Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಜಲಪುರಕ್ಕೆ ಹೋದಾಗಿನ ಘಟನೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಜಲಪುರಕ್ಕೆ ಹೋದಾಗಿನ ಘಟನೆ

ಜಲಪುರದಾಂವ ಅಂವಾ ನಮ್ಮ ಪೈಕಿ ಶರಣ. ಅಲ್ಲಿ ಅಮಾವಾಸ್ಯೆಗೆ ಒಮ್ಮೆ ಅನುಭವಗೋಷ್ಠಿ ಮಾಡ್ತಾರಂತೆ ಅವ ಹೇಳ್ಕೊಂತ ಬಂದಿದ್ದ ನೆರಬೆಂಚ್ಯಾಗ.       “ಬರ್ರಿ … ಬರ್ರಿ ….  ಅಂತಿದ್ದ . “      “ನಾನು ಹೂಂ …. ಹೂ೦…. ಅಂತಿದ್ದೆ. “       “ಒಮ್ಮೆ ದಳವಾಯಿ ಸರ್ ಮನೆಗೆ ಇಬ್ಬರದ್ದು ಭೇಟಿಯಾಯಿತು. ಅಕಸ್ಮಾತ್ ಒಮ್ಮೆ ಅಮಾವಾಸ್ಯೆಗೆ ಕರೆದುಕೊಂಡು ಹೋಗಿಯೇ ಬಿಟ್ಟನ್ರಿ.        “ಅಲ್ಲಿ ಹೋದ ನಂತರ ಆಲೂರು ಮುತ್ಯಾನ … ಅಲ್ಲಿ ಅಧ್ಯಕ್ಷ ಅದಾನ. ಜಲ್ಪೂರದವನು ಹೊಲೆಯರಾoವ,  ನಾನು ಹೊಲೆಯರಾoವ. ಇಬ್ಬರೂ ಹೋಗಿ […]

ಜಲಪುರದಾಂವ ಅಂವಾ ನಮ್ಮ ಪೈಕಿ ಶರಣ. ಅಲ್ಲಿ ಅಮಾವಾಸ್ಯೆಗೆ ಒಮ್ಮೆ ಅನುಭವಗೋಷ್ಠಿ ಮಾಡ್ತಾರಂತೆ ಅವ ಹೇಳ್ಕೊಂತ ಬಂದಿದ್ದ ನೆರಬೆಂಚ್ಯಾಗ.


      “ಬರ್ರಿ … ಬರ್ರಿ ….  ಅಂತಿದ್ದ . “
      “ನಾನು ಹೂಂ …. ಹೂ೦…. ಅಂತಿದ್ದೆ. “
       “ಒಮ್ಮೆ ದಳವಾಯಿ ಸರ್ ಮನೆಗೆ ಇಬ್ಬರದ್ದು ಭೇಟಿಯಾಯಿತು. ಅಕಸ್ಮಾತ್ ಒಮ್ಮೆ ಅಮಾವಾಸ್ಯೆಗೆ ಕರೆದುಕೊಂಡು ಹೋಗಿಯೇ ಬಿಟ್ಟನ್ರಿ.
        “ಅಲ್ಲಿ ಹೋದ ನಂತರ ಆಲೂರು ಮುತ್ಯಾನ … ಅಲ್ಲಿ ಅಧ್ಯಕ್ಷ ಅದಾನ. ಜಲ್ಪೂರದವನು ಹೊಲೆಯರಾoವ,  ನಾನು ಹೊಲೆಯರಾoವ. ಇಬ್ಬರೂ ಹೋಗಿ ಅಲ್ಲಿ ಕೆಳಗೆ ಕುಂತಿವ್ರಿ. ಸ್ವಾಮಿಗಳ ಪಂಕ್ತಿಗೆ ಪ್ರಸಾದಕ್ಕ ಸ್ವಾಮಿಗಳನ್ನು ಕರೆದರು. ಅಲ್ಲಿದ್ದ ಸ್ವಾಮಿಗಳು ಎದ್ದು ಪ್ರಸಾದಕ್ಕೆ ಹೋದರು. ಇವ್ರಿಲ್ಲಿ ಹತ್ತು-ಹನ್ನೆರಡು ಮಂದಿ ಹಿಂಗ ಆಧ್ಯಾತ್ಮದ ವಿಷಯ ಮಾತಾಡಿಕೊಂಡು ಕೂತಿದ್ರು “.
       “ಮೊಟ್ಟಮೊದಲು ಭೂಮಿಗೆ ಮಾನವ ಹೆಂಗ ಬಂದ ಅಂತ ಪ್ರಶ್ನೆ ಮಾಡಿದರು. ಆ ಪ್ರಶ್ನೆ ಮಾಡಿದಾಗ ಎಲ್ಲರೂ ಸುಮ್ಮನೆ ಕುಳಿತರು. ಯಾರು ಹೇಳಲೇ ಇಲ್ಲ ನಾನೂ ಸುಮ್ಮನೆ ಕುಳಿತುಕೊಂಡೆ . ಆದ್ರೂ ನನಗ ತಡಿಯಾಕ್ ಆಗಲಿಲ್ಲ . ಇದನ್ನೇ ಪ್ರಶ್ನೆ ಮಾಡಿದರು. “
     “ಯಾರು ಏನು ಹೇಳವಲ್ರಿ ಯಾರರ ಇದನ್ನು ಬಿಡಿಸಿ ಹೇಳ್ರಲ್ಲ ಅಂದೆ “
       “ಇದನ್ನು ಕೇಳಿ ಅವರು ಪಂಚಿಕರಣೆ ಆಧಾರದ ಮೇಲೆ ಆಕಾಶಮಂಡಲಕ್ಕೆ ಹೋದ ಆಕಾಶ ಮಂಡಲದಿಂದ ಮೇಘ ಮಂಡಲಕ್ಕೆ ಬಂತು ಮೇಘ ಮಂಡಲದಿಂದ ಜಲಕ್ಕೆ ಬಂತು ಜಲದಿಂದ ಭೂಮಿಗೆ ಬಂತು ಭೂಮಿಯಿಂದ ಹುಲ್ಲು ಕಲ್ಲು ಹಿಂಗ ಉದ್ಭವ ಆಯಿತು ಅಂತ ಹೇಳಿದರು “
        “ಅವರ ಪ್ರಶ್ನೆಗೆ ನಾನು ಇಲ್ಲ ” ಅಂದೆ,  
        “ಮೊದಲಿಗೆ ಮಾನವ ಭೂಮಿಗೆ ಹೆಂಗ ಬಂದ ಅಂತೀರಿ ಅಂತ ಪ್ರಶ್ನೆ ಇಟ್ಟಾರ “
      “ಇದು ಪಂಚಿಕರಣೆ ಲೆಕ್ಕ ಅಂದೆ. ಸ್ವಾಮಿ ಉಣಕಂತ ಇದನ್ನು ಕೇಳಿಯಾನ್ರೀ ಅವ್ನ್ಗ ಊಟ ರುಚಿ ಹತ್ಲಿಲ್ಲ ಹಂಗ ಕೈ ತೊಳ್ಕೊಂಡು ಬಂದುಬಿಟ್ಟ ಎಲ್ಲರೂ ಗಪ್ ಕುಂತ್ರು “
         “ಸ್ವಾಮಿ ಬಂದವನ ಏನು ಅಂದೆಲ್ಲಾ …. ಅಂದ್ರು . “
         “ಏನಿಲ್ಲಪ್ಪ ಪ್ರಶ್ನೆ  ಮಾಡಿದ್ರು ಮೊದಲು ಮಾನವ ಭೂಮಿಗೆ ಹೇಗೆ ಬಂದ ಅಂದ್ರು “
         “ಆದರೂ ನನಗೆ ತಿಳಿಬೇಕು ಅನ್ನೋ ಆಸೆ ಅಂದೆ, ”         
         “ಅದನ್ನು ತಿಳಿಯಾಕ ಕಾಮನ ಬೂದಿ ಅಂತ ತಿಳಿದಿ ಏನು ? “ಅಂದರು. ಅದಕ್ಕೆ ಬಹಳ ಬೇಕು ಗುರುಪಾದಕ ಬಿದ್ದಿರಬೇಕು, ಗುರುಪಾದದಲ್ಲಿ ಅಭ್ಯಾಸ ಆಗಿರಬೇಕು, ಹಂಗ ತಿಳಿಯಾಕ ಬಿದ್ದದೇನು ? ಅಂದ್ರು. ನಮ್ಮ ಕೂಡ ಬಂದ ಶರಣ ಹೌದು ತಂದೆ… ಹೌದು ತಂದೆ…. ಅಂತ ನಮಸ್ಕಾರ ಮಾಡಕ್ ಹತ್ತಿದರು. ನಾನು ಸುಮ್ಮನೆ ಕುಂತೆ ನನ್ನ ಮನಸ್ಸಿನಾಗ ಒಂದೇ ಸಮನೆ ಕಟಿಯಾಕ್ಕ ಹತ್ತಿತ್ತು ನೋಡ್ರಿ. ”      
         “ನಾನು ಏನು ಕೇಳಬೇಕು ಅಲ್ಲ ಅಂತಕೇಳಿದವ ಅಲ್ಲ ಅವರಿಗೆ ಪ್ರಶ್ನೆ ಮಾಡಿದರು ಅದು ಅಲ್ಲಿಗೆ ಬಂತು ಅದಕ್ಕೆ ನಾನು ಪ್ರಶ್ನೆ ಮಾಡಿದೆ “
          ” ಅದು ತಿಳಿಯೋ ಮಾತಲ್ಲೇಳ, ಸುಮ್ಮನೆ ತಲೆ ಹಾಕಬೇಡ ಅಂದ್ರು. ಅದಕ್ಕೆ ನಾನು ಸುಮ್ಮನೆ ಕುಂತೆ ಮುಂದೆ ನನ್ನನ್ನು ಊಟಕ್ಕ ಕರದರು . ನಾವೂ ಊಟ ಮಾಡಿದೀವಿ . ಅಷ್ಟೊತ್ತಿಗೆ ಆ ಕಡೆ ಹಾಳಿ ಹಾಸಿ ಕುರ್ಚಿ ಹಾಕಿದರು ಮೈಕ್ ಟೇಬಲ್ ಎಲ್ಲಾ ಇಟ್ಟರು ಎಲ್ಲರೂ ಬಂದು ಅಲ್ಲಿ ಕುಂತಿವಿ. “
       “ಮುರಾಳ ಶರಣರಂತ ನೇಕಾರರ ಪೈಕಿ. ನಮ್ಮೂರಾಗ ಪ್ರವಚನ ಮಾಡಿದ್ದರು. ಅವರು ನನಗೆ ಪರಿಚಯ ಅವರು ನನ್ನನ್ನು ನೋಡಿ ಹೇ… ಬಸಣ್ಣ ಯಾವಾಗ ಬಂದೆ
ಅಂದರು “
       “ಇವರು ನಿನಗ ಪರಿಚಯ ಅದಾರೇನು ?
       ” ನನಗೆ ಪರಿಚಯ ಅದಾರ ಎಪ್ಪ… ಜ್ಞಾನಿಗಳು ಅವರು ಅಂದೆ. “
        “ಮತ್ತು ಇವರಿಗೆ ಕೊಟ್ರೆ ಹೇಳ್ತಾರೆ ಏನು ? “
         ” ಕೊಡಬೇಕಪ್ಪ ಅವರಿಗೆ ಅಂದ್ರು “
         ” ಅವರ ಹೆಸರಿನಂತ ಕೇಳಿದನ್ರಿ “
        ” ಅವರ ಹೆಸರು ಬಸಣ್ಣ ಚೌಡ್ಕಿರ್ ಅಂತಾರೆ, ಅವರ ಹೆಸರು ಬರ್ಕೊಂಡ್ರು, ಅದರಂತೆ ಒಬ್ಬೊಬ್ಬರನ್ನು ಹೆಸರು ಕೂಗಿ ಕರೆಯತೊಡಗಿದರು. “
        “ನಡೆದ ಸಂತಿಯ ಪರಿ ಪುಣ್ಯ ತೀರಿದರೆ
        ಬರೀದೆ ಹೋಗುವುದು ಸುತ್ತು ಬಯಲಿಗೆ ಬಯಲು ”     
     “ಈ ಪ್ರಶ್ನೆ ಆನೆ ಸೂರು ಸಂಗಣ್ಣ ಶರಣನಿಗಿತ್ತು. ಅವರು ಇದ್ದಿದ್ದಿಲ್ಲ. ಈ ಪ್ರಶ್ನೆ ಅವರದು ಅದು .  ನೀವು ಯಾರರ ಹೇಳಂಗದಿರೆನು ? “
       “ನೀವು ಬೇಕಾದ್ದು ಕೊಡ್ರಿ ಅಂದೆ. ನಂತರ ಹೆಸರು ಗುಂಟಾ ಒಬ್ಬೊಬ್ಬರಿಗೆ ಕರೆಯಲಿಕ್ಕೆ ಪ್ರಾರಂಭ ಮಾಡಿದರು. ನನ್ನ ಪಾಳೇ ಬಂತು. ಮಾಯಿಕ ನ್ಯಾನ ನನ್ನಹೆಸರು ಕೂಗಿದರು. ಇವರ ಪ್ರಶ್ನೆ ಇದು ಅಂದ್ರು ಅದು ಸಪ್ಪಂಡಿಯವರ ಪದ ಆಗಿತ್ತು. “
     “ಬರೀ ಆ ಭ್ರಮೆಯೋಳು ಬಿದ್ದು ಕೆಡಬೇಡವೆಲೆ ಮರುಳೆ    
     ಪರವಸ್ತುವನೆ ಮರೆದು ಲೌಕಿಕವನೇ ನಂಬಿ “
    “ಇದು ಏನಂದ್ರ…. ನಾವು ಬರೆ ಭ್ರಮೆಯೊಳಗಾಗಿವಿ . ಪರವಸ್ತು ಅಂದ್ರೆ ಪರಮಾತ್ಮನನ್ನು ಮರೆತಿ ವಿ. “
     “ಪರಮಾತ್ಮ ಅಂದ್ರೆ ಯಾರು?
      ಪರಮಾತ್ಮ ಎಲ್ಲಿ ಅದಾನ ?
      ಯಾವ ಸ್ವರೂಪದಾಗ ಅದಾನ ?
      ಅಂವಾ ಹೆಂಗ ಆದರ ಕಾಣ್ತಾನ ? ಅನ್ನೋದು ಮರ್ತಿವಿ.  ಈ ಲೌಕಿಕಕ್ಕೆ ನಂಬಿವಿ ನಾವು . “
       “ಹೆಂಡ್ರು ಮಕ್ಕಳು ಬದುಕು ಬಾಳೇವ ನಾವು ಇದರ ಬ್ರಹ್ಮಕ್ಕ ಒಳಗಾಗಿರಿ ಮತ್ತು ಶರೀರ ಸತಿ ಸುತರು ನನ್ನದೆಂದು ಮೆಚ್ಚಿರುವೆವು ಈ ದೇಹ ನಂದು ನಂದು ಅಂತ ನಂಬಿವಿ. ”  

    “ಮರಣ ಕಾಲದಿ ನಿನ್ನ ಹಿಂದೆ ಬರುವರೆ ?
     ನಾವು ಸತ್ತರೆ ಯಾವುದರ ಬರುವುದೇನು ?
ಹೆಂಡಿರೂ ಬರುವುದಿಲ್ಲ ಮಕ್ಕಳು ಬರೋದಿಲ್ಲ.
ಇರುವ ದ್ರವ್ಯವನ್ನು ಕೊಟ್ಟು ಕಳಿಸುವರೇ ?
ಸತ್ತಾಗ ನಮಗ ಸಂಪತ್ತೇನರ ಕೊಟ್ಟು ಕಳಿಸ್ತಾರೆ ಏನು ?
ಯಮಪುರ ಬಾಗಿಲಿಗೆ ಬಂದು ಬಿಡಿಸಿಕೊಂಬುವರೇ ?”

 " ಯಮ ಯಾತನೆ ಆದರೆ ಯಾರರ ನಮ್ಮನ್ನು ಬಿಡಿಸಿಕೊಳ್ಳಾಂಗ ಅದರೇನು ? ಸಾಧ್ಯವೇ ಇಲ್ಲ.  

ನೀನುದಿಸುವುದಕ್ಕಿಂತ ಮೊದಲು ಇವರ್ಯಾರು ?ನೀನ್ಯಾರು? ನೀನಿರುವ ಪರಿಯ ಅಗಲದಂತಿಹುದು. “
” ನಾವು ಹುಟ್ಟೂಕಿಂತ ಮೊದಲು ಹೆಂಡಿರ್ಯಾರು ?ಮಕ್ಕಳ ಯಾರು ? ತಂದೆ ಯಾರು? ತಾಯಿ ಯಾರು? ನಮಗೆ ಯಾರರ ಇದ್ದರೆ ಏನು ? ನಾವು ಹುಟ್ಟಿಂದ ಎಲ್ಲರೂ ಜೋಡ ಆಗ್ಯಾರ ಮತ್ತು ಎಲ್ಲಿಯವರೆಗೆ ಇರ್ತಾರ ?ತಾನಿರುವ ತನಕ ನೀನು ಇರುವ ಪರಿ ಅಗಲದಂತಿಹುದು ನೀನು ಪುನರಪಿ ಜನಿಸಿದರೆ ನಿನಗಾಗುವರೇ..?”
ಸತ್ತು ಮತ್ತೆ ಹುಟ್ಟಿದರೆ ಇವರೇ ಆಗಿರುತ್ತಾರೆ ಏನು ? ಶ್ವಾನಿಯ ಕನಸಿನಂತೆ ಸಂಸಾರ ಸುಖವು. ನಾಯಿಗೆ ಕನಸು ಬಿದ್ದಂಗ . ಈ ಪದ ಬಳಸಿ ಹೇಳಕ್ಕೆ ಹತ್ತಿದ್ದೀನ್ರಿ ಆ ಸ್ವಾಮಿ ಕಣ್ಣು ರೆಪ್ಪಿ ಬಡಿಯಲ್ಲೊಲ್ಲ. ಸುಮ್ನೆ ಕುಂತು ಕೇಳಿದ. ನಾನು ಏನೋ ಅಂತ ತಿಳಿದು ಮಾತಾಡಿದ್ದೆ ಬಸಣ್ಣ ಅವರಿಗೆ ಅ..ಬ..ಬಾ ಇದು ಏನು ಲೆಕ್ಕಕ್ಕಿಲ್ಲ ಅಂದು ಒಪ್ಪಿಕೊಂಡನು. ಅವನಿಗೂ ಪಕ್ಕ ಜ್ಞಾನ ಇಲ್ಲ ಮುಂದೆ ಯಾವುದರ ಸಮಸ್ಯೆ ಬಂದ್ರೆ ತಿಳಿಲಿಲ್ಲ ಅಂದ್ರೆ ನನಗೆ ಫೋನ್ ಹಚ್ಚಿ ಕೇಳು ನನಗೆ ಕರೆಯಿಸಿ ನನ್ನ ಕಡೆಯಿಂದ ಜ್ಞಾನ ಮಾಡಿಕೊಳ್ಳಕ್ಕೆ ಹತ್ತಿದ. “
     
ಮುಂದುವರಿಯುತ್ತದೆ ….

ನೋಡಿ ನಾಳೆಯ ಸಂಚಿಕೆಯಲ್ಲಿ –
ಮುದ್ದೇಬಿಹಾಳಕ್ಕೆ ಹೋದಾಗಿನ ಘಟನೆ


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.