Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮೂಡಲ ಮನೆ ನೀ ಯಾವಾಗ ಮತ್ತೆ ಬರುವೆ ??
- ಸಿನಿಮಾ - ಸೀರಿಯಲ್

ಮೂಡಲ ಮನೆ ನೀ ಯಾವಾಗ ಮತ್ತೆ ಬರುವೆ ??

ಇತ್ತೀಚಿಗೆ ಸಿಕ್ಕ ಆತ್ಮೀಯ ಹಿರಿಯ ಸ್ನೇಹಿತರು ಒಬ್ಬರು ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳ ದೊಡ್ಡ ಹೂವುಚ್ಚವನ್ನೇ ತಂದುಕೊಟ್ಟು ತಾನು ಏನು ಸಾಧನೆ ಮಾಡಿಲ್ಲ ಎಂಬಂತೆ ಅತ್ಯಂತ ಸರಳವಾಗಿ ಬದುಕುತ್ತಿರುವ ಗಿರೀಶ್ ಕಾಸರಹಳ್ಳಿಯವರ ಬಗ್ಗೆ ಮಾತನಾಡುತ್ತಾ ನಿಧಾನವಾಗಿ ಅವರ ಜೊತೆ ಇದ್ದ ಅವರ ಧರ್ಮಪತ್ನಿ ವಾಲಿದ್ದು ಮಾತ್ರ ಮೂಡಲ ಮನೆಯ ಕಡೆಗೆ.ಹೌದು ಆ ಹೆಣ್ಣುಮಗಳು,ಕನ್ನಡತಿ ವೈಶಾಲಿ ಕಾಸರವಳ್ಳಿ ಬಗ್ಗೆ ಮಾತು ಶುರು ಮಾಡಿ ಅಂದಿನ ಕಾಲಘಟ್ಟದಲ್ಲಿ , ಈ ಟಿವಿಯಲ್ಲಿ ಪ್ರಸಾರವಾದಮೂಡಲ ಮನೆ ಧಾರಾವಾಹಿ ಅದರ ಕಲಾವಿದರು ತಂತ್ರಜ್ಞರು ಹಾಗೂ […]

ಇತ್ತೀಚಿಗೆ ಸಿಕ್ಕ ಆತ್ಮೀಯ ಹಿರಿಯ ಸ್ನೇಹಿತರು ಒಬ್ಬರು ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳ ದೊಡ್ಡ ಹೂವುಚ್ಚವನ್ನೇ ತಂದುಕೊಟ್ಟು ತಾನು ಏನು ಸಾಧನೆ ಮಾಡಿಲ್ಲ ಎಂಬಂತೆ ಅತ್ಯಂತ ಸರಳವಾಗಿ ಬದುಕುತ್ತಿರುವ ಗಿರೀಶ್ ಕಾಸರಹಳ್ಳಿಯವರ ಬಗ್ಗೆ ಮಾತನಾಡುತ್ತಾ ನಿಧಾನವಾಗಿ ಅವರ ಜೊತೆ ಇದ್ದ ಅವರ ಧರ್ಮಪತ್ನಿ ವಾಲಿದ್ದು ಮಾತ್ರ ಮೂಡಲ ಮನೆಯ ಕಡೆಗೆ.
ಹೌದು ಆ ಹೆಣ್ಣುಮಗಳು,
ಕನ್ನಡತಿ ವೈಶಾಲಿ ಕಾಸರವಳ್ಳಿ ಬಗ್ಗೆ ಮಾತು ಶುರು ಮಾಡಿ ಅಂದಿನ ಕಾಲಘಟ್ಟದಲ್ಲಿ , ಈ ಟಿವಿಯಲ್ಲಿ ಪ್ರಸಾರವಾದ
ಮೂಡಲ ಮನೆ ಧಾರಾವಾಹಿ ಅದರ ಕಲಾವಿದರು ತಂತ್ರಜ್ಞರು ಹಾಗೂ ರೆಂಬೆ ಕೊಂಬೆಯ ಮ್ಯಾಲೆ, ಗೂಡು ಕಟ್ಟುತಾವ ರೆಕ್ಕೆ ಬಲಿತ ಹಕ್ಕಿ ಹಾಡಿನ ತನಕವೂ ಸಾಗುತ್ತಿದ್ದ ಅವರ ಮಾತು ಕೇಳಿ,ನಾನೊಮ್ಮೆ ಮೂಕ ವಿಸ್ಮಿತನಾಗಿ ಹೋದೆ,
ಆಮೇಲೆ ನನಗೆ ಅನಿಸಿದ್ದು ಹೌದು ನಾ ಹೆಣ್ಣು ಮಗಳ ಮಾತು ನಿಜವಲ್ಲವೇ ಎಂದು.

ಉತ್ತರ ಕರ್ನಾಟಕ ಶುಭದಿನ ಒಂದು ಶ್ರೇಷ್ಠ ಕಥೆಯನ್ನ, ಅಷ್ಟೇ ಅತ್ಯುತ್ತಮವಾದ ರೀತಿಯಲ್ಲಿ ಪ್ರೆಸೆಂಟ್ ಮಾಡಿ ಗೆದ್ದು ತೋರಿಸಿದ ಮಹಾಸಾಧಕಿ ವೈಶಾಲಿ ಕಾಸರವಳ್ಳಿ ಯವರೇ ಅಲ್ಲವೇ ?

ಮೂಡಲ ಮನೆಯ ಧಾರವಾಹಿಯಲ್ಲಿ ಕೆಲಸ ಮಾಡಿದ, ಅಲ್ಪ ಸ್ವಲ್ಪ ವಯಸ್ಸಾಗಿರುವ ಕೆಲವು ಕಲಾವಿದರು ಆಗಾಗ ಟಿವಿ ಸಂದರ್ಶನಗಳಲ್ಲಿ ಕೂತು ಮಾತನಾಡುವಾಗ ಆ ದಿನಗಳು ಮತ್ತು ಮೂಡಲ ಮನೆಯ ಬಗ್ಗೆ ನೆನಪಿಸಿಕೊಂಡು ಹೀಗೆಲ್ಲ ಅಂತಹ ಕಥೆ ಗೊತ್ತಿಲ್ಲ ಅದು ಸಾಧ್ಯವಿಲ್ಲ ಎಂದಾಗ ನನಗೂ ಒಂದು ಕ್ಷಣ ಅವರ ಮಾತು ನಿಜ ಅನ್ನಿಸುತ್ತದೆ,

ಮೂಡಲ ಮನೆ ಧಾರವಾಹಿ ಬಂದು 25 ವರ್ಷಗಳೇ ಕಳೆದಿವೆ,
ಪ್ರತಿದಿನವೂ ಬದಲಾವಣೆಯಾಗುವ ಈ ಜಗತ್ತಿನಲ್ಲಿ,
ಕಾಲ ಬದಲಾಗಲು ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳದ ಮೂಡಲ ಮನೆಗೊಂದು ಹ್ಯಾಟ್ಸಾಫ್, ವೈಶಾಲಿ ಕಾಸರವಳ್ಳಿ ಅವರಿಗೊಂದು ಹ್ಯಾಟ್ಸಾಫ್.

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.