ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಮೆರಿಕ ಅಮೆರಿಕ 2 ಚಿತ್ರದ, ಟ್ರೈಲರ್ ಲಾಂಚ್ ಗೆ ಬಂದಿದ್ದ ಡಾಲಿ ಧನಂಜಯ್,ಕನ್ನಡ ಚಿತ್ರರಂಗದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರ ಕುರಿತು ಎದೆ ತುಂಬಿ ಭಾವನಾತ್ಮಕವಾಗಿ ಮಾತಾಡಿದ್ದು ಮೈಸೂರಿನಲ್ಲಿ ನಡೆದ ಇವೆಂಟ್ನ ಪ್ರಮುಖ ಹೈಲೈಟ್.
“ಡಾಲಿ ಧನಂಜಯ್”
ಹಳೇ ಬೇರಿನಿಂದಲೇ..ಹೊಸ ಚಿಗುರು ಹುಟ್ಟೋದು..ನಾಗ್ತಿ ಸರ್ ಮಾಡಿರೋ ಉಂಡುಹೋದ ಕೊಂಡುಹೋದ ಸೇರಿ ನಾಗ್ತಿ ಸರ್ ನಿರ್ದೇಶನ ಮಾಡಿದ ಬಹಳ ಸಿನಿಮಾಗಳನ್ನು ನೋಡಿದ್ದೇನೆ.
ನಮ್ಮಂತವರಿಗೆ ನಾಗ್ತಿ ಸರ್ ತರಹದ ಹಿರಿಯರ ಆಶೀರ್ವಾದ,ಸಲಹೆ ಇದ್ರೆ ನಮಗೆ ದೊಡ್ಡ ಶಕ್ತಿಯಾಗಿ ಇರತ್ತೆ ಎಂದರು.ಆನಂತರ ಮಾತನಾಡಿದ ಮೇಷ್ಟ್ರು
ಈ ಕಾರ್ಯಕ್ರಮದಲ್ಲಿ ಸೇರಿರುವ ಮೈಸೂರಿನ ಜನತೆ ಮತ್ತು ಚಿತ್ರೋದ್ಯಮದ ನನ್ನೆಲ್ಲ ಸ್ನೇಹಿತರಿಗೆ,ಧನ್ಯವಾದ ಬಿಟ್ಟು ಬೇರೇನೂ ಹೇಳಲ್ಲ..ಇನ್ನು ಹತ್ತು ದಿನದಲ್ಲಿ ನನ್ನ ಡೆಲಿವರಿ ಆಗತ್ತೆ ಅದು ಅಮೆರಿಕಾ ಅಮೆರಿಕಾ2 ರಿಲೀಸ್ ನ ವಿಷ್ಯ..ನನಗಿಂತಲೂ ಸಿನಿಮಾ ನೋಡುವ ಪ್ರೇಕ್ಷಕರು ಮಹಾ ಬುದ್ಧಿವಂತರು ಅನ್ನೋದು ನನ್ನ ನಂಬಿಕೆ ಎಂದಾಗ ಚಪ್ಪಾಳೆಗಳ ಮಹಾಪುರವೇ ಹರಿಯಿತು.

ಹಳ್ಳಿಮುಕ್ಕನಾಗಿದ್ದ ನಾನು,ನಾನೊಬ್ಬ ಸಾಮಾನ್ಯ ಬರಹಗಾರ, ಸಾಮಾನ್ಯ ನಿರ್ದೇಶಕ,ನನಗೆ ನೀವು ಕೊಟ್ಟ ಪ್ರೀತಿಗೆ ಧನ್ಯವಾದ..
ಧನಂಜಯ್,ಮಾಡಿದ್ದ ಕಿರುಚಿತ್ರ ನನಗೆ ಇಷ್ಟ,ನಂತರ ಆತ ಕಲಾವಿದನಾಗಿ ಬೆಳೆದು,ನಂತರ ನಿರ್ಮಾಪಕನಾಗಿ ಬೆಳೆದು,ಹೊಸಬರಿಗೆ ಚಿತ್ರ ನಿರ್ಮಾಣ ಇರುವ ಮಹೋನ್ನತ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ.
ನನ್ನ ಒಂದೇ ಒಂದು ಮೆಸೇಜ್ ಗೆ ಆತನ ಉತ್ತರ,ನಾನು ಬರುತ್ತೇನೆ ಅಂತಾ ಬಂದು, ಅಮೆರಿಕ ಅಮೆರಿಕ 2 ಟ್ರೈಲರ್ ಲಾಂಚ್ ಮಾಡಲು ಬಂದಿದ್ದು ನನಗೆ ಸಂತಸ ತಂದಿದೆ ಎಂದು ಡಾಲಿಗೆ ಧನ್ಯವಾದ ಹೇಳಿದ್ರು,
ಇನ್ನು ಮಂಡ್ಯ ರಮೇಶ್ ಮಾತಿನ ಗತ್ತೇ ಬೇರೆ ಇತ್ತು,
ಗೆದ್ದ ಮೇಲೆ ಸಕ್ಸಸ್ ಆದ್ಮೇಲೆ ನಮ್ಮ ದೇಶ ಬಿಟ್ಟು ಬೇರೊಂದು ಕೆಲಸ ಮಾಡ್ತಾ ಇರುವ ಉತ್ಸಾಹಿ ನಿರ್ದೇಶಕ ನಮ್ಮ ನಾಗ್ತಿ ಮೇಷ್ಟು ಎಂದಾಗ ಅಲ್ಲಿ ಕೂತವರ ಮುಖದಲ್ಲಿ ಹೆಮ್ಮೆಯ ನಗು,
ಅಂದ್ಹಾಗೆ ಯಾರು ಈ
ನುಡಿ..ನೀಲ್..ನಿನಾದ..
ನುಡಿ ಪಾತ್ರ ನಿರ್ವಹಿಸಿದ
ಶಾನ್ವಿ ಶ್ರೀವಾತ್ಸವ್ ಮಾತನಾಡಿ,
ನುಡಿ ಅನ್ನೋ ಪಾತ್ರದ ಮೂಲಕ, ನಾನು ಸಮಾಜದಲ್ಲಿನ ಪ್ರತಿಯೊಂದು ಹೆಣ್ಣುಮಕ್ಕಳನ್ನು ರೆಪ್ರೆಸೆಂಟ್ ಮಾಡ್ತೀನಿ, ಹೆಣ್ಣುಮಕ್ಕಳನ್ನು ಕೇಂದ್ರಬಿಂದುವಾಗಿ ತೋರಿಸುವ ಗ್ರೇಟ್ ಪ್ರಯತ್ನ ಇದಾಗಿದೆ,
ಇನ್ನೂ ನಾಯಕ ನಟರಾದ
ಪೃಥ್ವಿ ಅಂಬರ್,
ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಮಹಾನ್ ಸಾಧಕರ ನಾಡಲ್ಲಿ ನಾವು ಹುಟ್ಟಿದ್ದು ನಮ್ಮ ಸೌಭಾಗ್ಯ,ನೀವು ಮಾಡಿದ ಸಾಧನೆಯ ಒಂದು ಪರ್ಸೆಂಟ್ ಕೂಡಾ ನಾವು ಮಾಡಿದರು ನಾವು ಧನ್ಯ ಅಂತ ಭಾವಿಸ್ತೀನಿ.
ನಾಗ್ತಿ ಮೇಷ್ಟು ಬೇರೆ ದೇಶದಲ್ಲಿ ಶೂಟ್ ಮಾಡಿದ್ರು ಸಹ ಅವ್ರ ಆತ್ಮ ಶುದ್ಧ ಕನ್ನಡತನವನ್ನು ಹೊತ್ತು ಸಾಗುತ್ತೆ.
ಇಂತದೊಂದು ಅದ್ಬುತ ಇವೆಂಟ್ ನಾನು ಎಲ್ಲಿಯೂ ನೋಡಿಲ್ಲ,
ಸಾಂಸ್ಕೃತಿಕ ನಗರಿ ಮೈಸೂರು ನಮ್ಮ ಹೆಮ್ಮೆ ಎನ್ನುವುದರ ಮೂಲಕ ಅಲ್ಲಿ ನೆರೆದಿದ್ದ ಎಲ್ಲರ ಗಮನ ಸೆಳೆದದ್ದು ಸಖತ್ ಆಗಿತ್ತು.ಹಾಗೆ ಇನ್ನೊಬ್ಬ ನಟನಿರೂಪ ಭಂಡಾರಿ
ಮೈಸೂರಲ್ಲಿ ಓದಿ,ಇಲ್ಲೇ ಬೆಳೆದವನು,ಬೆಂಗಳೂರಿನಿಂದ ಆಗಾಗ ನಾನು ಇಲ್ಲಿಗೆ ಬರ್ತಾ ಇರ್ತೀನಿ.ನನ್ನ ಸ್ವಂತ ಊರಲ್ಲಿ ನಾನು ನಟಿಸಿದ ಅಮೆರಿಕ ಅಮೆರಿಕ 2 ಚಿತ್ರದ ಟ್ರೈಲರ್ ಲಾಂಚ್ ಆಗ್ತಿರೋದು ನನಗೆ ಖುಷಿ,ಇದು ನನ್ನ ಕೇರಿಯರನ್ ಮೊದಲ ಬೆಸ್ಟ್ ಅನುಭವ.ಹಳೇ ಕಥೆಗಳಿಂದಲೇ,ಹೊಸ ಕಥೆಗಳು ಹುಟ್ಟೋದು..ಹಳೇ ಪ್ರೇಕ್ಷಕರಿಂದಲೇ ಹೊಸ ಪ್ರೇಕ್ಷಕರು ಹುಟ್ಟೋದು..
ಇದು ನಿಜ ಆಗುತ್ತೆ ಅನ್ನೋ ಭರವಸೆ ನನಗಿದೆ.ಒಳ್ಳೆಯ ಸಿನಿಮಾ ಮಾಡಿದ ಪ್ರತಿಯೊಬ್ಬರ ನಂಬಿಕೆ,ಒಂದೊಳ್ಳೆ ಸಿನಿಮಾವನ್ನು ಯಾರು ಸೋಲಲು ಬಿಡೋದಿಲ್ಲ ಅನ್ನೋದು ಕನ್ನಡಿಗರು ಯಾವಾಗಲೂ ತೋರಿಸುತ್ತಲೇ ಇದ್ದಾರೆ ಎಂದರು.

ಅಮೆರಿಕಾ ಅಮೆರಿಕಾ 2
ಮೂವತ್ತು ವರ್ಷಗಳ ಹಿಂದೆ..
ಸ್ವದೇಶ ಮತ್ತು ವಿದೇಶಗಳ ನಡುವೆ ಒಂದು ಗಟ್ಟಿ ಬಾಂಧವ್ಯವನ್ನು ಹುಟ್ಟಿ ಹಾಕಿದ್ದು ನಮ್ಮ ನಾಗತಿಹಳ್ಳಿ ಚಂದ್ರಶೇಖರ್ ಸರ್.
ಖಂಡಿತ ಈ ಚಿತ್ರ ಒಳ್ಳೆಯ ಚಿತ್ರವಾಗಿ ತನ್ನ ಹೆಸರು ಎಲ್ಲ ಕಡೆ ಹರಡಲಿದೆ ಎಂದು ಹೇಳಿದ್ದು,
ಪ್ರೊಫೆಸರ್
A P ಜ್ಞಾನಪ್ರಕಾಶ್,
(ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿಗಳು)
ಟ್ರೈಲರ್ ಲಾಂಚ್ ಆಗುವುದಕ್ಕೂ ಮುಂಚೆ ಶುರುವಾದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿದ್ದ,ಸಂಗೀತಾ ಕಟ್ಟಿ ಕುಲಕರ್ಣಿ,ತಮಗೆ ಸಂಗೀತ ಪಾಠ ಹೇಳಿಕೊಟ್ಟ ಎಲ್ಲ ಗುರುಗಳಿಗೂ ಭಕ್ತಿಯಿಂದ ನೆನೆದು,ಮೈಸೂರಿನಲ್ಲಿರುವ ಎಲ್ಲ ಶ್ರೇಷ್ಠ ಸಾಹಿತಿಗಳನ್ನು ಮತ್ತು ಸಂಗೀತಗಾರರಿಗೆ ಧನ್ಯವಾದ ಹೇಳಿ ಮಾತು ಶುರು ಮಾಡಿ,ಆನಂತರಯಾವ ಮೋಹನ್ ಮುರಳಿ ಕರೆಯಿತೋ.ದ ರಾ ಬೇಂದ್ರೆ ಯವರ ಹಾಡು ಮತ್ತು ನಾಗಮಂಗಲದಕಂಬದ ಮೇಲಿನ ಗೊಂಬೆಯ ಹಾಡಿ ಅಲ್ಲಿ ನೆರೆದಿದ್ದ ಎಲ್ಲರನ್ನೂಬೇರೊಂದು ಲೋಕಕ್ಕೆ ಕರೆದುಕೊಂಡು ಹೋದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ,ಪ್ರೊಫೆಸರ್ ಡಾಕ್ಟರ್ ಕೃಷ್ಣೇಗೌಡರು..ನಾಗತಿಹಳ್ಳಿ ಚಂದ್ರಶೇಖರ್ ಎಂತಹ ಸದಭಿರುಚಿಯ ಚಿತ್ರ ನಿರ್ದೇಶಕ ಅನ್ನೋದು,ಇಡೀ ಉದ್ಯಮಕ್ಕೆ ಗೊತ್ತು..ಯಾವ ಮೋಹನ್ ಮುರಳಿ ಕರೆಯಿತೋ..ನೀ ಅಮೃತ ಧಾರೆ..ಸುಪ್ರಿಯಾ ಆಚಾರ್ಯ ಮತ್ತು ಸಂಗೀತಾ ಕಟ್ಟಿ ಕುಲಕರ್ಣಿ ಸೇರಿ ಅಮೇರಿಕಾ ಅಮೇರಿಕಾ 2 ಚಿತ್ರದ ಟ್ರೈಲರ್ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು..
ರವೀ ಸಾಸನೂರ್

