ಸ್ಟಾರ್ ಸುವರ್ಣದಲ್ಲಿ
“ಓ ಮನಸೇ”
ಸ್ಟಾರ್ ಸುವರ್ಣದಲ್ಲಿ
ನವೆಂಬರ್ 10ರಿಂದ “ಓ ಮನಸೇ” ಎಂಬ ಮತ್ತೊಂದು ಅದ್ಭುತ ಕಂಟೆಂಟ್ ಹೊಂದಿರುವ ಧಾರಾವಾಹಿ ಪ್ರಸಾರವಾಗಲು ಸಿದ್ಧವಾಗಿದೆ.
ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಮತ್ತು ಪ್ರತಿಭಾವಂತ ನಿರ್ದೇಶಕ ಎಂದೇ ಮನ್ನಣೆ ಗಳಿಸಿ ಬಹಳಷ್ಟು ಒಳ್ಳೆಯ ಧಾರವಾಹಿಗಳನ್ನ ನಿರ್ದೇಶನ ಮಾಡಿರುವ,
ನಿರ್ದೇಶಕ ಮಧುಸೂಧನ್ ಮಾತನಾಡಿ,
ಎರಡು ಜನರೇಶನ್ ಗ್ಯಾಪ್ ಆದಾಗ,ಪ್ರೀತಿ, ಪ್ರೇಮ,ಬಾಂಧವ್ಯ ಇವುಗಳ ನಡುವೆ ಎಂತಹ ವ್ಯತ್ಯಾಸ ಇರತ್ತೆ ಅನ್ನೋ ಗಟ್ಟಿ ಕಥೆಯ ಎಳೆಯನ್ನು ಧಾರಾವಾಹಿಯಾಗಿ ಮಾಡ್ತಾ ಇದ್ದಿವಿ ಎನ್ನುವ ಮೂಲಕ ಮತ್ತೊಂದು ಮೆಗಾ ಹಿಟ್ ಪ್ರಾಜೆಕ್ಟ್ ಕೊಡೋದಕ್ಕೆ ಸಿದ್ಧವಾಗಿದೆ ತಂಡ ಎಂದರು.
“ಓ ಮನಸೇ” ಧಾರವಾಹಿಯಲ್ಲಿ ಅಜಿತ್ ಹಂಡೆ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು,
ಈ ಧಾರಾವಾಹಿಯಲ್ಲಿ ನಾನು ನಟಿಸುವುದಕ್ಕೆ ಒಪ್ಪಲು ಕಾರಣ “ಕಥೆ”
ತುಂಬಾ ಇಂಟೆನ್ಸ್ ಆದಂತಹ ಕಥೆಯನ್ನ ಧಾರವಾಹಿಯಾಗಿ ಮಾಡುತ್ತಿರುವ ಸುವರ್ಣ ವಾಹಿನಿಗೂ ಮತ್ತು ತಂಡಕ್ಕೂ ನನ್ನ ಧನ್ಯವಾದ, ಇದರ ಹಿಂದೆ ನಾನು ಮಾಡಿದ ಧಾರಾವಾಹಿಗಳಾಗಲಿ ಸಿನಿಮಾಗಳಾಗಲಿ ಕಥೆಗೆ ಮನ್ನಣೆ ಕೊಟ್ಟಿದ್ದ ಪ್ರಾಜೆಕ್ಟ್ ಗಳಾಗಿದ್ದವು, ಹೀಗಾಗಿ ನಾನು ಮಾಡಿದ ಪಾತ್ರ ನಿಮ್ಮೆಲ್ಲರಿಗೂ ಇಷ್ಟವಾಗಿದ್ದು ನನಗೆ ಖುಷಿ ಇದೆ, ಅದೇ ರೀತಿಯಾಗಿ ಓ ಮನಸೇ ಧರವಾಹಿಯಲ್ಲಿನ ಪ್ರತಿಪಾತ್ರವೂ ನಿಮಗೆ ಇಷ್ಟವಾಗುತ್ತೆ ಹಾಗೂ ನೀವು ತುಂಬಾ ಖುಷಿಯಿಂದ ಭಾವನಾತ್ಮಕವಾಗಿ ಈ ಧಾರಾವಾಹಿಯನ್ನು ನೋಡುತ್ತೀರಿ ಎಂಬ ನಂಬಿಕೆ ನನಗಿದೆ ಎಂದರು.
ನಂತರ ಮಾತನಾಡಿದ ಕಲಾವಿದೆ
ಅಶ್ವಿನಿ ಗೌಡ,
ಹಲವಾರು ವರ್ಷಗಳ ಸೀರಿಯಲ್ಸ್,ಸಿನಿಮಾ,ಹಾಗೆ ಕೆಲವು ರಿಯಾಲಿಟಿ ಷೋಗಳು ಇದರ ಮಧ್ಯ ಮನೋರಂಜನೆಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳು ಎಲ್ಲವನ್ನು ನಾವು ಮಾಡಿದ್ದೇನೆ,
ಮತ್ತೊಂದು ವಿಷ್ಯ ಅಂದ್ರೆ ನಾನು ಟೆಲಿವಿಷನ್ ಕೆಲಸ ಮಾಡುವಾಗ ನಟಿಯಾಗಿ ಕೆಲಸ ಮಾಡ್ತಾ ಇದ್ದೇ ಅದೇ ರೀತಿಯಾಗಿ ನನಗೆ ಮತ್ತೊಂದು ದಾರಿ ಕಂಡಿದ್ದು ನಾನೊಬ್ಬ ನಿರೂಪಕಿಯಾಗಿ ನನ್ನ ಜರ್ನಿ ಶುರು ಮಾಡಿದ್ದು,ಇತ್ತೀಚಿಗೆ ಬಹಳ ವರ್ಷಗಳಿಂದ ನಾನು ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ, ಬಿಗ್ ಬಾಸ್ ಶೋ ನಂತರ ಮತ್ತೆ ನಾನು ವಾಪಸ್ ಆಗ್ತಾ ಇರೋದು, “ಓ ಮನಸೇ” ಮೂಲಕ ಅನ್ನೋದು ನನಗೆ ಖುಷಿ ಕೊಟ್ಟಿದೆ
ನಾಯಕ ದರ್ಶಕ್ ಮಾತನಾಡಿ,
ಈ ಮುಂಚೆ ನಾನು ಮಾಡಿದ್ದ ಬೆಟ್ಟದ ಹೂ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೆ,ಅದರ ನಂತರ ಈ ಪ್ರಾಜೆಕ್ಟ್ ನನಗೆ ಮತ್ತೊಂದು ದೊಡ್ಡ ಅವಕಾಶವಾಗಿ ರೂಪ ಪಡೆಯುತ್ತೆ ಅನ್ನೋ ಮಾತು ಹೇಳಿದ್ರು.
ಈಗಾಗಲೇ ಒಂದು ಧಾರವಾಹಿ ಮಾಡಿ ತನ್ನದೇ ಆದ ಹೆಸರು ಗಳಿಸಿದ್ದ ನಾಯಕಿ, ಮಧುಮಿತ ಮಾತನಾಡಿ.
ಕಲಾವಿದರಾಗಿ ನಾವೆಲ್ಲರೂ ಒಂದು ಪ್ರಾಜೆಕ್ಟ್ ಮುಗಿದ ನಂತರ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ, ಅಂತಹ ಸಮಯದಲ್ಲಿ ಒಳ್ಳೆಯ ಕಥೆಗಳು ಬಂದಾಗ ನಾವು ಮನಸಾಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ, ಹಾಗೆ ಹೋಗ್ತಿದ ಕಥೆ “ಓ ಮನಸೇ” ನನ್ನದು ತುಂಬಾ ಒಳ್ಳೆಯ ಪಾತ್ರ, ಬದುಕನ್ನು ಸಂಭ್ರಮಿಸುವ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಪಾತ್ರವಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದರು.
ಕನ್ನಡದ ಪ್ರತಿಭಾವಂತ ಹಿರಿಯ ನಟಿ
ರೇಖಾ ವಿ ಕುಮಾರ್ ಮಾತನಾಡಿ,ಸುಮಾರು ಮೂವತ್ತು ವರ್ಷಗಳಿಂದ ನಾನು ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ನಟಿಯಾಗಿ ಕೆಲಸ ಮಾಡ್ತಾ ಇದೀನಿ,ಆದರೆ
ಕಳೆದ ಹನ್ನೆರಡು ವರ್ಷಗಳಿಂದ ಬೇರೆ ಭಾಷೆಯಲ್ಲಿ ನಟಿಸ್ತಾ ಬ್ಯುಸಿ ಆಗಿದ್ದೇ,ಈಗ ಮತ್ತೇ “ಓ ಮನಸೇ” ಮೂಲಕ ರಿ ಎಂಟ್ರಿ ಆಗ್ತಾ ಇದೆ ಎಂದರು.
ಹಿರಿಯ ನಟ
ರಮೇಶ್ ಪಂಡಿತ ಮಾತನಾಡಿ, ನನ್ನ 30 ವರ್ಷಗಳ ನಟನೆಯ ಅನುಭವದಲ್ಲಿ, ಸಾಕಷ್ಟು ಧಾರಾವಾಹಿಗಳನ್ನ ಸಿನಿಮಾಗಳನ್ನು ಮಾಡುತ್ತೇವೆ ಪ್ರತಿ ಪಾತ್ರವೂ ನಮಗೆ ಕುತೂಹಲವನ್ನು ಹುಟ್ಟಿಸುವಂತೆ ಆಯಾ ಪ್ರಾಜೆಕ್ಟ್ ನ ಲೇಖಕರು ಬರೆದಿರುತ್ತಾರೆ ಅದಕ್ಕೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕೆಲಸ ಎಂದರು, ಅದೇ ರೀತಿಯಾಗಿ ಓ ಮನಸೇ ಧಾರವಾಹಿಯಲ್ಲಿ ನನ್ನದು ತುಂಬಾ ಗಟ್ಟಿ ಪಾತ್ರ ಜನರ ನಮ್ಮ ಮನಸ್ಸಲ್ಲಿ, ಉಳಿಯುವಂತಹ ಪಾತ್ರ ಎಂದರು.

ಓ ಮನಸೇ ಧಾರಾವಾಹಿ ತಂಡ, ನಮ್ಮ ಜೊತೆ ಹಂಚಿಕೊಂಡ ಕಥೆಯ ಹೈಲೈಟ್ಸ್ ಹೀಗಿದೆ.
ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗನಿಗೆ ಶಿಕ್ಷಣವೆಂದರೆ ಜೀವನ. ಪುಸ್ತಕ ಓದುವುದು ಅವಳ ಹವ್ಯಾಸ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿರೋಳು. ರಾಗಾಳ ಬದುಕಿನ ಅತಿದೊಡ್ಡ ಸ್ಫೂರ್ತಿ ಅಂದ್ರೆ ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟೋ ಕನಸನ್ನು ಹೊಂದಿರೋ ರಾಗಾಳಿಗೆ ಸ್ವಂತ ಅಪ್ಪನೇ ತಡೆಗೋಡೆ.
ಶ್ರೀಮಂತ ಕುಟುಂಬದಲ್ಲಿ ಬೆಳೆದಿರೋ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ತನ್ನಲ್ಲಿನ ಭಾವನೆಗಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಬದುಕುತ್ತಿರುವ ವ್ಯಕ್ತಿ. ಪ್ರೀತಿ ಎಂಬ ಪದದ ಮೇಲೆ ರಿಷಿಗೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ.
ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುತ್ತಾ? ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ರಾಗ ಹೇಗೆ ನನಸು ಮಾಡುತ್ತಾಳೆ? ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ರಾಗ-ರಿಷಿ ಒಂದಾಗಲು ಸಾಧ್ಯನಾ? ಎಂಬುದೇ ಮುಖ್ಯ ಕಥಾ ಹಂದರ.
ಅತ್ಯದ್ಭುತ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ನಾಯಕ ರಿಷಿ ಪಾತ್ರದಲ್ಲಿ ನಟ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಪಾತ್ರದಲ್ಲಿ ನಟಿ ಮಧುವಿತಾ ಗೌಡ ನಟಿಸುತ್ತಿದ್ದಾರೆ. ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರವೀಣ್ ರಾಜ್, ದೀಪಾ ಕಟ್ಟಿ, ನಿಸರ್ಗ ಅಣ್ಣಪ್ಪ ಸೇರಿದಂತೆ ಇನ್ನೂ ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.
‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಎಂಬ ಸಂಸ್ಥೆಯಡಿ ನಿರ್ಮಾಪಕ ಗಣಪತಿ ಭಟ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ಅವರು ನಿರ್ದೇಶಿಸುತ್ತಿದ್ದಾರೆ.
ರವೀ ಸಾಸನೂರ್ MasterNews365.Com

