Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಯ್ಯನ ಮನೆ 2 – ರೆಕಾರ್ಡ್
- ವಿಶೇಷ ಸಮಾಚಾರ

ಅಯ್ಯನ ಮನೆ 2 – ರೆಕಾರ್ಡ್

ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ: Zee5 ನಲ್ಲಿ 10 ಕೋಟಿ ವೀಕ್ಷಣೆ ನಿಮಿಷಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಅಯ್ಯನ ಮನೆ 2’ ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಕರ್ನಾಟಕದಾದ್ಯಂತ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ, […]

ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ: Zee5 ನಲ್ಲಿ 10 ಕೋಟಿ ವೀಕ್ಷಣೆ ನಿಮಿಷಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಅಯ್ಯನ ಮನೆ 2’

ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಕರ್ನಾಟಕದಾದ್ಯಂತ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ, ಗುಣಮಟ್ಟದ ಸ್ಥಳೀಯ ಕಂಟೆಂಟ್‌ಗೆ ಇರುವ ಪ್ರಚಂಡ ಬೇಡಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ತನ್ನ ರೋಚಕ ನಿರೂಪಣೆ, ಮೈನಡುಗಿಸುವಂತಹ ಸಸ್ಪೆನ್ಸ್ ಹಾಗೂ ಊಹೆಗೂ ನಿಲುಕದ ಟ್ವಿಸ್ಟ್‌ಗಳಿಂದ ಈ ಸರಣಿ ವೀಕ್ಷಕರನ್ನು ಆರಂಭದಿಂದಲೇ ಕಟ್ಟಿಹಾಕಿದೆ. ಕೇವಲ ಹಾರರ್ ಅಂಶಗಳಿಗೆ ಸೀಮಿತವಾಗದೆ, ಕೌಟುಂಬಿಕ ಭಾವನಾತ್ಮಕ ಸನ್ನಿವೇಶಗಳು ಮತ್ತು ನಿಗೂಢ ರೋಮಾಂಚನವನ್ನು ಸರಿಸಮಾನವಾಗಿ ಬೆರೆಸಿರುವುದು ಪ್ರೇಕ್ಷಕರನ್ನು ಗಾಢವಾಗಿ ಆಕರ್ಷಿಸಿದೆ. ರಹಸ್ಯಗಳ ಗೂಡಾಗಿರುವ ಪುರಾತನ ಹಿರಿಯರ ಮನೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ವರ್ಷಗಳಿಂದ ಮುಚ್ಚಿಹೋಗಿದ್ದ ಸತ್ಯಗಳು ಮತ್ತು ಅಸಹಜ ಘಟನೆಗಳ ಸುತ್ತ ತೆರೆದುಕೊಳ್ಳುತ್ತದೆ. ವಿಚಿತ್ರ ಕನಸುಗಳ ನಡುವೆ ಭಯವನ್ನು ಮೆಟ್ಟಿನಿಂತು, ನಾಗಲಾಂಬಿಕೆಯ ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆಯಲು ಹೋರಾಡುವ ‘ಪೂರ್ಣಿ’ಯ ಪಾತ್ರ ಇಡೀ ಸರಣಿಗೆ ಜೀವ ತುಂಬಿದೆ. ನಂಬಿಕೆ ಮತ್ತು ಭಯದ ನಡುವಿನ ತೆಳುವಾದ ಗೆರೆಯನ್ನು ಶೋಧಿಸುತ್ತಾ ಸಾಗುವ ಈ ಸರಣಿ, ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಿದೆ.

ಕಾರ್ಯಕ್ರಮದ ಈ ಅಭೂತಪೂರ್ವ ಯಶಸ್ಸಿನ ಕುರಿತು ಮಾತನಾಡಿದ ಜೀ ಕನ್ನಡ ಹಾಗೂ ಜೀ ಪವರ್ ಮುಖ್ಯ ವಾಹಿನಿ ಅಧಿಕಾರಿ ಮತ್ತು ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. “‘ಅಯ್ಯನ ಮನೆ 2’ ಸರಣಿಯು 100 ಮಿಲಿಯನ್ ವೀಕ್ಷಣೆ ನಿಮಿಷಗಳ ಬೃಹತ್ ಮೈಲಿಗಲ್ಲನ್ನು ದಾಟಿರುವುದು ಮತ್ತು ಕರ್ನಾಟಕದ ಪ್ರೇಕ್ಷಕರಿಂದ ಈ ಮಟ್ಟದ ಅದ್ಭುತ ಪ್ರತಿಕ್ರಿಯೆ ಪಡೆದಿರುವುದು ನಮಗೆ ಹೆಮ್ಮೆ ತಂದಿದೆ. ಕೌಟುಂಬಿಕ ಭಾವನೆಗಳು ಹಾಗೂ ಅತಿಮಾನುಷ ಕೌತುಕದ ಕಥಾಹಂದರವನ್ನು ಜನರು ಎಷ್ಟು ಪ್ರೀತಿಸಿದ್ದಾರೆ ಎಂಬುದಕ್ಕೆ ಈ ಸಾಧನೆಯೇ ಸಾಕ್ಷಿ. ಜೀ5 ನಲ್ಲಿ ನಾವು ಸಾಂಸ್ಕೃತಿಕವಾಗಿ ಬೇರೂರಿರುವ, ಪ್ರಭಾವಿ ಹಾಗೂ ಆಕರ್ಷಕ ಸ್ಥಳೀಯ ಕಥೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಈ ಯಶಸ್ಸು ಕನ್ನಡ ಕಂಟೆಂಟ್‌ ಬೆಳವಣಿಗೆಗೆ ಹಾಗೂ ಮನಮುಟ್ಟುವ ಕಥೆಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಾಗಿದೆ” ಎಂದು ದೀಪಕ್ ಶ್ರೀರಾಮುಲು ಅವರು ತಿಳಿಸಿದ್ದಾರೆ.

ತನ್ನ ಯಶಸ್ವಿ ಡಿಜಿಟಲ್ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಕನ್ನಡ ಮನರಂಜನೆಯ ಶ್ರೀಮಂತಿಕೆಯನ್ನು ಬಿಂಬಿಸುವ ಪ್ರಾದೇಶಿಕ ಕಥೆಗಳನ್ನು ನೀಡುವ ಜೀ5 ನ ಬದ್ಧತೆಯನ್ನು ‘ಅಯ್ಯನ ಮನೆ 2’ ಮತ್ತಷ್ಟು ಬಲಪಡಿಸಿದೆ. ಪ್ರಸ್ತುತ ಈ ಜನಪ್ರಿಯ ಸರಣಿಯು ಕನ್ನಡ ಜೀ5 (ZEE5) ಒಟಿಟಿ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.