Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ತೋಗುಡ್ಡಕ್ಕೆ ಹೋದಾಗಿನ ಘಟನೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ತೋಗುಡ್ಡಕ್ಕೆ ಹೋದಾಗಿನ ಘಟನೆ

ನೆರಬೆಂಚಿ ಕೋಳೂರು ಮಾರ್ಗ ಮಧ್ಯದಲ್ಲಿ ತೋಗುಡ್ಡ ಬರುವುದು. ಅಲ್ಲಿ ಸಿದ್ದರಾಮಯ್ಯ ಮಠ ಅದ. ಅದು ಸರೂರು ಒಡೆಯರದ್ದು. ರೇವಣಸಿದ್ದೇಶ್ವರ ಮಠವದು. ಅಲ್ಲಿನೂ ಜಾತ್ರೆ ಆಗುತ್ತದೆ. ಅಲ್ಲಿಗೆ ಆಲೂರು ಮುತ್ಯಾರು ಬರುತ್ತಾರೆ. ನಾನು ಪ್ರತಿ ಅಮಾವಾಸ್ಯೆಗೆ ಹೋಗಿ ದರುಶನ ಪಡೆದು ಕಾಯಿವಡೆಸಿಕೊಂಡು ಬರ್ತೀನಿ.           ಅಲ್ಲಿಗೆ ಒಮ್ಮೆ ಗದಗಯ್ಯ ಸ್ವಾಮಿಗಳು ನನಗೆ ಕರೆದುಕೊಂಡು ಹೋದರು. ಆಲೂರಾಗ ಬಹಳ ಮಂದಿ ಸ್ವಾಮಿಗಳು ಅದಾರ . ಅವರು ಪ್ರವಚನ ಎಲ್ಲಾ ಹೇಳುತ್ತಾರೆ. ಅಲ್ಲಿ ಊರಾಗ ಗದುಗಯ್ಯ ಮುತ್ಯಾರು ನನ್ನ ಬಗ್ಗೆ ಹೇಳ್ಯಾರ […]


 ನೆರಬೆಂಚಿ ಕೋಳೂರು ಮಾರ್ಗ ಮಧ್ಯದಲ್ಲಿ ತೋಗುಡ್ಡ ಬರುವುದು. ಅಲ್ಲಿ ಸಿದ್ದರಾಮಯ್ಯ ಮಠ ಅದ. ಅದು ಸರೂರು ಒಡೆಯರದ್ದು. ರೇವಣಸಿದ್ದೇಶ್ವರ ಮಠವದು. ಅಲ್ಲಿನೂ ಜಾತ್ರೆ ಆಗುತ್ತದೆ. ಅಲ್ಲಿಗೆ ಆಲೂರು ಮುತ್ಯಾರು ಬರುತ್ತಾರೆ. ನಾನು ಪ್ರತಿ ಅಮಾವಾಸ್ಯೆಗೆ ಹೋಗಿ ದರುಶನ ಪಡೆದು ಕಾಯಿವಡೆಸಿಕೊಂಡು ಬರ್ತೀನಿ.

          ಅಲ್ಲಿಗೆ ಒಮ್ಮೆ ಗದಗಯ್ಯ ಸ್ವಾಮಿಗಳು ನನಗೆ ಕರೆದುಕೊಂಡು ಹೋದರು. ಆಲೂರಾಗ ಬಹಳ ಮಂದಿ ಸ್ವಾಮಿಗಳು ಅದಾರ . ಅವರು ಪ್ರವಚನ ಎಲ್ಲಾ ಹೇಳುತ್ತಾರೆ. ಅಲ್ಲಿ ಊರಾಗ ಗದುಗಯ್ಯ ಮುತ್ಯಾರು ನನ್ನ ಬಗ್ಗೆ ಹೇಳ್ಯಾರ ಅದೇನಂದ್ರೆ ಹಳ್ಳೂರಾಗ ಬಸಪ್ಪ ಶರಣಂತ ಅದಾನ, ಬಹಳ ಶಾಣೆ ಅದಾನ ಅಂದರು. ಒಮ್ಮೆ ಅಲ್ಲಿ ಕುಂಬಾರ ಮನೆಯಾಗ ಪುಣ್ಯತಿಥಿ ಇತ್ತು. ಅಲ್ಲಿಗೆ ನನ್ನ ಕರೆಸಿದರು.
ಅಲ್ಲಿ ಬೆಳಗಾನ ಬರೇ ಬಿಡಿಸಿ ಹೇಳುದ್ರಿ, ಪುರಾಣ ಹೇಳು ಸ್ವಾಮಿಗಳು ನನ್ನ ಬಗಲಾಗ ಬಂದು ಕೂತರು. ಅವರು ದೊಡ್ಡವರು ಅಂತ ಅಂಜಿ ಅಂಜಿ ನಾನು ಅತ್ತತ್ತ ಕುಂತೆ. ಅವರು ಕೇಳಲಿಲ್ಲ ನನ್ನ ರಟ್ಟಿ ಹಿಡಿದು ಎಳದು ತಮ್ಮ ಬಗಲ ಕುಂದುರ್ಸ್ಕೊಂಡ್ರು.
           ಗದಗಯ್ಯ ಮುತ್ಯಾಗ ಹೇಳಂದ್ರ… ಇಲ್ಲ ಇವತ್ತು ಹಳ್ಳೂರು ಶರಣನೆ ಹೇಳಬೇಕು ಅಂದ್ರು. ದೊಡ್ಡವರು ಹೇಳುತ್ತಾರೆ ಅಂದ್ರ ಏನು ಮಾಡುವುದು? ಬೆಳಗಾಗುವ ತನಕ ನಾನು ಹೇಳಿದ್ದೆ. ಆನಂತರ ತೂಗುಡ್ಡಕ್ಕ ಕರಿಸಿದರು. ತೂಗುಡ್ಡಕ್ಕ ಬರೆ ಗುರು ಸ್ಥಾನ ಇದ್ದಾರಪ್ಪ . ಇಂಗಳಗೇರಿ ಸಿದ್ದಣ್ಣ ಅಂತ ಅದಾರಿ ಬರ್ರಿ ಅವರಿಗೂ ಕಂಡಾಪಟ್ಟಿ ಶಿಷ್ಯರು ಅದಾರ . ಅನೇಸೂರ ಸಂಗಣ್ಣ ಅಂತ ಹೇಳಿ ಅವರಿಗೂ ಬಹಳಷ್ಟು ಶಿಷ್ಯರಿದ್ದಾರೆ. ಹಂಗ ಆಲೂರು ಸ್ವಾಮಿಗಳು ಅವರಿಗೂ ಕಂಡಪಟ್ಟಿ ಶಿಷ್ಯರಿದ್ದಾರೆ. ತೂಗುಡ್ಡಕ್ಕ ಹೋದ ಮೇಲೆ ಶಾಂತಯ್ಯ ಸ್ವಾಮಿ ಅಂತ ಅವರು ಪ್ರವಚನ ಹೇಳುತ್ತಾರೆ. ಆ ಸ್ವಾಮಿ ಮೊದಲು ಪದ್ಧತಿ ಹಾಕಿ ಕೊಟ್ಟರಿ.
       “ಕಾಯವಿಡಿದಾತ್ಮರಾಶಿಗೆ ಪರತರ ಮುಕ್ತಿ ಗುಪಾಯವಿದು ನಿಜ ಶಿವಮಂತ್ರವಣ್ಣಾ “
ಇದರ ಮ್ಯಾಲ ಹೋಗಬೇಕ್ರಿ ಶರಣರ ಅಂದ. ನಾನು ಒಂದು ನುಡಿ ಹೇಳಿ ಬಿಡಿಸಿದಿನ್ರಿ ಹಿಂದುಗಡೆ ಎಲ್ಲರಿಗೂ ಕೊಟ್ರು ಒಂದು ಸುತ್ತು ಹೇಳಿಕೊಂಡು ಒಂದು ಸುತ್ತು ಮುಗಿತ್ರಿ.
       ಎರಡನೇ ಸುತ್ತು ನಡಿತ್ರಿ. ಅವರು ಹೇಳಾಕತ್ತಿಂದ ಅವರಿಗೆ ನಾ ಅಂದೆ –
ನೋಡ್ರಿ ನಾ ನಿಮಗೊಂದು ಪ್ರಶ್ನೆ ಕೇಳಬೇಕು ಅಂತ ಮಾಡಿನಿ ಅಂದೆ ನಿಮ್ಮನ್ನ ಪರೀಕ್ಷೆ ಮಾಡಬೇಕಂತಲ್ಲ ನನಗೆ ಹೆಚ್ಚಿಗೆ ತಿಳ್ಕೊಂಡು ನನ್ನ ಜ್ಞಾನ ಹೆಚ್ಚಿಸಿಕೋಬೇಕಂತ ಆಸೆ ಆಗಿದೆ ಮತ್ತು ನೀವು ಅನುಮತಿ ಕೊಟ್ಟು ಪ್ರಶ್ನೆ ಮಾಡು ಅಂದ್ರೆ ಮಾಡ್ತೀನಿ ಇಲ್ಲಾಂದ್ರೆ ಮಾಡುವುದಿಲ್ಲ ಅಂದೆ.
         ಏ … ಮಾಡ್ರಿ ಮಾಡ್ರಿ ಪ್ರಶ್ನೆ ಮಾಡ್ರಿ ಅಂದ್ರು
ಈಗ ನೀವು ಹೇಳುತ್ತೀರಿ ಅದು ಹೇಳುವಂತದ್ದು , ಅದು ಅನುಭವಿಕೆ ಹತ್ತಬೇಕದು .
ಈಗ ಏನು ಅದ…. ಸ್ಥೂಲ ದೇಹ, 25 ತತ್ವ , ಎಲ್ಲಾ ಜಗತ್ತು ನೋಡ್ತೀವಿ ಇದಕ್ಕೆ ವಿಶ್ವ ಜೀವ ಅಂದಾರ.
ವಿಶ್ವ ಜೀವ ಅಂತ ಯಾಕಂದ್ರು ?
ಮತ್ತ ಜೀವ ಈಗ ಯಾವ ಸ್ಥಾನದೊಳಗಿರ್ತಾನ ? ಯಾವ ಕರಣ ಇರ್ತದ ?
ಇದು ದಾಟಿಂದ ಸ್ವಪ್ನಾವಸ್ಥೆ. 17 ತತ್ವ ಶರೀರ, ಮತ್ತ ಕಂಠಸ್ಥಾನ, ತೇಜಸ್ ಜೀವ. ಮತ್ತ
ತೇಜಸ್ ಜೀವಂತ ಅಂತ ಔಾಂಗ ಯಾಕಂದ್ರು ?
ಅವರು ಬರ್ದಾರ ನಾವು ಬಾಯಿಪಾಠ ಮಾಡಿವಿ ಹಂಗ ಹೇಳಿಕೊಂತ ಹೊಂಟಿವಿ.
ವಿಶ್ವ ಜೀವಂತ ಯಾಕಂದ್ರು ?
ತೇಜಸ್ಸು ಜೀವಂತ ಯಾಕಂದ್ರು, ?
ಪ್ರಾಜ್ಞೆ ಜೀವಂತ ಯಾಕ ಅಂದ್ರು ?
ಇದರ ಮ್ಯಾಗ ಜರಾ ಬಿಡಿಸಿಕೊಂತ ಹೋಗ್ರಿ ಅಂತ ಅಲ್ಲಿದ್ದ ಭಜನಾಪದ ಹಾಡಾಕ ಬಂದ ಎಲ್ಲಾ ಶರಣರಿಗೆ ಕೇಳಿದೆ. ಯಾರಿಗೂ ಹೇಳುವುದಾಗಲಿಲ್ಲ. ಎಲ್ಲರೂ ಬರೆದಿದ್ದು ಬಾಯಿ ಪಾಠ ಮಾಡೇ ಹೇಳೋರು ಯಾರಿಗೂ ಮಣೀಲಿಲ್ಲರಿ ಅದು . ಇಂಗಳಗೇರಿ ಸಿದ್ದಣ್ಣ ಅಂತ ಶರಣ ಹಂಗೂ ಕಂಡಪಟ್ಟೆ ಶಿಷ್ಯ ಮಕ್ಕಳು ಅವರು ಅಲ್ಲಿಗೆ ಬಂದಿದ್ದರು. ಅವ ಯೋಗದಾಂದು ಹೇಳಾಕ್ಕ ಹತ್ತಿದ.
ಯೋಗಕ್ಕೆ ಹೋಗಬ್ಯಾಡ್ರಿ ಇದು ಯಾವ ಸ್ಥಲಕಟ್ಟಿನ್ಯಾಗ ಆದ ಹೇಳಬೇಕು. ಯೋಗ ಆಗಲಾರದ ಮುಕ್ತಿ ಆಗುವುದಿಲ್ಲ. ಮುಕ್ತಿ ಮುಂದ ಮತ್ತ… ಉಳಿತದ. ಈಗ ಸ್ಥಲಕಟ್ ಐತಿ, ಆ ಸ್ಥಳ ಕಟ್ಟು ಮ್ಯಾಗ ಹೆಂಗ ಬಿಡಿಸಿಕೊಂಡು ಹೋಗಬೇಕು.? ಅಂತಾ ನಿಂತನ್ನಿ. ಆನೆಸೂರ ಸಂಗಣ್ಣ ಒದ್ದಾಡಿ ಒದ್ದಾಡಿ ಒಂದೆರಡು ಪ್ರಶ್ನೆಗೆ ಉತ್ತರ ಹೇಳಿದಿನ್ರಿ. ಒಂದೆರಡು ಪ್ರಶ್ನೆಗಳಿಗೆ ಉತ್ತರ ಹೇಳಿದೆನ್ರಿ ಉಳಿದವರಿಗೆ ಆಗಲಿಲ್ಲ. ನೀವೇ ಹೇಳ್ರಿ ಶರಣ್ ಅಂದ್ರು …

ನಾಳೆಗೆ….
ವಿಶ್ವಜೀವ ಅಂತ ಯಾಕ ಅಂತಾರ


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.