Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *A Date* ಚಿತ್ರದ ಬಗ್ಗೆ – ಶಿವಣ್ಣ ಕೊಟ್ಟ ಹೇಳಿಕೆ..!!
- ಸಿನಿಮಾ

*A Date* ಚಿತ್ರದ ಬಗ್ಗೆ – ಶಿವಣ್ಣ ಕೊಟ್ಟ ಹೇಳಿಕೆ..!!

ಪ್ರಪಂಚದಾದ್ಯಂತ ತುಂಬಾ ದೊಡ್ಡ ಮಟ್ಟದ ಸುದ್ದಿಯಲ್ಲಿರುವ ಮತ್ತು ಟ್ರೆಂಡಿಂಗ್ ವಿಚಾರಕ್ಕೆ ಮೊದಲ ಸ್ಥಾನದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ನಟಿಸಿ ಕೆವಿಎನ್ ಜೊತೆಗೆ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿರುವಂತಹ ಟಾಕ್ಸಿಕ್ ಚಿತ್ರದ ಬಗ್ಗೆ ಇವತ್ತಿಗೂ ಸೌಂಡು ನಿಂತಿಲ್ಲ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜಕುಮಾರ್ ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಚಿತ್ರವನ್ನು ನೋಡಿ ಹೊರಬಂದ ನಂತರ ಮಾಧ್ಯಮದವರ ಜೊತೆಗೆ ಮಾತನಾಡುವಾಗ,ಯಶ್ ಇತ್ತ ಹೆಜ್ಜೆ ಯಸ್ ತೆಗೆದುಕೊಂಡ ರಿಸ್ಕ್ ಹಾಗೂ ಸಿನಿಮಾ ಯಾವ ರೀತಿಯಾಗಿ ಬಂದಿದೆ ಎಂಬುದನ್ನು […]

ಪ್ರಪಂಚದಾದ್ಯಂತ ತುಂಬಾ ದೊಡ್ಡ ಮಟ್ಟದ ಸುದ್ದಿಯಲ್ಲಿರುವ ಮತ್ತು ಟ್ರೆಂಡಿಂಗ್ ವಿಚಾರಕ್ಕೆ ಮೊದಲ ಸ್ಥಾನದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ನಟಿಸಿ ಕೆವಿಎನ್ ಜೊತೆಗೆ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿರುವಂತಹ ಟಾಕ್ಸಿಕ್ ಚಿತ್ರದ ಬಗ್ಗೆ ಇವತ್ತಿಗೂ ಸೌಂಡು ನಿಂತಿಲ್ಲ.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜಕುಮಾರ್ ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಚಿತ್ರವನ್ನು ನೋಡಿ ಹೊರಬಂದ ನಂತರ ಮಾಧ್ಯಮದವರ ಜೊತೆಗೆ ಮಾತನಾಡುವಾಗ,
ಯಶ್ ಇತ್ತ ಹೆಜ್ಜೆ ಯಸ್ ತೆಗೆದುಕೊಂಡ ರಿಸ್ಕ್ ಹಾಗೂ ಸಿನಿಮಾ ಯಾವ ರೀತಿಯಾಗಿ ಬಂದಿದೆ ಎಂಬುದನ್ನು ಮನಸಾರೆ ಹೃದಯ ತುಂಬಿ ಹೊಗಳಿದ್ದಷ್ಟೇ ಅಲ್ಲದೆ ಯಶ್ ಅವರ ಟಿಕೆಟ್ ಪಾತ್ರವನ್ನು ಸೆಲೆಬ್ರೇಟ್ ಮಾಡಿದ್ದು ತುಂಬಾ ಖುಷಿಯಾದ ವಿಚಾರ.

ಚಿತ್ರರಂಗದಲ್ಲಿ ಯಾರು ದೊಡ್ಡವರಲ್ಲ ಯಾರು ಸಣ್ಣವರಲ್ಲ, ಒಳ್ಳೆಯ ಸಿನಿಮಾ ಮಾಡಿ ಅಭಿಮಾನಿ ದೇವರುಗಳನ್ನ ಮುಟ್ಟಿದ ಎಲ್ಲ ಸಿನಿಮಾಗಳು ಒಳ್ಳೆಯ ಸಿನಿಮಾಗಳೇ ಎಲ್ಲರೂ ಒಳ್ಳೆಯ ನಟರೆ, ಎಂದು ಶಿವಣ್ಣ ಮನಸಾರೆ ಹೊಗಳಿದರು.

ನನ್ನ ಮೇಲೆ ಪ್ರೀತಿ ಮತ್ತು ಅಭಿಮಾನ ಇಟ್ಟಂತಹ, ಎಲ್ಲರನ್ನೂ ನಾನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ, ಹಾಗೆ ಮಾತು ಮುಂದುವರಿಸಿದ ಶಿವಣ್ಣ ಟಾಕ್ಸಿಕ್ ಚಿತ್ರದ ಫೈರಸಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ಇದು ಬಹಳ ವರ್ಷಗಳಿಂದ ಇದು ನಡಿತಾ ಇದೆ ಇದು ನಿಲ್ಲಬೇಕು ಎಂದರು.

ಟಾಕ್ಸಿಟ್ ಮಧ್ಯೆ ಶಿವಣ್ಣ ಮಾತನಾಡುತ್ತಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ A DATE ಚಿತ್ರದ ಬಗ್ಗೆ ಮಾತಾಡಿದಾಗ ಎಲ್ಲರಿಗೂ ಖುಷಿಯಾಯಿತು.

ಬರೀ ಸ್ಟಾರ್ ಗಳ ಸಿನಿಮಾ ಮಾತ್ರ ನೋಡುವುದಲ್ಲದೆ ಹೊಸಬರ ಚಿತ್ರಗಳನ್ನು ಸಹ ಅಭಿಮಾನಿ ದೇವರುಗಳು ನೋಡಿದಾಗ ಆ ತಂಡಗಳು ಸಹ ಭರವಸೆಯಿಂದ ಮತ್ತಷ್ಟು ಹೆಜ್ಜೆಗಳನ್ನು ನೀಡುತ್ತವೆ ಎಂದು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ವೀಕೆಂಡ್ ಶಾರ್ಟ್ ಸ್ಟುಡಿಯೋ ನಿರ್ಮಾಣದ,
PVR ಐನಾಕ್ಸ್ ಪಿಕ್ಚರ್ಸ್ಬಿಡುಗಡೆ ಮಾಡ್ತಾ ಇರುವ,
ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶನೈ ಮುಖ್ಯ ಭೂಮಿಕೆಯಲ್ಲಿರುವ,
ವಿಮಲ್ ರಾಜ್ ಎನ್ ನಿರ್ದೇಶನದ A Date
ಚಿತ್ರದ ಬಗ್ಗೆ ಕರುನಾಡ ಚಕ್ರವರ್ತಿ ಶಿವಣ್ಣ ಮಾತನಾಡಿದಾಗ,ಇದನ್ನು ನೋಡಿದ ಚಿತ್ರತಂಡಕ್ಕೆ ಖಂಡಿತವಾಗಿಯೂ ಹೃದಯ ತುಂಬಿ ಬಂದಿರುತ್ತದೆ.

ದೊಡ್ಮನೆಯ ದೊಡ್ಡ ಮಗ ಡಾಕ್ಟರ್ ಶಿವರಾಜಕುಮಾರ್ ಯಾಕೆ ಗ್ರೇಟ್ ಆಗುತ್ತಾರೆ ಅನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್, ಶಿವಣ್ಣ ಬಂದಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಂಗ್ ಸಿನಿಮಾ ವನ್ನ ನೋಡಲು, ಸಿನಿಮಾ ನೋಡಿ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿ ಹೋಗುವ ಮಧ್ಯದಲ್ಲಿ ಅವರಿಗೆ ನೆನಪಾದ A DATE ಎನ್ನುವ, ಹೊಸಬರ ಪ್ರಯತ್ನವನ್ನ ಹೊಗಳಿದ್ದು ಶಿವಣ್ಣನ ದೊಡ್ಡ ಮನಸ್ಸಿಗೆ ಹಿಡಿದ ಸಾಕ್ಷಿ.

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ A DATE ಚಿತ್ರಕ್ಕೆ ಒಂದು ದಿನ ಮುಂಚಿತವಾಗಿಯೇ, ಕನ್ನಡ ಚಿತ್ರರಂಗದ ದಿಗ್ಗಜ ಶಿವಣ್ಣನಿಂದ ಹೊಗಳಿಕೆ ಸಿಕ್ಕಿರುವುದು ನಿಜವಾಗಿಯೂ ಕಿತ್ತು ತಂಡಕ್ಕೆ ಒಂದು ಅದೃಷ್ಟ ಎಂದರು ತಪ್ಪಿಲ್ಲ

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.