Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೃದಯ ತಟ್ಟುವ ಕಹಾನಿ — *A DATE*
- ರಿವ್ಯೂ - ಸಿನಿಮಾ

ಹೃದಯ ತಟ್ಟುವ ಕಹಾನಿ — *A DATE*

ಚಿತ್ರ : A DATE ನಿರ್ದೇಶನ : ವಿಮಲ್ ರಾಜ್ ಎನ್ ನಿರ್ಮಾಪಕರು : ವೀಕೆಂಡ್ ಶಾರ್ಟ್ ಸ್ಟುಡಿಯೋಸ್ ಕಲಾವಿದರು : ಸುಜನಿತ್ ಶೆಟ್ಟಿ – ಅಶ್ವಿನಿ ಶಣೈ ಸುಂದರವಾದ ಹುಡುಗಿ ಒಬ್ಬಳನ್ನು ಆಕೆಗಿಂತಲೂ ಸುಂದರವಾದ ಕರ್ನಾಟಕದ ಹುಡುಗ ಕಾರ್ತಿಕ್ ,ತನ್ನ ಜೊತೆಗೆ ಒಂದು ದಿನ DATE ಗೆ ಅಂತ ಕರೆದುಕೊಂಡು ಹೋಗುತ್ತಾನೆ,ಹುಡುಗಿ ಮೂಲ ಪಂಜಾಬ್,ಅಪ್ಪ ಪಂಜಾಬಿ ಆದರೆ ಆಕೆಯ ಅಮ್ಮ ಕರ್ನಾಟಕದವಳು,ಆ ಹುಡುಗಿಯ ಹೆಸರು ಮೋನಿಷಾ ಆಕೆಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ, ಅಷ್ಟಕ್ಕೂ ಮೋನಿಷಾ […]

ಚಿತ್ರ : A DATE

ನಿರ್ದೇಶನ : ವಿಮಲ್ ರಾಜ್ ಎನ್

ನಿರ್ಮಾಪಕರು : ವೀಕೆಂಡ್ ಶಾರ್ಟ್ ಸ್ಟುಡಿಯೋಸ್

ಕಲಾವಿದರು : ಸುಜನಿತ್ ಶೆಟ್ಟಿ – ಅಶ್ವಿನಿ ಶಣೈ

ಸುಂದರವಾದ ಹುಡುಗಿ ಒಬ್ಬಳನ್ನು ಆಕೆಗಿಂತಲೂ ಸುಂದರವಾದ ಕರ್ನಾಟಕದ ಹುಡುಗ ಕಾರ್ತಿಕ್ ,ತನ್ನ ಜೊತೆಗೆ ಒಂದು ದಿನ DATE ಗೆ ಅಂತ ಕರೆದುಕೊಂಡು ಹೋಗುತ್ತಾನೆ,ಹುಡುಗಿ ಮೂಲ ಪಂಜಾಬ್,ಅಪ್ಪ ಪಂಜಾಬಿ ಆದರೆ ಆಕೆಯ ಅಮ್ಮ ಕರ್ನಾಟಕದವಳು,ಆ ಹುಡುಗಿಯ ಹೆಸರು ಮೋನಿಷಾ ಆಕೆಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ, ಅಷ್ಟಕ್ಕೂ ಮೋನಿಷಾ ಮತ್ತು ಕಾರ್ತಿಕ್ ಭೇಟಿಯಾಗಿದ್ದು ಎಲ್ಲಿ ??

ಬೆಂಗಳೂರಿನಲ್ಲಿರುವ ಸಾಫ್ಟ್ ವೇರ್ ಕಂಪನಿಯೊಂದರ ಪ್ರಾಜೆಕ್ಟ್ ವರ್ಕ್ ಮಾಡಲು ಬಂದಂತಹ ಮೋನಿಷಾ,(ಅಶ್ವಿನಿ ಶಣೈ ) ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ( ಸುಜನಿತ್ ಶೆಟ್ಟಿ ) ಇಬ್ಬರೂ ಸಹೋದ್ಯೋಗಿಗಳು.

ಹೀಗೆ ಒಂದು ದಿನ ನಾಯಕ ಕಾರ್ತಿಕ್,
ಬಂದ ಕೆಲಸ ಮುಗಿಸಿಮಾರನೆಯ ದಿನ ಸಂಜೆ ವಾಪಸ್ ತನ್ನ ಊರಿಗೆ ಹೋಗುತ್ತಿರುವ ಮೋನಿಷಾಳನ್ನು, ಬೆಳಗ್ಗೆಯಿಂದ ಸಂಜೆ ತನಕ ನನ್ನ ಜೊತೆ ಇರಿ ಎಂದು A DATE ಗೆಂದು ಕರೆದುಕೊಂಡು ಹೋಗುತ್ತಾನೆ.ಕಾರ್ತಿಕ್ ಜೊತೆಗೆ ಆತನ ಬೈಕ್ ಹಿಂದೆ ಕೂತುಕೊಂಡು ಬೆಂಗಳೂರನ್ನು ಒಂದು ಸುತ್ತು ಹಾಕುವ ಮೋನಿಷಾ ಗೆ ಒಂದು ಫ್ಲ್ಯಾಷ್ ಬ್ಯಾಕ್ ಇರುತ್ತದೆ,ಅದು ಆಕೆಯನ್ನು ಚಿತ್ರದ ದ್ವಿತೀಯಾರ್ಧದಲ್ಲಿ ಬಹಳಷ್ಟು ಡಿಸ್ಟರ್ಬ್ ಮಾಡುತ್ತದೆ ಆ ಕಥೆ ಏನು ಅನ್ನೋದನ್ನ, ಚಿತ್ರ ನೋಡುವ ವೀಕ್ಷಕರಿಗೆ ಕನೆಕ್ಟ್ ಆಗ್ತಾ ಹೋಗುತ್ತದೆ.

ನನ್ನ ಭಾಷೆ ಹಿಂದಿ ದೊಡ್ಡದು ಎನ್ನುವ ಮೋನಿಷಾ,ನನ್ನ ಭಾಷೆ ಕನ್ನಡ ಹಿಂದಿಗಿಂತಲೂ ದೊಡ್ಡದು ಎನ್ನುವ ನಾಯಕ ಕಾರ್ತಿಕ್,ಎಲ್ಲ ಕನ್ನಡಿಗರಿಗೂ ತುಂಬಾ ಆಪ್ತವೆನಿಸುತ್ತಾರೆ.

ಬೆಳಗ್ಗೆಯಿಂದ ಸಂಜೆಯ ತನಕ ಕಾರ್ತಿಕ್ ಜೊತೆ ಸುತ್ತಾಡುವಾಗ, ಆತನ ಜೊತೆ ಟೈಂಪಾಸ್ ಮಾಡುವ ಸಮಯದಲ್ಲಿ ಮೋನಿಷಾ ತುಂಬಾ ಖುಷಿಯಿಂದ ಇರುತ್ತಾಳೆ. ಈ ಖುಷಿಯ ಮಧ್ಯೆ ಆಗಾಗ ಆತನ ಮೇಲೆ ಮುನಿಸು ಸಿಟ್ಟು ಆಗುತ್ತಾಳೆ,ಅದೇ ರೀತಿ ಕಾರ್ತಿಕ್ ಕೂಡ.

ಕಾರ್ತಿಕ್ ಮತ್ತು ಮೋನಿಷಾ ಕಳೆಯುವ ಆ ಒಂದು ದಿನದ ಕೆಲವು ಘಟ್ಟಗಳನ್ನ ನಿರ್ದೇಶಕ ವಿಮಲ್ ರಾಜ್ ಎನ್ ಚಾಪ್ಟರ್ ವೈಸ್ ತೋರಿಸಿದ್ದಾರೆ ಅದು ತುಂಬಾ ಇಂಟರೆಸ್ಟಿಂಗ್ ಆಗಿಯೂ ಕೂಡ ತೆರೆಯ ಮೇಲೆ ಕಾಣಿಸಿದೆ.

ಪ್ಲಾನ್ ಪ್ರಕಾರ ಬೆಳಗ್ಗೆಯಿಂದ ಸಂಜೆಯ ತನಕ ಮೋನಿಷಾಳನ್ನು ತುಂಬಾ ಖುಷಿಯಿಂದ ನೋಡಿಕೊಳ್ಳುವ ಕಾರ್ತಿಕ್,ಆಕೆ ನಾಯಕನಿಗೆ Goodbye ಹೇಳುವ ಹೊತ್ತಿಗೆ ಮೋನಿಷಾ ಮೇಲೆ ಲವ್ ಆಗಿರುವ ಸೂಚನೆ ಕಾರ್ತಿಕ್ ನಿಂದ ಸಿಗುವ ಹೊತ್ತಿಗೆ, ಮೋನಿಷಾಳ ಫೋನ್ಗೆ ಹಳೆ ಬಾಯ್ ಫ್ರೆಂಡ್ ಅರ್ಜುನ್ ಕಾಲಿಂಗ್ ಅಂತಾ Display ಆದಾಗ,

ಮೋನಿಷಾ ಮುಖದಲ್ಲಿ ಒಂದು ಕಡೆ ಮಂದಹಾಸ,ಮತ್ತೊಂದು ಕಡೆ ನಾಯಕ ಕಾರ್ತಿಕ್ ಮುಖದಲ್ಲಿ ಒಂತರ ಭಯ.

A DATE ಚಿತ್ರದ ಕ್ಲೈಮಾಕ್ಸ್ ಮಾತ್ರ ಸೂಪರ್

A DATE ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರ ಅಭಿನಯ,ನೋಡುಗರ ಮನಸ್ಸನ್ನು ಕ್ಯಾಪ್ಚರ್ ಮಾಡುತ್ತದೆ,ಇಬ್ಬರು ಲೀಲಾಜಾಲವಾಗಿ ನಡೆಸಿದ್ದಾರೆ

ನಾಯಕನಾಗಿ ಕಾಣಿಸಿಕೊಂಡಿರುವ ಸುಜನಿತ್ ಶೆಟ್ಟಿ ನಟನೆ ಮಾತ್ರ ಹೈಕ್ಲಾಸ್, ಇಂತಹ ಕಲಾವಿದರಿಗೆ ಕನ್ನಡದಲ್ಲಿ ಬಹಳಷ್ಟು ಅವಕಾಶಗಳು ಸಿಕ್ಕರೆ ಅದು ಉತ್ತಮ ಎನ್ನುವುದು ನಮ್ಮ ಆಶಯ,

ನಾಯಕಿಯಾಗಿ ಕಾಣಿಸಿಕೊಂಡಿರುವ ಅಶ್ವಿನಿ ತುಂಬಾ ಮುದ್ದಾಗಿ ಕಂಡಿದ್ದಷ್ಟೇ ಅಲ್ಲದೆ ತುಂಬಾ ಪ್ರಾಮಿಸಿಂಗ್ ಆಗಿ ತಮ್ಮ ಪಾತ್ರವನ್ನು ಕ್ಯಾರಿ ಮಾಡಿದ್ದಾರೆ ಎಲ್ಲ ಹುಡುಗರ ಹಾರ್ಟನ್ನ ಚೋರಿ ಮಾಡಲಿದ್ದಾರೆ.

ನಾಯಕ ಮತ್ತು ನಾಯಕಿಯ ಜೊತೆ ಜೊತೆಗೆ ಚಿತ್ರವನ್ನ ತುಂಬಾ ಅದ್ಭುತವಾಗಿ ಮೂಡಿ ಬರುವದರಲ್ಲಿ, ನನಗೆ ಇನ್ನೂ ಮೂರು ಜನ ನಾಯಕರು ಕಾಣಸಿಗುತ್ತಾರೆ,
ಚಿತ್ರ ನಿರ್ದೇಶಕ, ಛಾಯಾಗ್ರಹಕ ಮತ್ತು ಸಂಗೀತ ನಿರ್ದೇಶಕ.

ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
A DATE ಚಿತ್ರದ ಬಗ್ಗೆ ಮನಸಾರೆ ಮಾತಾಡಿದ್ದು,ಚಿತ್ರ ನೋಡಿದ ನಂತರ ನನಗೂ ಸಹ ನಿಜ ಅನಿಸಿತು.

ಹೊಸ ತಂಡಗಳು ಹೊಸ ಕಲಾವಿದರು ಹೊಸ ನಿರ್ದೇಶಕರು ಹೊಸ ನಿರ್ಮಾಪಕರು ಪ್ಲಾನ್ ಪ್ರಕಾರ ಮಾಡಿಕೊಂಡರೆ ಇಷ್ಟು ಚಂದದ ಚಿತ್ರವನ್ನ ಮಾಡಬಹುದು ಎಂದು,
A DATE ಚಿತ್ರತಂಡ ಮಾಡಿ ತೋರಿಸಿದೆ.

ಇದೊಂದು ಸದಭಿರುಚಿಯ ಚಿತ್ರ, ಇದರಲ್ಲಿ ಪ್ರೀತಿ ಪ್ರೇಮ ಮತ್ತು ಸ್ವಲ್ಪ ಪ್ರಣಯ ಇದೆ,ನೋಡಬಹುದು ಎಂಜಾಯ್ ಮಾಡಬಹುದು ವಿಶೇಷವಾಗಿ ಹೇಳೋದಾದರೆ ಕಾಲೇಜ್ ಹುಡುಗರು, ಹುಡುಗಿಯರಿಗೆ ಇದು ಬಹುಬೇಗ ಕನೆಕ್ಟ್ ಆಗುತ್ತದೆ.

ರೇಟಿಂಗ್ 3.5 / 5

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.