Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಕ್ಟೋಬರ್ 16ಕ್ಕೆ – ಗೋಲ್ಡನ್ ಬೃಂದಾವಿಹಾರಿ
- ವಿಶೇಷ ಸಮಾಚಾರ - ಸಿನಿಮಾ

ಅಕ್ಟೋಬರ್ 16ಕ್ಕೆ – ಗೋಲ್ಡನ್ ಬೃಂದಾವಿಹಾರಿ

ಒಬ್ಬ ನಾಯಕ ನಟನಾಗಿ ನಾನು ಎಷ್ಟೇ ಚಿತ್ರಗಳನ್ನು ಮಾಡಿದರೂ ಸಹ, ಕೆಲವು ನಿರ್ದೇಶಕರು ಗಣೇಶ್ ಕೆಪ್ಯಾಸಿಟಿ ಇನ್ನು ಬೇರೆ ರೇಂಜ್ನಲ್ಲಿದೆ ಅನ್ನೋದನ್ನ ಚರ್ಚೆ ಮಾಡಿದ್ದನ್ನ ಕೇಳಿರುತ್ತೇವೆ, ಅದು ಶ್ರೀನಿವಾಸ್ ರಾಜು ವಿಚಾರಕ್ಕೆ ಮತ್ತೊಮ್ಮೆ ಪ್ರಸ್ತಾಪ ಆಯಿತು, ನಾವು ಸಹ ಮಾಡುವಂತ ಪ್ರತಿಯೊಂದು ಸಿನಿಮಾದ ಪಾತ್ರವನ್ನು ಜನ ನೆನಪಲ್ಲಿಟ್ಟುಕೊಳ್ಳೋ ಹಾಗೆ ಮಾಡಿರ್ತೀವಿ ಚಿತ್ರ ರಿಲೀಸ್ ಆದ ನಂತರವೇ ನಮಗೆಲ್ಲ ಅದರ ಪ್ರತಿಕ್ರಿಯೆ ಗೊತ್ತಾಗುತ್ತಾ ಹೋಗುತ್ತದೆ,ಬೃಂದಾಬಿಹಾರಿ ಚಿತ್ರದಲ್ಲಿ ನಿಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಾಧವನಾಗಿ ಕಾಣಿಸಿಕೊಂಡಿದ್ದು,ಚಿತ್ರದ ಮೊದಲ ಹಂತದ ಚಿತ್ರೀಕರಣ […]

ಒಬ್ಬ ನಾಯಕ ನಟನಾಗಿ ನಾನು ಎಷ್ಟೇ ಚಿತ್ರಗಳನ್ನು ಮಾಡಿದರೂ ಸಹ, ಕೆಲವು ನಿರ್ದೇಶಕರು ಗಣೇಶ್ ಕೆಪ್ಯಾಸಿಟಿ ಇನ್ನು ಬೇರೆ ರೇಂಜ್ನಲ್ಲಿದೆ ಅನ್ನೋದನ್ನ ಚರ್ಚೆ ಮಾಡಿದ್ದನ್ನ ಕೇಳಿರುತ್ತೇವೆ, ಅದು ಶ್ರೀನಿವಾಸ್ ರಾಜು ವಿಚಾರಕ್ಕೆ ಮತ್ತೊಮ್ಮೆ ಪ್ರಸ್ತಾಪ ಆಯಿತು, ನಾವು ಸಹ ಮಾಡುವಂತ ಪ್ರತಿಯೊಂದು ಸಿನಿಮಾದ ಪಾತ್ರವನ್ನು ಜನ ನೆನಪಲ್ಲಿಟ್ಟುಕೊಳ್ಳೋ ಹಾಗೆ ಮಾಡಿರ್ತೀವಿ ಚಿತ್ರ ರಿಲೀಸ್ ಆದ ನಂತರವೇ ನಮಗೆಲ್ಲ ಅದರ ಪ್ರತಿಕ್ರಿಯೆ ಗೊತ್ತಾಗುತ್ತಾ ಹೋಗುತ್ತದೆ,
ಬೃಂದಾಬಿಹಾರಿ ಚಿತ್ರದಲ್ಲಿ ನಿಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಾಧವನಾಗಿ ಕಾಣಿಸಿಕೊಂಡಿದ್ದು,ಚಿತ್ರದ ಮೊದಲ ಹಂತದ ಚಿತ್ರೀಕರಣ ಆದ್ಮೇಲೆ,ಶುವಾಯಿತು ಅಸಲಿ ಆಟ.ನನ್ನೆಲ್ಲ ಸಿನಿಮಾಗಳನ್ನು ಫ್ಯಾಮಿಲಿ ಸಮೇತ ಬಂದು ನೋಡಿದ್ದೀರಿ ಗೆಲ್ಲಿಸಿದ್ದೀರಿ ಇದನ್ನು ಕೂಡಾ ಕನ್ನಡಿಗರು ನೋಡ್ತಾರೆ ಅನ್ನೋ ಭರವಸೆ ಇದೇ,ಕೃಷ್ಣಂ ಪ್ರಣಯ ಸಖಿ ಆದಮೇಲೆ ಜನ ನನ್ನನ್ನು ತುಂಬಾ ಇಷ್ಟ ಪಡೋಕೆ ಶುರು ಮಾಡಿದ್ದಾರೆ ಅನ್ನೋ ಮಾತು ಬೇರೆಯವರಿಂದ ಕೇಳಿದಾಗ ಸಂತೋಷ ಆಗತ್ತೆ ಎನ್ನುವುದರ ಮೂಲಕ ಗಣೇಶ ತಮ್ಮ ಹಳೆಯ ದಿನಗಳನ್ನು ನೆನೆದರು ಹಾಗೆ ಬೃಂದಾವಿಹಾರಿ ಚಿತ್ರದಲ್ಲಿ ಕಾಣಿಸಿಕೊಂಡ ರಂಗಾಯಣ ರಘು ನಾಯಕಿ ಮಣಿಯರು ಮತ್ತು ವಿಶೇಷವಾಗಿ ಕುರಿ ಪ್ರತಾಪ್,
ಮಂಜು ಪಾವಗಡ,ಜಗ್ಗಪ್ಪ,ಗಿರಿ..
ನೀನಾಸಂ ಅಶ್ವತ್ಥ್, ಬಗ್ಗೆ ಮಾತನಾಡಿ,ಪ್ರೀತಿಯಿಂದ ಕುರಿ ಪ್ರತಾಪ್ ಕಾಲೆಳೆದರು.

ಶ್ರೀನಿವಾಸ್ ರಾಜು ಎಂದ ತಕ್ಷಣ ನಮ್ಮ ಕಣ್ಮುಂದೆ ಅವರ ನಿರ್ದೇಶನದ ಎಲ್ಲ ಚಿತ್ರಗಳು ಬಂದು ಹೋಗುತ್ತವೆ ಅದರಲ್ಲೂ ದಂಡುಪಾಳ್ಯ, ಎಂಬ ಮಾತು ಕೇಳಿ ಬರುತ್ತಿದ್ದಂತೆ ಇಂತಹ ನಿರ್ದೇಶಕರಿಂದ ಅದು ಹೇಗೆ ಕೃಷ್ಣಮಪಣೆಯ ಸತಿ ಎಂಬ ಸಿನಿಮಾ ಆಯ್ತು ಅನ್ನುವಂತಹ ಆಶ್ಚರ್ಯ ಎಲ್ಲರಲ್ಲೂ ಮೂಡುತ್ತದೆ, ಬೃಂದಾಭಿಹಾರಿ ಚಿತ್ರದ ಪ್ರಶಸ್ತಿ ಬಗ್ಗೆ ಮಾತು ಶುರು ಮಾಡಿದ ಶ್ರೀನಿವಾಸರಾಜು
ಕೃಷ್ಣಂ ಪ್ರಣಯ ಸಖಿ ಆಯ್ತು,ಈಗ ಬೃಂದಾವಿಹಾರಿ ರಿಲೀಸ್ ಗೆ ಸಿದ್ದ ಇದೆ.ಕೃಷ್ಣಂ ಪ್ರಣಯ ಸಖಿ ತುಂಬ ಸೆನ್ಸಿಬಲ್ ಆದ ಎಮೋಷನಲ್ ಫ್ಯಾಮಿಲಿ ಕಂಟೆಂಟ್ ಹೊಂದಿದ್ದರಿಂದ ಮತ್ತು ಗೋಲ್ಡನ್ ಸ್ಟಾರ್ ಅದನ್ನ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಯ್ತು, ಈಗ ಮತ್ತೊಮ್ಮೆ ಅದೇ ಮ್ಯಾಜಿಕ್ ಗೋಲ್ಡನ್ ಸ್ಟಾರ್ ಗಣೇಶ್ ಮಾಡಲಿದ್ದಾರೆ ಅದು ಬೃಂದಾವಿಹಾರಿ ಮೂಲಕ, ಮುಂದಿನ ದಿನಗಳಲ್ಲಿ ನಾನು ಗಣೇಶ್ ಒಟ್ಟಿಗೆ ಸಿನ್ಮಾ ಮಾಡದೇ ಇದ್ರೂನು ಪರವಾಗಿಲ್ಲ,
ಬೃಂದಾವಿಹಾರಿ ಮಾತ್ರ ನನ್ನ ಸಿನಿ ಕೆರಿಯರ್ ನಲ್ಲಿ ಬ್ರಿಲಿಯಂಟ್ ಚಿತ್ರವಾಗುವುದರಲ್ಲಿ ಡೌಟ್ ಇಲ್ಲ ಮತ್ತೊಂದು ವಿಷ್ಯ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಪಾತ್ರ ನೋಡುಗರನ್ನು ತುಂಬಾ ಕಾಡತ್ತೆ,ಎಲ್ಲರ ಹೃದಯವನ್ನು ಗಣೇಶ್ ಮತ್ತೊಮ್ಮೆ ಕದಿಯಲಿದ್ದಾರೆ, ಟಾಪ್ ಕ್ಲಾಸ್ ಆಕ್ಟಿಂಗ್ ನೋಡುವ ಅವಕಾಶ ನಮಗೆಲ್ಲ ಸಿಗಲಿದೆ ಎಂದರು.53 ದಿನಗಳ ಒಂದೇ ಸ್ಕೆಡುಲ್ ನಲ್ಲಿ ಮೈಸೂರಿನ ಕೆ ಆರ್ ಎಸ್ ಸುತ್ತಮುತ್ತಲು ಚಿತ್ರೀಕರಣ ಆಗಿದೆ,
ಒಂದೇ ಒಂದು ಫ್ರೇಮ್ ಗೂ ಮೋಸವಾಗದ ಹಾಗೇ ಕೆಲಸ ಮಾಡಿದೀವಿ.ಅಂದಾಗ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.

ಅಕ್ಟೋಬರ್ 16ಕ್ಕೆ ರಿಲೀಸ್ ಮಾಡ್ತಾ ಇದೀವಿ,ಈ ಸಾರಿಯ ದಸರಾ ಬೃಂದಾವಿಹಾರಿ ಜೊತೆ ಮಾಡೋಣ ಎಂಬ ಮಾತುಗಳನ್ನು ಆತ್ಮವಿಶ್ವಾಸದಿಂದಲೇ ಶುರು ಮಾಡಿದ ಬೃಂದಾಭಿಹಾರಿ ನಿರ್ಮಾಪಕ ಸಮೃದ್ಧಿ ಮಂಜುನಾಥ್,
ಚಿತ್ರವನ್ನುಪ್ರಪಂಚದಾದ್ಯಂತ 1300 ಥಿಯೇಟರ್ ಗಳಲ್ಲಿ ರಿಲೀಸ್ ಮಾಡ್ತೀನಿ..ಕ್ರಿಕೆಟ್ ಆಡ್ತಾ ಆಡ್ತಾ ನಾನು ಗಣೇಶ್ ಫ್ರೆಂಡ್ಸ್ ಆದೆವು.
ನಮ್ಮಿಬ್ಬರ ಜೊತೆಗೆ ನಿಂತವರು ಒಬ್ಬ ನಿರ್ದೇಶಕನಾಗಿ ಶ್ರೀನಿವಾಸ ರಾಜು.ಬಹುತೇಕ ಚಿತ್ರೀಕರಣ ಒಂದೇ ಸ್ಕೆಡುಲ್ ನಲ್ಲಿ ಮಾಡಿದ ಚಿತ್ರ ಬೃಂದಾವಿಹಾರಿ,ಈಗಾಗಲೇ ಕೃಷ್ಣಂ ಪ್ರಣಯ ಸಖಿ ಮೂಲಕ ಹಿಟ್ ಕೊಟ್ಟ ಕಾಂಬಿನೇಷನ್,ನಮ್ಮ ಜೊತೆ ಕೈ ಜೋಡಿಸಿದ್ದು ನಮಗೆ ದೊಡ್ಡ ಸಂಭ್ರಮ, ಇದೇ ಕನ್ನಡಿಗರು ಸೇರಿ ಎಲ್ಲ ಸಿನಿಮಾ ಅಭಿಮಾನಿಗಳು ಮತ್ತೊಮ್ಮೆ ಹೊಸ ಅನುಭವವನ್ನು ನಮ್ಮ ಚಿತ್ರ ನೋಡುವುದರ ಮೂಲಕ ಪಡೆಯಲಿದ್ದಾರೆ ಎಂದರು.

ಬೃಂದಾವಿಹಾರಿ ಚಿತ್ರಕ್ಕೆ ಏಳು ಹಾಡುಗಳನ್ನು ಬರೆದ,
ಕವಿರತ್ನ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್, ಈ ಚಿತ್ರದಲ್ಲಿ ಹಾಡುಗಳ ಸಂಖ್ಯೆ ಬಹಳ ಇವೆ, ಅದೇ ರೀತಿಯಾಗಿ ಇಲ್ಲಿ ಸಿಕ್ಕಾಪಟ್ಟೆ ಕಲಾವಿದರು ಇದ್ದಾರೆ, ಕೃಷ್ಣಂ ಪ್ರಣಯ ಸಖಿ ಪ್ರೆಸ್ ಮೀಟ್ ನಲ್ಲಿ ಹೇಳಿದ್ದೆ ಅದು ಹಿಟ್ ಆಗತ್ತೆ ಅಂತಾ,ಅದು ನಿಜಾ ಆಯ್ತು.ಗ್ಯಾರಂಟಿ ಹೇಳ್ತೀನಿ ಬೃಂದಾವಿಹಾರಿ ಸೂಪರ್ ಹಿಟ್ ಆಗೋದ್ರಲ್ಲಿ ಡೌಟ್ ಇಲ್ಲ,ಇದರಲ್ಲಿನ ಏಳು ಹಾಡುಗಳು ಏಳು ಬಣ್ಣದ ಶೈಲಿಯಲ್ಲಿ ಇರೋದೇ ವಿಶೇಷ ಎಂದು ಸ್ವತಃ ಅವ್ರೆ ಸಂಭ್ರಮಿಸಿದರು.

ಬೃಂದಾವರಿ ಚಿತ್ರದ ಸಂಗೀತ ನಿರ್ದೇಶಕ ಕೇರಳದ ಪ್ರತಿಭಾವಂತ ತಂತ್ರಜ್ಞಹೇಶಮ್ ಅಬ್ದುಲ್ ವಹಾಬ್ ಮಾತನಾಡಿ,
ಬೃಂದಾವಿಹಾರಿ ಚಿತ್ರದ ಎಲ್ಲಾ ಹಾಡುಗಳು ಅಮೇಜಿಂಗ್ ಫೀಲ್ ಕೊಡ್ತಾವೆ,ಸ್ಪೆಷಲಿ ಗೋಲ್ಡನ್ ಸ್ಟಾರ್ ಗಣೇಶ್ ನಮಗೆ ದೊಡ್ಡ ಇನ್ಸ್ಪಿರೇಷನ್ ಎಂದು ಹೇಳಿ ಅದೇ ಚಿತ್ರದ ಒಂದೊಳ್ಳೆ ಹಾಡಿನ ಸಾಲು ಹಾಡಿದ್ದು ವಿಶೇಷವಾಗಿತ್ತು..

ನಂತರ ನಾಯಕಿ
ಮಾಳವಿಕಾ ಶರ್ಮಾ,ಈ ತರಹದ ಕಥೆ ನಾನು ಯಾವತ್ತೂ ಮಾಡಿರಲಿಲ್ಲ,ನನ್ನ ಸಿನಿಮಾ ಜರ್ನಿಯಲ್ಲಿ ಇದೊಂದು ಮರೆಯಲಾಗದಂತಹ ಚಿತ್ರ ಆಗತ್ತೆ ಅನ್ನೋ ಭರವಸೆ ಇದೆ,ಗೋಲ್ಡನ್ ಸ್ಟಾರ್ ಗಣೇಶ್ ಅವ್ರಿಗೆ ಇರೋ ಸ್ಟಾರ್ ಡಮ್ ಬಗ್ಗೆ ಗೊತ್ತಿತ್ತು,ಆದ್ರೆ ಬೇರೆ ಭಾಷೆಯಿಂದ ಬಂದಂತಹ ನಮಗೆ ಕೊಟ್ಟ ಸಪೋರ್ಟ್ ಬಹಳ ದೊಡ್ಡದು,ಇದು ನಮಗೆಲ್ಲ ದೊಡ್ಡ ಎನರ್ಜಿ ಕೊಡತ್ತೆ. ಮತ್ತೊಬ್ಬ ನಾಯಕಿ
ದೇವಿಕಾ ಭಟ್,ಇದು ನನ್ನ ಮೊದಲ ಪ್ರಯತ್ನ,ಆದರೆ ಇಲ್ಲಿ ಬಹಳ ಸಿನಿಮಾಗಳಿಗೆ ಕೆಲಸ ಮಾಡಿದ ಫೀಲ್ ಆಯ್ತು,ಗಣೇಶ್ ರಂತಹ ದೊಡ್ಡ ಹೀರೋ ಜೊತೆ ನಟಿಸ್ತಾ ಇದ್ದೀನಿ ಅನ್ನೋ ಭಾವನೆ ಯಾವಾಗಲೂ ಬರಲಿಲ್ಲ ಎಂದರು.

ಇನ್ನುಳಿದಂತೆ ಚಿತ್ರದಲ್ಲಿ ನಟಿಸಿದ್ದ ಎಲ್ಲ ಪ್ರಮುಖ ಕಲಾವಿದರಾದ ರಂಗಣ್ಣ ರಘು ಮಾತನಾಡಿ,ಗಣೇಶ್ ನಿಜವಾಗಲೂ ಗೋಲ್ಡ್ ಚಿನ್ನದಂತ ನಟ ಚಿನ್ನದಂತ ಸಿನಿಮಾ ಇದು ತುಂಬಾ ಒಳ್ಳೆಯ ಸಿನಿಮಾ ಆಗುತ್ತೆ ಎಂದರು, ಜೊತೆಗೆ ವೇದಿಕೆ ಮೇಲಿದ್ದ ಕುರಿ ಪ್ರತಾಪ್,ಮಂಜು ಪಾವಗಡ,ಗಿರಿ ಶಿವಣ್ಣ,ಜಗ್ಗಪ್ಪ, ನೀನಾಸಂ ಅಶ್ವಥ್ ಬೃಂದಾವಹಾರಿ ಚಿತ್ರದ ಅನುಭವವನ್ನು ತಮ್ಮ ಹಾಸ್ಯ ಮಿಶ್ರಿತ ಮಾತುಗಳನ್ನು ಆಡುವುದರ ಜೊತೆಗೆ ಎಲ್ಲರನ್ನ ರಂಜಿಸಿದರು..

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.