Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ದೃಷ್ಟಾಂತ……!!!

      ತಂದೆ ತಾಯಿಯರು ಇದ್ದರು ಅವರಿಗೆ ಒಬ್ಬ ಮಗ ಇದ್ದ ಆ ಮಗ ವಯಸ್ಸಿಗೆ ಬಂದಿದ್ದ ಅವನ ವಾರಿಗೆಯವರು ಲಗ್ನ ಆಗಿ ಒಂದೆರಡು ಮಕ್ಕಳನ್ನು ಹೊಡೆದಿದ್ದರು. ಆದರೆ ಅವರ ತಂದೆ ಅವನ ಲಗ್ನನೂ ಮಾಡಿದ್ದಿಲ್ಲ. ಆ ವಿಚಾರನು ಅವಂಗ ಇದ್ದಿದ್ದಿಲ್ಲ ಇದನ್ನು ನೋಡಿದ ಯಾರಿಗೆಯ ಗೆಳೆಯರು ಅವನಿಗೆ ಅನ್ನಾಕ ಹತ್ತಿದ್ರು –       ಏನೋ ದೋಸ್ತ ನಿಮ್ಮಪ್ಪ ನೀನು ಅವಾ ನಿನಗೆ ಲಗ್ನ ಮಾಡ್ತಾನ ಇಲ್ಲ ನೋಡು ನೀನು ಹಿಂಗ ದುಡ್ಕೊಂಡು ಹೋಗೋದು ಅಂದ್ರೆ ಮುಂದೆ ನಿನ್ನ ಗತಿ […]

      ತಂದೆ ತಾಯಿಯರು ಇದ್ದರು ಅವರಿಗೆ ಒಬ್ಬ ಮಗ ಇದ್ದ ಆ ಮಗ ವಯಸ್ಸಿಗೆ ಬಂದಿದ್ದ ಅವನ ವಾರಿಗೆಯವರು ಲಗ್ನ ಆಗಿ ಒಂದೆರಡು ಮಕ್ಕಳನ್ನು ಹೊಡೆದಿದ್ದರು. ಆದರೆ ಅವರ ತಂದೆ ಅವನ ಲಗ್ನನೂ ಮಾಡಿದ್ದಿಲ್ಲ. ಆ ವಿಚಾರನು ಅವಂಗ ಇದ್ದಿದ್ದಿಲ್ಲ ಇದನ್ನು ನೋಡಿದ ಯಾರಿಗೆಯ ಗೆಳೆಯರು ಅವನಿಗೆ ಅನ್ನಾಕ ಹತ್ತಿದ್ರು –
       ಏನೋ ದೋಸ್ತ ನಿಮ್ಮಪ್ಪ ನೀನು ಅವಾ ನಿನಗೆ ಲಗ್ನ ಮಾಡ್ತಾನ ಇಲ್ಲ ನೋಡು ನೀನು ಹಿಂಗ ದುಡ್ಕೊಂಡು ಹೋಗೋದು ಅಂದ್ರೆ ಮುಂದೆ ನಿನ್ನ ಗತಿ ಹ್ಯಾಂಗೋ ಅಂದ್ರುಅವಾಗ ಅವ ವಿಚಾರ ಮಾಡಿ –
       “ಹೌದಲ್ಲ ” ಅಂದ.ಅಂದವನೇ ಏನ್ ಮಾಡಿದ ಅಂದ್ರೆ ಸೀದಾ ಮನೆಗೆ ಬಂದ ಹಾಸಿಗೆ ಹಾಸಿ ಗಪ್ ಅಂತ ಮಲಗಿಕೊಂಡು ಬಿಟ್ಟ. ಹೊರಗಿನಿಂದ ಅವರ ಅಪ್ಪ ಮನೆಗೆ ಬರ್ತಾನೆ ಇವ ಮಲಗಿದ್ದನ್ನು ನೋಡಿ –
       “ಯಾಕೋ ಮುದುಕ್ಯಾ ಮಲಗಿಕೊಂಡಾನಲ್ಲ ” ಅಂತ ತನ್ನ ಹೆಂಡತಿಗೆ ಕೇಳಿದ. ಅದಕ್ಕೆ ತಾಯಿ ಮಗನಿಗೆ ಕೇಳುತ್ತಾಳೆ.
       “ಯಾಕೋ ತಮ್ಮ ಯಾಕ ಹಾಸಿಗೆ ಹಾಸಿ ಹೊತ್ಕೊಂಡು ಮಲಗಿ ಬಿಟ್ಟಿಯಲ್ಲ ಏನಾಯಿತು? ” ಅಂತ ಕೇಳಿದ್ದಕ್ಕೆ ಉತ್ತರವಾಗಿ-
       “ಎವ್ವಾ… ನನ್ನ ವಾರಿಗೆ ಅವರು ಲಗ್ನ ಮಾಡಿಕೊಂಡು ತಿರುಗಿ ಎರಡೇರಡು ಮಕ್ಕಳನ್ನು ಹಡದಾರ .. ಆದರೆ ನನಗೆ ಇನ್ನೂ ತನಕ ನಮ್ಮಪ್ಪ ಲಗ್ನಾನು ಮಾಡ್ಲಿಲ್ಲ. ಹಿಂಗ… ಬರೆ ದುಡಿ ದುಡಿ ಅಂತ ಅಂತಾನ” .ಇದನ್ನು ಕೇಳಿ ಯಾಕೆ ತನ್ನ ಗಂಡನಿಗೆ ಹೇಳಿದಳು-
       “ಮತ್ತೆ ಅವನ ಲಗ್ನ ಇಲ್ಲ ಮಹೂರ್ತ ಇಲ್ಲ. ಅವನ ವಾರಿಗೆಯವರು ಎರಡು ಮೂರು ಮಕ್ಕಳನ್ನು ಹಡೆದಾರ. ನೀನು ಅವನ ಲಗ್ನ ಮಾಡಲಾರದ ಹಿಂಗ ಹೊಂಟಿ. ಮತ್ತ ಅವ ಏನ ಮಾಡ್ಯಾನ, ಅದಕ್ಕೆ ಹಾಸ್ಕೊಂಡು ಮಲಗಿಕೊಂಡು ಬಿಟ್ಟಾನ ” ಅಂದಳು.
      ” ಏ ಹೌದಲ್ಲ ಬರೆ ನಾ ಮಗ ದುಡಿಯೋದು ನೋಡಿಕೊಂಡು ಕುಂತೆ, ಅವನ ಲಗ್ನದ ಬಗ್ಗೆ ಜರಾನು ವಿಚಾರ ಮಾಡ್ಲಿಲ್ಲ. ನೋಡು ಮಾರಾಯ್ತಿ ನಾಳೆ ನಾನು ಸರಿಯಾಗಿ ಬೆಳಿಗ್ಗೆ ಎದ್ದು ಕೂಡಲೇ ಕನ್ಯಾ ನೋಡಲಿಕ್ಕೆ ಹೋಗ್ತೀನಿ ನೀ ಇದ್ರೆ ನನಗ ಬುತ್ತಿ ಮಾಡಿ ಕಟ್ಟಿ ಬಿಡು ” ಅಂದ. ಅದರಂತೆ ಅವಳು ಬೇಗನೆ ಎದ್ದು ಗಂಡನಿಗಾಗಿ ಬುತ್ತಿ ಮಾಡಿ ಕಟ್ಟಿ ಕಳುಹಿದಳು.
” ನಾ ಕನ್ಯಾ ನೋಡಾಕ ಹೋಗ್ತೀನಿ ಅಂದವನೇ ಕನ್ಯೆ ನೋಡಲು ಹೊರಟು ಹೋದ “. ಅವ ಕನ್ಯೆ ನೋಡಾಕ ಹೋಗ್ಯಾನ ಅಂದ್ರೆ ಮಗ ಹೆಂಗ ಮಲಗಿಕೊತಾನ್ರೀ, ಅವನು ಮನಸ್ಸು ಕುಣಿದಾಡಕ ಹತ್ತಿತು. ಕೈ ಕಾಲು ಮೈ ಜಾಡಿಸಿ ಹಾಸಿಗೆ ಇಂದ ಎದ್ದುಬಿಟ್ಟ.
ಹೊಲದಾಗ ಬಿಳಿ ಜೋಳ ಬೆಳೆಸಿಯಾಗಿತ್ತು. ಆದರ ಸಲುವಾಗಿ ಹೊಲದಾಗ ಅಟ್ಟಹಾಕಿ ಹಕ್ಕಿ ಕಾಯುತ್ತಿದ್ದನು. ಹುಡುಗ ಊಟ ಮಾಡಿ ಬುತ್ತಿ ಕಟ್ಟಿಕೊಂಡು ಹಕ್ಕಿ ಕಾಯಕ ಹೊಲಕ್ಕೆ ಹೋದ. ಹೊಲದಾಗ ಹಾಕಿದ್ದ ಅಟ್ಟ ಏರಿ ಹೊಲದಾಗಿನ ಹಕ್ಕಿ ಹೊಡ್ಕೊಂಡು ಕುಂತ. ಮನೆಯಲ್ಲಿ ಊಟ ಮಾಡಿ ಹೋಗಿದ್ದನಲ್ಲ ಎಳೆ ಬೀಸಲು, ಚಂದನ ಗಾಳಿ ಬೀಸಿತ್ತು ನಿದ್ದೆ ಬಂದು ಅಲ್ಲೇ ಅಟ್ಟದ ಮ್ಯಾಗ ಮಲಗಿಕೊಂಡು ಬಿಟ್ಟ.

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.