ರಂಗಭೂಮಿ ಕಲಾವಿದರಿಗೆ ನಾಟಕ, ಪ್ರದರ್ಶನಗಳೆ ಅವರ ದೊಡ್ಡ ಅಸ್ತಿತ್ವ, ತಾವಿರುವ ಜಾಗದಲ್ಲಾಗಲಿ ಅಥವಾ ಬೇರೆ ಬೇರೆ ಊರುಗಳಲ್ಲಿ, ಅಲ್ಲಲ್ಲಿ ಸಿಕ್ಕ ಜಾಗಗಳಲ್ಲಿ ನಾಟಕ ಕಂಪನಿಗಳನ್ನು ಹಾಕುವುದು, ಮುಖಕ್ಕೆ ಬಣ್ಣವನ್ನು ಹಚ್ಚುವುದು, ತಾವೇ ಪರದೆ ಹಿಡಿಯುವದು, ತಾವೇ ತಬಲಾ ಸೇರಿ ಇನ್ನಿತರ ವಾದ್ಯಗಳನ್ನು ಬಾರಿಸುವುದು, ತಮ್ಮ ಪಾತ್ರ ಬಂದಾಗ ತಾವೇ ಹೋಗಿ ನಟಿಸುವುದು,.
ಪ್ರೇಕ್ಷಕರನ್ನ ನಗಿಸುವದು ಅಳಿಸುವುದು ಅವರ ಮುಖದಲ್ಲಿ ನಗು ತರಿಸುವುದು, ಕೊನೆಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಹೋಗಿ, ತಮ್ಮ ಕುಟುಂಬವನ್ನ ರಕ್ಷಿಸುವುದು, ಬದುಕನ್ನ ನಡಿಸುವುದು ಇವೆ ರಂಗಭೂಮಿ ಕಲಾವಿದರ, ನಿಜವಾದ ಅಸ್ತಿತ್ವ ನಿಜವಾದ ಅಸ್ಮಿತೆ, ನಾಟಕಗಳು ಇಲ್ಲ ಅಂದ್ರೆ ರಂಗಭೂಮಿ ಕಲಾವಿದರಿಗೆ ಉಳಿವಿಲ್ಲ ಉಳಿಗಾಲವಿಲ್ಲ.
ರಂಗಭೂಮಿ ಕಲಾವಿದರ ಬದುಕನ್ನ ನೋಡಿ, ಮಾಡಿಕೊಂಡ ಗಟ್ಟಿ ಕತೆಯೇ ಟಾಸ್.
ಆನಂದ್ ( ನವೀನ್ ಡಿ ಪಡೀಲ್ ) ಒಬ್ಬರಂಗ ಭೂಮಿ ಕಲಾವಿದ, ಭಾಗ್ಯ ( ಕೃತಿ ಶೆಟ್ಟಿ ) ಆತನ ಹೆಂಡತಿ, ಇವರಿಗಿರುವ ಒಬ್ಬನೇ ಒಬ್ಬ ಮಗ ಶಿವ ( ಅರ್ಜುನ್ ದೇವ್ ಕಾಫಿಕಾಡ್ )
ನಾಟಕಗಳು ಕಡಿಮೆಯಾದ ಪರಿಸ್ಥಿತಿ, ಮನೆಯಲ್ಲಿ ಬಡತನ ಸಾಲ ಕಟ್ಟಲಾಗದೆ ಗೋಳಾಡುವ ಸ್ಥಿತಿಯಲ್ಲಿ ಆನಂದ್, ಇಂತಹ ಸಮಯದಲ್ಲಿ ಯಾವುದೋ ಒಂದು ಕ್ಲಬ್ನಲ್ಲಿ ನಾಟಕವಾಡಲು ಸಿಕ್ಕ ಅವಕಾಶವನ್ನ ಆ ಕ್ಲಬ್ಬಿನ ಮುಖ್ಯಸ್ಥ ಬಂದು ಅವಕಾಶ ಕೊಡುವುದಿಲ್ಲ ಎಂಬ ಮಾತನ್ನು ಹೇಳಿದಾಗ, ಒಳಗಡೆಯಿಂದ ಒಂದು ರೂಪಾಯಿ ನಾಣ್ಯವನ್ನು ಟಾಸ್ ಹಾಕುವುದರ ಮೂಲಕ ಎಂಟ್ರಿ ಕೊಡುವ ಭಾಗ್ಯ, ಆ ಶ್ರೀಮಂತನ ಕೆನ್ನೆಗೆ ಬಾರಿಸುವುದರ ಮೂಲಕ ರಂಗಭೂಮಿ ಕಲಾವಿದರ ಜೀವನಕ್ಕೆ ಅಡ್ಡಿ ಬಂದ್ರೆ ನಾವು ಸುಮ್ಮನೆ ಇರಲ್ಲ ಎಂಬ ಆವಾಜ್ ಹಾಕುತ್ತಾಳೆ,ಈ ದೃಶ್ಯ ಮಗ ಶಿವನಲ್ಲಿ ಒಂದು ಎನರ್ಜಿ ಪಾಸ್ ಮಾಡಿದಂತಾಗುತ್ತದೆ.
ಶಾಲೆಯಲ್ಲಿ ಶಿವನ ಗೆಳೆಯರು ರಂಗಭೂಮಿ ಮತ್ತು ಕಲಾವಿದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿ ಅಳುತ್ತ ಮನೆಗೆ ಬಂದಿದ್ದ ಮಗನನ್ನ, ಧೈರ್ಯ ತುಂಬಿ ವಾಪಸ್ ಶಾಲೆಗೆ ಕರೆದುಕೊಂಡು ಹೋಗಿ,ಅವಮಾನ ಮಾಡಿದವರ ಮುಂದೆ ಸ್ವಾಭಿಮಾನ ತೋರಿಸಿ ಬರುತ್ತಾಳೆ,ಶಿವನ ಮುಂದೆ ಅಮ್ಮ,ಅಮ್ಮನ ಮಾತುಗಳು ದೊಡ್ಡ ಶಕ್ತಿಯಂತೆ ಕಾಣುತ್ತವೆ,
ಇದರ ಮಧ್ಯೆ ಒಂದು ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ಶಿವ, ತಂದೆ ಪ್ರೀತಿಯಲ್ಲಿ ಬೆಳೆಯುತ್ತಾನೆ.
ಇದರ ಮಧ್ಯೆ ಅದೇ ಊರಿನಲ್ಲಿ ವೈದ್ಯರಾಗಿ ಕೆಲಸಕ್ಕೆ ಸೇರಿಕೊಂಡ ಕೇರಳ ಮೂಲದ ಹಾಗೂ ಕನ್ನಡ ಮಾತಾಡುವ ಸ್ವರ್ಣ (ಸುತೇಜ ಶೆಟ್ಟಿ) ಜೊತೆಗೆ ಶಿವನ ಪ್ರೀತಿ ಪ್ರೇಮ ಇಲ್ಲೊಂದು ಫ್ಯಾಮಿಲಿ ಡ್ರಾಮಾ, ಸ್ವರ್ಣಳ ಅಣ್ಣಾ ( ಬಾಲಾಜಿ ಮನೋಹರ್ ) ತನ್ನ ತಂಗಿಗೆ ಮಳಿಯಾಳಿ ಹುಡುಗನೊಂದಿಗೆ ಮದುವೆ ಮಾಡಿಸುವ ಯೋಚನೆ ಇದ್ದರೂ ಸಹ,ಶಿವ ಮತ್ತು ಆನಂದ್ ಮಾಸ್ಟರ್ ರವರ ಒಳ್ಳೆಯತನ, ಆ ಇಬ್ಬರು ಪ್ರೇಮಿಗಳ ಮದುವೆ ಮಾಡಲು ಒಪ್ಪಿಗೆ ಸೂಚಿಸುತ್ತಾನೆ.
ತಾವು ರಂಗಭೂಮಿಗೆ ಬಂದಂತಹ ಹೊಸ ಕಲಾವಿದರು,ತಮ್ಮ ನಾಟಕವನ್ನು ಬಂದು ನೋಡಿ ನಮಗೆ ಹರಸಿ ಎಂದು ಆನಂದ್ ಮಾಸ್ಟರ್ ಬಳಿ, ಕೇಳಿಕೊಂಡ ಹೊಸ ಹುಡುಗರ ನಾಟಕವನ್ನು ನೋಡಲು ಹೋದ ಆನಂದ್, ನಾಟಕ ಮುಗಿದ ನಂತರ ಎಲ್ಲ ಕಲಾವಿದರನ್ನು ಕರೆದು ಪ್ರೋತ್ಸಾಹ ನೀಡಿ ಬೆನ್ನು ತಟ್ಟಿ ಭೇಷ್ ಎಂದು ಹೊರಡುತ್ತಾರೆ.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ರಂಗಭೂಮಿ ಕಲಾವಿದನೊಬ್ಬ ಅಪಘಾತದಲ್ಲಿ ಮರಣ ಹೊಂದುತ್ತಾನೆ,ಇದಕ್ಕೆ ಕಾರಣ, ಊರಿನ ಪ್ರಮುಖ ಉದ್ಯಮಿ ಅಣ್ಣಾಜಿ ( ಗರುಡ ರಾಮ್ ) ತಮ್ಮ.
ಕುಡಿದ ಮತ್ತಿನಲ್ಲಿ ಜೋರಾಗಿ ಕಾರು ಓಡಿಸುತ್ತಾ, ಆ ರಂಗಭೂಮಿ ಕಲಾವಿದನ ಸಾವಿಗೆ ಕಾರಣವಾಗಿರುತ್ತಾನೆ. ಇದ್ಯಾವುದು ಕೇಸ್ ಆಗುವುದಿಲ್ಲ ಇದಕ್ಕೆ ಸ್ವತಃ ಪೊಲೀಸ್ ಆಫೀಸರ್ ಒಬ್ಬ ಸಪೋರ್ಟ್ ಮಾಡುತ್ತಾನೆ,ಸಾವಿಗೆ ನ್ಯಾಯ ಸಿಗುವಂತೆ ಧ್ವನಿ ಎತ್ತಿದ ಕೆಲವರನ್ನು ಸಾಯಿಸುವ ಅಣ್ಣಾಜಿ.
ಚಿತ್ರದ ದ್ವಿತೀಯಾರ್ಧದಲ್ಲಿ ಶಿವ ಮತ್ತು ಅಣ್ಣಾಜಿಯ ನಡುವೆ ನಡೆಯುವ ಜಬರ್ದಸ್ತ್ ದೃಶ್ಯಗಳು, ಜಬರ್ದಸ್ತ್ ಗೇಮ್ಗಳು,
ನಾನಾ ಇಲ್ಲ ನೀನಾ ಎಂಬಂತೆ ಆರ್ಭಟಿಸುವ ಖಡಕ್ ಸನ್ನಿವೇಶಗಳು,ಅಮ್ಮ ಭಾಗ್ಯಳನ್ನು ನೆನೆದು ಟಾಸ್ ಹಾಕುವ ಮೂಲಕವೇ ಶಿವ ಚಿತ್ರಕ್ಕೊಂದು ಕ್ಲೈಮ್ಯಾಕ್ಸ್ ಕೊಡುತ್ತಾನೆ.
ಅಷ್ಟಕ್ಕೂ ಅಪಘಾತದಲ್ಲಿ ಸಾವಿಗೀಡಾದ ಆ ರಂಗಭೂಮಿ ಕಲಾವಿದ ಯಾರು ??
ರಂಗಭೂಮಿ ಕಲಾವಿದನ ಸಾವಿಗೆ ದ್ವನಿಯೆತ್ತಿದ ಒಂದಷ್ಟು ಜನರನ್ನ ಅಣ್ಣಾಜಿ ಯಾಕೆ ಕೊಲ್ಲುತ್ತಾನೆ ??
ಇವು ಚಿತ್ರದಲ್ಲಿನ ಮತ್ತಷ್ಟು ಪ್ರಮುಖ ಹೈಲೈಟ್ಸ್.ಟಾಸ್ ಚಿತ್ರ ನೋಡುವ ಎಲ್ಲರಿಗೂ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಗೋಲ್ಡನ್ ಮೂವೀಸ್ ಪ್ರೆಸೆಂಟ್ ಮಾಡಿರುವ, ಟಾಸ್ ಚಿತ್ರದಲ್ಲಿ ನೆನಪಿನಲ್ಲಿ ಉಳಿಯುವಂತಹ ಭಾಗ್ಯ ಪಾತ್ರವನ್ನು ಮಾಡಿದ ಕನ್ನಡತಿ ಕೃತಿ ಶೆಟ್ಟಿ ಅಭಿನಯ ಅಮೋಘ ಜೊತೆಗೆ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡ ನವೀನ್ ಕೂಡ ಸೂಪರ್,ಇನ್ನು ನಾಯಕ ನಟನಾಗಿ ನಟಿಸುವುದರ ಜೊತೆಗೆ, ನಿರ್ದೇಶನ ಮಾಡಿರುವ ಅರ್ಜುನ್ ದೇವ್ ಕಾಫಿಕಾಡ್,ತಮ್ಮ ಎರಡು ಕೆಲಸಕ್ಕೆ ನ್ಯಾಯ ಸಲ್ಲಿಸಿದ್ದಾರೆ, ಕೆಲವು ಆಕ್ಷನ್ ದೃಶ್ಯಗಳಂತೂ ಮನಮೋಹಕವಾಗಿ ಮೂಡಿಬಂದಿವೆ,
ನಾಯಕಿಯಾಗಿ ನಟಿಸಿದ ಸುತೇಜ್ ಶೆಟ್ಟಿ ನಟನೆ ಪರ್ವಾಗಿಲ್ಲ,
ಟಾಸ್ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಬರೆದು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಡಾಕ್ಟರ್ ದೇವದಾಸ್ ಕಾಫಿಕಾಡ್, ಪ್ರಕಾಶ್ ತುಮ್ಮಿನಾಡ,ದೀಪಕ್ ರೈ, ಬಾಲಾಜಿ ಮನೋಹರ್, ಖಡಕ್ ವಿಲನ್ ಆಗಿ ಗರುಡ ರಾಮ್ ಇವರೆಲ್ಲರೂ ತಮ್ಮ ಪಾತ್ರಕ್ಕೆ ಅದ್ಭುತವಾದ ನ್ಯಾಯ ಸಲ್ಲಿಸಿದ್ದಾರೆ.

ಟಾಸ್ ಚಿತ್ರದ ಮತ್ತೆರಡು ಪ್ರಮುಖ ಹೈಲೈಟ್ ಎಂದರೆ,
ಅರ್ಜುನ್ ದೇವ್ ತಂದೆ ತುಳು ನಾಡಿನ ಲೆಜೆಂಡರಿ ರೈಟರ್, ಆಕ್ಟರ್ ಮತ್ತು ಡೈರೆಕ್ಟರ್ ಡಾಕ್ಟರ್ ದೇವದಾಸ್ ಕಾಫಿಕಾಡ್ ಬರೆದಿರುವ ಪಂಚಿಂಗ್ ಡೈಲಾಗ್ಸ್ ಗಳು ಮತ್ತು ನಮ್ಮ ಹೆಮ್ಮೆಯ ಕನ್ನಡಿಗ ಮಣಿಕಾಂತ್ ಕದ್ರಿ ಅವರ ಫೆಂಟಾಸ್ಟಿಕ್ ಸಂಗೀತ ಎಂದರೆ ತಪ್ಪಿಲ್ಲ..
ಅಮ್ಮನ ಪ್ರೀತಿ ಅಪ್ಪನ ತ್ಯಾಗ ಮಕ್ಕಳ ಕರ್ತವ್ಯ ಕಲೆ ಕಲಾವಿದರಿಗೆ ಕೊಡಬೇಕಾದ ಬೆಲೆ ಇಂತಹ ಮತ್ತಷ್ಟು ಭಾವನಾತ್ಮಕ ವಿಷಯಗಳಿಗೆ ಟಾಸ್ ಚಿತ್ರ ಉತ್ತಮ ಉದಾಹರಣೆ
ರವೀ ಸಾಸನೂರ್
MasterNews365.Com
ರೇಟಿಂಗ್ 3.5 / 5
ಚಿತ್ರ : ಟಾಸ್
ನಿರ್ದೇಶನ :
ಅರ್ಜುನ್ ದೇವ್ ಕಾಫಿಕಾಡ್
ಸಂಗೀತ : ಮಣಿಕಾಂತ್ ಕದ್ರಿ
ಕಲಾವಿದರು :
ಅರ್ಜುನ್ ದೇವ್ ಕಾಫಿಕಾಡ್,
ಸುತೇಜ ಶೆಟ್ಟಿ, ಗರುಡ ರಾಮ, ಬಾಲಾಜಿ ಮನೋಹರ್, ದೇವದಾಸ್ ಕಾಫಿಕಾಡ್ ಮುಂತಾದವರು

