ಬೆಂಟ್ಲಿ Film Review. !!
ರೇಟಿಂಗ್ 3 / 5 !!
ರವೀ ಸಾಸನೂರ್ !!
MasterNews365.Com !!
ಚಿತ್ರ: ಬೆಂಟ್ಲಿ !!
ನಿರ್ಮಾಪಕರು : ಶ್ವೇತಾ ಬಾಲರಾಜ್ !!
ನಿರ್ದೇಶನ : ಸಂತೋಷ್ ಬಾಲರಾಜ್ !!
ಸಂಗೀತ : ಜುಡಾ ಸ್ಯಾಂಡಿ !!
ಛಾಯಾಗ್ರಹಣ : ಕೆಕೆ & ಗುಂಡ್ಲುಪೇಟೆ ಸುರೇಶ್ !!
ಕಲಾವಿದರು : ಸಂತೋಷ್ ಬಾಲರಾಜ್,
ಸಿಮ್ರನ್ ನಾಟೇಕರ್,ಶೃತಿ,ಚರಣ್ ರಾಜ್,ಬಲರಾಜ್ ವಾಡಿ,ವಾಣಿಶ್ರೀ,ಉಗ್ರಂ ರವಿ ಮುಂತಾದವರು !!
ಗಣಪ ದಂತಹ ಸೆನ್ಸಿಬಲ್ ಹಿಟ್ ಚಿತ್ರ ಕೊಟ್ಟ ನಾಯಕ, ಕರಿಯಾ2 ದಂತಹ ಮಾಸ್ ಚಿತ್ರ ಕೊಟ್ಟ ನಾಯಕ, ಬೆಂಟ್ಲಿ ಯಂತಹ ಫ್ಯಾಮಿಲಿ ಡ್ರಾಮಾ ಜೊತೆಗೆ, ಒಂದಷ್ಟು ಕಲ್ಟ್ ಫೀಲ್ ಇರುವ ಕಂಟೆಂಟ್ ಚಿತ್ರ ಕೊಟ್ಟು ತಾವೇ ನಾಯಕರಾಗಿ ನಟಿಸಿ,ಚಿತ್ರವನ್ನು ತಾವೇ ನಿರ್ದೇಶನ ಮಾಡಿದ್ದು ವಿಶೇಷ,ಆದ್ರೆ ದುರಾದೃಷ್ಟ ನಾಯಕ ನಟ ಸಂತೋಷ್ ಬಾಲರಾಜ್ ನಮ್ಮ ಜೊತೆಗಿಲ್ಲ ಹಾಗೇ ಅವ್ರ ತಂದೆ,ನಿರ್ಮಾಪಕ ಆನೇಕಲ್ ಬಾಲರಾಜ್ ಕೂಡಾ ಜತೆಗಿಲ್ಲ.
ಇಬ್ಬರು ಜೊತೆಗಿಲ್ಲ ಆದರೆ ಚಿತ್ರದ ಆರಂಭದಲ್ಲಿ ಬರುವ ಆನೇಕಲ್ ಬಾಲರಾಜ್ ಮತ್ತು ಸಂತೋಷ್ ಬಾಲರಾಜ್ ರವರ ಫೋಟೋ, ನೋಡುಗರನ್ನು ಬೆಂಟ್ಲಿ ಚಿತ್ರಕ್ಕೆ ಹತ್ತಿರವಾಗಿಸಿ ನೋಡಿಸಿಕೊಂಡು ಹೋಗುತ್ತದೆ.
ತುಂಬಾ ಸರಳವಾದ ಕಥೆ,ಸರಳವಾದ ನಿರೂಪಣೆ,ಸರಳವಾದ ಚಿತ್ರಕಥೆ,ಅಬ್ಬರವಿಲ್ಲದ ಸಂಭಾಷಣೆ ಹಾಗೂ ಅದಕ್ಕೆ ತಕ್ಕದಾದ ನಿರ್ದೇಶನ ಎಲ್ಲವೂ ಬ್ಯಾಲೆನ್ಸ್ ಆಗಿಯೇ ಮಾಡಿದ್ದಾರೆ ಎನ್ನಬಹುದು.
ನಾಯಕ ಬೆಂಟ್ಲಿಯನ್ನು ( ಸಂತೋಷ್ ಬಾಲರಾಜ್ ) ರೌಡಿಗಳ ಗುಂಪೊಂದು ಹೊಡೆದು ಪೊಲೀಸ್ ಸ್ಟೇಷನ್ ಗೆ ತರುವ ದೃಶ್ಯದೊಂದಿಗೆ ಕಥೆ ಓಪನ್ ಆಗುತ್ತದೆ,
ಬೆಂಟ್ಲಿಯ ಸ್ವಭಾವ ಹೇಗೆಂದರೆ ಆತ ಒಬ್ಬ ಸ್ನೇಹಜೀವಿ.ಫ್ರೆಂಡ್ಸ್ ಗಳಿಗಾಗಿ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳುವ ವ್ಯಕ್ತಿ,ಅದರಲ್ಲೂ ಪ್ರೀತಿಸಿದ ಯುವ ಜೋಡಿಗಳಿಗೆ ತಾನೇ ಮುಂದೆ ನಿಂತು ಮದ್ವೆ ಮಾಡಿಸಿ,ಹನಿಮೂನ್ ಗೆ ಕಳಿಸುವ ತನಕ ಈತ ಸುಮ್ಮನೆ ಕೂರಲಾರ, ಇದೇ ತರಹ ಸುಮಾರು ಮದುವೆಗಳನ್ನು ಮಾಡಿಸಿ,ಪ್ರೇಮಿಗಳ ಪಾಲಿಗೆ ರಕ್ಷಕನಂತೆ ಇರುತ್ತಾನೆ,ಕೆಲವು ಇವನನ್ನು ಹೊಗಳಿದರೆ ಇನ್ನೂ ಕೆಲವರು ಬೆಂಟ್ಲಿ ಮೇಲೆ ದ್ವೇಷ ಕಾಯುತ್ತಿರುತ್ತಾರೆ,ಒಮ್ಮೆ ಇವ್ನ ಗ್ರಹಚಾರ ಸರಿ ಇರದ ಸಮಯ ಊರಿನ ಮುಖಂಡ ( ಬಲರಾಜ್ ವಾಡಿ ) ಜೊತೆಗೆ ದೊಡ್ಡದೊಂದು ಗಲಾಟೆ ಆಗುತ್ತದೆ ಅದು ಬೆಂಟ್ಲಿ ಚಿತ್ರಕ್ಕೆ ಸಿಗುವ ಮೊದಲ ಟ್ವಿಸ್ಟ್.
ಅಮೆರಿಕಾದಲ್ಲಿರುವ ಅಣ್ಣ, ಚರಣ್ ರಾಜ್ ತನ್ನ ಹೆಂಡತಿ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಹಳ್ಳಿಗೆ ಬಂದು,ತಮ್ಮ
ಬಲರಾಜ್ ವಾಡಿ ಜೊತೆಗೆ ಸ್ವಲ್ಪ ಸಮಯ ಕಳೆಯುವ ಹೊತ್ತಲ್ಲಿ,
ಬೆಂಟ್ಲಿ ಜೊತೆಗೆ,ಆಕಸ್ಮಿಕವಾಗಿ ಆದಂತಹ ಭೇಟಿಯೊಂದರಲ್ಲಿ ಚರಣ್ ರಾಜ್ ಮಗಳು ಕಾಜಲ್ ( ಸಿಮ್ರನ್ ನಾಟೇಕರ್ )
ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ.
ನಾಯಕ ಬೆಂಟ್ಲಿಗೆ ಗೊತ್ತು ಯಾವುದೇ ಕಾರಣಕ್ಕೂ ತನ್ನ ಮತ್ತು ಕಾಜಲ್ ಮಾಡುವೆ ಆಗಲು ಆಕೆಯ ಚಿಕ್ಕಪ್ಪ ಒಪ್ಪುವುದಿಲ್ಲ ಎಂದು,ಆದರೂ ಇಬ್ಬರ ನಡುವಿನ ಪ್ರೀತಿ ಸಾಗುತ್ತಲೇ ಇರುತ್ತದೆ.
ಬೆಂಟ್ಲಿ ಚಿತ್ರದ ಮಧ್ಯಂತರದ ವೇಳೆಗೆ ಯಜಮಾನಿ ಲಕ್ಷ್ಮೀ ( ಶೃತಿ ) ಪಾತ್ರ ಎಂಟ್ರಿಯಾಗಿ ಚಿತ್ರಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಗುತ್ತದೆ,ಹಾಗೂ ಮಧ್ಯಂತರದ ನಂತರ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡ ಯಜಮಾನಿ ಪಾತ್ರದ ಕೊಲೆಯಾಗುತ್ತದೆ.
ಅಸಲಿಗೆ ನಿಜವಾದ ವಿಲನ್ ಯಾರು,ಆ ಯಜಮಾನಿ ಯಾರು, ಆಕೆ ಯಾರ ಹೆಂಡತಿ, ಯಾರ ತಾಯಿ, ನಾಯಕ ಬೆಂಟ್ಲಿಗೆ ಏನಾಗಬೇಕು, ಯಜಮಾನಯನ್ನ ಕೊಂದವರು ಯಾರು,ನಾಯಕಿ ಕಾಜಲ್ ಬೆಂಟ್ಲಿಗೆ ಏನಾಗಬೇಕು,ಇಬ್ಬರ ಮದುವೆ ಆಗುತ್ತೋ ಇಲ್ಲವೋ ? ಎನ್ನುವುದು ತಿಳಿಯಬೇಕೆಂದರೆ ನೀವೆಲ್ಲ ಒಮ್ಮೆ ಬೆಂಟ್ಲಿ ಚಿತ್ರವನ್ನು ನೋಡಬೇಕು
ನಾಯಕ ನಟನಾಗಿ ನಟಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಂತೋಷ್ ಬಾಲರಾಜ್ ಕೆಲಸ ಓಕೆ ಎನ್ನಬಹುದು, ಎಂದಿನಂತೆ ನಟನೆಯಲ್ಲಿ ಮಾತ್ರ ಸಂತೋಷ್ ಬಾಲರಾಜ್ ತಮ್ಮ ಹಳೆಯ ಖದರನ್ನೆ ಇಲ್ಲಿ ಮುಂದುವರಿಸಿದ್ದಾರೆ ಮತ್ತು ಸಾಹಸ ದೃಶ್ಯಗಳಲ್ಲಿ ತುಂಬಾ ರಗಡ್ ಆಗಿ ಕಾಣಿಸುತ್ತಾರೆ.
ನಾಯಕಿ ಪಾತ್ರವನ್ನು ಮಾಡಿದ ಸಿಮ್ರನ್ ನಾಟೇಕರ್ ಇನ್ನೂ ಚೆನ್ನಾಗಿ ನಟಿಸಬಹುದಾಗಿತ್ತು, ಮಧ್ಯಂತರದ ವೇಳೆಗೆ ನಂತರ ಮಧ್ಯಂತರದ ನಂತರ ಕೆಲವು ದೃಶ್ಯಗಳಲ್ಲಿ ತೆರೆ ಮೇಲೆ ಕಾಣಿಸಿದ ಶ್ರುತಿ ಪಾತ್ರ, ಚಿತ್ರಕ್ಕೆ ಸಿಕ್ಕ ಮತ್ತೊಂದು ಪ್ಲಸ್ ಪಾಯಿಂಟ್.
ಇನ್ನೂ ಬಲರಾಜ್ ವಾಡಿ ಎಂದಿನಂತೆ ಅಬ್ಬರಿಸಿದ್ದಾರೆ,ಕೆಲವೇ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡ ಚರಣ್ ರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಜೊತೆಗೆ ವಾಣಿಶ್ರೀ ಪಾತ್ರವು ಕೂಡಾ.

ಇನ್ನುಳಿದಂತೆ ಚಿತ್ರದ ತಾಂತ್ರಿಕ ವಿಷಯಕ್ಕೆ ಬರುವುದಾದರೆ, ಎಲ್ಲ ಹಾಡುಗಳು ತುಂಬಾ ಕಲರ್ ಫುಲ್ ಆಗಿ ಮೂಡಿ ಬಂದಿದೆ,ಚಿತ್ರ ನಿರ್ಮಾಣದಲ್ಲಿ ಒಳ್ಳೆಯ ಹೆಸರು ಉಳಿಸಿಕೊಂಡಿರುವ ಆನೇಕಲ್ ಬಾಲರಾಜ್, ಪುತ್ರಿ ಶ್ವೇತಾ ಬಾಲರಾಜ್ ಯಾವುದಕ್ಕೂ ಕಮ್ಮಿ ಮಾಡಿಲ್ಲ.
ಸಂಗೀತ ನಿರ್ದೇಶಕ,ಸಂಕಲಕಾರ ಮತ್ತು ಛಾಯಾಗ್ರಾಹಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ತುಂಬಾ ನಿರೀಕ್ಷೆಯನ್ನು ಇಟ್ಟುಕೊಳ್ಳದೆ, ಚಂದನವನಕ್ಕೆ ಬಹಳಷ್ಟು ಒಳ್ಳೆಯ ಚಿತ್ರಗಳನ್ನು ಕೊಟ್ಟ ನಿರ್ಮಾಪಕರ,ನಾಯಕ ನಟನ ಚಿತ್ರ ಬೆಂಟ್ಲಿ ಎಂದು ಮುಕ್ತ ಮನಸ್ಸಿನಿಂದ ಚಿತ್ರವನ್ನು ನೋಡಬಹುದು

