Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸಿಟಿ ಲೈಟ್ಸ್ ಟ್ರೈಲರ್ ಲಾಂಚ್
- ಸಿನಿಮಾ

ಸಿಟಿ ಲೈಟ್ಸ್ ಟ್ರೈಲರ್ ಲಾಂಚ್

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಉಪಸ್ಥಿತಿಯಲ್ಲಿ,,ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್, ನಿರ್ದೇಶನದ ಬಹು ನಿರೀಕ್ಷಿತ ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಯಿತು. ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಿವಣ್ಣ,,ವಿಜಯ್ ನನಗೆ ತುಂಬಾ ಆತ್ಮೀಯರು, ಆತ ಒಬ್ಬ ಒಳ್ಳೆಯ ನಟ ಮತ್ತು ನಿರ್ದೇಶಕ ಕೂಡ ಹೌದು. ಭೂಗತ ಲೋಕದ ಕಥೆಗಳು, ಲಾಂಗು ಮಚ್ಚು ತರಹದ ಸಿನಿಮಾಗಳು ಅಂತ ಬಂದಾಗ ಸಾಮಾನ್ಯವಾಗಿ […]

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಉಪಸ್ಥಿತಿಯಲ್ಲಿ,,ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್, ನಿರ್ದೇಶನದ ಬಹು ನಿರೀಕ್ಷಿತ ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಯಿತು.

ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಿವಣ್ಣ,,ವಿಜಯ್ ನನಗೆ ತುಂಬಾ ಆತ್ಮೀಯರು, ಆತ ಒಬ್ಬ ಒಳ್ಳೆಯ ನಟ ಮತ್ತು ನಿರ್ದೇಶಕ ಕೂಡ ಹೌದು. ಭೂಗತ ಲೋಕದ ಕಥೆಗಳು, ಲಾಂಗು ಮಚ್ಚು ತರಹದ ಸಿನಿಮಾಗಳು ಅಂತ ಬಂದಾಗ ಸಾಮಾನ್ಯವಾಗಿ ಶಿವಣ್ಣ ನೆನಪಾಗ್ತಾರೆ, ಆದರೆ ವಿಜಯ್ ಈ ಸಿಟಿ ಲೈಟ್ಸ್ ಚಿತ್ರದಲ್ಲಿ ವಿನಯ್ ನನ್ನ ತೋರಿಸಿದ ರೀತಿ, ಇನ್ಮುಂದೆ ಶಿವಣ್ಣನ ಜೊತೆಗೆ ವಿನಯ್ ಕೂಡ ನೆನಪಾಗ್ತಾರೆ ಆ ರೀತಿಯಾದಂತಹ ಕಂಟೆಂಟ್ ಇದಾಗಿದೆ.

ಸಂಬಂಧದಲ್ಲಿ ವಿನಯ್ ನನ್ನ ತಮ್ಮನ ಮಗನೇ ಆಗಿರಬಹುದು ಆದರೆ, ನಾನೊಬ್ಬ ಪ್ರೇಕ್ಷಕನಾಗಿ ಸಿಟಿಲೈಟ್ಸ್ ಚಿತ್ರದ ಟ್ರೈಲರ್ ನೋಡುವಾಗ ಆತನ ಕಣ್ಣುಗಳಲ್ಲಿದ್ದಂತಹ ಫೈರ್ ಇಂಟೆನ್ಸಿಟಿ ಆಕ್ಟಿಂಗ್ ತುಂಬಾ ಗಮನಿಸ್ತಾ ಇದ್ದೆ ವಿನಯ ಸಿನಿ ಗ್ರಾಫಲ್ಲಿ ಇದೊಂದು ಒಳ್ಳೆ ಚಿತ್ರ ಆಗುತ್ತೆ ಜೊತೆಗೆ ನಮ್ಮ ಜೊತೆ ಇದ್ದಂತಹ ಹುಡುಗ ಪುನೀತ್, ಕೂಡ ತುಂಬಾ ಪ್ರಾಮಿಸಿಂಗ್ಕಾ ಆಗಿ ಕಾಣಿಸ್ತಾ ಇದ್ದಾನೆ, ನಮ್ಮ ಸುತ್ತಮುತ್ತಲು ಬಹಳಷ್ಟು ಜನ ಟ್ಯಾಲೆಂಟ್ ಇರುವ ಕಲಾವಿದರು ಇರುತ್ತಾರೆ ಗಮನಿಸಬೇಕು ಅಷ್ಟೇ, ಹಾಗೆ ವಿಜಯ ಮಗಳು ಮೋನಿಷಾ ಕೂಡಾ ತುಂಬಾ ಚೆನ್ನಾಗಿ ನಟಿಸಿದ್ದಾರೆ..


“City Lights Will Lights The Screen” ಎಂಬ ಎನರ್ಜಿಯ ಮಾತುಗಳನ್ನು ಹೇಳಿ ನಂತರ, ವಿಜಯ್ ನಿರ್ದೇಶನ ಮಾಡಿರುವ ಸಲಗ ಭೀಮ ಈಗ ಸಿಟಿ ಲೈಟ್ಸ್ ಅವರು ಅಪ್ರೀಡ್ ಆಗ್ತಾ ಇದ್ದಾರೆ ಇದು ನನಗೆ ಖುಷಿಯ ವಿಚಾರ,ಸಿಟಿಲೈಟ್ಸ್ ಒಂದೊಳ್ಳೆಯ ಸಿನಿಮ ಆಗುತ್ತೆ ಅನ್ನೋದನ್ನ ಶಿವಣ್ಣ ಒತ್ತಿ ಒತ್ತಿ ಹೇಳಿದರು.

ಸಿಟಿಲೈಟ್ಸ್ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ ತಮ್ಮ ಮನೆಯ ಹುಡುಗ ವಿನಯನನ್ನ ಸಿಟಿ ಲೈಟ್ಸ್ ಚಿತ್ರದಲ್ಲಿ ಅವಕಾಶ ಕೊಟ್ಟು ಆತನನ್ನ ತುಂಬಾ ಚೆನ್ನಾಗಿ ಅಭಿನಯಿಸುವಂತೆ ಪ್ರೋತ್ಸಾಹ ನೀಡಿದ ದುನಿಯಾ ವಿಜಯ್ ರವರಿಗೆ ಧನ್ಯವಾದ ಹೇಳಿ,
ಚಿತ್ರದಲ್ಲಿನ ಕಂಟೆಂಟ್ ನೋಡುವಾಗ ನನಗೆ ಓಂ ಚಿತ್ರ ನೆನಪಾಯ್ತು,ಎಂದಾಗ ಅಲ್ಲಿ ಸೇರಿದ್ದ ಎಲ್ಲರಿಂದ ಚಪ್ಪಾಳೆಗಳ ದೊಡ್ಡ ಸುರಿಮಳೆ, ಶಿಳ್ಳೆ ಸಂಭ್ರಮ ಜೋರಾಗಿತ್ತು.

ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಲಾಂಚ್ ಮುಗಿದ ನಂತರ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಮತ್ತೊಂದು ವಿಶೇಷವಾದಂತಹ ಸರ್ಪ್ರೈಸ್ ಕಾದಿತ್ತು ಅದೇನೆಂದರೆ,ಶಿವರಾಜ್ ಕುಮಾರ್ ಅವರಿಗೆ ವಿಜಯ್ ಅಂದರೆ ತುಂಬಾ ಪ್ರೀತಿ, ಈಗಾಗಲೇ ಹಿಟ್ ಲಿಸ್ಟ್ ನಲ್ಲಿ ಸೇರಿರುವ ಸಿಟಿ ಲೈಟ್ಸ್ ನ ಅಲಕ್ ನಿರಂಜನ್ ಹಾಡನ್ನು ಪ್ಲೇ ಮಾಡಿದಾಗ ವೇದಿಕೆ ಮೇಲೆ ಶಿವಣ್ಣ ಯುವಕರು ನಾಚುವಂತೆ ಭರ್ಜರಿ ಸ್ಟೆಪ್ಸ್ ಹಾಕಿದರು ಶಿವಣ್ಣನ ಜೊತೆಗೆ ನಿರ್ದೇಶಕ ವಿಜಯಕುಮಾರ್ ಮತ್ತು ನಾಯಕ ವಿನಯ್ ರಾಜಕುಮಾರ್ ಕೂಡ ಕುಣಿದು ಕೊಪ್ಪಳಸಿದ್ದು ಮತ್ತೊಂದು ಮಹಾ ಸಂಭ್ರಮಕ್ಕೆ ಕಾರಣವಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರೀಮತಿ ಉಮಾಶ್ರೀ ಅವರು ಮಾತನಾಡಿ, ಸಿಟಿಲೈಟ್ ಚಿತ್ರದ ಟ್ರೈಲರ್ ತುಂಬಾ ವಿಭಿನ್ನವಾಗಿದೆ ಅಷ್ಟೇ ಅಲ್ಲದೇ ಸಮಾಜಕ್ಕೆ ಕೆಲವು ದಿಟ್ಟ ಪ್ರಶ್ನೆಗಳನ್ನ ಹಾಕುತ್ತದೆ, ಚಿತ್ರ ಬಿಡುಗಡೆಯ ನಂತರ ಸಿಟಿಲೈಟ್ಸ್ ಅನ್ನೋದು ನಮ್ಮಗಳ ಬದುಕಿನ ಕಥೆ ಅನ್ನೋದನ್ನ ತುಂಬಾ ಜನ ಹೇಳಿ ಕೊಡಲಿದ್ದಾರೆ ಇದು ಅಂತಹ ಕಂಟೆಂಟ್.

ತುಂಬಾ ಶ್ರೀಮಂತರು, ಹಣ ಇದ್ದವರು, ಆರ್ಥಿಕವಾಗಿ ಸ್ವಲ್ಪ ಒಳ್ಳೆಯ ಸ್ಥಿತಿಯಲ್ಲಿ ಇರುವವರು ಅಂಥವರನ್ನ ಬಿಟ್ಟು ದಿನನಿತ್ಯದ ಬದುಕಿಗಾಗಿ ಹೋರಾಡುವವರ ಮತ್ತು ಬದುಕನ್ನ ಕಟ್ಟಿಕೊಳ್ಳಲು ಬೆಂಗಳೂರು ಎಂಬ ಮಾಯನಗರಿಗೆ ಬರುವಂತವರ, ದಿನನಿತ್ಯದ ಪರಿಸ್ಥಿತಿ ಅಂಥವರೆಲ್ಲ ಬದುಕು ಸಾಗಿಸುವಂತಹ ಕ್ರಮ, ರೌಡಿಗಳು ಪೊಲೀಸರು ರಾಜಕೀಯ ಮತ್ತು ಯುವ ಪ್ರೀತಿ ಪ್ರೇಮ ಇಂತಹ ಮುಂತಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ಚಿತ್ರವೇ ಸಿಟಿ ಲೈಟ್ಸ್, ಇದರಲ್ಲಿ ನನ್ನದು ಒಂದು ಗಟ್ಟಿ ಪಾತ್ರ, ವಿಜಯ್ ನನ್ನ ಬಳಿ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಎಂದು ವಿವರಿಸಿ ಪ್ರೀತಿ ಗೌರವದಿಂದ ಕೇಳಿಕೊಂಡಾಗ ನಾನು ಮಾಡಲು ಒಪ್ಪಿಕೊಂಡೆ,
ತುಂಬಾ ಕರಾರುವಕ್ಕಾದ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಲಾಗಿದ್ದು, ಬಹುಶಹ ಈ ಚಿತ್ರವನ್ನು ನಿರ್ದೇಶನ ಮಾಡುವ ಸಂದರ್ಭದಲ್ಲಿ ನಿರ್ದೇಶಕ ವಿಜಯಕುಮಾರ್ ಅವರಿಗೆ ಒಂದಷ್ಟು ಬೆದರಿಕೆಯ ಕರೆಗಳು ಬಂದರೂ ಬಂದಿರಬಹುದು ಎಂಬುದು ನನ್ನ ಅನಿಸಿಕೆ ಎಂದಾಗ ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ವಿಜಯಕುಮಾರ್ ಹೌದು ಎಂಬ ಸನ್ನೆಯನ್ನು ಕೂಡ ಮಾಡಿದರು.

ಇದರ ಜೊತೆಗೆ ಮಾತನಾಡಿದ ಸಂಪೂರ್ಣ ಚಿತ್ರತಂಡ ನಿರ್ದೇಶಕ ವಿಜಯಕುಮಾರ್ ಸಂಭಾಷಣೆಗಾರ ಮಾಸ್ತಿ ಸಂಗೀತ ನಿರ್ದೇಶಕ ಚರಣ್ ರಾಜ್ ನಾಯಕ ನಟ ವಿನಯ್ ರಾಜಕುಮಾರ್ ಮತ್ತು ನಾಯಕಿ ಮೋನಿಷಾ, ಇವರೆಲ್ಲರ ಮಾತಿನಲ್ಲಿ ಸಿಟಿ ಲೈಟ್ಸ್ ಬಗ್ಗೆ ದೊಡ್ಡ ಭರವಸೆ ಆಸೆ ಮತ್ತು ಕನಸುಗಳಿರುವುದು ಕಂಡುಬಂತು,

ನಿರ್ದೇಶಕ ವಿಜಯಕುಮಾರ್ ಮಾತಿನಲ್ಲಿ, ಆತ್ಮವಿಶ್ವಾಸವಿತ್ತು ಅವರು ಹೇಳಿದ ಹಾಗೆ, ಇಲ್ಲಿಯ ತನಕ ನಾನು ವಿನಯ್ ಮೋನಿಷ ಚಿತ್ರದ ಬಗ್ಗೆ ಚಿತ್ರದ ಮೇಕಿಂಗ್ ಬಗ್ಗೆ ಮತ್ತು ಚಿತ್ರದಲ್ಲಿ ಬರುವ ಹೈಲೈಟ್ಸ್ ಬಗ್ಗೆ ಬಹಳಷ್ಟು ಸಂದರ್ಶನಗಳಲ್ಲಿ ಮತ್ತು ಕಂಟೆಂಟ್ ಗಳಲ್ಲಿ ಹೇಳಿದ್ದೇವೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ, ಸೆಪ್ಟೆಂಬರ್ 18 ನಿಮ್ಮ ಮುಂದೆ ಸಿಟಿ ಲೈಟ್ಸ್ ಬರುತ್ತೆ ನಾವೆಲ್ಲರೂ ಚಿತ್ರಮಂದಿರದಲ್ಲಿ ಸೇರೋಣ ಒಟ್ಟಿಗೆ ಸಿನಿಮಾ ಬಣ್ಣ ನೋಡೋಣ ಎಂದು ಮಾತು ಮುಗಿಸಿದರು.

ವೇದಿಕೆ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ನಿರ್ದೇಶಕ ವಿಜಯಕುಮಾರ್ ಜೊತೆ ಸಂಪೂರ್ಣ ಚಿತ್ರತಂಡ ಸೇರಿ ಎಲ್ಲಾ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತು ಸಿನಿಮಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು

ರವೀ ಸಾಸನೂರ್
MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.