ಪ್ರಪಂಚ ಏನು ಮಾಡಿಲ್ಲ ಅದು ಮಾಯೆ ಮತ್ತು ಹೆಂಗ್ ಮಾಡಬೇಕು?
"ತನು ದಂಡಿಸಬೇಡ ಮನವ ನಿಲ್ಲಿಸಬೇಡ I
ಧನವ ನೀರಬೇಡ ಮನೆಮಾರುದೊರೆದು II
ವನವಾಸ ಬೇಡ ತನಗಿನೀತು ತತ್ವಜ್ಞಾನ I ಸಂ
ಜನಿಸಲಘವೆಲ್ಲವನು ಕೆಡಿಪುದದರಿಂದ II "
"ನೀ ಎಲ್ಲಿ ದೇಹದಂಡನೆ ಮಾಡಬೇಡ, ಮನಸ್ಸಿಂದ ಸಿಟ್ಟಿಗೆದ್ದು ಯೋಗ ಮಾಡಕ್ಕ ಹೋಗಬೇಡ, ಮನಿ ಮಾರ ಬಿಟ್ಟು ಅರಣ್ಯಕ್ಕೆ ಹೋಗಬೇಡ, ತನಗ ತತ್ವ ಜ್ಞಾನ ಆಯಿತು ಅಂದ್ರೆ, ಬ್ರಹ್ಮ ಜ್ಞಾನ ಆಯಿತು ಅಂದ್ರೆ, ಈ ಪ್ರಪಂಚದಿಂದ ಎಲ್ಲವೂ ತನ್ನ ತಾನೇ ಬಿಡುಗಡೆ ಆಗ್ತದ. ಹಿಂಗ ಈ ಪದ ಬಿಡಿಸಿ ಹೇಳಿಬಿಟ್ಟೆ ಎಲ್ಲರೂ ಸಂತಸದಿಂದ ಕೂಗು ಹೊಡದೆ ಬಿಟ್ಟರು. ನಾನು ಆ ಕಡೆ ಹೋಗಿ ಕುಳಿತುಕೊಂಡೆ" ಆ ಶರಣಗ ಸಿಟ್ಟು ಬಂದು ಬಿಡ್ತು ನನ್ನ ವಿರುದ್ಧ ಹೇಳಿದ್ನಲ್ಲ ಇವ ಅಂತ ತಪ್ಪು ತಿಳ್ಕೊಂಡ ಪೆಟ್ಟಿಗೆ ಹತ್ತ ಅಂತ ಜೋರ್ ಮಾಡಿದ್ರು ಪೆಟ್ಟಿಗೆ ಮ್ಯಾಗ ಹತ್ತಲಾರದ ಮನುಷ್ಯ ಅವ. ನಾನು ಹೆಗಲ ಮ್ಯಾಗ ಕೆಂಪ ಟವೆಲ್ಲ ಹಾಕಿದ್ದನ್ನು ನೋಡಿ ಇವ ಸ್ವಾಮಿಗೋಳ ಪೈಕಿ ಇರಬೇಕು ಅಂತ ತಿಳಕೊಂಡು -
"ಸ್ವಾಮಿಗಳ ಅಂದ ... "
"ಯಾಕ್ರೀ ಅಂದೆ ..."
"ನೀವು ಬರಬೇಕರಿ ಅಂದ. "
"ಬಂದ್ಯಾ " ಅಂದವನೇ ಎದ್ದು ಹೋದೆ. ಅವಾ ನನಗ ನೀವೇ ಹಾಡಬೇಕ್ರಿ "ಅಂದ. ಅದಕ್ಕೆ ನಾನು
"ಯಾಕಾಗಲೊಲ್ಲದು ಅಂದೆ "
ಅಂವಾ ಸಂಗೀತ ಬಲ್ಲವಾ ನಮಗೆ ಸಂಗೀತ ಬರುವುದಿಲ್ಲ. ಆದರೆ ತತ್ವದ ಅನುಭವ ಅದ. ರಾಗ ಹಿಡಿದು ರಾಗ ಮಾಡಿದ. ನಾನೂ ಹಿಂದ ರಾಗ ಮಾಡಿದ್ಯಾ ಪದ ಹಿಡಿದಿನ್ರಿ ಕ್ರಿಯಾಸ್ಥಲದೊಳಗ ಪದ ಹಿಡಿದ. "
"ಸ್ವಲ್ಪ ತಡೆಯಿರಿ "ಅಂದೆ,
"ಯಾಕ್ರೀ ....?"
"ಎಲ್ಲಿ ಹೋಗೇದ, ನೀವು ಎಲ್ಲಿ ಹಾಡ್ತಿರಿ " ಅಂದೆ .
ಕೂಡಲೇ ಮಿಣಜಗಿಯಾಂವ ಸ್ವಾಮಿ ..ಅವನ ಮೇಲೆ ಬಹಳ ಪ್ರೇಮ. ಆತ ಮದ್ಯ ಪ್ರವೇಶ ಮಾಡಿ -
" ಏಯ್ ನಿನಗ್ಯಾಕ ಬೇಕು ನೀ ಸುಮ್ಮನೆ ಹಾಡು " ಅಂದ ಅಂವಾ .
"ಸ್ವಾಮಿ ನಿನಗೆ ತಿಳಿಯು ಮಾತಲ್ಲ ನೀ ಸುಮ್ಮ ನಿಂದ್ರ "
ನಾನು 5 ಮಿನಿಟ್ ಗಪ್ ಕುಂತೇರಿ . ಅವನು ಶಾಣೆ ಹುಡುಕಾಡಿ ಪದ ಹಿಡಿದ ಅದು ಜ್ಞಾನದಾಗ ಹಿಡದ. ಅಂದಾ ಎದಿ ಒಡದನೋ ಏನ ಮಾಡಿದನೋ ಏನೋ. ಪದದಾಗಿನ ನುಡಿ ಹಾರಾಕ್ಕ ಹತ್ತಿದು. ನನಗ ಪದಾ ಬರ್ತಿತ್ತು ನಾ ಎತ್ತೆತ್ತಿ ಕೊಟ್ಟೆ ಅವನಿಗೆ ಅಮಂಗಳ ಅನಿಸಿತು. ಆ ಒಂದು ಪದಾ ಹಾಡಿ ಮುಗಿಸಿದ ನಂತರ ಚಹಾದಂಗಡಿಗೆ ಹೋದಿವ್ರಿ. ಅವನ ಜೋಡಿ ಇದ್ದವನಿಗೆ ಕರಿಲಾಕ್ಕ ಕಳಿಸಿದ.
"ಹಿಂಗ್ರಿ ನಮ್ ಸರ್ ಬಾ ಅಂತರ್ರಿ ಬರ್ರಿ " ಅಂತ ಕರೆದ ಹೋಗಿರಿ, ನಾವು ಮೂರು ಮಂದಿ ಇದ್ದೆವು. ನಾವೂ ಹೋದೆವು.
"ಬರ್ರಿ ...ಬರ್ರಿ ... ನಮಸ್ಕಾರ. "
" ನಮಸ್ಕಾರಿ "
" ಯಾವೂರವ್ರಿ " ?
" ನಾವು ಮುದ್ದೇಬಿಹಾಳ ತಾಲೂಕಿನ ಹಳ್ಳೂರಿನವರು"
"ಅದೇ ಅಂತೀನಿ. ಆಕಡೆ ಮಂದಿ ಶ್ಯಾಣ್ಯಾರು. ಈ ಕಡೆಯವರು ಏನ.."
"ನೀವೂ ಅಲ್ಲಿದವರಿ "
" ನೀವು ಹೇಳೂದು ಖರೇನ ನಾನೂ ಸುಮಾರು 30 ವರ್ಷ ತಿಂಥಣಿಗೆ ಬರಲಾಕ್ಕ ಹತ್ತಿ. ಈ ತಿಂಥಣಿಗೆ ನಾನು ಶಿಖಾಮಣಿ ಅಂತ ಪಟ್ಟಾ ಕಟಕೊಂಡಿದ್ದೆ. ಆದ್ರ ಈ ಹೊತ್ತು ನನ್ನ ಮಾರ್ಕಸೆಲ್ಲ ಕಳೆದ ಹೊದೂರಿ "ಅಂದ,
"ಹಂಗ್ಯಾಂಗ್ರಿ ಸರ್, ನೀವು ಶಾಣ್ಯಾರು "
" ನೀನೇನೂ ಹೇಳಬ್ಯಾಡ್ರಿ ನನ್ನ ಮಾರ್ಕ್ಸ್ ನೂ ಮುಂದು ನೋಡ್ರಿ " ಎಂದು ಹಳಹಳಿ ಮಾಡಿಕೊಂಡ ನಂತರ ಚೋಡಾ ಚಹಾತರಿಸಿ ತಿನ್ನಿಸಿ ಮುರ್ಯಾದಿ ಮಾಡಿ ನಮಗ ಕಳಿಸಿಕೊಟ್ಟ ಅಂತ ಹೇಳಿ, ಜ್ಞಾನದಲ್ಲಿ ತಾವು ಕಂಡ ಸಂತಸದ ಕ್ಷಣಗಳನ್ನು ಮೆಲಕು ಹಾಕಿದರು ಬಸಪ್ಪ ಶರಣರು.

