Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ತೆರೆಮೇಲೆ ಬರ್ತಿದೆ *ಮಹಾವೀರ ಕರ್ಣ*
- ವಿಶೇಷ ಸಮಾಚಾರ

ತೆರೆಮೇಲೆ ಬರ್ತಿದೆ *ಮಹಾವೀರ ಕರ್ಣ*

ಹಿಂದೂ ಧರ್ಮದ ಎರಡು ಪರಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಂತಹ ಈ ಮಹಾಕಾವ್ಯಗಳನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಅವುಗಳ ಅಧ್ಯಯನವನ್ನು ಮಾಡುತ್ತಾರೋ ಅಂತವರೆಲ್ಲ ಶ್ರೇಷ್ಠ ಯೋಗಿಗಳ ಜೀವನವನ್ನು ಹೊಂದುತ್ತಾರೆ ಎಂಬ ಮಾತಿದೆ.ರಾಮಾಯಣ ಮತ್ತು ಮಹಾಭಾರತದ ಕಥಾವಸ್ತುವಾಗಲಿ ಅಥವಾ ಆ ಕಾವ್ಯಗಳಲ್ಲಿರುವ ಪಾತ್ರಗಳು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾದ ಅಂತಹ ಸಂಕೇತವನ್ನೇ ಹೊಂದಿರುತ್ತವೆ. ಈ ಮಹಾಕಾವ್ಯಗಳ ಮೇಲೆ,ಈಗಾಗಲೇ ಸಾಕಷ್ಟು ಧಾರಾವಾಹಿಗಳು ಕಥೆಗಳು ಹಾಗೂ ಕೆಲವು ಸಿನಿಮಾಗಳು ಬಂದಿದ್ದು,ಅವುಗಳ ಗಟ್ಟಿಯಾದ ಛಾಯೆ ಎಲ್ಲರಲ್ಲೂ ಜೀವನಪೂರ್ತಿ ಇರುತ್ತದೆ ಎಂಬ ದೃಢ ನಂಬಿಕೆಯಾಗಿದೆ.ಮಹಾಭಾರತದ […]

ಹಿಂದೂ ಧರ್ಮದ ಎರಡು ಪರಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಂತಹ ಈ ಮಹಾಕಾವ್ಯಗಳನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಅವುಗಳ ಅಧ್ಯಯನವನ್ನು ಮಾಡುತ್ತಾರೋ ಅಂತವರೆಲ್ಲ ಶ್ರೇಷ್ಠ ಯೋಗಿಗಳ ಜೀವನವನ್ನು ಹೊಂದುತ್ತಾರೆ ಎಂಬ ಮಾತಿದೆ.ರಾಮಾಯಣ ಮತ್ತು ಮಹಾಭಾರತದ ಕಥಾವಸ್ತುವಾಗಲಿ ಅಥವಾ ಆ ಕಾವ್ಯಗಳಲ್ಲಿರುವ ಪಾತ್ರಗಳು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾದ ಅಂತಹ ಸಂಕೇತವನ್ನೇ ಹೊಂದಿರುತ್ತವೆ.

ಈ ಮಹಾಕಾವ್ಯಗಳ ಮೇಲೆ,
ಈಗಾಗಲೇ ಸಾಕಷ್ಟು ಧಾರಾವಾಹಿಗಳು ಕಥೆಗಳು ಹಾಗೂ ಕೆಲವು ಸಿನಿಮಾಗಳು ಬಂದಿದ್ದು,
ಅವುಗಳ ಗಟ್ಟಿಯಾದ ಛಾಯೆ ಎಲ್ಲರಲ್ಲೂ ಜೀವನಪೂರ್ತಿ ಇರುತ್ತದೆ ಎಂಬ ದೃಢ ನಂಬಿಕೆಯಾಗಿದೆ.ಮಹಾಭಾರತದ ಪವರ್ಫುಲ್ ಮ್ಯಾನ್ ಕರ್ಣನ ಬಗ್ಗೆ ರಮೇಶ್ ವರ್ಮ ಒಂದು ಸಿನಿಮಾ ವನ್ನು ಮಾಡುತ್ತಿದ್ದಾರೆ ಅದರ ಹೆಸರು ಮಹಾವೀರ ಕರ್ಣ.

ಆಕ್ಷನ್ ಥ್ರಿಲ್ಲರ್ ಹಾಗೂ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ತಮ್ಮದೇ ಆದಂತಹ ಬ್ರ್ಯಾಂಡ್ ಕ್ರಿಯೇಟ್ ಮಾಡಿದ್ದ ರಮೇಶ್ ವರ್ಮ ಇದೀಗ ಮಹಾಭಾರತದ ಕರ್ಣನ ಕಥೆಯನ್ನು ಹೊಸ ರೀತಿಯಲ್ಲಿ ಹೇಳಲು ಹೊರಟಿರುವುದು ಸಂಚಲನ ಮೂಡಿಸಿದೆ.ಯಾರು ಈ ಕರ್ಣ ? ಕರ್ಣನ ಹಿನ್ನೆಲೆ ಏನು ? ಕರ್ಣನಿಗೆ ಯಾಕೆ ದಾನ ಶೂರ ಅಂತಾರೆ ?
ಇಡೀ ಮಹಾಭಾರತದ ಒಟ್ಟಾರೆ ಅಂಶದಲ್ಲಿ ಯಾಕೆ ಆತ ಒಬ್ಬ ಮಹಾನ್ ತಾರೆಯಂತೆ ಕಾಣುತ್ತಾನೆ ಎಂಬುದನ್ನು,
ತುಂಬಾ ಪರಿಣಾಮಕಾರಿಯಾದ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಿದ್ದಾರೆ ರಮೇಶ್ ವರ್ಮ.

ಪ್ರತಿಷ್ಠಿತ ಪೆನ್ ಮೂವೀಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ ಆರ್ ವಿ ಸ್ಟುಡಿಯೋಸ್ ಸಹಯೋಗದಲ್ಲಿ
ಕರ್ಣನ ಬಗ್ಗೆ ಮಹಾವೀರ ಕರ್ಣ ಸಿನಿಮಾ ಅನೌನ್ಸ್ ಆಗಿದ್ದು ಪ್ರೇಕ್ಷಕ ಪ್ರಭುಗಳಲ್ಲಿ ಕುತೂಹಲ ಮೂಡಿಸಿದೆ.ಚಿತ್ರಕ್ಕೆ ರಾಮಜೀ ದತ್ ಛಾಯಾಗ್ರಹಣ,ಪ್ರವೀಣ್ ಕುಡಿ ಸಂಕಲನ, ಶ್ರೀಮಣಿ ಸಂಭಾಷಣೆ ಹಾಗೂ ಜ್ಞಾನಿ ಸಂಗೀತವಿದೆ,
ಮತ್ತೊಂದು ಬಿಗ್ ಅಪ್ಡೇಟ್ ಅಂದ್ರೆ ಮಹಾವೀರ ಕರ್ಣ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿಯೇ ಬಿಡುಗಡೆ ಆಗಲಿದ್ದು,ಡಿಸೆಂಬರ್ 4 2026 ರ ದಿನಾಂಕವನ್ನು ನಿಗದಿ ಮಾಡಿದ್ದಾಗಿದೆ

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.