ತತ್ವಪದಕಾರ ಶ್ರೀ ಬಸಪ್ಪ ಶರಣರ ಜೀವನಗಾಥೆ…

ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಯಾವುದೇ ಶಿಕ್ಷಣ ಕ್ಷೇತ್ರದಲ್ಲಿ ಅಭ್ಯಾಸ ಮಾಡದೆ ಉತ್ತಮವಾದ ಜನಮಾನಸವನ್ನು ಸೂರೆಗೊಳ್ಳುವ ಮತ್ತು ಜನರ ಮನಃಪರಿವರ್ತನೆ ಮಾಡುವ ಶಕ್ತಿ ಕನ್ನಡ ನುಡಿಗಿದೆ. ಪರಿಣಾಮಕಾರಿ ಸಾಹಿತ್ಯ ಕೃತಿಗಳನ್ನು ರಚಿಸುವ ಹಲವು ಸಾಹಿತಿಗಳು ನಮ್ಮಲ್ಲಿದ್ದಾರೆ.ಅವರಲ್ಲಿ ಗುಮ್ಮಟ ನಗರಿಯ ಮುದ್ದೇಬಿಹಾಳ ತಾಲೂಕಿನ ಶ್ರೀಎಚ್ ಆರ್ ಬಾಗವಾನ ಕೂಡ ಒಬ್ಬರಾಗಿದ್ದಾರೆ.

ಶ್ರೀ ಬಸಪ್ಪ ಶರಣರು ಹಳ್ಳೂರಿನ ಅಪರೂಪದ ಅನುಭಾವಿಗಳು.
” ಸಾಲಿಯ ಕಲಿತಿಲ್ಲ ಪಾಠಿಯ ಹಿಡಿದಿಲ್ಲ”ಆದರೂ ಕೇವಲ ತಮ್ಮ ಅಂದಿನ ಅನುಭವದ ಸಾಹಿತ್ಯವನ್ನು ಅರಗಿಸಿಕೊಂಡವರು. ಇನ್ನೂ ಸಾವಿರ ವರ್ಷ ಕಳೆದರೂ ಅವರ ಸಾಹಿತ್ಯ ಈ ಜಗತ್ತಿಗೆ ಬೆಳಕನ್ನು ನೀಡುತ್ತದೆ ಮತ್ತು ಮಾರ್ಗದರ್ಶನ ಮಾಡುತ್ತದೆ. ಅಂತವರ ಅನುಭವಗಳ ಸಾಲಿನಲ್ಲಿ ಇವರು ಅತ್ಯಂತ ಅಪರೂಪದ ತತ್ವಪದಕಾರರು ಚಿಂತಕರು ಅಹುದು.

ಅರಿವು ಸದಾ ಒಂದು ಸಂಪತ್ತು ಅರಿವು ಜಾಗೃತವಾದರೆ ಯಾವ ಶಾಲೆಯೂ ಬೇಕಾಗಿಲ್ಲ. ಆ ಅರಿವಿನ ಬೆಳಕಿನಲ್ಲಿ ಸಹಜವಾದ ಅತ್ಯಂತ ಶ್ರೇಷ್ಠವಾದ ಅನುಭವ ಸಾಹಿತ್ಯ ರಚನೆಯಾಗುವುದು.
ಬಸಪ್ಪ ಶರಣರ ಜೀವನ ಸಾಧನೆ ಅನುಭವ ಒಂದು ದಂತಕಥೆಯಾಗಿ, ಪವಾಡವೆಂದೆನಿಸಿ, ಲೇಖಕನಾದ ನನಗೆ ಬರೆಯಲು ಸ್ಪೂರ್ತಿಯಾಯಿತು. ಈ ಪುಸ್ತಕವನ್ನು ಓದುತ್ತಾ ಹೋದಂತೆ ಮನಸ್ಸು ಅರಿವಿನ ರುಚಿಯನ್ನು ಪಡೆದ ಅನುಭವವಾಗುತ್ತದೆ. ಮುಂದಿನ ಪೀಳಿಗೆಗೆ ಅನುಭಾವದ ಬೆಳಕಿನ ಬುತ್ತಿ ಅರಿವಿನ ಪ್ರಸಾದವಾಗುತ್ತದೆ. ಕಾರಣ ಇದನ್ನು ಅನುಭವಿಗಳು, ಆಧ್ಯಾತ್ಮಜೀವಿಗಳು ಎಲ್ಲರೂ ಓದಿ ಹಾಗೂ ಆನಂದಿಸಿ.
- ಹೆಚ್ ಆರ್ ಬಾಗವಾನ
ಲೇಖಕರು, ಮುದ್ದೇಬಿಹಾಳ

