ತತ್ವಪದಗಳ ಲಕ್ಷಣಗಳು….
ಮೌಖಿಕವೂ ಅಲ್ಲದ ಲಿಖಿತೂ ಅಲ್ಲದ ಸಾಧಿತ ಪಠ್ಯಗಳು, ಅವು ಅನ್ಯರಿಗಾಗಿ ಹಾಡಲು ಕಟ್ಟಿದ ರಚನೆಗಳು ಅಲ್ಲ , ಬದುಕಿನ ನಿಜ ಚಹರೆಗಳನ್ನು ಅರಿತುಕೊಳ್ಳಲು ಇವುಗಳು ಅಗತ್ಯ. ಗುರು ಮಾರ್ಗದ ಆಚರಣೆಗೆ ಬರುವವರು ಜಾತಿ, ಧರ್ಮದ ಹಂಗನ್ನು ಹರಿದುಕೊಂಡವರು. ತತ್ವಪದಕಾರರಿಗೆ ಯೋಗಭಕ್ತಿ ಮಾರ್ಗವು ಅಲ್ಲ, ದೈವ ಭಕ್ತಿ ಮಾರ್ಗವು ಅಲ್ಲ , ಅದು ಕೇವಲ ಗುರುಮಾರ್ಗ , ಗುರುವೇ ಸರ್ವಸ್ವ, ಗುರುವೇ ಶಿಷ್ಯ ಸ್ವರೂಪಿ, ಲಿಂಗ ಸ್ವರೂಪಿ, ಮಂಗಳ ಸ್ವರೂಪಿ, ಸಾಧನೆಗೆ ಗುರುವೊಬ್ಬ ಬೇಕೇ ಬೇಕು. ದೈವ ಕಾಲ್ಪನಿಕ ಅರಿವೇ ನಿಜವಾದ ಗುರು.ಇಸ್ಲಾಂ ಹಿಂದೂ ಕ್ರೈಸ್ತರಲ್ಲಿಯೂ ದೈವ ಮಾರ್ಗ ಗುರು ಮಾರ್ಗ ಎರಡು ಇವೆ ಮತ್ತು ತೀವ್ರ ಸಂಘರ್ಷಗಳು ಇವೆ ತತ್ವಪದಕಾರರು ವರ್ಣಾಶ್ರಮಿ ಹತ್ಯಶ್ರಮಿಗಳ ವ್ಯವಸ್ಥೆ ಜಾತಿ ಸೂತಕ ಮುಟ್ಟು ಮೈಲಿಗೆ ಯಾವುದು ಇಲ್ಲ ಎಲ್ಲರೂ ಸಮಾನರು ಇವರಿಗೆ ಜಾತಿ ಧರ್ಮ ಭಾಷೆಗಳ ಅಡಿಗಳಿಲ್ಲ ತತ್ವಪದಕಾರರಲ್ಲಿ ಎರಡು ಮಾರ್ಗಗಳಿವೆ ಅವುಗಳೆಂದರೆ -
1)ವಿಹಂಗಮ ಮಾರ್ಗ 2)ಪಿಪಿಲಿಕ ಮಾರ್ಗ.
- ವಿಹಂಗಮ ಮಾರ್ಗವೆಂದರೆ ಒಂದೇ ಸಾರಿ ಎಲ್ಲವನ್ನು ದಾಟಿ ನಿಂತ ಬಯಲು ಸಾಧಕರು.
- ಪಿಪಿಲಿಕ ಮಾರ್ಗವೆಂದರೆ ಕ್ರಮಾನುಗತವಾಗಿ ಸಾಧನೆ ಮಾಡಿ ಗುರಿ ಮುಟ್ಟುವವರು ಇಲ್ಲಿ ಶ್ರೇಷ್ಠ ಕನಿಷ್ಠ ಗಳಿಲ್ಲ.
ಮುಂದುವರೆಯುತ್ತದೆ ….
H R ಬಾಗವಾನ – ಲೇಖಕರು


