Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಾನ್ ವೆಜ್ ಬೇಡ ಗುರು
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ನಾನ್ ವೆಜ್ ಬೇಡ ಗುರು

ಸಿದ್ದರಾಮಯ್ಯನವರು ಸಿಎಂ ಕುರ್ಚಿಯ ಪದತ್ಯಾಗ ಮಾಡಿದ್ದು ಆಯ್ತು, ಡಿಕೆ ಶಿವಕುಮಾರ್ ಅವರು, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಆಯ್ತು, ಹೊಸ ಸರ್ಕಾರದ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಕೂಡ ಆಯ್ತು.. ಈ ಸುದ್ದಿಯ ಜೊತೆಗೆ ಬಹಳಷ್ಟು ಸುದ್ದಿಗಳು, ಸಾರ್ವಜನಿಕರಿಗೆ ಕುತೂಹಲವನ್ನು ಮೂಡಿಸಿದ್ದು ಸತ್ಯ, ಹಾಗೆ ಕೆಲವು ಸುದ್ದಿಗಳು ಆತಂಕವನ್ನು ಸೃಷ್ಟಿ ಮಾಡಿದ್ದು ಕೂಡ ಸತ್ಯ,ಅದರಲ್ಲಿ ಇತ್ತೀಚೆಗೆ ಸುದ್ದಿಯಾದ ನಾನ್-ವೆಜ್ ಎಂಬ ರಾದ್ಧಾಂತ… ವ್ಯಾಪಾರ ಯಾವುದೇ ಆಗಿರಲಿ, ಅದು ಹಣ್ಣಿನ ವ್ಯಾಪಾರವಾದರೂ ಸರಿ, ಅಥವಾ ಬಂಗಾರದ ವ್ಯಾಪಾರವಾದರೂ […]

ಸಿದ್ದರಾಮಯ್ಯನವರು ಸಿಎಂ ಕುರ್ಚಿಯ ಪದತ್ಯಾಗ ಮಾಡಿದ್ದು ಆಯ್ತು, ಡಿಕೆ ಶಿವಕುಮಾರ್ ಅವರು, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಆಯ್ತು, ಹೊಸ ಸರ್ಕಾರದ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಕೂಡ ಆಯ್ತು..

ಈ ಸುದ್ದಿಯ ಜೊತೆಗೆ ಬಹಳಷ್ಟು ಸುದ್ದಿಗಳು, ಸಾರ್ವಜನಿಕರಿಗೆ ಕುತೂಹಲವನ್ನು ಮೂಡಿಸಿದ್ದು ಸತ್ಯ,

ಹಾಗೆ ಕೆಲವು ಸುದ್ದಿಗಳು ಆತಂಕವನ್ನು ಸೃಷ್ಟಿ ಮಾಡಿದ್ದು ಕೂಡ ಸತ್ಯ,
ಅದರಲ್ಲಿ ಇತ್ತೀಚೆಗೆ ಸುದ್ದಿಯಾದ ನಾನ್-ವೆಜ್ ಎಂಬ ರಾದ್ಧಾಂತ…

ವ್ಯಾಪಾರ ಯಾವುದೇ ಆಗಿರಲಿ, ಅದು ಹಣ್ಣಿನ ವ್ಯಾಪಾರವಾದರೂ ಸರಿ, ಅಥವಾ ಬಂಗಾರದ ವ್ಯಾಪಾರವಾದರೂ ಸರಿ, ಗ್ರಾಹಕನೊಬ್ಬ ತನಗೆ ಬೇಕಾದ ವಸ್ತುವನ್ನು, ಅಂಗಡಿಯ ಮಾಲೀಕ ಹೇಳುವ ಬೆಲೆಗೆ ಕೊಟ್ಟು ಕೊಂಡುಕೊಂಡು, ಹೋದ ನಂತರ ಆ ಸಾಮಾನುಗಳಲ್ಲಿ ಸಮಸ್ಯೆ ಕಂಡು ಬಂದರೆ ಆತ ಕೂಡಲೇ ಪ್ರತಿಕ್ರಿಯೆ ಕೊಡಲೇಬೇಕು, ಪ್ರಶ್ನಿಸಲೇಬೇಕು ಅದೇ ರೀತಿಯಾಗಿ ಸಿಟ್ಟಾಗಲೇಬೇಕು ಕಾರಣ ಆತ, ಹಣ ಕೊಟ್ಟು ವಸ್ತುಗಳನ್ನ ಖರೀದಿಸಿ ಅಂಗಡಿ ಇಟ್ಟವರ ಹೊಟ್ಟೆಪಾಡಿಗೆ ಆ ದಿನದ ಅನ್ನಕ್ಕೆ ಹಾದಿಯಾಗಿರುತ್ತಾನೆ.

ಇತ್ತೀಚಿಗಷ್ಟೇ ನಗರದ ದೊಡ್ಡ ಹೋಟೆಲ್ಗಳಲ್ಲಿ ಸ್ವೀಕರಿಸಿಟ್ಟ ಅವಧಿ ಮುಗಿದು ಹೋದ ಸಾಮಗ್ರಿಗಳ ಬಗ್ಗೆ ಸುದ್ದಿಯನ್ನು ತಿಳಿದಾಗ ಒಂದು ಕ್ಷಣ ಸಾರ್ವಜನಿಕರ ಎದೆ ಜಲ್ ಎಂದಿತು,
ಯಾರನ್ನು ನಂಬುವುದು ಯಾರನ್ನು ಬಿಡುವುದು,

ಆ ಸುದ್ದಿ ಪ್ರಸಾರವಾದ ನಂತರದ ದಿನದಲ್ಲಿ,
ನಾನ್ ವೆಜ್ ತಿನ್ನಲು ಎಷ್ಟೋ ಜನ ಹಿಂದಿಟು ಹಾಕುತ್ತಿದ್ದಾರೆ, ಮತ್ತು ನಾನ್ ವೆಜ್ ಅಲ್ಲ ಗುರು ನಾನು ವೆಜ್ಜು ಅಂತ ತಮಾಷೆಯಾಗಿ ಹೇಳುತ್ತಿದ್ದಾರೆ..

ಜನರ ಬದುಕಿನ ಶೈಲಿ ಬದಲಾಗಿದೆ, ಆರ್ಥಿಕವಾಗಿ ಹಿಂದುಳಿದ ಜನರಂತು ಪ್ರತಿನಿತ್ಯವೂ ಭಯದಲ್ಲೇ ಬದುಕುತ್ತಿದ್ದಾರೆ, ಅಂತಹದರಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟ ಮಾಡುವ ಜನರು ಕೂಡ ಆತಂಕ ಪಡುವ ಸುದ್ದಿ ಎಂದರೆ ಈ ನಾನ್ ವೆಜ್ ರಾದ್ಧಾಂತ.

ಬಡವನೇ ಆಗಲಿ ಶ್ರೀಮಂತನೇ ಆಗಲಿ ಆತ ಬದುಕನ್ನಡಿಸುವುದು ಅದ್ಭುತವಾದ ಜೀವನಕ್ಕೆ ಅದಕ್ಕಾಗಿ ಆತ ಅನ್ನವನ್ನ, ತಿಂಡಿ ತಿನಿಸುಗಳನ್ನ ತಿನ್ನಲೇಬೇಕು,
ತಿನ್ನುವ ಅನ್ನದಲ್ಲೂ ಈ ರೀತಿಯ ಮೋಸವಾದರೆ ಹೇಗೆ ??

ಗ್ರಾಹಕರು ಊಟ ಮಾಡುವ ಹೋಟೆಲ್ ಚಿಕ್ಕದೇ ಆಗಿರಲಿ ದೊಡ್ಡದೇ ಆಗಿರಲಿ ಗ್ರಾಹಕರಿಗೆ ಮೋಸವಾದರೆ ಗ್ರಾಹಕರ ಆರೋಗ್ಯಕ್ಕೆ ತೊಂದರೆ ಆದರೆ ಇದು ಆಘಾತವೆ ಅಲ್ಲವೇ ??

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.