Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರುದ್ರಾಭಿಷೇಕಂ ಟ್ರೈಲರ್ !!
- ಸಿನಿಮಾ

ರುದ್ರಾಭಿಷೇಕಂ ಟ್ರೈಲರ್ !!

ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವಿಜಯಪುರ ಅರ್ಪಿಸುವ,9 ಜನ ನಿರ್ಮಾಪಕರು ಸೇರಿ ಮಾಡಿರುವ ಚಿತ್ರ ರುದ್ರಾಭಿಷೇಕo. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮತ್ತು ಪೋಸ್ಟರ್ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ಚಿತ್ರ ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರು ಕುಮಟಾ ಕರಾವಳಿ ಸುತ್ತಮುತ್ತಲು ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕರು ವಿವರಿಸಿದರು. ಟ್ರೈಲರ್ ನಲ್ಲಿ ಏನಿಲ್ಲ,ಎಲ್ಲವೂ ಇದೆ,ತಾನಿದ್ದ ಹಳ್ಳಿ,ಅಲ್ಲಿಯ ಜನರ ರಕ್ಷಣೆಗಾಗಿ ಎಂಥದ್ದೇ ಆದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ದನೀಡುವ ನಾಯಕ,ಆಗಾಗ ಊರಲ್ಲಿ ಕಾಣಿಸುವ ಕೆಲವು ಸಮಸ್ಯೆಗಳಿಗೆ ವಿಲನ್ […]

ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವಿಜಯಪುರ ಅರ್ಪಿಸುವ,
9 ಜನ ನಿರ್ಮಾಪಕರು ಸೇರಿ ಮಾಡಿರುವ ಚಿತ್ರ ರುದ್ರಾಭಿಷೇಕo.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮತ್ತು ಪೋಸ್ಟರ್ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ಚಿತ್ರ ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಂಗಳೂರು ಕುಮಟಾ ಕರಾವಳಿ ಸುತ್ತಮುತ್ತಲು ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕರು ವಿವರಿಸಿದರು.

ಟ್ರೈಲರ್ ನಲ್ಲಿ ಏನಿಲ್ಲ,ಎಲ್ಲವೂ ಇದೆ,ತಾನಿದ್ದ ಹಳ್ಳಿ,ಅಲ್ಲಿಯ ಜನರ ರಕ್ಷಣೆಗಾಗಿ ಎಂಥದ್ದೇ ಆದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ದನೀಡುವ ನಾಯಕ,ಆಗಾಗ ಊರಲ್ಲಿ ಕಾಣಿಸುವ ಕೆಲವು ಸಮಸ್ಯೆಗಳಿಗೆ ವಿಲನ್ ಜತೆ ಹೋರಾಡಿ ಫೈಟ್ ಮಾಡಿ,ಪರಿಹಾರ ಕಂಡು ಕೊಳ್ಳುವ ನಾಯಕ,ನಮ್ಮ ಚಿತ್ರದ ಕಥಾನಾಯಕ.

ಸೆಂಟಿಮೆಂಟ್ ಬೇಕಾದವರಿಗೆ ಸೆಂಟಿಮೆಂಟ್ ಫೀಲ್ ಆಗುವ ಫ್ಯಾಮಿಲಿ ಕಥೆ,ಪ್ರೀತಿಸುವ ಹೃದಯಗಳಿಗೆ,ಯುವ ಕಂಗಳಿಗೆ ನಾಯಕ ನಾಯಕಿಯ ಮಧ್ಯದ ಪ್ರೀತಿ ಪ್ರೇಮದ ಛಾಯೆ ಕಾಣತ್ತೆ,ಇನ್ನೂ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಬೇಕು ಅಂದೋರಿಗೆ ವೀರಭದ್ರನಾಗಿ ಕಾಣಿಸಿಕೊಂಡ ನಾಯಕನ ಇನ್ನೊಂದು ಶೇಡ್ ಪಾತ್ರ ನಿಮ್ಮನ್ನ ರಂಜಿಸತ್ತೆ,ಹಾಗೆ ದೇವರು ಮತ್ತು ದೈವಿ ಭಾವ ಬೇಕು ಅನ್ನೋರಿಗೆ ವೀರಗಾಸೆ ಮತ್ತು ದೇವರ ಕುರಿತ ಒಂದಷ್ಟು ಎಲಿಮೆಂಟ್ಸ್ ಇವೆ,ಥ್ರಿಲ್ಲರ್ ಮಂಜು ರವರ ಮಾಸ್ ಫೈಟ್ ಕಂಪೋಸಿಂಗ್ ಎಲ್ಲವೂ ಟ್ರೈಲರ್ ನಲ್ಲಿ ಕಾಣಿಸ್ತಾ ಇದೆ.

ನಾಯಕನಾಗಿ ನಟಿಸಿದ,
ವಿಜಯ್ ರಾಘವೇಂದ್ರ,ಮಾತನಾಡಿ,ನಾನು ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಆಗಿಯೇ ಇರ್ತೀನಿ,ನನಗೆ ಯಾವ ಸ್ಟಾರ್ ಪಟ್ಟವೂ ಬೇಡ,ನಮ್ಮ ತಂದೆ ಇವತ್ತಿಗೂ ಅದೇ ಹೇಳ್ತಾರೆ,ಜನ ತುಂಬ ಹೊಗಳುವಾಗ ಕಿವಿ ಮುಚ್ಚಿಕೊಳ್ಳಬೇಕಂತೆ, ಇಲ್ಲಾಂದ್ರೆ ಕಿವಿ ಮಾಲಿನ್ಯ ಆಗುತ್ತೆ ಅಂತೆ,ಹೀಗಾಗಿ ನನ್ನನ್ನ ಯಾರಾದರೂ ಹೊಗಳುವಾಗ ನಾನೇ ಬೇಡ ಅನ್ನುವೆ ಇಲ್ಲ,ನನ್ನ ಕಿವಿಯನ್ನು ಮುಚ್ಚಿಕೊಳ್ಳುವೆ..
ನನ್ನ ಬಳಿ ಯಾವುದೇ ಕಥೆ ಬರಲಿ,
ಈ ಪಾತ್ರಕ್ಕೆ ನಾನೇ ಯಾಕೆ ಎಂದು ಕೇಳುತ್ತೇನೆ,ಬರಹಗಾರ ಮತ್ತು ನಿರ್ದೇಶಕ ನನಗೆ ಸ್ಪಷ್ಟತೆ ಕೊಟ್ಟರೆ ನಂಗೆ ಖುಷಿ,
ಕಾರಣ ಕಳೆದ ಹಲವು ವರ್ಷಗಳಿಂದ ತುಂಬಾ ಬೇರೆಯದೇ ಕಥೆ ಕೇಳಿ,ಎಲ್ಲ ರೀತಿಯ ಸಿನಿಮಾಗಳನ್ನು ಮಾಡ್ತಾ ಬಂದವನು, ರುದ್ರಾಭಿಷೇಕಂ ನಲ್ಲಿ ಬರುವ ವೀರಗಾಸೆ ಪಾತ್ರ ನಾನೇ ಮಾಡಿದ್ದು.ಇದೊಂದು ಸಾಂಸ್ಕೃತಿಕ ಅಸ್ತಿತ್ವವನ್ನು ತೋರಿಸುವ ಕಥೆ.

ನಾಯಕಿ ಪ್ರಿಯಾಂಕ್ ತಿಮ್ಮೇಶ್ ಮಾತನಾಡಿ,ನಮ್ಮಲ್ಲಿ
ಎಲ್ಲ ಜಾನರ ಕಥೆಗಳು ಇಲ್ಲಿ ಬರ್ತಾವೆ.ಕೆಲವೊಮ್ಮೆ ಇಂತಹ ಕಂಟೆಂಟ್ ಬಂದಾಗ,ನಾವು ಮುಂದೆ ಬಂದು ಪ್ರಯತ್ನ ಮಾಡ್ಬೇಕು,ನನ್ನದು ಇಲ್ಲಿ ಎರಡು ಶೇಡ್ ಪಾತ್ರ..
ದ್ವಿಪಾತ್ರಗಳ ಪಾತ್ರ ಮಾಡೋದೇ ಚಾಲೆಂಜ್ ಎಂದು ತಮ್ಮ ಪಾತ್ರದ ಹಿಂಟ್ ಕೊಟ್ಟರು.

ಸಂಗೀತ ನಿರ್ದೇಶಕ ಮನೋಹರ್,ತಾವಿಲ್ಲಿ
ನಟನೆ ಮತ್ತು ಸಂಗೀತ ನಿರ್ದೇಶನ ಎರಡನ್ನು ಮಾಡಿದ್ದು,ನನ್ನ ಪಾತ್ರಕ್ಕೆ ಮೇಕಪ್ ಹಚ್ಚಿಕೊಂಡ ನಂತರ,ನನ್ನ ಮುಖ ನೋಡಿ ನಾನೇ ಗಾಬರಿ ಆದೆ,ಏನ್ಮಾಡೋದು ನಿರ್ದೇಶಕರು ನನ್ನ ಮೇಲಿಟ್ಟ ಭರವಸೆ ಉಳಿಸಿಕೊಂಡಿದ್ದೇನೆ ಎಂಬ ಆಶಯ ನನ್ನದು ಎಂದರು ಹಾಗೆ ಫೈಟ್ ಮಾಸ್ಟರ್,ಥ್ರಿಲ್ಲರ್ ಮಂಜು ಕೆಲಸವು ಇಲ್ಲಿ ಸಖತ್ ಆಗಿ ಕಾಣ್ತಾ ಇದೆ.

ಬೆಂಕಿ ಜೊತೆಗೆ ಬೆಂಕಿ ಫೈಟ್,ತುಂಬಾ ಅನುಭವ ಇರುವ
ದೊಡ್ಡ ದೊಡ್ಡ ಸ್ಟಾರ್ ನಟರಂತೆ ವಿಜಯ್ ರಾಘವೇಂದ್ರ ಸಕ್ಸಸ್, ಎವರೇಜ್,ಸೋಲು ಎಲ್ಲವನ್ನು ನೋಡಿರುವ ಕಾರಣ ಅವ್ರು ತುಂಬಾ ಯೋಚನೆ ಮಾಡಿ, ಸಿನಿಮಾಗಳನ್ನ ಮಾಡ್ತಾರೆ,ಅದೇ ತರ ಕೆಲಸದ ಕಮಿಟ್ಮೆಂಟ್ ವಿಜಯ್ ಜೀನಿಯಸ್ ಎಂದರು.

ಇಬ್ಬರೇ,ಜಂಟಿಯಾಗಿ ಒಂದಾಗಿ ಕೆಲಸ ಮಾಡೋದೇ ಕಷ್ಟ..
ಅಂತಹದರಲ್ಲಿ ಒಂಬತ್ತು ಜನ ನವ ರತ್ನದಂತಹ ನಿರ್ಮಾಪಕರು ಒಂದಾಗಿ ಇರೋದೇ ಗ್ರೇಟ್..

ನಿರ್ದೇಶಕ ವಸಂತ್ ಕುಮಾರ್ ಕೆ ಮಾತನಾಡಿ,
ತುಂಬಾ ರಿಸ್ಕ್ ಆದಂತಹ ಜಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ,
ವೀರಗಾಸೆ ಪಾತ್ರವನ್ನು ವಿಜಯ್ ಸಂಪೂರ್ಣ ತಪಸ್ಸಿನಂತೆ ಮಾಡಿದ್ದಾರೆ.ಮೂವತ್ತು ವರ್ಷಗಳಿಂದ ಉದ್ಯಮದಲ್ಲಿ ಇದ್ದೇನೆ.
ಯಾವತ್ತೋ ಸಿನಿಮಾ ನಿರ್ದೇಶನ ಮಾಡಬೇಕಿತ್ತು, ಆದರೆ ಅವಕಾಶ ಸಿಗಲಿಲ್ಲ ಕಾಲ ಕೂಡಿ ಬಂದಿರಲಿಲ್ಲ ಈಗ ರುದ್ರಾಭಿಷೇಕಂ ಚಿತ್ರದ ಮೂಲಕ ನಿರ್ದೇಶಕ ಆಗಿದ್ದೇನೆ, ಇದಕ್ಕೆ ನನ್ನ ಕೋ ಡೈರೆಕ್ಟರ್ ಮಾಡಿದ ಸಹಾಯ ದೊಡ್ಡದು ಎಂದು ನೆನೆದರು.

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.