ಅಲ್ಲಿ ದೊಡ್ಡಮನಿ ಮಡಿವಾಳಪ್ಪ ಗೌಡ ಅಂತ ನೂರು ಎಕರೆ ಆಸ್ತಿ ಉಳ್ಳವ. ಅಂವಾ ಸ್ವಂತ ರೊಕ್ಕ ಖರ್ಚು ಮಾಡಿ ಯಾಳಬಾರದಾಗ ಸಿದ್ದಾರೂಡರ ಮಠನೆ ಕಟ್ಟಿಸ್ಟಾನ. •ಮಠದಾಗ ಎಲ್ಲಾ ನಮೂನಿ ಗ್ರಂಥಗಳನ್ನು ಇಟ್ಟಾನ . ಅಂವಾ ವರ್ಷಕ್ಕೆ ಎರಡು ಬಾರಿ ನಮ್ಮನ್ನು ಕರೆಯಿಸುತ್ತಿದ್ದ. ಅಲ್ಲಿ ಸ್ವಾಮಿಗಳ ಮಠದಾಗ ಭಜನಾ ಇಟ್ಟಿದ್ದರು. ಒಮ್ಮೆ ಯಾಳವಾರದವರು ನನ್ನ ತಾಯಿ ಕೊಟ್ಟು ಕರೆಸಿದರು. ಅಲ್ಲಿ ನಾ.. ಒಬ್ಬನೇ ಅದ್ರೆ ಅವರು ಎಲ್ಲರೂ ಇದ್ದರು. ಅಲ್ಲಿ ನಾನು ಹಾಡುವುದು ಚಾಲೂ ಆತ್ರಿ . ಮೊದಲಿನಿಂದಲೂ ನಾ ಹೆಂಗ ಹಾಡ್ತಿದ್ದೆ ಹಂಗ ಹಾಡಾಂವಾ ಅದನ್ನು ಬಿಡಿಸಿ ಬಿಡಿಸಿ ಹೇಳಾವ . "
" ನನಗೇನು ಇವಾ ಬಗ್ಗುವುದಿಲ್ಲ ಅಂದಿದ್ರಲ್ಲ ಮೂರು ನಾಲ್ಕು ಮಂದಿ ಒಟ್ಟಾಗಿ ಕುಂತು ಬೆಳಗಾನ ಪದ ಕೇಳ್ಯಾರಿ .. ನಾ ಹಾಡಿದಂಗ ಹಾಡಾವ ಅವು ಬಿಡಿಸಿ ಹೇಳ್ಕೊಂತ ಹೋಗಾoವ. ನನಗೆ ಅವ್ರ ನೋಡಿಲ್ಲ ಅವರಿಗೆ ನಾ ನೋಡಿಲ್ಲ. ಬೆಳಗಾನ ಪದ ಹಾಡುವುದು ಮುಗಿತು. ಮುಂಜಾನೆದ್ದು ಕಳಸಾ ತರಕ್ಕ ಗಂಗಸ್ಥಳಕ್ಕೆ ಹೋಗ್ತಾರ ಅಲ್ಲಿ ಬಾರಾ ಒಂದಕ್ಕೆ ಪ್ರಸಾದ ಆಗ್ತದ. ಬೆಳಕಾನ ನಿದ್ದಿಗೆಟ್ಟಿದ್ದೆ. ನಾ ಹೋಗಿ ಹೊಲದಾಗ ಮಲಗಿಕೊಂಡೆ. ಅವರು ನನ್ನ ಹುಡುಕಿಕೊಂಡು ಅಲ್ಲಿತನ ಬಂದಾರ್ರಿ. ಅಲ್ಲಿಗೆ ನಮ್ಮೂರವರು ಮೂರು ಮಂದಿ ಬಂದಿದ್ದರು. ಶೇಂಗಾದ ಹೊಲ ತೊಗರಿ ಹಾಕಿತ್ತು . ಶೇಂಗಾದ ಹೊಲದಾಗ ಒಂದು ಗಿಡ ನಾವು ಮಲಗಿದ್ದೆವು. ಬೆಳತನ ಹಾಡಿದ್ನಲ್ಲ ನನಗೆ ನಿದ್ದೆ ಹತ್ತಿತ್ತು. ನಮ್ಮೂರವಾ ಬಗಲಾಗ ಬಂದು ಕುಂತು ಅವರೀಗಿ ಕೇಳ್ಯಾರಿ . "
"ಹಿಂಗ ನಾವು ಬಹಳ ಹುಡುಕಾಡಿದ್ದೀವಿ ನಿಮಗೆ " ಅಂದರು. ನಂತರ ನನಗೆ ಎಬ್ಬಿಸಿದರು.
"ನಮಸ್ಕಾರ್ರೀ "
"ನಮಸ್ಕಾರ್ರೀ "
"ಏನ್ರೀ ಬಹಳ ಅನುಭವ ಮತ್ತು ಬಹಳ ಅನುಭವದ ಮಾತುಗಳು ಅನ್ನೋಕೆ ಹತ್ತಿದ್ರು. ಅವರು ನಿಜಗುಣರ ಶಾಸ್ತ್ರ ತಗೊಂಡು ಬಂದಿದ್ದರು ".
"ಇಲ್ಲ ಇಲ್ಲ ಹಂಗೇನ್ ಇಲ್ರಿ ಅಂದೆ, ನೋಡ್ರಿ ನಾವು ನಿಜಗುಣದ ಶಾಸ್ತ್ರ ಮಾಡ್ತೀವಿ ಎಲ್ಲ ಮಾಡ್ತೀವಿ, ಆದರೆ ನಿಮ್ಮ ಹಂಗ ಪದ್ಧತಿ ಮ್ಯಾಗ ಶಾಸ್ತ್ರ ಬಿಡಿಸಿ ಹೇಳಕ್ಕ ನಮಗೆ ಬರುವುದಿಲ್ಲ. " ಅಂತ ಅಂದ್ರು.
" ಏ....ಇದು ಬರೀ ಕೆಂಡನ ಅದ. ಇದರಾಗ ಉರಿನು ಇಲ್ಲ ಹೊಗಿನೂ ಇಲ್ಲ ಅಂತ ಒಪ್ಕೊಂಡ್ರು. "
"ಅಲ್ಲಮ ಪ್ರಭುವಿನ ಮಠಕ್ಕೆ ಆಲಮೇಲದವರು ಬಂದಿದ್ದರು. ಅವರೂ ಶ್ಯಾಣ್ಯಾರು. ಪದಾ ಹಾಡಿ ಕ್ಯಾಸೆಟ್ ಮಾಡಿದವರು. ಅವರ ತಂಡನೂ ಛಂದ ಆದ. ಅಂವಾ ಮುಳಸಾವಳಗಿಯಾಂವ ಪಟಗಿ ವಾಸ್ತಾರ . ಅಂವಾ ಕರಕೊಂಡು ಬಂದಿದ್ದನ್ರಿ. ತಮದಡ್ಡಿ ಯವರು ನನಗ ಬಹಳ ವಹಿವಾಟು. ನಾ ಹಾಕಾ ಹಾಡಿ ಬಿಡಿಸಿಕ್ಕ ಹತ್ತಿದ್ಯಾ. ಹಿಂದಾಗತೆ ಅವರು ಬೆಳಗಾನಾ ಭಜನಾ ಮಾಡಿದ್ರು. ಏನೂ ತಟ್ಟಲಿಲ್ಲ ಅವ್ರಿಗಿ. ಮುಳಸಾವಳಗಿ ಮಾಸ್ತರಗ ಹೇಳ್ವಾರ. ಹಿಂಗ ಹಳ್ಳೂರಾವ ಬಂದಿದ್ದ ನಮಗೇನೂ ಅವನ ಮುಂದ ನಡೀಲಿಲ್ಲ . "
"ಆ ಪ್ರಕಾರ ಪದಹಾಡುವಾ. ಬರೀ ಪದಾ ಹಾಡೂದಲ್ಲ ಬಿಡಿಸಿ ಬಿಡಿಸಿ ಹೇಳಾಂವಾ .. ಏ ..... ಇಕಾಡಿ ಪೈಕಿ ಇಲ್ಲ ಅಂ ವಾ . ಹೆಂದಾವಪ್ಪ... ನಮ್ಮಲ್ಲಿ ಬೆಳೆದು ಹೋಗ್ಯಾನಂದ್ರ... ಅಂವಾ " ಯಾವಾಗ ಬರ್ತಾನಂತ ಕಾಯುತ್ತಿದ್ದರು.
"ಅಲ್ಲಿ ಅಮ್ಮಾವ್ರ ಜಾತ್ರಿ ವರ್ಷಕ್ಕೆ ಎರಡು ಸಲ ಮಾಡ್ತಾರ. ನಾ ಜಾತ್ರಿಗಿ ಬಂದ .... ಬರ್ತಾನಂತ ಅವರು ಮುದ್ದಾಂ ಮುಳಸಾವಳಗಿಯವರು, ಅಲ್ಮೆಲದವರು, ಹಿಟ್ಟನಹಳ್ಳಿಯವರು, ಕೂಡಿ ಎರಡು ಗಾಡಿ ಮಾಡ್ಕೊಂಡು ಬಂದಾರ್ರಿ. ಅದು ನಮಗೆ ಏನು ಗೊತ್ತಿಲ್ಲ ಅದರಾಗ ಅವ ಈ ವಿಷಯ ತಮದಡ್ಡಿಯಾವಾ ಹೇಳಿದನ್ರಿ. "
"ಬಸವ ಶರಣರ ಮುದ್ದಾಂ ನಿಮಗ ನೋಡಾಕ ಗಾಡಿ ತುಂಬಾ ಮಂದಿ ಬಂದಾರ್ರಿ "
"ಆಯ್ತು ಬಿಡ್ರಿ ನೋಡಲ್ಲಾಕ್ರಿ " ಅಂತ ನಗುತ್ತಾ ಅಂದೆ. ಅಂದು ಕೂಡಲೇ ಅವರು ಒಮ್ಮೆ ಭಜನಾ ಮಾಡಿದ್ರೆ ನಂತರ ನನಗೆ ಅವಕಾಶ ಕೊಟ್ಟರು.
"ನೀವು ಹಾಡ್ರಿ.... ನೀವು ಹಾಡ್ರಿ...."ಅಂದ್ರು.
"ಇಲ್ರಪ್ಪ ನೀವು ಹಾಡ್ರಿ ನಿಮ್ಮ ಸ್ವರಾ ಸಂಗೀತ ಚೆಂದ ಅದ "ಅಂದೆ.
" ಇಲ್ಲ ನೀವ ಹಾಡ್ರಿ "ಅಂದ್ರು. ಅದಕ್ಕೆ ನಾ ಹಾಡಕ್ ಶುರು ಮಾಡಿದೆ.
" ಶ್ರೀ ಗುರುವಚನನುಪದೇಶವ ನಾಲಿಸಿ
ದಾಗಳಹುದು ನರರಿಗೆ ಮುಕುತಿ "
ಅಂತ ಹಾಡಾನ ಆ ಮಾಸ್ತರ್ ಅಲ್ಲೇ ಪೆಟ್ಟಿಗೆ ಮ್ಯಾಗ ಕುಂತು ಪ್ರಶ್ನೆ ಮಾಡಾಂವ. ಅದನ್ನ ನಾ ಬಿಡಿಸಿ ಹೇಳಾವ್ರಿ. ಭಜನಾ ಸಂಜೀವಲೇ ಚಾಲು ಆಗಿದ್ದು ಅವರು ಒಬ್ಬೊಬ್ಬರಿಗೂ ಚಪ್ಪಾಳೆ ಕೊಡಲಿಲ್ಲ. ಅವರು ಪ್ರಶ್ನೆ ಮಾಡೋರು ಬರೋಬ್ಬರಿ ರಾತ್ರಿ ಎರಡಾತ್ರಿ. ನನಗ ಎರಡರ ತನಕ ಪ್ರಶ್ನೆ ಮಾಡಿದರು ಅದಕ್ಕೆ ನಾನು ಉತ್ತರ ಕೊಡವ, ಅವರಿಗೆ ಏನು ಸಂದ ಸಿಗಲಿಲ್ಲ. ಅದರಾಗ ಅಲ್ಲಿ ಒಬ್ಬ ತಾಳ ಭಾರಿಸ್ಕೊಂಡು ನಿಂತಿದ್ದರಿ. ಔಾಂಗ ಹ್ಯಾಂಗ ಕಾಣ್ತೋ ಏನೋ ನನಗೆ ಒಂದು ಗೊತ್ತಿಲ್ಲ ನನಗ ಉದ್ದಕ ಕಾಲೀಗಿ ಬಿದ್ದು ಬಿಟ್ಟ. "
"ನನಗ ಇವತ್ತು ಸರಿಯಾದ ಗುರುಸಿಕ್ಕ ನೋಡ್ರಿ ಇಲ್ಲಿ ವರೆಗೂ ಇಂಥ ಗುರು ನನಗೆ ಸಿಕ್ಕಿದ್ದಿಲ್ಲ" ಅಂದ
"ಅಯ್ಯಪ್ಪ ಹೆಂತಾವ್ನೊ ಎಪ್ಪಾ ...ನೀನು " ಅಂದೆ ಅವಾಗ ಮಾಸ್ತರು ಕೈ ಮುಗಿದನ್ರಿ ".
" ನಾ ಮುದ್ದಾಂ ನಿಮ್ಮನ್ನ ನೋಡಾಕ್ಕ ಬಂದಿದ್ದೆ " ಅಂದ.
"ಆಯ್ತ್ರಿ ಅದ್ರಾಗೇನ್ ತಪ್ಪದ ? ಏನಿಲ್ಲಪ್ಪ ಉರೀನೂ ಇಲ್ಲ ಹೋಗೀನೂ ಇಲ್ಲ ಬರೀ ಕೆಂಡ ಆದ . "
"ನಿಮ್ಮಲ್ಲಿ ನೋಡುವಂತದು ಏನು ಇಲ್ಲ ನೀ ಬಲ್ಲಿದಾಂವ ಅದೀದಿ ". ಅಂದ್ರುಮುಂದ ಅವರಿಗೆ ನಮಗೆ ಪ್ರೇಮ ಬೆಳಕೊಂಡು ಹೋಯಿತ್ರಿ ".
"ಕಡಕೋಳ ದೋಣಿ ಆಚೆಕಡೆ ಅಲ್ಲಮಪ್ರಭು ಮಠ ಅದ ... ಅಲ್ಲಿ ಅಮ್ಮಾವ್ರು ಗವಿಕಟ್ಟಿಕೊಂಡು ಬಾಗಿಲ ಮುಚ್ಕೊಂಡು ಮೂರು ತಿಂಗಳು ಒಳಗೆ ಕುಂತು ಅನುಷ್ಠಾನ ಮಾಡ್ಯಾರಿ. ಈಗ ಕಾಕಾ ಮಗಳು ಕೂಡಿಕೊಂಡು ಸ್ವಂತ ಖರ್ಚು ಮಾಡಿ ಅಲ್ಲಮಪ್ರಭುವಿನ ಮಠ ಕಟ್ಟಿ ಅಲ್ಲಿ ವರುಷದಾಗ ಎರಡು ಸಾರಿ ಜಾತ್ರೆ ಮಾಡುತ್ತಾರೆ . ನನಗ ಮುದ್ದಾಂ ಅಲ್ಲೀಗಿ ಕರಸ್ತಾರ ಆದರೆ ನನಗ ಈಗ 80 ವರ್ಷ ವಯಸ್ಸು. ಮೈಯ್ಯಾಗ ಬೇರೆ ತಾಕತ್ತ ಇಲ್ಲ ಹಿಂಗಾಗಿ ಅಲ್ಲಿಗೆ ಹೋಗೋದು ನಾನು ಬಿಟ್ಟಿನ್ರಿ. "
ನಾಳೆ…
ತೋಗುಡ್ಡಕ್ಕೆ ಹೋದಾಗಿನ ಘಟನೆ –

