ಅಮೃತಹಳ್ಳಿ ಎಂಬ ಊರಿನಲ್ಲಿ ನಡೆದ ಕಥೆ ಇದು,ಅಲ್ಲಿನ ಹೈಸ್ಕೂಲ್ ಶಾಲೆಯೊಂದರಲ್ಲಿ ತುಂಬ ಜನ ಹುಡುಗ ಹುಡುಗಿಯರು ಓದುತ್ತಿರುತ್ತಾರೆ ಅದರಲ್ಲಿ ಒಬ್ಬಳು ಲಕ್ಷ್ಮೀ ಇನ್ನೊಬ್ಬ ರಮೇಶ್,ಲಕ್ಷ್ಮೀ ತಂದೆ ಗುರು ಹೆಗಡೆ ಬಹಳ ಶಿಸ್ತು ಮತ್ತು ಸಂಪ್ರದಾಯದ ಮನುಷ್ಯ,ತಾಯಿ ಉಷಾ ಭಂಡಾರಿ ಕೂಡಾ ಹಾಗೆ,ಆದರೆ ರಮೇಶನಿಗೆ ತಾಯಿ ಇರುವುದಿಲ್ಲ,ಇದ್ದದ್ದು ತಂದೆ ಮಾತ್ರ ಶಂಕರಯ್ಯ ( ಅಶೋಕ್ ಹೆಗಡೆ )
ಹೈಸ್ಕೂಲ್ ಮಕ್ಕಳ ಜೀವನ ಅಂದ್ರೆ ಗೊತ್ತಲ್ಲವಾ ? ಕದ್ದು ಮುಚ್ಚಿ ಬಿಡಿ ಸಿಗರೇಟ್ ಸೇದುವುದು,ಇನ್ನೊಬ್ಬರ ತೋಟಕ್ಕೆ ನುಗ್ಗಿ ಎಳೆನೀರು ಕಳ್ಳತನ ಮಾಡುವುದು,ಕೆಲವು ಶಿಕ್ಷಕರನ್ನು ಗೋಳು ಹೊಯ್ಯುವುದೂ, ಎಲ್ಲರೂ ತಂದಿರುವ ಊಟವನ್ನು ಹಂಚಿ ತಿನ್ನುವುದು,ಕದ್ದು ತಿನ್ನುವುದು ತೀಟೆ ತರ್ಲೆ ಎಲ್ಲವೂ ಸಹಜವಾಗಿಯೇ ನಡೆಯುತ್ತಿರುತ್ತದೆ,
ಹೈಸ್ಕೂಲ್ ಸ್ಟೇಜ್ ನಲ್ಲಿರುವ ಸಮಯ, ಎಲ್ಲರ ಲೈಫಿನಲ್ಲಿ ಆಗುವಂತಹ ಪ್ರೀತಿ, ಕೃಷು ಎಲ್ಲವೂ ಅಮೃತಹಳ್ಳಿ ಶಾಲೆಯಲ್ಲಿರುವ ಕೆಲವು ಮಕ್ಕಳಲ್ಲಿ ಆಗುತ್ತದೆ, ಅದೇ ರೀತಿಯಾಗಿ ರಮೇಶನಿಗೂ ಲಕ್ಷ್ಮೀ ಮೇಲೆ ಲವ್ವಾಗುತ್ತದೆ,
ರಮೇಶ್ ಲಕ್ಷ್ಮೀಗೆ ಬರೆದ ಲವ್ ಲೆಟರ್ ಬೇರೆ,ಅದನ್ನು ಇನ್ನೊಬ್ಬ ಸೀನಿಯರ್ ಹುಡುಗ, ತಿರುಚಿ ಬರೆದಿದ್ದೆ ಬೇರೆ,
ಲೆಟರ್ ಅವಾಂತರ ರಮೇಶ್ ನನ್ನು ವಿಲನ್ ಮಾಡುತ್ತದೆ,ಸ್ವಲ್ಪ ಸಮಯದ ಗ್ಯಾಪ್ ನಂತರ SSLC ಫಲಿತಾಂಶ ಬರುತ್ತದೆ ಕೆಲವರು ಊರು ಬಿಡುತ್ತಾರೆ,ಲಕ್ಷ್ಮಿಯನ್ನು ಸಹ ಅವರ ತಂದೆ ಬೇರೆ ಊರಿಗೆ ಕಳಿಸುತ್ತಾರೆ.
ಈ ಘಟನೆ ಆಗಿ ಅಂದಾಜು ಇಪ್ಪರಿಂದ ಇಪ್ಪತೈದು ವರ್ಷಗಳ ನಂತರ, ಅದೇ ಅಮೃತಹಳ್ಳಿ ಶಾಲೆಯಲ್ಲಿ ಓದಿದ ಅನಿತಾ ( ಕೃತಿ ಶೆಟ್ಟಿ ) ತನ್ನ ಊರು ಅಮೃತಹಳ್ಳಿಗೆ H M ಆಗಿ ಬರುತ್ತಾಳೆ ಹಾಗೂ ಅದೇ ಊರಿನಲ್ಲಿಯೇ ಲಕ್ಷ್ಮೀ ( ಮೇಘನಾ ರಾಜ್ ) ಕೂಡಾ ತನ್ನ ಹೆತ್ತವರ ಜತೆಗೆ ಇರುತ್ತಾಳೆ.
ತಾವು ಓದಿದ್ದ ಶಾಲೆಯ ಹಳೆಯ ಸ್ಟಾಫ್ ಒಬ್ಬರ ಮಗಳ ಮದುವೆಯ, ಸಂದರ್ಭ ಬಂದಾಗ ಹಳೆಯ ಎಲ್ಲ ಹುಡುಗ ಹುಡುಗಿಯರು ಆ ಮದ್ವೆ ಕಾರ್ಯಕ್ರಮಕ್ಕೆ ಬರುತ್ತಾರೆ,ರಮೇಶ್
( ಶ್ರೀನಗರ ಕಿಟ್ಟಿ )
ಕೂಡಾ ಬಂದಿರುತ್ತಾನೆ.
ರಮೇಶ್ ಮತ್ತು ಲಕ್ಷ್ಮೀ ಪರಸ್ಪರ ಸಿಕ್ಕಾಗ ಅವ್ರ ಹಳೆಯ ನೆನಪುಗಳ ಫ್ಲಾಶ್ ಬ್ಯಾಕ್ ಬರುತ್ತಲೇ ಇರುತ್ತದೆ,ರಮೇಶ್ ಲವ್ ಲೆಟರ್ ಹಿಡಿದು ಬಂದಿದ್ದು,ಖುಷಿಯಿಂದ ಆತನ ಹಣೆಗೆ ಲಕ್ಷ್ಮೀ ಮುತ್ತು ಇಟ್ಟಿದ್ದು,
ಇಬ್ಬರ ಮಧ್ಯ ನಡೆಯುತ್ತಿದ್ದ ಪ್ರೀತಿಯ ಸನ್ಹೆ ಗಳು ಬರುತ್ತಿರುತ್ತವೆ.ಅದೇ ರೀತಿಯಾಗಿ
ಬಹಳ ವರ್ಷಗಳ ನಂತರ ಎಲ್ಲ ಸ್ನೇಹಿತರು ಪರಸ್ಪರ ಮಾತಾಡಿಕೊಳ್ಳುವ ಸಮಯ ತಮ್ಮ ಶಾಲೆಯಲ್ಲಿ ನಡೆದ ಎಲ್ಲ ಹಳೆಯ ನೆನಪುಗಳನ್ನು ಮಾಡಿಕೊಂಡು,
ನಗುತ್ತಾರೆ,
ಭಾವುಕರಾಗುತ್ತಾರೆ,ಹೆಮ್ಮೆ ಪಡುತ್ತಾರೆ ಅಷ್ಟೇ ಯಾಕೆ,ಮದ್ವೆ ಸಮಯದಲ್ಲಿ ಎಲ್ಲರೂ ಸೇರಿ ಭರ್ಜರಿ ಡ್ಯಾನ್ಸ್ ಕೂಡಾ ಮಾಡುತ್ತಾರೆ.
ಇದರ ಮಧ್ಯ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಪೊಲೀಸ್ ಆಫೀಸರ್ ಆಗಿರುತ್ತಾನೆ,ಆತನಿಗೆ ಆಗಾಗ ಒಂದು ಫೋನ್ ಕಾಲ್ ಬರುತ್ತಲೇ ಇರುತ್ತದೆ,ಆತ ತುಂಬಾ ಸಂಶಯದಿಂದಲೇ ಎಲ್ಲರ ಜತೆ ಮಾತಾಡುತ್ತಿರುತ್ತಾನೆ.
ಆ ಗುಂಪಿನಲ್ಲಿದ್ದ ಎಲ್ಲರ ಮದ್ವೆ ಆಗಿರುತ್ತದೆ,ಲಕ್ಷ್ಮೀ ( ಮೇಘನಾ ರಾಜ್ ) ದು ಕೂಡಾ ಆದರೆ ಆಕೆಯ ಗಂಡ ಯಾರು ? ಎಲ್ಲಿದ್ದಾನೆ ಅನ್ನೋದು ಚಿತ್ರ ನೋಡಿದ ಮೇಲೆ ಗೊತ್ತಾಗುತ್ತದೆ.
ಆದರೆ ಆ ಗುಂಪಿನಲ್ಲಿದ್ದ ಮದ್ವೆ ಆಗದ ಬ್ಯಾಚಲರ್ ಅಂದ್ರೆ ರಮೇಶ್, ( ಶ್ರೀನಗರ ಕಿಟ್ಟಿ ) ಸಿಕ್ಕಾಪಟ್ಟೆ ದುಡ್ಡು ಮಾಡಿ ಶ್ರೀಮಂತ ಆಗಿದ್ದರು ಇನ್ನೂ ಮದ್ವೆ ಆಗದೆ ಹಳೆಯ ಪ್ರೀತಿ ನೆನಪಲ್ಲೇ ಇರುತ್ತಾನೆ,ರಮೇಶನಿಗೆ ಇನ್ನೂ ಲಕ್ಷ್ಮೀ ಮೇಲೆ ಅದೇ ಸೇಮ್ ಸಾಫ್ಟ್ ಕಾರ್ನರ್,ನೀನು ಇನ್ನೂ ಯಾಕೆ ಮದ್ವೆ ಆಗಿಲ್ಲ ಎಂಬ ಲಕ್ಷ್ಮೀ ಪ್ರಶ್ನೆಗೆ ನಾಳೆ ಉತ್ತರ ಕೊಡುತ್ತೇನೆ ಎನ್ನುವ ರಮೇಶ್.

ವಿಧಿ ಲಿಖಿತವೇ ಬೇರೆ ಆಗಿರುವಾಗ,ಇನ್ನೆಲ್ಲಿ ರಮೇಶ್ ಲಕ್ಷ್ಮೀ ಪ್ರಶ್ನೆಗೆ ಉತ್ತರಿಸಬಲ್ಲ. ಪೊಲೀಸ್ ಅಧಿಕಾರಿಗೆ ಬಂದ ಒಂದು ಫೋಟೋ ಸೇಮ್ ರಮೇಶ್ ನನ್ನು ಹೋಲುತ್ತದೆ,ಅವನು ಮಹಾ ಡೇಂಜರಸ್ ಹೇಗಾದರೂ ಮಾಡಿ
ಅವನನ್ನು ಹಿಡಿರಿ ಎಂದು ಆರ್ಡರ್ ಆಗುತ್ತದೆ, ಅಷ್ಟರಲ್ಲಿ ರಮೇಶ್ ಅಲ್ಲಿಂದ ಎಸ್ಕೇಪ್ ಆಗಿ ಆ ದತ್ತ ಕಾಡಿನಲ್ಲಿ ಮರೆಯಾಗುತ್ತಾನೆ.
ಅಸಲಿಗೆ ರಮೇಶ್ ಯಾರು ?
ಪೊಲೀಸರ ಬಳಿ ಯಾಕೆ ರಮೇಶ್ ಫೋಟೋ ಬಂತು ?
ಲಕ್ಷ್ಮೀ ಗಂಡನ ಕಥೆ ಏನು ?
ಅಮರ್ಥ ಚಿತ್ರದ ಕಂಪ್ಲೀಟ್ ಸ್ಟೋರಿ ತಿಳಿಯಬೇಕೆಂದರೆ,
ನೀವೊಮ್ಮೆ ಕುಟುಂಬ ಸಮೇತರಾಗಿ ಚಿತ್ರ ನೋಡಬಹುದು,
ಇದೊಂದು ಫ್ಯಾಮಿಲಿ ಚಿತ್ರ.
ಶ್ರೀನಗರ ಕಿಟ್ಟಿ, ಮೇಘನಾ ರಾಜ್,ಜೋಡಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದೆ, ಮೇಘನಾ ರಾಜ್ ಕನ್ನಡ ಚಿತ್ರಂಗಕ್ಕೆ ಸಿಕ್ಕ ಅದ್ಭುತ ಪ್ರತಿಭೆ, ಇವತ್ತಿಗೂ ಅವರ ಸಂದರ್ಶನದ ವೇಳೆ ನಾನು ಅವರ ತತ್ಸಮ ತದ್ಭವ ಚಿತ್ರದಲ್ಲಿನ ನಟನೆ ಬಗ್ಗೆ ತುಂಬಾ ಮುಕ್ತವಾಗಿ ಮಾತನಾಡುತ್ತೇನೆ, ಇನ್ನು ಶ್ರೀನಗರ ಕಿಟ್ಟಿ ತಮ್ಮ ಅದ್ಭುತ ಗಟ್ಟಿ ಕಂಠದಿಂದಲೇ ಸುದ್ದಿಯಲ್ಲಿರುವ ಈ ನಟ ತೆರೆಯ ಮೇಲೆ ಬಂದರೆ ಸಂಪೂರ್ಣ ಆವರಿಸಿಕೊಂಡು ಬಿಡುತ್ತಾರೆ. ಇನ್ನುಳಿದಂತೆ
ಗುರು ಹೆಗಡೆ,ಉಷಾ ಭಂಡಾರಿ,ಕೃತಿ ಶೆಟ್ಟಿ
ಲಕ್ಷ್ಮೀ ಬಾಲ ಪಾತ್ರಧಾರಿ ಮಾಡಿದ ಆರಾಧನಾ ಭಟ್, ಸೇರಿ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಗದ್ದಲವಿಲ್ಲದ ಸರಳ ಸಂಗೀತ,ಛಾಯಾಗ್ರಹಣ,ಮತ್ತು ಸಂಕಲನ ಸುಮಧುರ ಹಾಡುಗಳು,
ಗುರು ಹೆಗಡೆ ಮತ್ತು ವಿನಯ್ ಪ್ರೀತಂ ಜಂಟಿ ನಿರ್ದೇಶನ ಎಲ್ಲವೂ ಓಕೆ ಅಮರ್ಥ ಚಿತ್ರ ಬ್ಯಾಲೆನ್ಸಿಂಗ್ ಆಗಿ ಮೂಡಿ ಬಂದಿದೆ.
ಸವಿ ಸವಿ ನೆನಪು ಸಾರುವ ಚಿತ್ರ ಅಮರ್ಥ
ರವೀ ಸಾಸನೂರ್
MasterNews365
ರೇಟಿಂಗ್ 3 / 5
ಚಿತ್ರ : ಅಮರ್ಥ
ನಿರ್ದೇಶನ :
ಗುರು ಹೆಗಡೆ & ವಿನಯ್ ಪ್ರೀತಂ
ನಿರ್ಮಾಪಕರು : ಡಾ ಕನ್ಯಾನ ಸದಾಶಿವ ಶೆಟ್ಟಿ – ಗುರು ಹೆಗಡೆ
ಕಲಾವಿದರು : ಶ್ರೀನಗರ ಕಿಟ್ಟಿ,ಮೇಘನಾ ರಾಜ್,ಗುರು ಹೆಗಡೆ ಮುಂತಾದವರು

