Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮಹಾಪುರುಷನ ಹುಟ್ಟು
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮಹಾಪುರುಷನ ಹುಟ್ಟು

ಜನನ –ಹಳ್ಳೂರು ಗ್ರಾಮದ ಹರಿಜನ ಸಮುದಾಯದಲ್ಲಿ ಹುಟ್ಟಿದರು ಶ್ರೀ ಬಸಪ್ಪ ಶರಣರು. ಇವರು ತಂದೆ ಹುಸೇನಪ್ಪ ತಾಯಿ ಮರೆಯುವ ದಂಪತಿಗಳ ಉದರದಲ್ಲಿ ಸುಮಾರು 1940 ರಲ್ಲಿ ಜನಿಸಿದರು. ಹೆಳವರ ಪ್ರಕಾರ ಇವರೇ ಹೇಳುವಂತೆ ಇವರ ಮೂಲಸ್ಥಾನ ಸುರಪುರ ತಾಲೂಕಿನ ಕೆಂಭಾವಿ, ಇವರ ತಂದೆಯವರು ಕೃಷಿಯನ್ನೇ ಅವಲಂಬಿಸಿ ಹೊಲಗಳಲ್ಲಿ ಆಳಾಗಿ ಶ್ರಮವಹಿಸಿ ದುಡಿದು ತಮ್ಮ ತೊಗಲಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರಿಗೆ ಒಟ್ಟು ಎಂಟು ಮಕ್ಕಳು ಮೊದಲನೆಯದಾಗಿ ನೀಲಮ್ಮ, ಬಸಪ್ಪ, ಮಾಳವ್ವ ,ಲಕ್ಷ್ಮೀಬಾಯಿ, ಕಾಸಿಮ, ಗೌರಮ್ಮ ,ಶರಣಮ್ಮ, ಮೈಲಾರಪ್ಪ ಹೀಗೆ […]

ಜನನ –
ಹಳ್ಳೂರು ಗ್ರಾಮದ ಹರಿಜನ ಸಮುದಾಯದಲ್ಲಿ ಹುಟ್ಟಿದರು ಶ್ರೀ ಬಸಪ್ಪ ಶರಣರು. ಇವರು ತಂದೆ ಹುಸೇನಪ್ಪ ತಾಯಿ ಮರೆಯುವ ದಂಪತಿಗಳ ಉದರದಲ್ಲಿ ಸುಮಾರು 1940 ರಲ್ಲಿ ಜನಿಸಿದರು. ಹೆಳವರ ಪ್ರಕಾರ ಇವರೇ ಹೇಳುವಂತೆ ಇವರ ಮೂಲಸ್ಥಾನ ಸುರಪುರ ತಾಲೂಕಿನ ಕೆಂಭಾವಿ, ಇವರ ತಂದೆಯವರು ಕೃಷಿಯನ್ನೇ ಅವಲಂಬಿಸಿ ಹೊಲಗಳಲ್ಲಿ ಆಳಾಗಿ ಶ್ರಮವಹಿಸಿ ದುಡಿದು ತಮ್ಮ ತೊಗಲಿನ ಚೀಲ ತುಂಬಿಸಿಕೊಳ್ಳುತ್ತಿದ್ದರು.

  ಇವರಿಗೆ ಒಟ್ಟು ಎಂಟು ಮಕ್ಕಳು ಮೊದಲನೆಯದಾಗಿ ನೀಲಮ್ಮ, ಬಸಪ್ಪ, ಮಾಳವ್ವ ,ಲಕ್ಷ್ಮೀಬಾಯಿ, ಕಾಸಿಮ, ಗೌರಮ್ಮ ,ಶರಣಮ್ಮ, ಮೈಲಾರಪ್ಪ ಹೀಗೆ ಎಂಟು ಜನ ಮಕ್ಕಳನ್ನು ಹೊತ್ತು ತುಂಬು ಸಂಸಾರದ ಬಂಡಿಯನ್ನು ಸಾಗಿಸುತ್ತಿದ್ದರು.

ಬಾಲ್ಯ ಜೀವನ-

 ಇವರು ತಮ್ಮ ಹದಿಮೂರನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಕೊಂಡಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಆದರೂ ಅವರು ಎದೆಗುಂದದೆ ತಂದೆ ಇಲ್ಲದಿದ್ದರೂ ತಂದೆಯ ಸ್ಥಾನದಲ್ಲಿ ತಾವೇ ನಿಂತು ತಂದೆಯ ಕಾಯಕವನ್ನೇ ನಡೆಸಿಕೊಂಡು ಹೋಗುತ್ತಾರೆ. ಇವರ ತಂದೆಯವರ ಕಾಯಕ ಮಾಡುತ್ತಾ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳಲು ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಗ್ರಾಮಕ್ಕೆ ವಲಸೆ ಬಂದು ನೆಲೆಸುತ್ತಾರೆ.
  ತಂದೆಯವರು ದುಡಿಮೆ ಮಾಡುತ್ತಾ ಒಂದಿಷ್ಟು ತಮ್ಮದೇ ಆದಂತಹ ಸ್ವಂತ ಜಮೀನನ್ನು ಖರೀದಿಸಿಕೊಂಡು ಅದರಲ್ಲೇ ಉಳಿಮೆ ಮಾಡಿಕೊಂಡು ಹೋಗುತ್ತಾರೆ. ಬಸಪ್ಪನವರೇ ಹಿರಿಯ ಮಗನಾಗಿರುವುದರಿಂದ ತಂದೆಯ ಜೊತೆಗೆ ಸೇರಿ ದುಡಿಯುವ ಅವಕಾಶ ದೊರಕಿತ್ತು . ಅವರೊಂದಿಗೆ ಹೊಲ ಉಳುಮೆ ಮಾಡುವ , ಬಿತ್ತುವ, ನೀರು ಕಟ್ಟುವ, ರಾಶಿ ಮಾಡಿ ಮನೆಗೆ ಕಾಳು ಕಡಿ ತಂದು ಹಚ್ಚುವ ವರೆಗೂ ತಂದೆಯವರೊಂದಿಗೆ ಹಗಲು ರಾತ್ರಿ ಎನ್ನದೆ ದುಡಿಮೆ ಮಾಡಿ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಿ ಕಿರಿಯ ಸಹೋದರ ಸಹೋದರಿಯರಿಗೆ ಒಬ್ಬ ಆದರ್ಶ ಸಹೋದರನಾಗಿಯೇ ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಇವರ ಬಾಲ್ಯದ ಗೆಳೆಯರೆಂದರೆ ಪರಸಪ್ಪ ಚೌಡಕೇರ, ಭೀಮಪ್ಪ ಉಪ್ಪಲದಿನ್ನಿ, ಲಚ್ಚಪ್ಪ ಹೊಸಮನಿ. 
 ಇನ್ನು ಒಕ್ಕಲುತನ ಹೊಲ ಮನಿ ಕಾಯಕ ಹೊಲದಲ್ಲಿ ಮಟ್ಟಿ ಬಾರಿ ಹೊಡೆದು ನೀರು ಕಟ್ಟುವುದು . ಕುಟುಂಬಕ್ಕಾಗಿಯೇ ದೇಹ ಸವಿಸುವ ಕಾಯಕ ಮಾಡಿದವರು. ಒಟ್ಟಾರೆ ಪರಿಪೂರ್ಣ ಕೃಷಿಕ ವೃತ್ತಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದಂತವರು. ಇವರಿಗೆ ಆಟೋಟಕ್ಕೆ ಎಲ್ಲಿ ಸಮಯ ಸಿಗಬೇಕು ? ಹೀಗಾಗಿ ಇವರು ಆಟೋಟಗಳಿಂದ ಅತಿ ದೂರವೇ ಉಳಿದುಕೊಂಡವರು.

ಮುಂದುವರಿಯುತ್ತದೆ …..

H R ಬಾಗವಾನ ಲೇಖಕರು


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.