"ನಿನ್ನ ಮಾತು ಯಾರವ ಮೀರಾಂವ ಹೇಳು " ಅಂದಾರ . ಅವರಿಗೆ ಒಳ್ಳೆ ಮಾತಿಲೇ ಹೇಳು ಕೇಳಲಿಲ್ಲಂದ್ರ ಸುತಿ ಚೌಡ್ಕಿ ಎಲ್ಲಾ ಕಸ್ತು ಇಟ್ಬಿ ಬಿಡು ಅಂತ ಊರ ದೇಸಾಯಿ ಅವರು ಹೇಳಿಬಿಟ್ಟರು. ಈ ಕಡೆ ನಾವು ಗಾಡಿ ಕೊರಳು ಕಟ್ಟಿ ಮರಳಿ ಊರ ಕಡೆಗೆ ಬರಲು ಸಿದ್ದರಾದೆವು . ಆ ತಲಾಟಿ ಗೋಪಾಲ ನಮ್ಮನ್ನು ಕಾಯುತಿದ್ರು. ನಮ್ಮ ಕಾಕಾ ಜೋಗ ಅನ್ನೋದ್ರಾಗ ಬಂದಬಿಟ್ರಲ್ಲ ಇಬ್ಬರು. ಆವಾಗ ನಾ ಬಾಳ ಹಗರ ಇದ್ದೆ ನನ್ನ ನೋಡಿದವರ
"ಏ ತಮ್ಮ ..! ಅಂದ್ರು. "
"ಯಾಕ್ರೀ ...?
"ಇವತ್ತು ಒಂದು ದಿನ ಇರ್ರೆಪ್ಪ "ಅಂದ್ರು .
" ನಾವು ಒಮ್ಮೆ ಹೇಳಿದರೆ ತಿಳಿಯಂಗಿಲ್ಲೇನು "? ಅಂದೆವು. ಅದಕ್ಕೆ ಅವನು
"ನೋಡು ನಾ ಒಂದು ಮಾತು ಹೇಳ್ತೀನಿ. ನಾ ಹೋಗಿ ಊರ ದೇಸಾಯಿಯವರಿಗೆ ಭೇಟಿಯಾಗಿ ಬಂದೀನಿ. ನಿನ್ನ ಮಾತ ಯಾವಾಗ ಅವರು ಕೇಳುವುದಿಲ್ಲ ಅಂದ್ರ ಚೌಡಕಿ ಕೊಡ ಎಲ್ಲಾ ಕಸಿದು ಇಟ್ಕೋ ಅಂತ ಹೇಳ್ಯಾರ. ಹ್ಯಾಂಗ ಮಾಡ್ತೀರಿ ? ಏನ ಹಾಡ ಹಾಡ್ತೀರೋ ಹೆಂಗ ? "ಅಲ್ಲೇ ನಿಂತ ತಲಾಟಿ ನನ್ನ ನೋಡಿ -
"ಹೇ ಬಸಣ್ಣ .. ಬಸಣ್ಣ ... ದೇಸಾಯಿ ಅವರು ಹೇಳ್ಯಾರಂದ್ರೆ ಇನ್ನ ಏನು ನಡೆಹಂಗಿಲ್ಲ. ಇಲ್ಲಿ ಧಣೇರು ಒಮ್ಮೆ ಹೇಳಿದರೆ ಮುಗೀತು. ಅದಕ್ಕ ನೀವು ನಿಂತ ಹಾಡ ಹಾಡಿ ಬರ್ರಿ " ಅಂದ.
"ಎಲಾ ಇವನ... ಏನು ಮಾಡಬೇಕಪ್ಪಾ "ಅನ್ನಿಸಿತು. ಅಷ್ಟು ಹೇಳಿ ತಲಾಟಿ ಹೊರಟು ಹೋದ. ಅಲ್ಲಿ ದಾರು ಟ್ಯೂಬನಾಗಿಟ್ಟು ಮಾರುತ್ತಿದ್ದರು. ಅದಕ್ಕ ಅಲ್ಲಿ ಯಾರು ಸಮಸ್ಯೆನೂ ಮಾಡುತ್ತಿದ್ದಿಲ್ಲ. ಸಮಗಾರರು ನಮ್ಮ ಜಾತಿಗಿಂತ ಹೆಚ್ಚು . ನಾವು ನಿಮಗೆ ಊಟ ಕೊಡುವುದಿಲ್ಲ. ಚಹಾದ ಅಂಗಡಿಯಾಗ ಬೇಕಾದ ತಿನ್ರಿ , ಬೇಕಾದಷ್ಟು ದಾರು ಕುಡಿಯಿರಿ " ಅಂತ ಗೋಪಾಲ ಅಂದ.
"ಆ ವಯಸ್ಸಿನ್ಯಾಗ ನಾನು ದಾರು ಕುಡಿಯುತ್ತಿದ್ದೆ ಮತ್ತು ನಮ್ಮ ಕೆಲಸ ಏನದ , ದಾರು ಕುಡಿಯುವುದು, ಚಹಾದಂಗಡಿಯಾಗ ಶೇವು ಚೂಡಾ, ಬಜ್ಜಿ ,ಬೇಕಾದ್ದು ತಿನ್ಕೊಂಡಿವಿ . ಗೋಪಾಲ ಹೊತ್ತು ಮುಳುಗುತನ ನಮಗ ಬಹಳ ಖರ್ಚು ಮಾಡುತ್ತಿದ್ದ. ಹೊತ್ತುಮುಳಗಿತ್ತು ಮಂದಿದು ಊಟ ಉಪಚಾರವು ನಡಿತು. ನನಗ ಉಣಲಿಲ್ಲ ಅಂದ್ರೆ ಧ್ವನಿ ಕಿತ್ತಿ ಬರ್ತಿದ್ದಿಲ್ಲ ಈಗ ಏನು ಮಾಡಬೇಕು.ಮೊದಲೇ ಹವಾ ಊಟ ಕೊಡುವುದಿಲ್ಲ ಅಂದಾನ ಅದೇ ಹೋಟೆಲ್ ನಾಗ ಇದ್ದದ್ದೇ ಹೊಟ್ಟೆ ತುಂಬಾ ತಿಂದು ಪದ ಹಾಡಕ್ಕ ಚಾಲು ಮಾಡಿದೆವು.
"ಹಾಡು ಚಾಲೂ ಮಾಡಿ ಒಂದು ಪದ ಹಾಡಿದ್ದೀನ್ರೀ, ನಾ ಹಾಡುವಾಗ ಗೊಂದಲಿಗರು ಮಲಗಿಕೊಂಡಿದ್ದರು. ಯಾಕಂದ್ರೆ ಗುಡಿ ಮುಂದೆ ನಮಗೆ ಹಾಡಕ್ಕ ಹೇಳಿದ್ರಲ್ಲ ಅಂತ ಅವರಿಗೆ ಸಿಟ್ಟು ಬಂದಿತ್ತು . ಗೋಪಾಲ ನಮಗೆ ಹಾಡಕ್ಕ ಹಚ್ಚಿಂದ ಅವ ಹ್ಯಾಂಗ ಬರ್ತಾನ. ಬರ್ಲಿ ಅಂತ ತಂದೀ ಮಗ ಇಬ್ಬರೂ ಸೇರಿ ಮಾಲಗಂಬಕ್ಕ ತಲಿಕೊಟ್ಟು ಮಲಗಿಕೊಂಡುಬಿಟ್ಟರು. ರಾತ್ರಿ ನೋಡ್ತೀರಿ ಭಯಂಕರ ಚಳಿ ಹಂತಾದ್ರಾಗ ನಾನು ನಿಂತು ಪದ ಹಾಡಲಿಕ್ಕೆ ಚಾಲು ಮಾಡಿದೆ. ನಾನು ಪದ ಹಾಡು ದ ಕೇಳಿ ಗೊಂದಲಿಗ ಮಲಗಿದಲ್ಲೇ -
"ಏಯ್ ತಮ್ಮ " ....ಅಂದ. ಅದಕ್ಕೆ ನಾನು
"ಯಾಕ್ರೀ ..?" ಅಂದೆ.
"ಪದ ಹಾಡಿದ್ರ ಹ್ಯಾಂಗ ಹಾಡಬೇಕು ಅಂದ. " ...
ಅದಕ್ಕೆ ನಾನು
“ಹ್ಯಾಂಗ ಹಾಡಬೇಕು? “
“ಮೊದಲನೆಯ ಅಕ್ಷರ ಏನ್ ಬರ್ತದ ಕೊನೆಯವರೆಗೂ ಅದೇ ಬರಬೇಕು” ಅಂದ.

“ನೋಡ್ರಿ ನಿಮ್ಮ ಹಂಗ ನಾ ಶಾಣ್ಯನೂ ಅಲ್ಲ ಅಂತಹ ಹಾಡ ಹಾಡವ್ನು ಅಲ್ಲ. ಗೋಪಾಲ ಹೇಳ್ಯಾನ ಮತ್ತು ಧಣಿಯರು ಹಾಡಂತ ಹೇಳ್ಯಾರು ಅದಕ್ಕೆ ನಾ ಹಾಡಾಕ್ಕ ನಿಂತೀನಿ . ಆಮೇಲೆ ನಾನು ಅಂತಹ ಪಂಡಿತನು ಅಲ್ಲ. ಇಷ್ಟು ಅನ್ನುವುದಕ್ಕೆ ಗೋಪಾಲ ಎಲ್ಲಿದ್ದನೇನೊ ಬಂದೇ ಬಿಟ್ಟ. “
ಮುಂದುವರಿಯುತ್ತದೆ . . . .
H R ಬಾಗವಾನ ಲೇಖಕರು

