೀಕ್ಷಿತ ಅತಿಥಿಗಳು

ನಿರ್ದೇಶನ : ಮನೋಜ್ ಅಣ್ಣಯ್ಯ

ನಿರ್ಮಾಣ : ವಿನೋದ್ ಬಸವರಾಜ್

ಕಲಾವಿದರು :
ವಿವೇಕ್ ಸಿಂಹ, ಮೈತ್ರಿ ಜಗ್ಗಿ,,ಸಂಪ್ರತಿ ಆಳ್ವ,ದಯಾ ಪಲ್ಲವಗೆರೆ,ಶ್ರೀದತ್ತ,ದೈವಿಕ ನಾಗ್,ಹರಿತಾ ಷಾ ಮುಂತಾದವರು

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.