ಒರಿಜಿನಲ್ ಮಾನ್ ಸ್ಟರ್, ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ,ತಮ್ಮ ಪಕ್ಕದಲ್ಲಿ ಕುಳಿತಿದ್ದ ಅಶೋಕ್ ಖೇಣಿ ಯವರ ಕಾರ್ಯವೈಖರಿ ಮತ್ತು ಅವರು ಮಾಡುವಂತಹ ಪ್ರಾಜೆಕ್ಟ್ ಗಳ ಬಗ್ಗೆ, ಹಾಗೂ ಅವರು ತೆಗೆದುಕೊಳ್ಳುವ ರಿಸ್ಕ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಹಾಗೆ ಮಾತು ಮುಂದುವರಿಸಿ ತೆಲುಗು ನಟ ಸುನಿಲ್ ಅವರ ಕಾಮಿಡಿ ಟೈಮಿಂಗ್ ಬಗ್ಗೆ ಹಾಸು ನಟನೆಯ ಬಗ್ಗೆ ಮನಸಾರೆ ಹೊಗಳಿ, ಹಾಸ್ಯ ಪಾತ್ರದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದ ಸುನಿಲ್ ನಿಧಾನವಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡುತ್ತಾ ಒಬ್ಬ ಇಂಡಿಯನ್ ಸ್ಟಾರ್ ಆದ್ರೂ, ಪಾತ್ರಕ್ಕಾಗಿ ಅವರು ದೇಹವನ್ನು ಸಿಕ್ಸ್ ಪ್ಯಾಕ್ ಮಾಡಿ ಹುರಿಗೊಳಿಸಿದ್ದರ ಬಗ್ಗೆ ಶಿವಣ್ಣ ಮಾತಾಡಿದಾಗ ಸುನಿಲ್ ಮುಖದಲ್ಲೇ ಖುಷಿ ಇತ್ತು.ಆರ್ ಚಂದ್ರು ಒಬ್ಬ ಒಳ್ಳೆಯ ತಂತ್ರಜ್ಞ ಜೊತೆಗೆ ಅವರು ಎಮೋಷನಲ್ ಕಥೆಗಳನ್ನ ಹಣೆಯೋದರಲ್ಲಿ ತುಂಬಾ ಮಿಸ್ಸೀಮ, ಮೈಲಾರಿ ಚಿತ್ರ ಮಾಡುವ ಸಂದರ್ಭದಲ್ಲಿಯೇ ಆರ್ ಚಂದ್ರುವಿನ ಕೆಲಸದ ಬಗ್ಗೆ ನನಗೆ ಅಭಿಮಾನವಿತ್ತು. ಮಾನ್ ಸ್ಟರ್ ಅಂದ್ರೆ ದೈತ್ಯ,ಒರಿಜಿನಲ್ ಮ್ಯಾನ್ ಸ್ಟರ್ ನಲ್ಲಿಯೂ ಒಬ್ಬ ಮ್ಯಾನ್ ಕೈಂಡ್ ಅಂತಾ ಇರ್ತಾನೆ, ಈ ತರಹದ ಕಥೆಗಳು ಹಿಂದೆಂದೂ ಬಂದಿಲ್ಲ ಎಂದು ನಾನು ಹೇಳಲು ಹೋಗೋದಿಲ್ಲ, ಇದೊಂದು ಕಮರ್ಷಿಯಲ್ ಸಿನಿಮಾ ಅದರಲ್ಲಿಯೂ ಒಂದೊಳ್ಳೆ ಮೆಸೇಜ್ ಇದೆ, ಯಾವುದೇ ಚಿತ್ರದ ಬಗ್ಗೆ ಆಗಲಿ ನಾನು ಬಿಡುಗಡೆಗು ಮುಂಚೆ ಆ ಚಿತ್ರದ ಬಗ್ಗೆ ತುಂಬಾ ಮಾತನಾಡುವುದಿಲ್ಲ ಬಿಡುಗಡೆ ನಂತರ ಜನರೇ ಅದರ ಬಗ್ಗೆ ಮಾತನಾಡಲಿ ಒಂದಂತೂ ನಿಜ ನಾನು ಇತರದ ಪಾತ್ರವನ್ನು ತುಂಬಾ ವರ್ಷಗಳಾಗಿತ್ತು ಮಾಡಿ ಇದಂತೂ ಕನ್ಫರ್ಮ್,ಎಂದ ಶಿವಣ್ಣ ಆರ್ ಚಂದ್ರು ಸಿನಿ ಕೇರಿಯರ್ ನಲ್ಲಿ ಇದೊಂದು ಭಿನ್ನವಾದ ಚಿತ್ರವಾಗಿ ನಿಲ್ಲಲಿದೆ ಅನ್ನೋದು ನನ್ನ ಆಶಯ ಎಂದು ನಿರ್ದೇಶಕರ ಬೆನ್ನು ತಟ್ಟಿದರು.ಇದರ ನಡುವೆ ಮಾಧ್ಯಮದವರಿಂದ ಬಂದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ಪ್ಯಾನ್ ಇಂಡಿಯಾ ಅನ್ನುವಂತದ್ದು ಈಗ ಕೇಳುತ್ತಿರುವಂತಹ ವಿಷಯ ಅಲ್ಲ ಅಪ್ಪಾಜಿಯ ಕಾಲದಲ್ಲೇ ಎಷ್ಟೋ ಸಿನಿಮಾಗಳು ಪ್ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸುದ್ದಿ ಮಾಡಿದ್ದವು ಜನಪ್ರಿಯವೂ ಆಗಿದ್ದವು,ಎಲ್ಲದಕ್ಕೂ ಅದೃಷ್ಟ ಇರಬೇಕು ಕೆಲವೊಮ್ಮೆ ದೊಡ್ಡ ಸಿನಿಮಾಗಳು ಸಹ ಸೋತ ಉದಾಹರಣೆಗಳು ಇವೆ ಹಾಗೆ ಸಣ್ಣ ಸಿನಿಮಾಗಳು ಕೂಡ ಗೆದ್ದಂತಹ ಉದಾಹರಣೆಗಳು ಕೂಡ ಇವೆ ಎಂದು ಇಂಡಸ್ಟ್ರಿಯ ಬೆಳವಣಿಗೆಗಳ ಬಗ್ಗೆ ಶಿವಣ್ಣ ಸೂಕ್ಷ್ಮವಾಗಿ ಮಾತನಾಡಿದರು,
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಮುಂಬೈಗೆ ಕರೆದುಕೊಂಡು ಹೋಗುವ ವಿಚಾರ ತುಂಬಾ ದೊಡ್ಡದಲ್ಲ ಸರ್, ಅವರಿಗೆ ಇಂಡಿಯಾದ ತುಂಬೆಲ್ಲ ಫ್ಯಾನ್ಸ್ ಇದಾರೆ ಶಿವಣ್ಣ ಶಿವಣ್ಣ ಅಂತಾರೆ ಅದು ನಾನು ಕಣ್ಣಾರೆ ಕಂಡಿದ್ದೇನೆ, ಮುಂಬೈಲಿದ್ದ ಎಷ್ಟೋ ಜನ ಪತ್ರಕರ್ತರು ಶಿವಣ್ಣನ ಕಂಡು ಲವ್ ಯು ಶಿವಣ್ಣ, ಲವ್ ಯು ಶಿವಣ್ಣ, ಅನ್ನೋದನ್ನ ನೋಡಿ ಆನಂದ್ ಪಂಡಿತ್ ಕೂಡ ಹೆಮ್ಮೆಪಟ್ಟಿದ್ರು, ಅದು ನಮ್ಮ ಶಿವಣ್ಣನ ಅಸಲಿ ಖದರ್. ಕನ್ನಡದ ನಿರ್ದೇಶಕನಾದ ನನಗೆ ಶಿವಣ್ಣ ಮಾಡುತ್ತಿರುವಂತಹ ಸಪೋರ್ಟ್ ದೊಡ್ಡದು, ನಾವು ಎಲ್ಲ ಕಡೆಯೂ ಮಿಂಚಬೇಕು ಬೆಳೆಯಬೇಕು ಅದಷ್ಟೇ ನಮ್ಮ ಗೋಲ್,ಭಾರತೀಯ ಚಿತ್ರರಂಗದಲ್ಲಿನ ಹಲವಾರು ಭಾಷೆಗಳಲ್ಲಿ ನನ್ನ ಸಿನಿಮಾ ಸ್ನೇಹಿತರು ಇದ್ದಾರೆ,ಅವರೆಲ್ಲ ನನ್ನ ಜೊತೆ ಇರುವುದರಿಂದ ನಾನು ಒಂದಷ್ಟು ಹೊಸ ಹೊಸ ಪ್ರಯತ್ನಗಳನ್ನ ದೊಡ್ಡ ಮಟ್ಟದಲ್ಲಿ ಮಾಡುತ್ತೇನೆ ಇದೇ ನನ್ನ ಕನಸು. ಎಲ್ಲ ಭಾಷೆಗಳ ಚಿತ್ರಗಳನ್ನ ಕನ್ನಡಿಗರಾದ ನಾವು ಹೇಗೆ ನೋಡಿ ಸಂಭ್ರಮಿಸುತ್ತೇವೆಯೋ ಹಾಗೆಯೇ ಎಲ್ಲಾ ಭಾಷೆಗಳು ಸಹ ಕನ್ನಡ ಚಿತ್ರಗಳನ್ನು ನೋಡಬೇಕು ಅನ್ನೋದು ನಮ್ಮ ಮಹಾದಾಸೆ. ನಾನು ಕಥೆ ಬರೆಯುವಾಗಲೇ ಒರಿಜಿನಲ್ ಮಾನ್ ಸ್ಟರ್ ಅಂತನೇ ಮೈಂಡಲ್ ಇಟ್ಕೊಂಡು ಬರೆದಿರುವ ಕಥೆ ಇದು, ಶಿವಣ್ಣ ಇದಕ್ಕೆ ಸೂಕ್ತ ಅನಿಸಿದಾಗ ಅವರೊಟ್ಟಿಗೆ ಚರ್ಚೆ ಮಾಡಿ ಒಂದು ಹೆಜ್ಜೆ ಇಟ್ಟಿದ್ದೇನೆ.

ತೆಲುಗು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರಖ್ಯಾತಿಯನ್ನು ಪಡೆದಿರುವಂತಹ ಸುನಿಲ್,ಇಂತಹ ಅದ್ಭುತ ಕಥೆಯ ಒಂದು ಭಾಗವಾಗಿದ್ದಕ್ಕೆ ನನಗೆ ಹೆಮ್ಮೆಯದೆ ಖುಷಿ ಇದೆ ಇಂತದ್ದೊಂದು ಅವಕಾಶ ಕೊಟ್ಟಂತಹ ಆ ಚಂದ್ರು ಅವರಿಗೆ ಹಾಗೂ ಚಿತ್ತ ತಂಡಕ್ಕೆ ನನ್ನ ಧನ್ಯವಾದ, ಕೆಲವು ಕಥೆಗಳು ಸಿನಿಮಾ ಆದಾಗ ಅದು ಯುನಿವರ್ಸಲ್ ಕಂಟೆಂಟಾಗಿ ತುಂಬಾ ಜನಕ್ಕೆ ರೀಚ್ ಆಗುತ್ತದೆ ಆ ತರಹದ ಒಂದು ಗಟ್ಟಿ ಕಥೆಯನ್ನು ವಿಷಯವನ್ನು OM ಹೇಳಲು ಹೊರಟಿದೆ.
ಇದೊಂದು ಅಪ್ಪಟ ಭಾರತೀಯ ಚಿತ್ರ, ಈಗಿನ ಕಾಲಘಟ್ಟದ ಯುವಕ ಯುವತಿಯರಿಗೆ ಈ ಕಥೆ ಒಳ್ಳೆ ಮೆಸೇಜ್ ಕೊಡಲಿದೆ, ಇಂಥಾ ಸಿನಿಮಾಗಳು ಸಾಧ್ಯವಾದಷ್ಟು ಜಾಸ್ತಿ ಬರಬೇಕು ನನ್ನ ಪಾತ್ರವೂ ಕೂಡ ಅಷ್ಟೇ ತೂಕದಿಂದ ಕೂಡಿದೆ ಎಂದು ವಿವರಿಸಿದರು.
ಮ್ಯಾಕಿ ಪಾಲಿಸಿಸ್ಸಂಸ್ಥಾಪಕ ಮತ್ತು ಚಿತ್ರ ನಿರ್ಮಾಪಕರಾದ ಮಾಧವ್ ಕಿರಣ್ ಮಾತನಾಡಿ,ಚಂದನವನದ ಸೂಪರ್ ಹಿಟ್ ನಿರ್ದೇಶಕ ಆರ್ ಚಂದ್ರು ಅವರದು ಮತ್ತು ನಂದು ಹಳೆಯ ಪರಿಚಯ,ತುಂಬಾ ಒಳ್ಳೆಯ ಕಥೆಗಳನ್ನು ಸಿನಿಮಾ ಮಾಡಿದ ಅನುಭವ ಅವರಿಗೆ ಇದೆ ಅಷ್ಟೇ ಜನರ ನಾಡಿಮಿಡಿತವೂ ಕೂಡ ಅವರಿಗೆ ಗೊತ್ತು.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಅವರ ಇಮೇಜಿಗೆ ಹೊಂದುವ ಕಥೆ ಒರಿಜಿನಲ್ ಮಾನ್ ಸ್ಟರ್, ಚಂದ್ರು ಅವರ ಕನಸು ತುಂಬಾ ದೊಡ್ಡದಾಗಿದೆ ಇದೇ ಕಾರಣಕ್ಕೇನೆ ಅವರು ಮುಂಬೈಯಲ್ಲಿ OM ಸಂಬಂಧಪಟ್ಟ ದೊಡ್ಡ ಇವೆಂಟ್ ಮಾಡಿ ಸಕ್ಸಸ್ ಆಗಿ ಬಂದಿದ್ದು, ಸ್ಯಾಂಡಲ್ ವುಡ್ ನಲ್ಲಿ ಇದೊಂದು ಒಳ್ಳೆಯ ಚಿತ್ರವಾಗಲಿದೆ ಎಂದು ಶುಭ ಹಾರೈಸಿದರು.

ಇದಾಗಿತ್ತು,,ಆನಂದ್ ಪಂಡಿತ್ ಅರ್ಪಿಸುವ, ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ ಚಂದ್ರು ನಿರ್ಮಾಣ ಮಾಡುತ್ತಿರುವ, ಆರ್ ಚಂದ್ರು ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ “ಒರಿಜನಲ್ ಮಾನ್ ಸ್ಟರ್” ಚಿತ್ರದ ಮುಹೂರ್ತ ಸಮಾರಂಭ ಮತ್ತು ಪತ್ರಿಕಾ ಗೋಷ್ಠಿಯ ಅಪ್ಡೇಟ್.
ರವೀ ಸಾಸನೂರ್ MasterNews365

