ನೀ ನಂಗೆ ಅಲ್ಲವಾ ನಿರ್ಮಾಪಕ,
ಜಯರಾಮ್ ದೇವಸಮುದ್ರ,ಸ್ಯಾಂಡಲ್ವುಡ್ ನಲ್ಲಿಯ ಎಲ್ಲ ಉದಯೋನ್ಮುಖ ಕಲಾವಿದರು,ನಮ್ಮ ಚಿತ್ರ ನೀ ನಂಗೆ ಅಲ್ಲವಾ ಹಾಡಿನ ಬಿಡುಗಡೆಗೆ ಬಂದು ಸಪೋರ್ಟ್ ಮಾಡಿದ್ದು,ತುಂಬಾ ಒಳ್ಳೇ ಬೆಳವಣಿಗೆ.ಪ್ರೇಕ್ಷಕರು ನೀಡುವ ಒಂದು ಸಣ್ಣ ಸಪೋರ್ಟ್ ನನ್ನಂತಹ ನಿರ್ಮಾಪಕನಿಗೆ ಇನ್ನೂ ಬಹಳ ಸಿನಿಮಾಗಳನ್ನು ಮಾಡೋದಕ್ಕೆ ಕಾರಣ ಆಗತ್ತೆ,ಐಶ್ವರ್ಯ ಸಿಂಧೋಗಿ ಸ್ಪೆಷಲ್ ಪಾತ್ರ ಮಾಡೋದಕ್ಕೆ ಒಪ್ಪಿದ್ದು ಗ್ರೇಟ್,ನಿರ್ದೇಶಕ ಬರೆದಿರುವ ಹಾಡಿಗೆ ಧ್ವನಿಯಾಗಿದ್ದು ಸ್ಯಾಂಡಲ್ವುಡನ ಅಧ್ಯಕ್ಷ ಶರಣ್,
ನಾಯಕ ನಟನಾಗುವ ರಾಹುಲ್ ಆರ್ಕುಟ್ ತುಂಬಾ ಪ್ರಾಮಿಸಿಂಗ್ ಆಗಿ ನಟಿಸಿದ್ದು ನನಗೆ ಹೆಮ್ಮೆ ಎಂದರು.
ನಿರ್ದೇಶಕ,ಮನೋಜ್ ಪೀ ನಡಲುಮನೆ
ಕಡ್ಡಿಪುಡಿ ಯಲ್ಲಿ ಶಿವಣ್ಣನ ಪಕ್ಕಾ ಸುಕ್ಕಾ ಸಾಂಗ್ ನನಗೆ ಫೇವರೆಟ್,ನಾನು ಸೂರಿ ಸರ್ ದೊಡ್ಡ ಫ್ಯಾನ್,ಅವರು ನನಗೆ ದ್ರೋಣಾಚಾರ್ಯರು..
ಜಿಗಿ ಜಿಕ್ಕಾ ಜಿಕ್ಕಾ ಜಿಗಿ ಜಿಕ್ಕಾ ಜಿಕ್ಕಾ ಹಾಡು ಬರೆದ ಕಾರಣ,
ನನ್ನ ಚಿತ್ರದ ನಾಯಕ ನಟನಿಗೆ ಇಂತಹ ಹಾಡು ಮಾಡಬೇಕು ಅನ್ನೋ ಆಸೆ ಇತ್ತು, ಅದು ನೆರವೇರಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಂದಿದ್ದ ಅಣ್ಣಯ್ಯ ಧಾರಾವಾಹಿ ಖ್ಯಾತಿಯ
ವಿಕಾಸ್ ಉತ್ತಯ್ಯ,ಸಣ್ಣ ರೂಮಲ್ಲಿ ನಾವೆಲ್ಲ ಒಟ್ಟಿಗೆ ಜರ್ನಿ ಶುರು ಮಾಡಿದವರು,ನಾನು ನಟನಾಗಿ ನಟಿಸ್ತಾ ಬಂದೇ,ಮನೋಜ್ ಟೆಕ್ನಿಕಲಿ ಮೂವ್ ಆದಾ,ಅವನಲ್ಲಿ ಒಬ್ಬ ಕಲ್ಟ್ ಡೈರೆಕ್ಟರ್ ಇದಾನೆ,
ಖಂಡಿತಾ ನೀ ನಂಗೆ ಅಲ್ಲವಾ ಒಳ್ಳೇ ಸಿನ್ಮಾವಾಗಿರತ್ತೆ ಅನ್ನೋ ಭರವಸೆ ಇದೆ ಎಂದು ಶುಭ ಹಾರೈಸಿದರು,
ನಂತರ ಮಾತನಾಡಿದ ಉತ್ತರ ಕರ್ನಾಟಕದ ಹುಲಿ,
ಸಿದ್ದು ಮೂಲಿಮನಿ..ಹದಿನಾಲ್ಕು ವರ್ಷ ಆಯ್ತು ಇಂಡಸ್ಟ್ರಿಗೆ ಬಂದು,ಯಾವ ನಿರ್ಮಾಕರು ಅವಕಾಶ ಇದೆ ಬನ್ನಿ ಎಂದು ಕರೆದಿಲ್ಲ,ನೀವೇ ಕರೆದಿದ್ದು ನಿಮ್ಮಂತಹ ಜನ ತುಂಬಾ ದೊಡ್ಡ ಹೆಸರು ಮಾಡಬೇಕು ಎಂದರು,
ಗುಲ್ಟು ಖ್ಯಾತಿಯನವೀನ್ ಶಂಕರ್,ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡಿ,ಇವತ್ತು ಲಾಂಚ್ ಆಗಿರೋ ಹಾಡಿನಾಗ್ ಎನರ್ಜಿ ಕಾಣಿಸ್ತಾ ಐತಿ, ಒಂದು ಸಿನ್ಮಾ ಮಾಡಿದ ಮೇಲೆ ತಕ್ಷಣ ಇನ್ನೊಂದು ಸಿನ್ಮಾ ಮಾಡೋದು ಸುಲಭ ಅಲ್ಲ,ಆದ್ರ ನಿರ್ಮಾಪಕ ಜಯರಾಮ್ ದೇವಸಮುದ್ರ ಹಂಗಲ್ಲ.ಅವ್ರ ಧೈರ್ಯ ಮೆಚ್ಚಬೇಕು,ಭಾಳ ಫ್ಯಾಷಿನೆಟ್ ನಿರ್ಮಾಪಕರು
ನೀ ನಂಗೆ ಅಲ್ಲವಾ ಚೆಂದ ಬಂದದ ಸಿನಿಮಾ ಚೊಲೋ ಆಗ್ತದ ಎಂದರು.

ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿಶಿರ
ನಮ್ಮಲ್ಲಿ ರೈಟರ್ ಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು,ಅವರಿಲ್ಲ ಅಂದ್ರೆ ನಾವಿಲ್ಲ ಸಿನ್ಮಾನು ಇಲ್ಲ.ಸಾಂಗ್ ಶೂಟ್ ಮಾಡೋ ಟೈಮಲ್ಲಿ ನಾನು ಅಲ್ಲೇ ಇದ್ದೆ, ಐಶ್ವರ್ಯ ಸಿಂಧೋಗಿ ಎನರ್ಜಿ ನೋಡಿ ಖುಷಿ ಆಯ್ತು ಎಂದರು.
ಬಿಗ್ ಬಾಸ್ ಮಾಜಿ ಸ್ಪರ್ಧಿ
ಐಶ್ವರ್ಯ,ಮಾತಾಡೋಕೆ ತುಂಬಾ ವಿಷ್ಯ ಇದೆ,ಡೈರೆಕ್ಟರ್ ಅಂಡ್ ಗೆಳೆಯರು ಮತ್ತು ನಾನು ತುಂಬಾ ಓಲ್ಡ್ ಫ್ರೆಂಡ್ಸ್ ,ನಾನಾಗ ಸೀರಿಯಲ್,ಸಿನ್ಮಾ ಮಾಡ್ತಾ ಇದ್ದೆ ಮನೋಜ್ ಕೂಡಾ ರೈಟಿಂಗ್ ನಲ್ಲಿ ಬ್ಯುಸಿ ಇದ್ದ ಸಿನ್ಮಾ ಮಾಡೋ ಆಸೆ ತುಂಬಾ ಇತ್ತು, ನೀ ನಂಗೆ ಅಲ್ಲವಾ ಮೂಲಕ ಆತ ಡೈರೆಕ್ಟರ್ ಆದ ಅವ್ನು ಗೆಲ್ಲುತ್ತಾನೆ.
ಪ್ರತಿಭಾವಂತ ನಟ ಗಿರಿ ಶಿವಣ್ಣ ಕಾಮಿಡಿ ಪಂಚ್ ಸಖತ್ ಆಗಿತ್ತು,
ನೀ ನಂಗೆ ಅಲ್ಲವಾ,ನಿರ್ದೇಶಕ ಸಖತ್ ಟ್ಯಾಲೆಂಟ್ ಇರೋ ವ್ಯಕ್ತಿ,ಮನೋಜ್ ಪೀ ನಡಲುಮನೆ ಬೇಸಿಕಲಿ ಒಳ್ಳೇ ರೈಟರ್.
ಒಬ್ಬ ಒಳ್ಳೇ ರೈಟರ್ ಮಾತ್ರ ತುಂಬಾ ಬ್ರಿಲಿಯಂಟ್ ಡೈರೆಕ್ಟರ್,ಸ್ಪೆಷಲ್ ಪಾತ್ರ ನೋಡೋರಿಗೆ ಮಜಾ ಕೊಡತ್ತೆ ಎಂದು ಕ್ರೆಡಿಟ್ ಕೊಟ್ಟರು.
ನಾಯಕ ನಟ ರಾಹುಲ್ ಆರ್ಕುಟ್
ಇದು ನನ್ನ ಮೊದಲ ಚಿತ್ರ,ನಾನೊಬ್ಬ ಒಳ್ಳೆ ನಟ ಅಂತಾ ಪ್ರೂವ್ ಮಾಡೋಕೆ ಟ್ರೈ ಮಾಡಿದ್ದೀನಿ ಅಂಡ್ ಟ್ರೈ ಮಾಡ್ತಾನೆ ಇರ್ತೀನಿ,ನಾನು ಒಳ್ಳೆ ಡ್ಯಾನ್ಸರ್ ಅಲ್ಲ,ನನ್ನಿಂದ ಡಾನ್ಸ್ ಮಾಡಿಸಿದ್ದು ಕೊರಿಯೋಗ್ರಾಪರ್.ಇದರ ಕ್ರೆಡಿಟ್ ಮಾಸ್ಟರ್ ಗೆ ಸಲ್ಲಬೇಕು ಎಂದು ಹೇಳಿದರು.
ನೀ ನಂಗೆ ಅಲ್ಲವಾ ಚಿತ್ರದ ಸಂಗೀತ ನಿರ್ದೇಶಕ ಮಾತನಾಡಿ,
ಚೆಂದನವನ ಅತ್ಯಂತ ಶ್ರೇಷ್ಠ ತಂತ್ರಜ್ಞರನ್ನು ಹೊಂದಿರುವ ಉದ್ಯಮ,ದಿಗ್ಗಜರು ಮಾಡಿ ಹೋದ ಕೆಲಸಗಳು ನಮ್ಮಂತಹ ಯುವಕರಿಗೆ ಸ್ಪೂರ್ತಿ ಎಂದರು.
ರಾಮ್ ಮಾಸ್ಟರ್
ಡಾನ್ಸ್ ಮಾಸ್ಟರ್ ಮಾತಲ್ಲಿ,ಸಿನಿಮಾ ಪ್ರೀತಿ ಇತ್ತು,
ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಕೆಲಸ ಮಾಡ್ತಾ ಇದ್ದೀನಿ,
ಚಿನ್ನಿ ಪ್ರಕಾಶ್ ಮಾಸ್ಟರ್ ಹತ್ರ ಕೆಲಸ ಮಾಡಿದ್ದೀನಿ,ಇಂತದೊಂದು ಅವಕಾಶ ಸಿಕ್ಕಿರೋದು ನನ್ನ ಪುಣ್ಯ.ನೀ ನಂಗೆ ಅಲ್ಲವಾ ನಮಗೆಲ್ಲ ಬ್ರೇಕ್ ಕೊಡತ್ತೆ ಎಂದು ತಂಡಕ್ಕೆ ಮತ್ತಷ್ಟು ಎನರ್ಜಿ ಕೊಟ್ಟರು.
ರವೀ ಸಾಸನೂರ್
MasterNews365

