Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಗೋಲ್ಡನ್ ಟಾಸ್ ಇನ್ – AMB ಸಿನಿಮಾಸ್
- ಸಿನಿಮಾ

ಗೋಲ್ಡನ್ ಟಾಸ್ ಇನ್ – AMB ಸಿನಿಮಾಸ್

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ,ಆಗಿದ್ದ ಕಪಾಲಿ ಥಿಯೇಟರ್ ಗು ಈಗಿನ ನವೀಕರಣವಾಗಿರುವ AMB ಮಲ್ಟಿಫ್ಲೆಕ್ಸ್ ಗು,ತುಂಬಾ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಬಹುದು. ಎಸ್ ನಾರಾಯಣ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಚೆಲುವಿನ ಚಿತ್ತಾರ ಎಂಬ ಯಮೋಷನಲ್ ಕ್ಯೂಟ್ ಲವ್ ಸ್ಟೋರಿ ಹೊಂದಿದ ಚಿತ್ರ, ಇದೇ ಕಪಾಲಿ ಚಿತ್ರಮಂದಿರದಲ್ಲಿ ಸತತವಾಗಿ ಯಶಸ್ವಿ 27 ವಾರಗಳನ್ನ ಪೂರೈಸಿದ್ದು, ಇತಿಹಾಸವಾಗಿ ಕಾಣುತ್ತದೆ. ಗೋಲ್ಡನ್ ಮೂವೀಸ್ ಪ್ರಸಂಸ್ ನಲ್ಲಿ ಅರ್ಜುನ್ ದೇವ್ ನಟಿಸಿ ನಿರ್ದೇಶನ ಮಾಡುತ್ತಿರುವ ಟಾಸ್ ಚಿತ್ರದ […]

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ,ಆಗಿದ್ದ ಕಪಾಲಿ ಥಿಯೇಟರ್ ಗು ಈಗಿನ ನವೀಕರಣವಾಗಿರುವ AMB ಮಲ್ಟಿಫ್ಲೆಕ್ಸ್ ಗು,ತುಂಬಾ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಬಹುದು.

ಎಸ್ ನಾರಾಯಣ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಚೆಲುವಿನ ಚಿತ್ತಾರ ಎಂಬ ಯಮೋಷನಲ್ ಕ್ಯೂಟ್ ಲವ್ ಸ್ಟೋರಿ ಹೊಂದಿದ ಚಿತ್ರ, ಇದೇ ಕಪಾಲಿ ಚಿತ್ರಮಂದಿರದಲ್ಲಿ ಸತತವಾಗಿ ಯಶಸ್ವಿ 27 ವಾರಗಳನ್ನ ಪೂರೈಸಿದ್ದು, ಇತಿಹಾಸವಾಗಿ ಕಾಣುತ್ತದೆ.

ಗೋಲ್ಡನ್ ಮೂವೀಸ್ ಪ್ರಸಂಸ್ ನಲ್ಲಿ ಅರ್ಜುನ್ ದೇವ್ ನಟಿಸಿ ನಿರ್ದೇಶನ ಮಾಡುತ್ತಿರುವ ಟಾಸ್ ಚಿತ್ರದ ಟ್ರೈಲರ್ ಲಾಂಚ್ ಇವೆಂಟಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ,AMB ಹತ್ತಿರ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ನೋಡಲೆಂದೇ ಕಿಕ್ಕಿರಿದು ಸೇರಿದ್ದ ಜನ ಸಮೂಹ, ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.

ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ,AMB ಚಿತ್ರಮಂದಿರದ ಒಳಗಡೆ ಒಂದು ದೊಡ್ಡ ಸೆಲೆಬ್ರೇಶನ್ ಕ್ರಿಯೇಟ್ ಆಗಿತ್ತು, ಅದರ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಟಾಸ್ ಚಿತ್ರದ ನಾಯಕ ಮತ್ತು ನಿರ್ದೇಶಕ ಅರ್ಜುನ್ ದೇವ ಜೊತೆಗೆ ಬಾಲ್ಕನಿಯಿಂದ ಮಧ್ಯದಲ್ಲಿ ಇಳಿದು ಬರುತ್ತಿರುವಾಗ ಅಲ್ಲಿ ಸೇರಿದ್ದ ಎಲ್ಲ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ.

ದೂರದಿಂದ ಗಣಪನನ್ನು ನೋಡಲು ಬಂದಿದ್ದ ಅಭಿಮಾನಿಗಳು ಒಂದೇ ಸವನೆ ತಮ್ಮ ನೆಚ್ಚಿನ ನಟನನ್ನ ಕಂಡು, ಸಂತೋಷಪಟ್ಟಿದ್ದು ಉಂಟು ಹಾಗೆ ಅವರಿಗೆ ಹಸ್ತಲಾಗವ ಮಾಡಿ, ಸೆಲ್ಫಿಗಳನ್ನು ತೆಗೆದುಕೊಂಡಿದ್ದು ಉಂಟು.

ಟಾಸ್ ಚಿತ್ರದ ಟ್ರೈಲರ್ ಲಾಂಚ್ ಗೋ ಮುಂಚೆ ಚಿತ್ರದ ಇನ್ನುಳಿದ ಹಾಡುಗಳು ಮತ್ತು ಕಂಟೆಂಟ್ ಅನ್ನು ಪ್ರದರ್ಶನ ಮಾಡಲಾಯಿತು,ಅದರ ನಂತರ ವೇದಿಕೆಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ಅರ್ಜುನ್ ದೇವ್ ನಾಯಕಿ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ನಿರ್ಮಾಪಕ ದೊರೆಯರು ಎಲ್ಲರೂ ಸೇರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಕೊಟ್ಟು ನಂತರ ಗೋಲ್ಡನ್ ಸ್ಟಾರ್ ಗಣೇಶ್, ನಿರೂಪಕಿ ಅನುಶ್ರೀ ಅವರ ಜೊತೆಗೆ ಒಂದು ಚಂದದ ಮಾತುಕತೆ ಮಾಡಿ ಟಾಸ್ ಹಾಕಿ ಟ್ರೈಲರ್ ರಿಲೀಸ್ ಮಾಡಿದರು.

ಟಾಪ್ ಚಿತ್ರದ ಟ್ರೈಲರ್ ನೋಡಿದಾಗ ನಮಗೆ ಅನಿಸಿದ್ದು, ಚಿತ್ರದಲ್ಲಿ ಪ್ರೀತಿ, ಪ್ರೇಮ, ರಾಜಕೀಯ, ರೌಡಿಗಳ ಮಾಫಿಯಾ, ತಾಯಿಯ ಎಮೋಷನಲ್ ವಿಷ್ಯ, ತಂದೆಯ ಬಾಂಧವ್ಯ ಇದೆಲ್ಲವೂ ಇದೆ ಎಂದು ಕಂಡು ಬಂದಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ,
ತಾವ್ಯಾಕೆ ಟಾಸ್ ಚಿತ್ರವನ್ನು ಗೋಲ್ಡನ್ ಮೂವೀಸ್ನಲ್ಲಿ ಪ್ರೆಸೆಂಟ್ಸ್ ಮಾಡಿದ್ರು ಅನ್ನೋದನ್ನು ವಿವರಿಸಿ,
ತಾವೊಬ್ಬ ಸಿನಿಮಾ ಅಭಿಮಾನಿ,ಸಿನಿಮಾ ಉತ್ಸಾಹಿ,ಸಿನಿಮಾ ಪ್ರೀತಿಸುವವ,
ಹೀಗಾಗಿ ಈ ಟಾಸ್ ಚಿತ್ರವನ್ನು ಕನ್ನಡ ನಮ್ಮ ಬ್ಯಾನರ್ ನಲ್ಲಿ ಪ್ರೆಸೆಂಟ್ ಮಾಡುತ್ತಿದ್ದೇನೆ ಹಾಗೆ ಯಾವುದೇ ಹೊಸ ತಂಡವಾಗಲಿ ಅಥವಾ ಒಳ್ಳೆಯ ಚಿತ್ರವನ್ನು ಮಾಡಿದಂತಹ ತಂಡವಾಗಲಿ ನಮ್ಮ ಹತ್ತಿರ ಬಂದು ಕೊಲಾಬ್ರೇಶನ್ ಕೇಳಿದಾಗ ನಾವು ಪ್ರೀತಿಯಿಂದ ಮಾಡಿದಾಗ ನಮ್ಮಲ್ಲಿ ಬಾಂಧವ್ಯ ಬೆಳೆಯುತ್ತದೆ ಹಾಗೆ ಅದು ಉದ್ಯಮಕ್ಕೂ ಒಂದೊಳ್ಳೆ ಎನರ್ಜಿ ಕೊಟ್ಟ ಹಾಗೆ ಆಗುತ್ತದೆ ಎಂದರು,

ಮಂಗಳೂರಿನ ಹೆಮ್ಮೆ,
ಕೋಸ್ಟಲ್ ವುಡ್ ನ ಸೂಪರ್ ಸ್ಟಾರ್ ಅರ್ಜುನ್ ದೇವ್ ಒಬ್ಬ ಪ್ರತಿಭಾವಂತ ನಟ ಹಾಗೂ ನಿರ್ದೇಶಕ.

ಅವರ ತಂದೆ ಡಾಕ್ಟರ್ ದೇವದಾಸ್ ಕಾಫಿಕಾಡ ಕೂಡ, ಅದ್ಭುತ ರಂಗಭೂಮಿಯ ನಟ ಚಲನಚಿತ್ರ ಬರಹಗಾರ ಮತ್ತು ನಿರ್ದೇಶಕ,

ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಕಥೆ ಸಿದ್ಧವಾದರೆ ತಾವು ಅರ್ಜುನ್ ದೇವ್ ಜೊತೆಗೆ ಕೆಲಸ ಮಾಡುವುದಾಗಿ ಗೋಲ್ಡನ್ ಸ್ಟಾರ್ ಹೇಳಿಕೊಂಡರು.

ಆನಂತರ ಮಾತನಾಡಿದ ಟಾಸ್ ಚಿತ್ರದ ನಾಯಕ ಮತ್ತು ನಿರ್ದೇಶಕ ಅರ್ಜುನ್ ದೇವ,
ನನ್ನ ಈ ಪ್ರಯತ್ನಕ್ಕೆ ಗೋಲ್ಡನ್ ಮೂವೀಸ್ ನನ್ನ ಜೊತೆಗೆ ನಿಂತಿರುವುದು ನನಗೆ ಆನೆಬಲ ಬಂದಂತಾಗಿದೆ, ನನ್ನ ಮತ್ತು ನನ್ನ ತಂದೆಯವರ ಮೇಲಿನ ಪ್ರೀತಿ ಹಾಗೂ ಗೌರವಕ್ಕೆ ಶಿಲ್ಪಾ ಗಣೇಶ ರವರು ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ರವರು ಬೆಂಬಲವಾಗಿ ನಿಂತಿದ್ದು ನಮ್ಮ ಸಿನಿಮಾ ತಂಡಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ, ಸೆಪ್ಟೆಂಬರ್ 18ರಂದು ನಿಮ್ಮ ಮುಂದೆ ಬರಲಿರುವ ಚಿತ್ರವು ನಿಮ್ಮೆಲ್ಲರನ್ನು ರಾಜ್ಯಸುವುದರ ಜೊತೆಗೆ ಒಂದು ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಭರವಸೆ ನೀಡಿದರು.

ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಭಿನ್ನ ವಿನೂತನ ಸಂಗೀತವನ್ನು ಮತ್ತು ಸಂಗೀತದ ರಸದೂತನವನ್ನು ನೀಡಿದ ಪ್ರತಿಭಾವಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಯವರು ಮಾತನಾಡಿ,
ಒಳ್ಳೆಯ ಹಾಡುಗಳು ಮತ್ತು ಒಳ್ಳೆಯ ಗಂಡ ಸಿಕ್ಕಾಗ, ತುಂಬಾ ಸುಲಭವಾಗಿ ನಮ್ಮಂತ ಸಂಗೀತ ನಿರ್ದೇಶಕರು ಒಳ್ಳೆಯ ಹಾಡುಗಳನ್ನು ಕಾಂಪೋಸ್ ಮಾಡಬಹುದು ಹಾಗೂ ಪ್ರೇಕ್ಷಕರ ಹೃದಯವನ್ನು ತಟ್ಟಬಹುದು, ದೇವರ ಆಶೀರ್ವಾದ ನಾನು ಇಲ್ಲಿಯ ತನಕ ಮಾಡಿದ ಬಹುತೇಕ ಸಿನಿಮಾಗಳ ಎಲ್ಲಾ ಹಾಡುಗಳು ಒಳ್ಳೆಯ ಮೈಲೇಜ್ ಪಡೆದುಕೊಂಡಿದೆ ಆ ಲಿಸ್ಟಲ್ಲಿ ಟಾಸ್ ಚಿತ್ರವು ಕೂಡ ನಿಲ್ಲುತ್ತದೆ ಎಂದು ಅರ್ಜುನ್ ದೇವ್ ರವರ ಕೆಲಸದ ಬಗ್ಗೆ ಹೊಗಳಿದರು.

ಟಾಸ್ ಚಿತ್ರವು
ಕರ್ನಾಟಕದಲ್ಲಿ ಒಟ್ಟು,
ಮೂವತ್ತು ಸಿಂಗಲ್ ಸ್ಕ್ರೀನ್,ನಲವತ್ತು ಮಲ್ಟಿಫ್ಲೆಕ್ಸ್ ನಲ್ಲಿ ರಿಲೀಸ್ ಆಗುತ್ತಿದ್ದು ಇನ್ನುಳಿದಂತೆ
ಹತ್ತು ಥಿಯೇಟರ್ ನಲ್ಲಿ ತುಳು ಭಾಷೆಯಲ್ಲಿ ಟಾಸ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ಹಂಚಿಕೆದಾರರು ಮಾಹಿತಿ ನೀಡಿದರು

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.