ಬಸಪ್ಪ ಶರಣರ — ಶಿಕ್ಷಣ ಮತ್ತು ವೈವಾಹಿಕ ಜೀವನ
ಶಿಕ್ಷಣ …. ಇವರು ಮೂರನೇ ತರಗತಿವರೆಗೆ ಅಧ್ಯಯನ ಮಾಡಿದರು. ಅಂದಿನ ದಿನಮಾನಗಳಲ್ಲಿ ಶಾಲೆಗೆ ಹೋಗುವುದೆಂದರೆ ಬಲು ಕಷ್ಟ ಒಂದೆಡೆ ಬಡತನಕ್ಕಾಗಿ ಜಮೀನಿಗೆ ದುಡಿಯಲು ಹೋಗಲೇಬೇಕು ಇನ್ನೊಂದೆಡೆ ಜಾತಿ ವ್ಯವಸ್ಥೆ ಎಲ್ಲವೂ ಜೇನು ನೊಣಗಳಂತೆ ಜೇನು ಹನಿ ಉಣ್ಣಿಸದೆ ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿ ಓಡಿಸುವಂತಿತ್ತು. ಬಸಪ್ಪನವರಿಗೆ 9ನೇ ವಯಸ್ಸಿಗೆ ಚೌಡಕಿ ಪದಗಳನ್ನು ಕಲಿಯುವ ಆಸೆ ಹುಟ್ಟಿಕೊಂಡಿತು. ಮನೆಯಲ್ಲಿ ಇವರ ದೊಡ್ಡಪ್ಪನವರಾದ ಶ್ರೀ ಬಸಪ್ಪ ಚೌಡಕೇರ ಇವರನ್ನೇ ಮೊದಲ ಗುರುವಾಗಿ ಸ್ವೀಕರಿಸಿ ಇವರಿಂದ ಚೌಡಕಿ ಪದಗಳನ್ನು ಕಲಿಯಲು ಆರಂಭಿಸಿದರು. “ದಯ […]









