Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಿಂಗೋ ಬ್ಯಾಂಗ್ ಬ್ಯಾಂಗ್
- ಸಿನಿಮಾ

ಬಿಂಗೋ ಬ್ಯಾಂಗ್ ಬ್ಯಾಂಗ್

ನಾ ನಿನ್ನ ತುಂಬಾ ಪ್ರೀತಿಸುತ್ತೇನೆ, ಜೀವನಪೂರ್ತಿ ನಿನ್ನ ಜೊತೆಗೆ ಇರ್ತೀನಿ, ಕಷ್ಟ ಸುಖ ನೋವು ನಲಿವು ಏನೇ ಬಂದರೂ ನಿನ್ನ ಜೊತೆಗೆ ಸರಿ ಸಮಾನವಾದ ಹಂಚ್ಕೋತೀನಿ, ಇಲ್ಲಿ ತನಕ ನನ್ನ ಜೀವನದಲ್ಲಿ ನಿನ್ನನ್ನು ಬಿಟ್ಟು ನನಗೆ ಯಾರು ಇಷ್ಟ ಆಗಿಲ್ಲ ನಾನು ಇಷ್ಟಾನು ಪಟ್ಟಿಲ್ಲ, ಈ ರೀತಿಯಾದಂತಹ ಪ್ರೀತಿ ಪ್ರೇಮದ ಸಂಭಾಷಣೆಯನ್ನು ಹುಡುಗ ಹುಡುಗಿಯ ಮುಂದೆ ಹೇಳಬಹುದು ಅಥವಾ ಹುಡುಗಿ ಹುಡುಗನ ಮುಂದೆ ಹೇಳಬಹುದು ಇದೊಂದು ರೊಮ್ಯಾಂಟಿಕ್ ಫೀಲ್, ಪ್ರೀತಿಯ ಕಥಾ ವಸ್ತುವನ್ನು ಹೊಂದಿದಂತಹ ಯಾವುದೇ ಚಲನಚಿತ್ರ […]

ನಾ ನಿನ್ನ ತುಂಬಾ ಪ್ರೀತಿಸುತ್ತೇನೆ, ಜೀವನಪೂರ್ತಿ ನಿನ್ನ ಜೊತೆಗೆ ಇರ್ತೀನಿ, ಕಷ್ಟ ಸುಖ ನೋವು ನಲಿವು ಏನೇ ಬಂದರೂ ನಿನ್ನ ಜೊತೆಗೆ ಸರಿ ಸಮಾನವಾದ ಹಂಚ್ಕೋತೀನಿ, ಇಲ್ಲಿ ತನಕ ನನ್ನ ಜೀವನದಲ್ಲಿ ನಿನ್ನನ್ನು ಬಿಟ್ಟು ನನಗೆ ಯಾರು ಇಷ್ಟ ಆಗಿಲ್ಲ ನಾನು ಇಷ್ಟಾನು ಪಟ್ಟಿಲ್ಲ,

ಈ ರೀತಿಯಾದಂತಹ ಪ್ರೀತಿ ಪ್ರೇಮದ ಸಂಭಾಷಣೆಯನ್ನು ಹುಡುಗ ಹುಡುಗಿಯ ಮುಂದೆ ಹೇಳಬಹುದು ಅಥವಾ ಹುಡುಗಿ ಹುಡುಗನ ಮುಂದೆ ಹೇಳಬಹುದು ಇದೊಂದು ರೊಮ್ಯಾಂಟಿಕ್ ಫೀಲ್,

ಪ್ರೀತಿಯ ಕಥಾ ವಸ್ತುವನ್ನು ಹೊಂದಿದಂತಹ ಯಾವುದೇ ಚಲನಚಿತ್ರ ವಾಗಲಿ ಅದು ತನ್ನ ಮಡಿಲಲ್ಲಿ ಗಟ್ಟಿಯಾಗಿ ಇಟ್ಟುಕೊಂಡು ಕ್ಯಾರಿ ಮಾಡುವ ಪ್ರೀತಿ ಪ್ರೇಮದ ವಿಚಾರ ಅಂತಂದ್ರೆ ಇದೆ ಹುಡುಗಿಗಾಗಿ ಹುಡುಗ ಹುಡುಗನಿಗಾಗಿ ಹುಡುಗಿ,

ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳಲು ತಮ್ಮ ಹುಡುಗನನ್ನ ಅಥವಾ ಹುಡುಗಿಯನ್ನ ಉಳಿಸಿಕೊಳ್ಳಲು ಆಯಾ ಪ್ರೇಮಿಗಳು ಮಾಡುವ ದೊಡ್ಡ ಹರ ಸಾಹಸ ಸರ್ಕಸ್,ಈ ಲವ್ ಅನ್ನುವ ಮಾಯಾ ಪ್ರಪಂಚದಲ್ಲಿ ಸದಾ ಇರುತ್ತದೆ.

ಆದರೆ ಆರ್ ಕೆ ಚಂದನ್ ನಾಯಕ ನಟನಾಗಿ ನಟಿಸುತ್ತಿರುವ ಹಾಗೂ ರಕ್ಷಾ ನಿಮಗಿ ನಾಯಕಿಯಾಗಿ ನಟಿಸುತ್ತಿರುವ ಬಿಂಗೋ ಚಿತ್ರದ ಟ್ರೈಲರ್ ನೋಡಿದಾಗ,
ಈ ಚಿತ್ರವನ್ನು ಕಟ್ಟಿಕೊಟ್ಟ ನಿರ್ದೇಶಕ ಶಂಕರ್, ಪ್ರಸ್ತುತ ಕಾಲಘಟ್ಟದಲ್ಲಿ ಅತಿ ಹೆಚ್ಚು ನಡೆಯುತ್ತಿರುವಂತಹ ವಿಚಾರವನ್ನು ತುಂಬಾ ಗಂಭೀರ ಸ್ವರೂಪದಲ್ಲಿ ಹೇಳಿರುವ ಪ್ರಯತ್ನವೇ ಈ ಬಿಂಗೋ.

ನಾಯಕ ನಟ ಹೇಳುವಂತೆ, ಬಿಂಗೋ ಚಿತ್ರದಲ್ಲಿ ನನ್ನದು ಭಾವನೆ ರಹಿತ ಪಾತ್ರ ಯಾರೊಂದಿಗೆಯೂ ನಾನು ಬಾಂಡ್ಲಿಂಗನ್ನ ಇಟ್ಟುಕೊಳ್ಳುವುದಿಲ್ಲ ಅದನ್ನು ಕ್ಯಾರಿ ಕೂಡ ಮಾಡುವುದಿಲ್ಲ, ಜೀವನದಲ್ಲಿ ಬಹಳಷ್ಟು ನೊಂದು ಬೆಂದು ಹೋದ ವ್ಯಕ್ತಿ ಒಬ್ಬನ ಬದುಕು ಆತನ ಲೈಫ್ ಸ್ಟೈಲ್, ಎಲ್ಲವೂ ಕುತೂಹಲಕಾರಿ ಘಟ್ಟದೊಂದಿಗೆ ಸಾಗುತ್ತದೆ.

ತಾನು ಪ್ರೀತಿಸಿದ ಹುಡುಗಿ ಒಬ್ಬಳು, ತನ್ನನ್ನೇ ಧಿಕ್ಕರಿಸಿ ಬೇರೊಂದು ಜೀವನ ಕಟ್ಟಿಕೊಳ್ಳಲು ಯೋಚನೆ ಮಾಡುವಾಗ, ಹುಡುಗ ತಾನೇನೂ ಕಮ್ಮಿ ಇಲ್ಲ ಎಂಬಂತೆ ಹುಡುಗಿಗೆ ಸವಾಲು ಬದುಕಿ ಸಾಗಿಸಿ, ಪ್ರೀತಿಗಿಂತ ಛಲ ದೊಡ್ಡದು ಎನ್ನುವುದನ್ನು ಸಾರುವುದೇ ಬಿಂಗೋ ಚಿತ್ರದ ಟ್ರೈಲರ್.

ಕಿರುತೆರೆಯಲ್ಲಿ ಮುಖ್ಯ ಪಾತ್ರದೊಂದಿಗೆ ಧಾರಾವಾಹಿಯಲ್ಲಿ ನಟನೆ ಮಾಡಿ ಅಪಾರ ಅನುಭವ ಹೊಂದಿರುವ ಆರ್ ಕೆ ಚಂದನ್ ಬಿಂಗೋ ಚಿತ್ರದಲ್ಲಿ ನಾಯಕ ನಟನಾಗುವ ಮೂಲಕ ಪ್ರಥಮ ಹೆಜ್ಜೆಯನ್ನು ಇಟ್ಟಿದ್ದಾರೆ,ಇದಕ್ಕೆ ಹಣ ಹಾಕಿ ನಿರ್ಮಾಣ ಮಾಡಿದವರು ಸ್ವಂತ ಅಣ್ಣ.

ನಾಯಕಿಯಾಗಿ ರಕ್ಷಾ ನಿಂಬರಗಿ ಕಾಣಿಸಿಕೊಂಡಿದ್ದು, ಪ್ರೀತಿಸಿದ ಹುಡುಗನನ್ನು ಬಿಟ್ಟು ಕೊಡುವ ಹಾಗೂ ತಂದೆ ತಾಯಿಯನ್ನು ಬಿಟ್ಟುಕೊಡದ ಒಂದು ಎಮೋಷನಲ್ ಪಾತ್ರವನ್ನು ಕ್ಯಾರಿ ಮಾಡಿದ್ದಾರೆ, ಕನ್ನಡ ಸೇರಿ ಬೇರೆ ಭಾಷೆಗಳಲ್ಲೂ ಸ್ವಲ್ಪ ಬ್ಯುಸಿ ಇರುವ ರಕ್ಷಾ ಬಿಂಗೊ ತಮ್ಮ ವೃತ್ತಿ ಜೀವನಕ್ಕೆ ಒಂದು ದೊಡ್ಡ ಚಿತ್ರವಾಗಲಿದೆ ಎನ್ನುವ ಭರವಸೆಯನ್ನು ಹೊಂದಿದ್ದಾರೆ.

ಬಿಂಗೋ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸ್ಯಾಂಡಲ್ವುಡ್ನ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ,

ನಾಯಕಿಯಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರಾಗಿಣಿ, ಇಲ್ಲಿಯ ತನಕದ ತಮ್ಮ ವೃತ್ತಿ ಜೀವನದಲ್ಲಿ ನಾಯಕಿ ಪಾತ್ರವನ್ನು ಹೊರತುಪಡಿಸಿಯೂ ಸಹ ತುಂಬಾ ಗಟ್ಟಿ ಇರುವ ಪೋಷಕ ಪಾತ್ರಗಳನ್ನು ಸಹ ಮಾಡಿ ಸೈ ನಟಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕರು ಮಾತ್ರ ಗನ್ ಹಿಡಿಯ ಬೇಕೆ ಮಚ್ಚು ಲಾಂಗು ಹಿಡಿಯಬೇಕೇ ಯಾಕೆ ನಾಯಕಿಯರು ಹಿಡಿಯಬಾರದು ?? ಎನ್ನುವ ಎನರ್ಜಿ ಮಾತುಗಳನ್ನ ಹೇಳುವುದರ ಮೂಲಕ ತಾವು ಬಿಂಗೋ ಚಿತ್ರದಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದಿರುವ ಪೋಸ್ಟರ್ ಅನ್ನು ಹಾಗೂ ಟ್ರೈಲರ್ ನಲ್ಲಿ ಕಾಣಿಸಿಕೊಂಡ ತಮ್ಮ ಪಾತ್ರದ ಹೈಲೈಟ್ ಮಾಡಿ ಮಾತನಾಡಿದರು.

ಈಗಾಗಲೇ ಬಿಡುಗಡೆಯಾಗಿರುವ ಬಿಂಗೋ ಚಿತ್ರದ ಎಲ್ಲ ಕಂಟೆಂಟ್, ಸುದ್ದಿಯಲ್ಲಿದ್ದು ಇಂದು ಬಿಡುಗಡೆಯಾದ ಟ್ರೈಲರ್ ನೋಡಿದಾಗ,
ಇದೊಂದು ಪಕ್ಕ ಮಾಸ್ ಎಂಟರ್ಟೈನರ್ ಸಿನಿಮಾ, ಇದರಲ್ಲಿ ಎಲ್ಲ ಎಲಿಮೆಂಟ್ಸ್ ಗಳು ಸರಿಯಾಗಿವೆ ಎಂಬುದನ್ನು ನಾವು ಗಮನಿಸಬಹುದು.

ಸೆಪ್ಟೆಂಬರ್ 25ಕ್ಕೆ ಬಿಡುಗಡೆ ಆಗುತ್ತಿರುವ ಆರ್ ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದ, ಸ್ಯಾಂಡಲ್ ವುಡ್ ನ ಮಾಸ್ ಕ್ವೀನ ರಾಗಿಣಿ ದ್ವಿವೇದಿ, ಆರ್ ಕೆ ಚಂದನ್, ರಾಜೇಶ್ ನಟರಂಗ ಮುಂತಾದವರು ನಟಿಸಿರುವ “ಬಿಂಗೊ” ಚಿತ್ರ ಬಿಡುಗಡೆಯಾಗುತ್ತಿದ್ದು ನೋಡುಗರಲ್ಲಿ ಕುತೂಹಲ ಮೂಡಿಸಿದೆ.

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.