Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಗೌರಿ – ಗಣೇಶನ ಮಹತ್ವ…!!
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಗೌರಿ – ಗಣೇಶನ ಮಹತ್ವ…!!

ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ.ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ. ಹಬ್ಬ ಎಂದರೇನು ?ಹಬ್ಬವು (ಉತ್ಸವ) ಸಮಾಜದ ಅಥವಾ ಸಮುದಾಯದ ಜನರು ವಿಶೇಷ ದಿನಗಳಂದು ಒಟ್ಟಾಗಿ ಸೇರಿ ಆಚರಿಸುವ ಸಂತೋಷದ ಮತ್ತು ಪವಿತ್ರವಾದ […]

  ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ.ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ.

ಹಬ್ಬ ಎಂದರೇನು ?
ಹಬ್ಬವು (ಉತ್ಸವ) ಸಮಾಜದ ಅಥವಾ ಸಮುದಾಯದ ಜನರು ವಿಶೇಷ ದಿನಗಳಂದು ಒಟ್ಟಾಗಿ ಸೇರಿ ಆಚರಿಸುವ ಸಂತೋಷದ ಮತ್ತು ಪವಿತ್ರವಾದ ಸಂದರ್ಭ. ಹಬ್ಬವು (ಉತ್ಸವ) ಸಾಮಾನ್ಯವಾಗಿ ಒಂದು ಸ್ಥಳೀಯ ಸಮುದಾಯದಿಂದ ಏರ್ಪಡಿಸಲಾಗುವ, ಆ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಮತ್ತು ಅದನ್ನು ಆಚರಿಸುವ ಒಂದು ಸಂದರ್ಭ. ಸಾಮಾನ್ಯವಾಗಿ ಉತ್ಸವಗಳಲ್ಲಿ ಹಲವು ಜನ ಸೇರುತ್ತಾರೆ. ಹೀಗೆ ಜನ ಸೇರಿದಾಗ ಈ ಉತ್ಸಾಹ ಹತ್ತುಪಟ್ಟು ಹೆಚ್ಚಿ ಅದು ಉತ್ಸವದಲ್ಲಿ ಪರಿಣಾಮಗೊಳ್ಳುತ್ತದೆ.

ಹಬ್ಬಗಳ ವಿಧಗಳು ಧಾರ್ಮಿಕ ಹಬ್ಬಗಳು:
ದೀಪಾವಳಿ, ರಂಜಾನ್, ಕ್ರಿಸ್ಮಸ್‌ನಂತಹ ಮುಂತಾದ ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದ ಆಚರಣೆಗಳು.ಸುಗ್ಗಿಯ ಹಬ್ಬಗಳು: ಮಕರ ಸಂಕ್ರಾಂತಿ, ಒಣಂ ಮುಂತಾದ ಬೆಳೆ ಕಟಾವಿಗೆ ಮತ್ತು ಕೃಷಿಗೆ ಕೃತಜ್ಞತೆ ಸಲ್ಲಿಸುವ ಹಬ್ಬಗಳು.

    ಮುಖ್ಯವಾದ ಮಹಾಪುರುಷರ ಜಯಂತಿಗಳು, ನಾನಕ್ ಜಯಂತಿ, ಬಸವಜಯಂತಿ, ಮಹಾವೀರಜಯಂತಿ, ಶಂಕರಜಯಂತಿ, ಗೌರಿಗಣೇಶ, ಶಿವ, ವಿಷ್ಣು ದೇವಾಲಯಗಳಲ್ಲಿ ನಡೆಸುವ ಉತ್ಸವಗಳು.

ರಾಷ್ಟ್ರೀಯ ಹಬ್ಬಗಳು: ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂತಹ ದೇಶದ ಮಟ್ಟದಲ್ಲಿ ಆಚರಿಸುವ ದಿನಗಳು.

ಸಾಂಸ್ಕೃತಿಕ ಹಬ್ಬಗಳು: ಸಂಗೀತ, ನೃತ್ಯ, ಕಲೆ ಮತ್ತು ಆಹಾರಕ್ಕೆ ಮೀಸಲಾದ ವಿಶೇಷ ಉತ್ಸವಗಳು. ಹಬ್ಬಗಳ ಮುಖ್ಯ ಉದ್ದೇಶಗಳುಸಂಬಂಧಗಳ ಬಲ – ಕುಟುಂಬದವರು ಮತ್ತು ಸ್ನೇಹಿತರು ಒಟ್ಟಾಗಿ ಕಾಲ ಕಳೆಯಲು ಅವಕಾಶ ನೀಡುತ್ತದೆ.ಮುಂದಿನ ಪೀಳಿಗೆಗೆತಲುಪಿಸುತ್ತದೆ. ಸೌಹಾರ್ದತೆ: ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಐಕ್ಯತೆಯನ್ನು ಮೂಡಿಸುತ್ತದೆ.
ಹಿಂದೂ ಧರ್ಮದಲ್ಲಿ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ವಿಘ್ನಗಳನ್ನು ನಿವಾರಿಸುವ ಅತ್ಯಂತ ಪ್ರಮುಖ ಹಾಗೂ ಪೂಜ್ಯ ದೇವನಾಗಿದ್ದಾನೆ. ಗಣೇಶ ಚತುರ್ಥಿಯು ಗಣೇಶನಿಗೆ ಸಮರ್ಪಿತವಾದ ಅತ್ಯಂತ ದೊಡ್ಡ ಹಬ್ಬ. ಇದನ್ನು ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಗಣೇಶನ ಕುರಿತಾದ ಸಂಕ್ಷಿಪ್ತ ಕಥೆ :
ಒಮ್ಮೆ ಪಾರ್ವತಿ ದೇವಿಯು ಸ್ನಾನಕ್ಕೆ ಹೋಗುವಾಗ, ತನ್ನ ದೇಹದ ಮೇಲಿದ್ದ ಅರಿಶಿನದ ಹಿಟ್ಟಿನಿಂದ ಒಂದು ಸುಂದರ ಬಾಲಕನ ಮೂರ್ತಿಯನ್ನು ಮಾಡಿ, ಅದಕ್ಕೆ ಜೀವ ತುಂಬಿ ತನ್ನ ದ್ವಾರಪಾಲಕನನ್ನಾಗಿ ನೇಮಿಸಿದಳು.
ಪಾರ್ವತಿಯ ಆಜ್ಞೆಯಂತೆ ಬಾಲಕನು ಕಾವಲು ಕಾಯುತ್ತಿದ್ದಾಗ, ಅಲ್ಲಿಗೆ ಬಂದ ಶಿವನನ್ನು ಒಳಗಡೆ ಹೋಗದಂತೆ ಬಾಲಕ ತಡೆದನು. ಆಗ ಶಿವನಿಗೆ ಕೋಪ ಬಂತು , ತನ್ನದೇ ಮನೆಯೊಳಗೆ ಹೋಗಲು ತಡೆದ ಬಾಲಕನ ಮೇಲೆ ಕೋಪಗೊಂಡ ಶಿವನು, ತನ್ನ ತ್ರಿಶೂಲದಿಂದ ಆ ಬಾಲಕನ ಶಿರಚ್ಛೇದನ ಮಾಡಿದನು.
ಪಾರ್ವತಿಯು ಸ್ನಾನ ಮುಗಿಸಿ ಬಂದು ಮಗನ ಸ್ಥಿತಿಯನ್ನು ನೋಡಿ ಅತ್ಯಂತ ದುಃಖಿತಳಾಗಿ, ಇಡೀ ಸೃಷ್ಟಿಯನ್ನೇ ಅಳಿಸಲು ಮುಂದಾದಳು. ಆಗ ಪಾರ್ವತಿಯನ್ನು ಶಾಂತಗೊಳಿಸಲು ಶಿವನು ತನ್ನ ಗಣಗಳನ್ನು ಕಳುಹಿಸಿ, ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿರುವ ಮತ್ತು ತಾಯಿಗೆ ಬೆನ್ನು ಮಾಡಿರುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸಿದನು; ಅದರಂತೆ ಗಣಗಳು ಒಂದು ಆನೆಯ ತಲೆಯನ್ನು ತಂದು ಬಾಲಕನ ದೇಹಕ್ಕೆ ಜೋಡಿಸಿ ಜೀವ ನೀಡಿದನು ಹಾಗೂ ಇವನೇ ನನ್ನ ಗಣಗಳ ಅಧಿಪತಿ ‘ಗಣೇಶ’ ಎಂದು ಘೋಷಿಸಿ, ಜಗತ್ತಿನಲ್ಲಿ ಯಾವುದೇ ಶುಭ ಕಾರ್ಯಕ್ಕೂ ಮುನ್ನ ಇವನಿಗೇ ಪ್ರಥಮ ಪೂಜೆ ಸಲ್ಲಬೇಕು ಎಂದು ವರ ನೀಡಿದನು.

ಗಣೇಶನ ಪರಿಚಯ :
ಗಣೇಶನು ಶಿವ ಮತ್ತು ಪಾರ್ವತಿ ದೇವಿಯ ಮಗನಾಗಿದ್ದಾನೆ. ಇವನಿಗೆ ಕಾರ್ತಿಕೇಯ ಎಂಬ ಸಹೋದರನಿದ್ದಾನೆ.ಇವನನ್ನು ವಿನಾಯಕ, ಗಣಪತಿ, ವಿಘ್ನಹರ್ತ ಮತ್ತು ಏಕದಂತ ಎಂದೂ ಕರೆಯುತ್ತಾರೆ. ಗಣೇಶನ ಆನೆ ತಲೆಯು ಬುದ್ಧಿವಂತಿಕೆಯನ್ನು, ದೊಡ್ಡ ಕಿವಿಗಳು ಹೆಚ್ಚಿನ ಆಲಿಸುವಿಕೆಯನ್ನು ಮತ್ತು ದೊಡ್ಡ ಹೊಟ್ಟೆಯು ಎಲ್ಲಾ ಒಳ್ಳೆಯ-ಕೆಟ್ಟ ಅನುಭವಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.ವಾಹನ: ಗಣೇಶನ ವಾಹನ ಇಲಿ (ಮೂಷಿಕ). ಇದು ನಮ್ಮ ಆಸೆಗಳನ್ನು ಮತ್ತು ಅಹಂಕಾರವನ್ನು ನಿಯಂತ್ರಣದಲ್ಲಿಡುವುದರ ಸಂಕೇತವಾಗಿದೆ.
ಯಾವುದೇ ಹೊಸ ಕಾರ್ಯ, ಶುಭಾರಂಭ ಅಥವಾ ಪೂಜೆಯನ್ನು ಆರಂಭಿಸುವ ಮೊದಲು ಪ್ರಥಮವಾಗಿ ಗಣೇಶನನ್ನು ಪೂಜಿಸಲಾಗುತ್ತದೆ.
ಗೌರಿ ಪೂಜೆ: ಮುತ್ತೈದೆಯರು ಸೌಭಾಗ್ಯಕ್ಕಾಗಿ ಹಾಗೂ ಕೌಟುಂಬಿಕ ಸುಖ-ಶಾಂತಿಗಾಗಿ ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಅರಿಶಿನದ ಗೌರಿ ಅಥವಾ ಮಣ್ಣಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಬಾಗಿನ ಅರ್ಪಿಸಲಾಗುತ್ತದೆ.
ಗಣೇಶ ಪೂಜೆ: ಗೌರಿ ಹಬ್ಬದ ಮರುದಿನ ವಿಘ್ನಹರ್ತ ಗಣೇಶನನ್ನು ಮನೆಗೆ ಸ್ವಾಗತಿಸಿ ಪೂಜಿಸಲಾಗುತ್ತದೆ.
ನಮ್ಮ ಎಲ್ಲಾ ಕಾರ್ಯಗಳು ವಿಘ್ನಗಳಿಲ್ಲದೆ ನೆರವೇರಲಿ ಎಂದು ಈ ಶ್ಲೋಕದ ಮೂಲಕ ಬೇಡಿಕೊಳ್ಳಲಾಗುತ್ತದೆ. ಸಂಪೂರ್ಣ ಶ್ಲೋಕವು:

“ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ ॥”

ಎಂದು ವಿಪ್ನೆಶ್ವರನಲ್ಲಿ ಭಕ್ತಿಭಾವದಿಂದ ಬೇಡಿಕೊಳ್ಳುತ್ತಾ ಸಕಲ ಜನರಿಗೂ ಸನ್ಮಾರ್ಗ, ಸಂತೃಪ್ತಿ, ವಿದ್ಯಾ ಬುದ್ಧಿ ಸಿರಿಸಂಪತ್ತು ಆರೋಗ್ಯ ಸಕಲ ಸೌಭಾಗ್ಯಗಳನ್ನು ಕರುಣಿಸಲೆಂದು ಪ್ರಾರ್ಥಿಸುವೆನು. “ಸನ್ಮಂಗಲಾಗನಿ ಭವಂತು. “

H R ಬಾಗವಾನ ಲೇಖಕರು

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.