Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಾವೇ ನಂಬರ್ 1 ಗುರು…!!
- ಸಿನಿಮಾ - ಸೀರಿಯಲ್

ನಾವೇ ನಂಬರ್ 1 ಗುರು…!!

ಕನ್ನಡ ಕಿರುತೆರೆ ಇತಿಹಾಸದಲ್ಲಿ ಧಾರವಾಹಿಗಳು ರಿಯಾಲಿಟಿ ಶೋಗಳು ತನ್ನದೇ ಆದಂತ ಗಟ್ಟಿ ಕಂಟೆಂಟ್ ನಿಂದಾಗಿ, ನೋಡುವರ ಮನಸ್ಸನ್ನು ಗೆಲ್ಲುವುದರ ಜೊತೆಗೆ, ಆಯಾ ವಾಹಿನಿಗಳಿಗೆ ಒಳ್ಳೆಯ ಟಿಆರ್‌ಪಿಯನ್ನು ಸಹ ಕೊಟ್ಟಿದೆ. ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಅದು ಬಿಗ್ ಬಾಸ್. ಈಗಾಗಲೇ ಬಿಗ್ ಬಾಸ್ ಶುರುವಾಗಿ ನಾಲ್ಕು ದಿನಗಳು ಕಳೆದಿವೆ, ವಿಶೇಷವಾಗಿ ಬಿಗ್ ಬಾಸ್ ಸೀಸನ್ 13 ಶುರುವಾಗುವುದಕ್ಕೂ ಮುಂಚೆ ಭಾರಿ ಕುತೂಹಲವನ್ನ ತನ್ನ ಪ್ರಮೋ ಕಂಟೆಂಟ್ ಮೂಲಕ ಕೊಟ್ಟಿತ್ತು, ಈಗ ಬಿಗ್ ಬಾಸ್ […]

ಕನ್ನಡ ಕಿರುತೆರೆ ಇತಿಹಾಸದಲ್ಲಿ ಧಾರವಾಹಿಗಳು ರಿಯಾಲಿಟಿ ಶೋಗಳು ತನ್ನದೇ ಆದಂತ ಗಟ್ಟಿ ಕಂಟೆಂಟ್ ನಿಂದಾಗಿ, ನೋಡುವರ ಮನಸ್ಸನ್ನು ಗೆಲ್ಲುವುದರ ಜೊತೆಗೆ, ಆಯಾ ವಾಹಿನಿಗಳಿಗೆ ಒಳ್ಳೆಯ ಟಿಆರ್‌ಪಿಯನ್ನು ಸಹ ಕೊಟ್ಟಿದೆ.

ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಅದು ಬಿಗ್ ಬಾಸ್. ಈಗಾಗಲೇ ಬಿಗ್ ಬಾಸ್ ಶುರುವಾಗಿ ನಾಲ್ಕು ದಿನಗಳು ಕಳೆದಿವೆ, ವಿಶೇಷವಾಗಿ ಬಿಗ್ ಬಾಸ್ ಸೀಸನ್ 13 ಶುರುವಾಗುವುದಕ್ಕೂ ಮುಂಚೆ ಭಾರಿ ಕುತೂಹಲವನ್ನ ತನ್ನ ಪ್ರಮೋ ಕಂಟೆಂಟ್ ಮೂಲಕ ಕೊಟ್ಟಿತ್ತು, ಈಗ ಬಿಗ್ ಬಾಸ್ ತಂಡದ ಕಡೆಯಿಂದ ಮತ್ತೊಂದು ಅಪ್ಡೇಟ್ ಇದೆ.

ಆರಂಭವಾದ ಮೊದಲ ವಾರದಲ್ಲೇ ನಂ.1 ಸ್ಥಾನದಲ್ಲಿ ಬಿಗ್ ಬಾಸ್

Endemol Shine Indiaಯ ‘ಬಿಗ್ ಬಾಸ್ ಕನ್ನಡ’ JioHotstarನಲ್ಲಿ ನಂ.1 ಸ್ಥಾನಕ್ಕೆ — ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮತ್ತಷ್ಟು ಬಲಪಡಿಸಿದ ಶೋ

Endemol Shine India ನಿರ್ಮಾಣದ, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, JioHotstarನ ಕನ್ನಡ ವಿಭಾಗದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.

ಇತ್ತೀಚಿನ ರ‍್ಯಾಂಕಿಂಗ್, ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಬಗ್ಗೆ ಪ್ರೇಕ್ಷಕರಲ್ಲಿ ಮೂಡಿರುವ ಅಪಾರ ಆಸಕ್ತಿ ಹಾಗೂ ಎಂಗೇಜ್‌ಮೆಂಟ್‌ಗೆ ಸಾಕ್ಷಿಯಾಗಿದೆ. ಟೆಲಿವಿಷನ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮವು ನಿರಂತರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.

JioHotstarನಲ್ಲಿ ನಂ.1 ಸ್ಥಾನ ಪಡೆದಿರುವುದು, ಕನ್ನಡ ಮಾರುಕಟ್ಟೆಯ ಅತ್ಯಂತ ಪ್ರಭಾವಶಾಲಿ ರಿಯಾಲಿಟಿ ಎಂಟರ್‌ಟೈನ್‌ಮೆಂಟ್ ಕಾರ್ಯಕ್ರಮಗಳಲ್ಲಿ ‘ಬಿಗ್ ಬಾಸ್ ಕನ್ನಡ’ ಕೂಡ ಒಂದು ಎಂಬುದನ್ನು ಮತ್ತಷ್ಟು ದೃಢಪಡಿಸಿದೆ. ಕರ್ನಾಟಕದಾದ್ಯಂತ ಪ್ರೇಕ್ಷಕರೊಂದಿಗೆ ಕಾರ್ಯಕ್ರಮ ಹೊಂದಿರುವ ಆಳವಾದ ಹಾಗೂ ನಿರಂತರ ಸಂಪರ್ಕವನ್ನೂ ಇದು ಪ್ರತಿಬಿಂಬಿಸುತ್ತದೆ.

ಈ ಸಾಧನೆಯು Banijay Asia ಸಂಸ್ಥೆಯ ಭಾಗವಾಗಿರುವ Endemol Shine Indiaಯ ಸಾಮರ್ಥ್ಯವನ್ನೂ ಮತ್ತೊಮ್ಮೆ ಎತ್ತಿ ತೋರಿಸಿದೆ. ಜಾಗತಿಕವಾಗಿ ಯಶಸ್ವಿಯಾದ ಫಾರ್ಮ್ಯಾಟ್‌ಗಳನ್ನು ಭಾರತದ ವಿವಿಧ ಭಾಷೆ ಹಾಗೂ ಪ್ರೇಕ್ಷಕರಿಗೆ ಹೊಂದುವಂತೆ ರೂಪಿಸುವ ಪರಿಣತಿಯನ್ನು ಹೊಂದಿರುವ Endemol Shine India, ಭಾರತದಲ್ಲಿ ‘ಬಿಗ್ ಬಾಸ್’ ಫ್ರಾಂಚೈಸಿಯನ್ನು ಅತ್ಯಂತ ಪ್ರಭಾವಶಾಲಿ ಮಲ್ಟಿ-ಮಾರ್ಕೆಟ್ ಎಂಟರ್‌ಟೈನ್‌ಮೆಂಟ್ ಫ್ರಾಂಚೈಸಿಯಾಗಿ ರೂಪಿಸಿದೆ.

ಪ್ರಸ್ತುತ JioHotstarನಲ್ಲಿ ಹಲವು ಭಾಷೆಗಳ ವಿಭಾಗಗಳಲ್ಲಿ ‘ಬಿಗ್ ಬಾಸ್’ ನಂ.1 ಸ್ಥಾನವನ್ನು ಪಡೆದುಕೊಂಡಿರುವುದು, ಈ ಫ್ರಾಂಚೈಸಿಗಿರುವ ಅಸಾಧಾರಣ ಪ್ಯಾನ್-ಇಂಡಿಯಾ ಜನಪ್ರಿಯತೆಯನ್ನು ತೋರಿಸುತ್ತದೆ. ಇದರೊಂದಿಗೆ ‘ಬಿಗ್ ಬಾಸ್ ಕನ್ನಡ’ ನಂ.1 ಸ್ಥಾನಕ್ಕೇರುವ ಮೂಲಕ ಕನ್ನಡ ಪ್ರೇಕ್ಷಕರ ಮೇಲಿನ ತನ್ನ ಬಲಿಷ್ಠ ಹಿಡಿತವನ್ನು ಮತ್ತಷ್ಟು ಸಾಬೀತುಪಡಿಸಿದೆ.

ಈ ವರ್ಷ ಆರಂಭಗೊಂಡಿರುವ ‘ಬಿಗ್ ಬಾಸ್ ಸೌತ್ ಕಾರ್ನಿವಲ್’ ದಕ್ಷಿಣ ಭಾರತದ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸುತ್ತಿದೆ. ವಿಶೇಷವೆಂದರೆ, ನಾಲ್ಕು ಭಾಷೆಗಳ ‘ಬಿಗ್ ಬಾಸ್’ ಕಾರ್ಯಕ್ರಮಗಳು ಒಂದೇ ದಿನ ಆರಂಭಗೊಂಡಿವೆ.

ಈ ವಿಶೇಷ ಆರಂಭಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ಆಯಾ ಭಾಷೆಗಳ ‘ಬಿಗ್ ಬಾಸ್’ ಕಾರ್ಯಕ್ರಮಗಳ ಜನಪ್ರಿಯ ನಿರೂಪಕರಾದ ಮೋಹನ್‌ಲಾಲ್ (ಮಲಯಾಳಂ), ನಾಗಾರ್ಜುನ (ತೆಲುಗು), ಕಿಚ್ಚ ಸುದೀಪ್ (ಕನ್ನಡ) ಹಾಗೂ ವಿಜಯ್ ಸೇತುಪತಿ (ತಮಿಳು) ಅವರು ತಮ್ಮ ತಮ್ಮ ಕಾರ್ಯಕ್ರಮಗಳಿಂದಲೇ ಒಟ್ಟಿಗೆ ಕಾಣಿಸಿಕೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ‘ಬಿಗ್ ಬಾಸ್ ಸೌತ್ ಕಾರ್ನಿವಲ್’ನ ಭರ್ಜರಿ ಯಶಸ್ಸಿಗೆ ಶುಭ ಹಾರೈಸಿದರು..

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.