Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಾವು ಯಾರಿಗೂ ಕಮ್ಮಿಯಿಲ್ಲ
- ಸಿನಿಮಾ

ನಾವು ಯಾರಿಗೂ ಕಮ್ಮಿಯಿಲ್ಲ

ಕನ್ನಡಿಗರ ಅಸ್ಮಿತೆ,ಕನ್ನಡಿಗರ ಅಸ್ತಿತ್ವದ ಬಗ್ಗೆ ನಾವೆಲ್ಲ ಕನ್ನಡಿಗರು ಸದಾ ಹೆಮ್ಮೆ ಪಡಬೇಕು ಹಾಗೂ ಯಾವತ್ತು ಒಂದು ಕೈ ಮೇಲೆ ಅಂತಲೇ ಗರವದಿಂದ ನಡೆಯಬೇಕು. ಸತಿ ಸುಲೋಚನ – ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಸತಿ ಸುಲೋಚನಾ ಎಂಬ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ.ರಾವ್‌ […]

ಕನ್ನಡಿಗರ ಅಸ್ಮಿತೆ,ಕನ್ನಡಿಗರ ಅಸ್ತಿತ್ವದ ಬಗ್ಗೆ ನಾವೆಲ್ಲ ಕನ್ನಡಿಗರು ಸದಾ ಹೆಮ್ಮೆ ಪಡಬೇಕು ಹಾಗೂ ಯಾವತ್ತು ಒಂದು ಕೈ ಮೇಲೆ ಅಂತಲೇ ಗರವದಿಂದ ನಡೆಯಬೇಕು.

ಸತಿ ಸುಲೋಚನ – ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಸತಿ ಸುಲೋಚನಾ ಎಂಬ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ.ರಾವ್‌ ಮಾಡಿದ್ದರು.

ಈ ಚಿತ್ರವನ್ನು ಲಾಲ್‌ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ, ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ನಿರ್ಮಿಸಿದರು. ಸುಮಾರು ೪೦ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ ಇದಾಗಿತ್ತು. ಬ್ರಿಟೀಷ್‌ ಫಿಲಂ ಸೆನ್ಸಾರ್‌ ಬೋರ್ಡ್‌ ಸೆನ್ಸಾರ್‌ ಮಾಡಿದ ಬಳಿಕ, ೧೭೩ ನಿಮಿಷಗಳ ಅವಧಿ ಹೊಂದಿದ್ದ ಈ ಚಲನಚಿತ್ರ ೧೫,೫೦೦ ಅಡಿಗಳಷ್ಟು ಇತ್ತು.

ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಮೊದಲು ಬಿಡುಗಡೆಯಾಯಿತು. ೧೯೦೫ ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲಿ ಆರು ವಾರಗಳ ಕಾಲ ಪ್ರದರ್ಶನ ಕಂಡಿತು. ಆ ಸಮಯದ ನಿಯಮದಂತೆ, ಬ್ರಿಟೀಷ್‌ ಫಿಲಂ ಸೆನ್ಸಾರ್‌ ಬೋರ್ಡ್‌ ವತಿಯಿಂದ ಸೆನ್ಸಾರ್‌ ಆದರೂ, ಆಯಾ ಜಿಲ್ಲೆಗಳಲ್ಲಿ ಪ್ರದರ್ಶನಕ್ಕೆ ಮೊದಲು ಸೆನ್ಸಾರ್‌ ಅನುಮತಿ ಪಡೆಯಬೇಕಾಗಿದ್ದು. ಆದ್ದರಿಂತ ಸೂಕ್ತ ಅನುಮತಿ ಪಡೆದ ಬಳಿಕ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಈ ಚಿತ್ರವನ್ನು ಪ್ರದರ್ಶಿಸಲಾಯಿತು ಎಂಬುದು ಇತಿಹಾಸ

ಯಾವುದೇ ಚಲನಚಿತ್ರದ ಟೀಸರ್ ಅಥವಾ ಟ್ರೈಲರ್ ನೋಡುಗರಿಗೆ ಇಷ್ಟವಾಗಬೇಕು ಎಂದರೆ, ಅದರಲ್ಲಿ ಕೇವಲ ಅದ್ಧೂರಿತನ, ಸ್ಟಾರ್‌ಗಳ ಉಪಸ್ಥಿತಿ ಅಥವಾ ಅದ್ಭುತ ದೃಶ್ಯಗಳಿದ್ದರೆ ಸಾಲದು. ನೋಡುಗರ ಮನಸ್ಸಿನಲ್ಲಿ ಕುತೂಹಲ, ನಿರೀಕ್ಷೆ ಮತ್ತು ಸಿನಿಮಾ ನೋಡುವ ಆಸಕ್ತಿ ಮೂಡಿಸುವ ಶಕ್ತಿ ಇರಬೇಕು.
ಒಂದು ಒಳ್ಳೆಯ ಟೀಸರ್ ಅಥವಾ ಟ್ರೈಲರ್ ಯಶಸ್ವಿಯಾಗಲು ಈ ಕೆಳಗಿನ ಅಂಶಗಳು ಬಹಳ ಮುಖ್ಯ.

ಟೀಸರ್ ಅಥವಾ ಟ್ರೈಲರ್‌ನ ಆರಂಭವೇ ನೋಡುಗರ ಗಮನ ಸೆಳೆಯಬೇಕು. ಮೊದಲ ಕೆಲವು ಸೆಕೆಂಡ್‌ಗಳಲ್ಲೇ ಏನೋ ವಿಶೇಷವಾದದ್ದು ಕಾದಿದೆ ಎಂಬ ಭಾವನೆ ಮೂಡಬೇಕು.
ಚಿತ್ರದ ಕಥೆಯ ಸುಳಿವು
ಸಂಪೂರ್ಣ ಕಥೆಯನ್ನು ಬಿಚ್ಚಿಡಬಾರದು. ಆದರೆ ಸಿನಿಮಾ ಯಾವ ಪ್ರಕಾರದ್ದು, ಅದರ ಮುಖ್ಯ ಸಂಘರ್ಷ ಏನು ಎಂಬ ಸಣ್ಣ ಸುಳಿವು ಸಿಗಬೇಕು.
ಕುತೂಹಲ ಮೂಡಿಸುವ ದೃಶ್ಯಗಳು
ಪ್ರತಿಯೊಂದು ದೃಶ್ಯವೂ ಒಂದೊಂದು ಪ್ರಶ್ನೆಯನ್ನು ಹುಟ್ಟುಹಾಕಬೇಕು. ಮುಂದೇನಾಗಬಹುದು ಎಂಬ ಕುತೂಹಲ ನೋಡುಗರಲ್ಲಿ ಉಳಿಯಬೇಕು.
ಹಿನ್ನೆಲೆ ಸಂಗೀತದ ಶಕ್ತಿ
ಒಂದು ಅದ್ಭುತ ದೃಶ್ಯಕ್ಕೆ ಹಿನ್ನೆಲೆ ಸಂಗೀತ ಜೀವ ತುಂಬುತ್ತದೆ. ಟ್ರೈಲರ್‌ನ ಭಾವನೆ, ವೇಗ ಮತ್ತು ತೀವ್ರತೆಯನ್ನು ನಿರ್ಧರಿಸುವಲ್ಲಿ ಸಂಗೀತದ ಪಾತ್ರ ಬಹಳ ದೊಡ್ಡದು.
ಕಲಾವಿದರ ಅಭಿನಯ
ನಟರ ನಟನೆ, ಅವರ ಸಂಭಾಷಣೆ ಹೇಳುವ ಶೈಲಿ, ಮುಖಭಾವ ಮತ್ತು ಪಾತ್ರದ ವಿಭಿನ್ನತೆ ನೋಡುಗರಿಗೆ ಆಕರ್ಷಣೆಯಾಗಬೇಕು.

ಕಾಲಘಟ್ಟಗಳನ್ನು ಮೀರಿ ಕನ್ನಡ ಭಾಷೆ ಸೇರಿ ಜಗತ್ತಿನಲ್ಲಿರುವ ಎಲ್ಲ ಭಾಷೆಗಳಲ್ಲಿಯೂ ಸಹ ಸಿನಿಮಾಗಳು ಬರುತ್ತಿವೆ ಒಳ್ಳೊಳ್ಳೆಯ ಚಿತ್ರಗಳನ್ನು ಎಲ್ಲ ನಿರ್ದೇಶಕರು ನಿರ್ಮಾಪಕರು ಮಾಡುತ್ತಲೇ ಇದ್ದಾರೆ, ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವುದಾದರೆ, ಕಥೆ ಸಿದ್ಧವಾದ ನಂತರ ಅದಕ್ಕೆ ಸಂಬಂಧಪಟ್ಟ ಬಹಳಷ್ಟು ಚಟುವಟಿಕೆಗಳು ನಡೆದು ಚಿತ್ರೀಕರಣ ಮತ್ತು ಒಂದಷ್ಟು ಕಂಟೆಂಟ್ ನ್ನ ನೋಡುಗರಿಗೆ ತೋರಿಸಬೇಕಾದಾಗ, ಆಯಾ ಚಿತ್ರದ ಕಲಾವಿದರಿಗೆ ನಿರ್ದೇಶಕರಿಗೆ ನಿರ್ಮಾಪಕರಿಗೆ ಒಂದು ಕುತೂಹಲ ಇದ್ದೇ ಇರುತ್ತದೆ, ಅಂತಹದ್ದೇ ಒಂದು ಕುತೂಹಲ ಇದ್ದದ್ದು ಲಾರ್ಡ್ ಗಾಗ ಚಿತ್ರದ ಟೀಸರ್ ಹೇಗಿರುತ್ತೆ ಅನ್ನೋ ವಿಚಾರಕ್ಕೆ.

ನಿನ್ನೆ ನಡೆದ ಒಂದು ಇವೆಂಟ್ ನಲ್ಲಿ, ಕುತೂಹಲ ಭರಿತವಾದ ಅನುಭವ ಕೊಟ್ಟಿದ್ದು.
ಲಾರ್ಡ್ ಗಾಗ ಅನ್ನೋ ಬ್ರಿಲಿಯಂಟ್ ಚಿತ್ರದ ಟೀಸರ್ ಎನ್ನಬಹುದು.

ಕನ್ನಡ ಚಿತ್ರರಂಗದ ಭವ್ಯ ಪರಂಪರೆಯ ಇತಿಹಾಸವನ್ನು ನಾನು ನೆನಪಿಸಿದ್ದಕ್ಕೆ ಕಾರಣ,
ಲಾರ್ಡ್ ಗಾಗ ಎನ್ನುವ ಕ್ರಿಯಾಶೀಲ ಚಿತ್ರತಂಡ,ಇಲ್ಲಿಯ ಕನ್ನಡ ಚಿತ್ರರಂಗ ನಡೆದುಬಂದ ಹಾದಿ,ಎಲ್ಲ ಕಲಾವಿದರ,ನಿರ್ದೇಶಕರ,ನಿರ್ಮಾಪಕರ ಮತ್ತು ಚಿತ್ರವೊಂದು ತಯಾರ ಆಗಲು ಕೆಲಸ ಮಾಡುವ ಎಲ್ಲರ ಕುರಿತಾಗಿ ಮಾಡಿದ್ದ ವಿಡಿಯೋ ತುಣುಕು ತುಂಬಾ ವಿಶೇಷವಾಗಿ ಕೂಡಿತ್ತು ಎನ್ನಬಹುದು

ಲಾರ್ಡ್ ಗಾಗ
ಟೀಸರ್ ನಲ್ಲಿ ಏನೇನಿದೆ ??

ಪ್ರೀತಿಯ ಛಾಯೆದೆ, ಪ್ರೇಮದ ಮಾಯೆ ಇದೆ, ನಿನ್ನನ್ನು ಬಿಟ್ಟು ಇರಲಾರೆ ಎಂಬ ಭಗ್ನ ಪ್ರೇಮಿಯ ಎಳೆಯಿದೆ, ಪ್ರೀತಿ ಅನ್ನೋದು ಅಷ್ಟು ಸೂಕ್ಷ್ಮವ ಅನ್ನೋ ಕಲಾವಿದೆ, ಪ್ರೀತಿಗಾಗಿ ನಾನು ಏನನ್ನು ಬೇಕಾದರೂ ಮಾಡಬಲ್ಲೆ ಎಂಬ ತವಕವಿದೆ, ಇಂತಹ ಎಲ್ಲ ರೀತಿಯ ಕಂಟೆಂಟ್ ಅನ್ನ ಕ್ಯಾರಿ ಮಾಡಿದೆ ಲಾರ್ಡ್ ಗಾಗ ಚಿತ್ರದ ಟೀಸರ್

‘ಝೀರೋ ಗ್ರ್ಯಾವಿಟಿ ಫಿಲಂಸ್’ ಲಾಂಛನದಲ್ಲಿ ಮುಕಿ ರೆಗುನಾಥನ್ ನಿರ್ಮಿಸುತ್ತಿರುವ, ವೈಕೆ ನಿರ್ದೇಶನದ ‘ಲಾರ್ಡ್ ಗಾಗ’ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ

ನಟರಾದ ಶೂನ್ಯ, ಮುಕಿ ರೆಗುನಾಥನ್, ವೈಕೆ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಮತ್ತು ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ, ತಮ್ಮ ಚಿತ್ರದ ಕುರಿತಾದ ಪ್ರಮುಖ ಹೈಲೈಟ್ ಗಳ ಬಗ್ಗೆ ಮಾತನಾಡಿ, ಅದರಲ್ಲೂ ವಿಶೇಷವಾಗಿ ನಿರ್ಮಾಪಕರು ತಮಗಿರುವ ಕನ್ನಡ ಚಿತ್ರರಂಗದ ಬಗ್ಗೆಗಿನ ತಿಳುವಳಿಕೆ ಹಾಗೂ ಭವಿಷ್ಯದಲ್ಲಿ ತಾವು ಕಂಡ ದೊಡ್ಡ ಕನಸಿನ ಬಗ್ಗೆ ಮಾತನಾಡಿದರು.

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.