Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೊಂಬಾಳೆ — *ಹನುಮಾನ್ ಅಂಶ್*…!!
- ಸಿನಿಮಾ

ಹೊಂಬಾಳೆ — *ಹನುಮಾನ್ ಅಂಶ್*…!!

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸಿನಿಮಾಗಳು,ಕಲಾವಿದರು,ನಿರ್ದೇಶಕರು,ನಿರ್ಮಾಪಕರು,ತಂತ್ರಜ್ಞರು ಹೀಗೆ ಸಿನಿಮಾಗಾಗಿ ಕೆಲಸ ಮಾಡಿದ ಬಹಳಷ್ಟು ವ್ಯಕ್ತಿಗಳನ್ನ, ಅಭಿಮಾನಿಗಳು ಅವರನ್ನ ಸಿನಿಮಾ ಶಕ್ತಿಗಳಂತೆ ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ಸಿನಿಮಾ ಅಂತ ಬಂದಾಗ ನಮ್ಮ ನಿಮ್ಮೆಲ್ಲರ ಕಣ್ಮುಂದೆ ಬರುವಂತದ್ದು,ದೇಶಭಕ್ತಿ ಚಿತ್ರಗಳುಕಲಾತ್ಮಕ ಚಿತ್ರಗಳು, ಕಮರ್ಷಿಯಲ್ ಚಿತ್ರಗಳು,ಭಕ್ತಿ ಪ್ರಧಾನ ಚಿತ್ರಗಳು,ಐತಿಹಾಸಿಕ ಚಿತ್ರಗಳು,ಪ್ರೇರಣದಾಯಕ ಚಿತ್ರಗಳು ಇನ್ನು ಮುಂತಾದವುಗಳು. ಕನ್ನಡ ಭಾಷೆ ಸೇರಿ ಭಾರತದಲ್ಲಿರುವ ಪ್ರತಿಯೊಂದು ಭಾಷೆಯಲ್ಲಿಯೂ ಸಹ ಈ ಮೇಲೆ ನಮೂದಿಸಿದ ಎಲ್ಲ ರೀತಿಯ ಚಿತ್ರಗಳನ್ನ ಎಲ್ಲ ಉದ್ಯಮದವರು ಮಾಡಿದ್ದಾರೆ, ಮಾಡುತ್ತಿದ್ದಾರೆ ಹಾಗೇ ಮುಂದೆಯೂ ಸಹ ಮಾಡುತ್ತಾರೆ […]

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸಿನಿಮಾಗಳು,ಕಲಾವಿದರು,ನಿರ್ದೇಶಕರು,ನಿರ್ಮಾಪಕರು,ತಂತ್ರಜ್ಞರು ಹೀಗೆ ಸಿನಿಮಾಗಾಗಿ ಕೆಲಸ ಮಾಡಿದ ಬಹಳಷ್ಟು ವ್ಯಕ್ತಿಗಳನ್ನ, ಅಭಿಮಾನಿಗಳು ಅವರನ್ನ ಸಿನಿಮಾ ಶಕ್ತಿಗಳಂತೆ ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ.

ಸಿನಿಮಾ ಅಂತ ಬಂದಾಗ ನಮ್ಮ ನಿಮ್ಮೆಲ್ಲರ ಕಣ್ಮುಂದೆ ಬರುವಂತದ್ದು,ದೇಶಭಕ್ತಿ ಚಿತ್ರಗಳುಕಲಾತ್ಮಕ ಚಿತ್ರಗಳು, ಕಮರ್ಷಿಯಲ್ ಚಿತ್ರಗಳು,ಭಕ್ತಿ ಪ್ರಧಾನ ಚಿತ್ರಗಳು,ಐತಿಹಾಸಿಕ ಚಿತ್ರಗಳು,ಪ್ರೇರಣದಾಯಕ ಚಿತ್ರಗಳು ಇನ್ನು ಮುಂತಾದವುಗಳು.

ಕನ್ನಡ ಭಾಷೆ ಸೇರಿ ಭಾರತದಲ್ಲಿರುವ ಪ್ರತಿಯೊಂದು ಭಾಷೆಯಲ್ಲಿಯೂ ಸಹ ಈ ಮೇಲೆ ನಮೂದಿಸಿದ ಎಲ್ಲ ರೀತಿಯ ಚಿತ್ರಗಳನ್ನ ಎಲ್ಲ ಉದ್ಯಮದವರು ಮಾಡಿದ್ದಾರೆ, ಮಾಡುತ್ತಿದ್ದಾರೆ ಹಾಗೇ ಮುಂದೆಯೂ ಸಹ ಮಾಡುತ್ತಾರೆ ಕೂಡಾ, ಯಾಕೆಂದರೆ ಕಾಲ ಎಷ್ಟೇ ಬದಲಾದರೂ ಸಹ ಸಿನಿಮಾವನ್ನು ನೋಡುವಂತಹ ಅಭಿಮಾನಿಗಳು ತಮಗೆ ಇಷ್ಟವಾದ ಜನರ ಸಿನಿಮಾಗಳನ್ನ ನೋಡುತ್ತಾರೆ ಹಾಗೂ ಅವುಗಳನ್ನು ಬೆಂಬಲಿಸುತ್ತಾರೆ ಕೂಡ,

ಅದರಲ್ಲೂ ಇತ್ತೀಚಿಗೆ, ಕನ್ನಡ ಸೇರಿ ಎಲ್ಲ ಭಾಷೆಗಳಲ್ಲೂ ಸಹ ಕಮರ್ಷಿಯಲ್ ಸಿನಿಮಾಗಳ ಜೊತೆ ಜೊತೆಗೆ ಭಕ್ತಿ ಪ್ರಧಾನ ಚಿತ್ರಗಳು ಕೂಡ ಪುನಃ ಅಭಿಮಾನಿಗಳನ್ನ ನೋಡುಗರನ್ನು ಪ್ರೇಕ್ಷಕರನ್ನ ಥಿಯೇಟರ್ ನಗ್ತಾ ಆಕರ್ಷಣೆ ಮಾಡುತ್ತಿವೆ ಹಾಗೂ ಜನರ ಮನಸ್ಸನ್ನು ಪರಿವರ್ತನೆ ಕೂಡ ಮಾಡುತ್ತಿವೆ,ಈ ಕುರಿತಾದ ಮತ್ತೊಂದು ಅಪ್ಡೇಟ್ ಇಲ್ಲಿದೆ ನೋಡಿ..

ಹೊಂಬಾಳೆ ಫಿಲ್ಮ್ಸ್ ‘ಹನುಮಾನ್ ಅಂಶ್’ ಚಿತ್ರದ ವಿದೇಶಿ ವಿತರಣೆಗೆ ಸಜ್ಜು ಸೆಪ್ಟೆಂಬರ್ 11ರಂದು ಜಾಗತಿಕ ಬಿಡುಗಡೆ

ಮಹಾರಾಜ್-ಜೀ ಅವರ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯುತ್ತಿರುವ ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್

ಭಾರತೀಯ ಚಿತ್ರರಂಗದ ಕಥೆಗಳು ಮತ್ತು ನಮ್ಮ ಸಂಸ್ಕೃತಿಯನ್ನು ಗಡಿಗಳನ್ನು ದಾಟಿಸಿ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್, ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಚಿತ್ರದ ವಿದೇಶಿ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಭಾರತದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇದೀಗ ಸೆಪ್ಟೆಂಬರ್ 11, 2026ರಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ವಿಶಾಲ್ ಚತುರ್ವೇದಿ ನಿರ್ದೇಶನ ಮತ್ತು ಬರವಣಿಗೆಯ ಹನುಮಾನ್ ಅಂಶ್, ಭಕ್ತರು ಹನುಮಂತನ ಅವತಾರವೆಂದು ನಂಬುವ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ, ಮಹಾರಾಜ್-ಜೀ ಅವರ ಜೀವನವನ್ನು ಆಧರಿಸಿದೆ. ಪ್ರೀತಿ, ಭಕ್ತಿ, ಸೇವೆ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಸಾರಿದ ಮಹಾರಾಜ್-ಜೀ ಅವರ ಪ್ರಭಾವ ಭಾರತವನ್ನು ಮೀರಿ ಜಗತ್ತಿನಾದ್ಯಂತ ಹರಡಿದೆ. ವಿಶೇಷವಾಗಿ 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಆಗಮಿಸಿದ ಹಲವಾರು ಪಾಶ್ಚಿಮಾತ್ಯ ಆಧ್ಯಾತ್ಮಿಕ ಅನ್ವೇಷಕರ ಮೇಲೆ ಅವರ ಪ್ರಭಾವ ಗಾಢವಾಗಿತ್ತು.

ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಹನುಮಾನ್ ಅಂಶ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಸುಮಾರು ₹10 ಲಕ್ಷದ ಆರಂಭಿಕ ಗಳಿಕೆಯಿಂದ ಚಿತ್ರವು 26ನೇ ದಿನಕ್ಕೆ ₹63.82 ಕೋಟಿಗೂ ಅಧಿಕ ಗಳಿಕೆ ದಾಖಲಿಸಿದೆ ಎಂದು ವರದಿಯಾಗಿದೆ. ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಮತ್ತು ಬಲವಾದ ವರ್ಡ್ ಆಫ್ ಮೌತ್ ಚಿತ್ರದ ಯಶಸ್ಸಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮಹಾರಾಜ್-ಜೀ ಅವರ ಆಧ್ಯಾತ್ಮಿಕ ಪ್ರಭಾವವು ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಅವರಂತಹ ಜಾಗತಿಕ ವ್ಯಕ್ತಿಗಳೊಂದಿಗೆ ಕೂಡ ಸಂಬಂಧ ಹೊಂದಿದೆ. ಸ್ಟೀವ್ ಜಾಬ್ಸ್ 1974ರಲ್ಲಿ ಮಹಾರಾಜ್-ಜೀ ಅವರನ್ನು ಭೇಟಿಯಾಗುವ ಆಧ್ಯಾತ್ಮಿಕ ಹುಡುಕಾಟದಲ್ಲಿ ಭಾರತಕ್ಕೆ ಬಂದಿದ್ದರು. ಮಾರ್ಕ್ ಜುಕರ್‌ಬರ್ಗ್ ಕೂಡ ಭಾರತ ಪ್ರವಾಸದ ವೇಳೆ ಕೈಂಚಿ ಧಾಮ್ಗೆ ಭೇಟಿ ನೀಡಿದ್ದರು. ಜೂಲಿಯಾ ರಾಬರ್ಟ್ಸ್ ಅವರು ಕೂಡ ಮಹಾರಾಜ್-ಜೀ ಅವರ ಚಿತ್ರವು ತಮ್ಮ ಆಧ್ಯಾತ್ಮಿಕ ಪಯಣದ ಮೇಲೆ ಪ್ರಭಾವ ಬೀರಿದ್ದನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಕೈಂಚಿ ಧಾಮ್‌ಗೆ ಭೇಟಿ ನೀಡಿದ್ದಾರೆ.

ಕೈಂಚಿ ಧಾಮ್‌ನಿಂದ ಜಗತ್ತಿನ ವೇದಿಕೆಯವರೆಗೆ ಮಹಾರಾಜ್-ಜೀ ಅವರ ಕಥೆ ಈಗ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.

‘ಹನುಮಾನ್ ಅಂಶ್’ — ಸೆಪ್ಟೆಂಬರ್ 11, 2026ರಿಂದ ಅಂತರರಾಷ್ಟ್ರೀಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು,ಮತ್ತೊಮ್ಮೆ ಎಲ್ಲರೂ ಭಕ್ತಿ ಭಾವದಲ್ಲಿ ಮಿಂದು ಪರವಶರಾಗಲಿದ್ದಾರೆ ಅನ್ನೋ ನಂಬಿಕೆ ಚಿತ್ರ ತಂಡಕ್ಕಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.