Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026
- ವಿಶೇಷ ಸಮಾಚಾರ - ಸಿನಿಮಾ

ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026

ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026 ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು. ಇದೇ ಸಂದರ್ಭದಲ್ಲಿ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನವಾಗಲಿರುವ ಹತ್ತು ಚಿತ್ರಗಳ ಘೋಷಣೆ ಸಹ ಆಯಿತು.ಆ ಚಿತ್ರಗಳು ಈ ಕೆಳಗಿನಂತಿವೆ ಅಮರ ಪ್ರೇಮಿ ಅರುಣ್ ಏಳುಮಲೆ ನಡುಬೆಟ್ಟು ಅಪ್ಪಣ್ಣ ನಿಮ್ಮ ವಸ್ತುಗಳಿಗೆನೀವೇ ಜವಾಬ್ದಾರರು ಪಿದಾಯಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಮಹಿಮಾ ಶ್ರೀ ಜಗನ್ನಾಥ ದಾಸರು ಪಾರ್ಟ್ 2 ಕ್ಷಮೆಯಿರಲಿ ತಂದೆ 4 ಬೈ 4 ಚಲನಚಿತ್ರೋತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಿ,ನಾನು ಅಮೆರಿಕ ಕೇ […]

ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026

ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು. ಇದೇ ಸಂದರ್ಭದಲ್ಲಿ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನವಾಗಲಿರುವ ಹತ್ತು ಚಿತ್ರಗಳ ಘೋಷಣೆ ಸಹ ಆಯಿತು.ಆ ಚಿತ್ರಗಳು ಈ ಕೆಳಗಿನಂತಿವೆ

ಅಮರ ಪ್ರೇಮಿ ಅರುಣ್

ಏಳುಮಲೆ

ನಡುಬೆಟ್ಟು ಅಪ್ಪಣ್ಣ

ನಿಮ್ಮ ವಸ್ತುಗಳಿಗೆ
ನೀವೇ ಜವಾಬ್ದಾರರು

ಪಿದಾಯಿ

ಬಿಳಿ ಚುಕ್ಕಿ ಹಳ್ಳಿ ಹಕ್ಕಿ

ಮಹಿಮಾ

ಶ್ರೀ ಜಗನ್ನಾಥ ದಾಸರು ಪಾರ್ಟ್ 2

ಕ್ಷಮೆಯಿರಲಿ ತಂದೆ

4 ಬೈ 4

ಚಲನಚಿತ್ರೋತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಿ,
ನಾನು ಅಮೆರಿಕ ಕೇ ಹೋಗಿಲ್ಲ,ಆದ್ರೆ ನನ್ನ ನಿರ್ದೇಶನದ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಳು ಸಿನಿಮಾಗಳು ಅಲ್ಲಿ ಪ್ರದರ್ಶನ ಆಗಿದ್ದು ನಮ್ಮ ತಂಡದ ಹೆಮ್ಮೆ.
ಆ ಮೂಲಕ ನಾನು ಅಮೆರಿಕ ದೇಶಕ್ಕೆ ಹೋಗಿ ಬಂದೇ..
ಇಂತದೊಂದು ಅಪರೂಪದ ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ 2026 ಆಯ್ಕೆ ಸಮಿತಿಗೆ ನನ್ನನ್ನ ನಿರ್ದೇಶಕ ಅಂತಾ ಆಯ್ಕೆ ಮಾಡಿದ್ದು ನನಗೆ ಸಂತಸ ತಂದಿದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲ ಹೇಳಿದ ಮಾತು ಇಡೀ ಸಭಾಂಗಣದಲ್ಲಿ ಕೂತವರ ಮನಸ್ಸಿಗೆ ಮುದವಾಗಿ ನಾಟಿತ್ತು, ಅಷ್ಟಕ್ಕೂ ಜಯಮಾಲಾ ಅವ್ರು ಹೇಳಿದ ಮಾತು ಅಂದ್ರೆ,
ಅಮೆರಿಕಾದಲ್ಲಿರುವ ಕನ್ನಡದ ಮುದ್ದು ಮನಸ್ಸುಗಳೇ ನೀವು ಕನ್ನಡ ಚಿತ್ರಗಳನ್ನು ಬರಿ ಅಭಿಮಾನಿಗಳಾಗಿ ನೋಡದೆ,ಕನ್ನಡದ ರಾಯಭಾರಿಗಳಾಗಿ ನೋಡಿ ಎಂದು ವಿನಂತಿಸಿಕೊಂಡಿದ್ದು,
ಹೈಲೈಟ್ ಆದಂತಹ ಮಾತಾಗಿತ್ತು,

ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವದಲ್ಲಿ
51 ಚಿತ್ರಗಳು ಆಯ್ಕೆಯಾಗಿದ್ದು ಅದರಲ್ಲಿ
ಆಯ್ಕೆಯಾದ ಅತ್ಯುತ್ತಮ ಹತ್ತು,ಚಿತ್ರಗಳು,ಅದರಲ್ಲೂ ಬೆಸ್ಟ್ ಮೂರು ಚಿತ್ರಗಳು ಎಂಬುದು ಮತ್ತೊಂದು ವಿಶೇಷವಾಗಿತ್ತು.

ಇನ್ನು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ಹೊಂದಿದ್ದ ಗಣ್ಯರಾದ,
ಹಿರಿಯ ಪತ್ರಕರ್ತರು ಹಾಗೂ ಕನ್ನಡ ಪ್ರಭ ಮುಖ್ಯ ಸಂಪಾದಕರು,ಜೋಗಿ ಮಾತನಾಡಿ
ಟಾಕ್ಸಿಕ್ ಭರ್ಜರಿಯಾಗಿ ಓಡ್ತಾ ಇರೋದು ಒಂದು ಕಡೆಯಾದರೆ,
ಇನ್ನೊಂದು ಕಡೆ ಇಂತಹ ಸದಭಿರುಚಿಯ ಒಳ್ಳೆಯ ಕನ್ನಡ ಚಿತ್ರಗಳು ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು ಒಳ್ಳೆಯ ಬೆಳವಣಿಗೆ ಅನ್ನೋದು ನನ್ನ ಅಭಿಪ್ರಾಯ ಎನ್ನುವುದರ ಮೂಲಕ ಎಲ್ಲರಿಗೂ ಶುಭ ಹಾರೈಸಿದರು.

ಅದೇ ರೀತಿಯಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದ
B S ಲಿಂಗದೇವರು,
ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡುವುದು ಬಹಳ ಕಷ್ಟ,ಯಾಕೆಂದರೆ ತುಂಬಾ ಒಳ್ಳೆಯ ಸಿನಿಮಾಗಳು ಬರುತ್ತವೆ,
ಅದರಲ್ಲಿ ಹತ್ತು ಅದ್ಬುತ ಚಿತ್ರಗಳಲ್ಲಿ ಮೂರು ಬೆಸ್ಟ್ ಚಿತ್ರಗಳು ಅಂತಾ ಸೆಲೆಕ್ಟ್ ಮಾಡಿದ್ದೀವಿ,ಎಲ್ಲವೂ ತುಂಬಾ ಶಿಸ್ತುಬದ್ಧವಾದ ರೀತಿಯಲ್ಲಿ ಆಗಿದ್ದು,ಎಲ್ಲವೂ ಅದರದೇ ಆದ ರೀತಿ ರಿವಾಜುಗಳೊಂದಿಗೆ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ನ್ಯೂಸ್ ಫಸ್ಟ್ ನ MD & CEO
ಎಸ್ ರವಿಕುಮಾರ್ ಮಾತನಾಡಿ,
ಗೌರೀಶ್ ಮತ್ತು ದೇವೇಂದ್ರ ಬಡಿಗೇರ ನಮ್ಮದು ತುಂಬಾ ಹಳೆಯ ಪರಿಚಯ..
ಈಟಿವಿ ಮತ್ತು TV9 ಕೆಲಸ ಮಾಡುವಾಗ ನಿಂದಲೂ ನಾವೆಲ್ಲರೂ ಸ್ನೇಹಿತರು,
ಅಕ್ಕ ಸಮ್ಮೇಳನದ ಬಗ್ಗೆ ನಮಗೆ ಹೆಮ್ಮೆ ಇದೆ..
ಇಂತಹ ಅದ್ಬುತ ಐತಿಹಾಸಿಕ ಪ್ರಾಜೆಕ್ಟ್ ನ ಬಾಗವಾಗಿದ್ದಕ್ಕೆ ನನಗೆ ಖುಷಿ ಇದೆ, ಎಂದು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಚಲನಚಿತ್ರೋತ್ಸವದ ಸಂಘಟಕರಾಗಿ ತುಂಬಾ ಅಚ್ಚುಕಟ್ಟಾದ ಕೆಲಸ ಮಾಡಿದ ಗೌರೀಶ್ ಅಕ್ಕಿ,ದೇವೇಂದ್ರ ಬಡಿಗೇರ್ ರವರಿಗೆ ಅಲ್ಲಿ ಬಂದಿದ್ದ ಎಲ್ಲರೂ ಶುಭ ಹಾರೈಸಿದ್ದು ಹಾಗೂ ಅವರ ಕೆಲಸವನ್ನು ಅವಳಿದ್ದು ವಿಶೇಷವಾಗಿತ್ತು…

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.