Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಿಚ್ಚ ಹೇಳಿರೋ ಫೋಕಸ್ ಸ್ಟೋರಿ
- ಸಿನಿಮಾ

ಕಿಚ್ಚ ಹೇಳಿರೋ ಫೋಕಸ್ ಸ್ಟೋರಿ

ಹುಟ್ಟೋದ್ಯಾಕೆ ಸಾಯೋದ್ಯಾಕೆಏನಾದರೂ ಸಾಧಿಸಿ ಹೋಗೋಕೆ, ಈಶ್ವರಿ ನಿರ್ಮಾಣ ಸಂಸ್ಥೆಯಲ್ಲಿ ಬಂದಂತಹ ಕ್ರೇಜಿಸ್ಟಾರ್ ವಿ ರವಿಚಂದ್ರನ್ ನಿರ್ದೇಶನ ಮಾಡಿದ್ದ ಶಾಂತಿ ಕ್ರಾಂತಿ ಚಿತ್ರದಲ್ಲಿ ಬರುವಂತಹ ಒಂದು ಹಾಡಿನ ಸನ್ನಿವೇಶದಲ್ಲಿ ಈ ಸಾಹಿತ್ಯವನ್ನು ನಾವು ಕೇಳಬಹುದು,ಇದನ್ನು ಬರೆದವರು ಹಂಸಲೇಖ. ಲೈಫ್ ತುಂಬಾ ಬೋರ್ ಆಗ್ತಿದೆ, ಏನೇ ಮಾಡುವುದಕ್ಕೆ ಹೊರಟರು ಕೆಲಸ ಆಗುತ್ತಿಲ್ಲ, ಅಂದುಕೊಂಡ ಕನಸು ನನಸಾಗಿಲ್ಲ, ಇಟ್ಟ ಹೆಜ್ಜೆಗಳಿಗೆ ಸರಿಯಾದ ದಾರಿ ಸಿಗುತ್ತಿಲ್ಲ ಏನು ಮಾಡುವುದು ಗುರು ಎಂದು, ತಲೆ ಮೇಲೆ ಕೈ ಹೊತ್ತು ಕೂರುವ ಮುಂಚೆ ಶಾಂತಿ ಕ್ರಾಂತಿ […]

ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರೂ ಸಾಧಿಸಿ ಹೋಗೋಕೆ, ಈಶ್ವರಿ ನಿರ್ಮಾಣ ಸಂಸ್ಥೆಯಲ್ಲಿ ಬಂದಂತಹ ಕ್ರೇಜಿಸ್ಟಾರ್ ವಿ ರವಿಚಂದ್ರನ್ ನಿರ್ದೇಶನ ಮಾಡಿದ್ದ ಶಾಂತಿ ಕ್ರಾಂತಿ ಚಿತ್ರದಲ್ಲಿ ಬರುವಂತಹ ಒಂದು ಹಾಡಿನ ಸನ್ನಿವೇಶದಲ್ಲಿ ಈ ಸಾಹಿತ್ಯವನ್ನು ನಾವು ಕೇಳಬಹುದು,ಇದನ್ನು ಬರೆದವರು ಹಂಸಲೇಖ.

ಲೈಫ್ ತುಂಬಾ ಬೋರ್ ಆಗ್ತಿದೆ, ಏನೇ ಮಾಡುವುದಕ್ಕೆ ಹೊರಟರು ಕೆಲಸ ಆಗುತ್ತಿಲ್ಲ, ಅಂದುಕೊಂಡ ಕನಸು ನನಸಾಗಿಲ್ಲ, ಇಟ್ಟ ಹೆಜ್ಜೆಗಳಿಗೆ ಸರಿಯಾದ ದಾರಿ ಸಿಗುತ್ತಿಲ್ಲ ಏನು ಮಾಡುವುದು ಗುರು ಎಂದು, ತಲೆ ಮೇಲೆ ಕೈ ಹೊತ್ತು ಕೂರುವ ಮುಂಚೆ ಶಾಂತಿ ಕ್ರಾಂತಿ ಚಿತ್ರದ ಹಾಡು ಕೇಳಬೇಕು, ಇದರ ಜೊತೆಗೆ ಕನ್ನಡದಲ್ಲಿ ಇನ್ನು ಬಹಳಷ್ಟು ಪ್ರೇರಣದಾಯಕ ಹಾಡುಗಳು ಬಂದಿದ್ದು ಅವೆಲ್ಲವೂ ನೊಂದ ಹೃದಯಗಳ ನೊಂದ ಜೀವಗಳ ಮನಸ್ಸಿಗೆ ಶಾಂತಿ ನೆಮ್ಮದಿ ಹೇಳಿ ಸಾಧನೆ ಶಿಖರದತ್ತ ಕರೆದೊಯ್ಯುತ್ತವೆ.

ಇಂಥದ್ದೇ ಒಂದು ಸನ್ನಿವೇಶ,ಹುಲಿಬೀರ ಚಿತ್ರದ ನಾಯಕ ರೂರಲ್ ಸ್ಟಾರ್ ಅಂಜನ್ ಲೈಫಲ್ಲಿ ನಡೆದಾಗ ..??

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಟದೊಂದಿಗೆ, ಕಲಾವಿದರಾಗಬೇಕೆನ್ನುವರು ತಂತ್ರಜ್ಞರಾಗಬೇಕೆನ್ನುವರು ಹಾಗೂ ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡಬೇಕು ಎನ್ನುವವರು, ಬೆಂಗಳೂರಿನ ಗಾಂಧಿನಗರ ಎಂಬ ಅಂಗಳಕ್ಕೆ ಬರುವುದು ಸರ್ವೇಸಾಮಾನ್ಯ.

ಆದರೆ ಅಂಜನ್ ಲೈಫಿನಲ್ಲಿ ನಡೆದ ಒಂದು ವಿಧಿಯಾಟ ಒಂದು ಗೌರವದಂತಹ ದುರಂತ ಆತನನ್ನ ದೊಡ್ಡದೊಂದು ಅಪಘಾತದಲ್ಲಿ ಮತ್ತೊಮ್ಮೆ ಪುನರ್ಜನ್ಮ, ಸಿಗುವಂತೆ ಮಾಡುತ್ತದೆ.
ಆ ಸಮಯದಲ್ಲಿ ಅಂಜನ್ ಕನ್ನಡ ಚತ್ರೋದ್ಯಮ ಜೊತೆಗೆ ಸ್ವಲ್ಪ ಒಡನಾಟವನ್ನು ಹೊಂದಿರುತ್ತಾರೆ.

ಇಂತಹ ಸಮಯ ಅಂಜನ್ಗೆ ಪ್ರೇರಣೆ ನೀಡಿದ್ದ ಕಲಾವಿದ ಕಿಚ್ಚ ಸುದೀಪ್ ಕಿಚ್ಚ,, ಅದರಲ್ಲೂ ಸುದೀಪ್ ಹೇಳಿದ ಫೋಕಸ್ ಅನ್ನೋ ಮಾತು.

ಪ್ರತಿಯೊಂದು ಊರಲ್ಲೂ ಸಾಕಷ್ಟು ಕಥೆಗಳಿರುತ್ತವೆ ಅದರಲ್ಲೂ ಯುವಕ ಯುವತಿ ಎಂದಾಗ ಪ್ರೀತಿ ಪ್ರೇಮದ ಕಥೆಗಳು ಇರಲೇಬೇಕು, ಅಂತತೊಂದು ಕಥೆ ಹುಲಿಬೀರ ಚಿತ್ರದ ಪ್ರಮುಖ ಹೈಲೈಟ್,

ಹುಲಿಬೀರ ಚಿತ್ರದ ಟ್ರೈಲರ್ ನೋಡಿದಾಗ, ಇದೊಂದು ಪಕ್ಕ ಹಳ್ಳಿ ಸೊಗಡಿನ ಗ್ರಾಮೀಣ ಸುಗಡಿನ ಮಣ್ಣಿನ ಅಸ್ತಿತ್ವದ ಪ್ರೀತಿಯ ಸಂಕೇತದ ಪುನಃ ಭಾವನೆಯ ದುಷ್ಟರ ವಿರುದ್ಧ ಹೋರಾಡುವ ಕೆಚ್ಚೆದೆಯ ಹುಡುಗನ ಕಥೆಯೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಅಪ್ಪನ ಜೊತೆಗಿನ ಬಾಂಧವ್ಯ, ಗೆಳತಿಯ ಜೊತೆಗೆನ ಪ್ರೀತಿ ಪ್ರೇಮ ಒಂದಷ್ಟು ಪ್ರಣಯ, ಹಳ್ಳಿಯಲ್ಲಿನ ರಾಜಕೀಯ,
ಗೆಳೆತನ ಇದರ ಮಧ್ಯೆ ದೈವಿ ಭಾವನೆ ಮೂಡಿಸುವ ಯಲ್ಲಮ್ಮ ತಾಯಿಯ ಎನರ್ಜಿ ಎಲ್ಲವನ್ನು ಮದರಂಗಿ ಖ್ಯಾತಿಯ, ಮಲ್ಲಿಕಾರ್ಜುನ್ ಮುತ್ತಲಗೇರಿ ಕಟ್ಟಿಕೊಟ್ಟಿದ್ದಾರೆ.

ನಿರ್ದೇಶಕನಿಗೆ ಮತ್ತಷ್ಟು ಬಲ ತುಂಬಿದವರು ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ವೀರ ಸಮರ್ಥ್ ಮತ್ತು ಧರ್ಮ ವಿಶ್, ಹುಲಿಬೀರ ಚಿತ್ರದಲ್ಲಿನ ಎಲ್ಲಾ ಹಾಡುಗಳಿಗೆ ಸಂಗೀತ ನೀಡಿರುವ ವೀರ ಸಮರ್ಥ್ ಮತ್ತೆ ತಮ್ಮ ಮ್ಯಾಜಿಕಲ್ ಕಂಪೋಸಿಂಗ್ ಅನ್ನ ಕಂಟಿನ್ಯೂ ಮಾಡಿದ್ದಾರೆ,
ಜಿಗರಿ ದೋಸ್ತ್, ಬಂದಾನ ನೋಡು, ಹುಟ್ಟಿ ಬಂದೆ ಹುಲಿಬೀರನಾಗಿ, ಈ ಎಲ್ಲ ಹಾಡುಗಳನ್ನು ನೋಡಿದಾಗ ಈ ಚಿತ್ರದ ಕಂಪ್ಲೀಟ್ ಆಲ್ಬಮ್ ಸೂಪರ್ ಹಿಟ್. ಇನ್ನು ಚಿತ್ರಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ( ಹಿನ್ನೆಲೆ ಸಂಗೀತ ) ನೀಡಿದವರು ಧರ್ಮ ವಿಶ್, ಕನ್ನಡ ಚಿತ್ರಗಳನ್ನು ಮಾಡುತ್ತಲೇ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಸಂಗೀತದ ಛಾಯೆಯನ್ನು ಮೂಡಿಸಿರುವ ಧರ್ಮ ವಿಶ್ ಬ್ಯಾಗ್ರೌಂಡ್ ಮ್ಯೂಸಿಕ್ ನಲ್ಲಿ ಹೈ ವೋಲ್ಟೇಜ್ ರೇಂಜ್ ನ ಸ್ಕೋರ್ ಮಾಡಿ ತೋರಿಸಿದ್ದಾರೆ.

ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿ ರೂರಲ್ ಸ್ಟಾರ್ ಅಂಜನ್, ರಂಗಾಯಣ ರಘು,ಚೈತ್ರ ತೋಟದ್, ವನು ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಬಹಳಷ್ಟು ಗ್ರಾಮೀಣ ಹಾಗೂ ಗಟ್ಟಿ ಪ್ರತಿಭೆಗಳು ಹುಲಿಬೀರ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಉತ್ತರ ಕರ್ನಾಟಕ ಭಾಷೆಯನ್ನ ಒಳಗೊಂಡಿರುವ ಚಿತ್ರ ಎಂದು ಹೇಳಿದರೆ ತಪ್ಪಿಲ್ಲ ಮಧ್ಯದಲ್ಲಿ ಅಲ್ಲಲ್ಲಿ ಒಂಚೂರು ಬೇರೆ ಪ್ರಾಂತ್ಯದ ಭಾಷೆ ಬಂದರೂ ಬಂದಿರಬಹುದು ಆದರೂ ಇದು ಕಂಪ್ಲೀಟ್ ಉತ್ತರ ಕರ್ನಾಟಕದ ಮಣ್ಣಿನ ಕಥೆ ಎನ್ನಬಹುದು.

ಮದರಂಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ, ಹುಲಿ ಬೀರ ಚಿತ್ರದಲ್ಲಿ ತಮ್ಮದೇ ಆದಂತಹ ಟ್ರೇಡ್ ಮಾರ್ಕ್ ಕ್ಯಾರಿ ಮಾಡಿದ್ದಾರೆ,

ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಹುಲಿಬೀರ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಸುಪ್ರೀಂ ಹೀರೋ ಶಶಿಕುಮಾರ್,
ಸಿನಿಮಾಗಳನ್ನ ಕಡಿಮೆ ವೆಚ್ಚದಲ್ಲೂ ಮಾಡಬಹುದು ದೊಡ್ಡ ಬಜೆಟ್ ನಲ್ಲೂ ಮಾಡಬಹುದು ಆದರೆ ಸಿನಿಮಾ ಯಾವ ರೀತಿಯಾಗಿ ಪ್ರೇಕ್ಷಕರಿಗೆ ತಟ್ಟುತ್ತದೆ ಪ್ರೇಕ್ಷಕರ ಮನಸ್ಸನ್ನ ಗೆಲ್ಲುತ್ತದೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗುತ್ತದೆ ಇಲ್ಲಿ ಬಜೆಟ್ ಯಾವುದೇ ಕಾರಣಕ್ಕೂ ಮ್ಯಾಟರ್ ಅಲ್ಲವೇ ಅಲ್ಲ,
ತಂದೆಯ ಜೊತೆಗೆ ಸ್ನೇಹಿತನಿಗೆ ಶುಭ ಕೋರಳು ಬಂದಿದ್ದ ಆದಿತ್ಯ ಶಶಿಕುಮಾರ್ ನಾಯಕ ನಟ ಅಂಜನ್ ಗೆ ಒಳ್ಳೆಯದಾಗಲಿ ಎಂದರು.

ಯಾರೆಲ್ಲಾ ಹುಲಿಬೀರ ಚಿತ್ರದ ಹಾಡುಗಳನ್ನು ಕೇಳಿಲ್ಲವೋ ಈಗಲೇ ನೋಡಿ ಬಿಡುಗಡೆಯಾದ ಟ್ರೇಲರನ್ನು ಗಮನಿಸಿ ಚಿತ್ರದ ಕಂಟೆಂಟ್ ನಿಮಗೆ ಗೊತ್ತಾಗಬಹುದು.

ರವೀ ಸಾಸನೂರ್
MasterNews365
.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.