ಎನ್ಎಸ್ ರಾವ್ ಎಂಬ ಹೆಸರಿನ ಅದ್ಭುತ ಕಲಾವಿದನ ಬಗ್ಗೆ ಮಾತಾಡುವುದೇ ಒಂದು ಸಂತಸ ತರುವ ಕ್ಷಣ, ಎನ್ಎಸ್ ರಾವ್ ಕನ್ನಡ ಚಿತ್ರಂಗಖಂಡ ಒಬ್ಬ ಮಹಾನ್ ಚೇತನ ಅಭಿನಯದ ಒಂದು ಮಹಾಪರ್ವತ ಎಂದರೆ ಅತಿಶಯೋಕ್ತಿಯಾಗದು,

ಎನ್ಎಸ್ ರಾವ್ ಮಾಡಿದ ಎಲ್ಲ ಚಿತ್ರಗಳು ಆಲ್ಮೋಸ್ಟ್ ಹಿಟ್ ಅವರು ಹೇಳಿದ ಎಲ್ಲ ಸಂಭಾಷಣೆಗಳು,
ಅಂತಹ ಮೇರು ಪರ್ವತದ ಕುಡಿ ಎನ್ ಓಂ ಪ್ರಕಾಶ್ ರಾವ್ ಕೂಡ ತಾವು ಸಹ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಕನ್ನಡದಲ್ಲಿ ಒಂದಕ್ಕೊಂದು ವಿಭಿನ್ನ ಹಿಟ್ ಚಿತ್ರಗಳನ್ನು ಕೊಟ್ಟ ಬೇರೆ ನಿರ್ದೇಶಕ.

ಏಕೆ ಫಾರ್ಟಿ ಸೆವೆನ್ ಲಾಕಪ್ ಡೆತ್, ಹುಚ್ಚ, ಸಾಹುಕಾರ,ಕಲಾಸಿಪಾಳ್ಯ ಸೇರಿದಂತೆ ಒಂದಕ್ಕಿಂತಲೂ ಒಂದು ವಿಭಿನ್ನ ಚಿತ್ರಗಳನ್ನು ಮಾಡಿ ಹೆಸರು ಮಾಡಿದವರು ತಾವು ಒಬ್ಬ ಫೆಂಟಾಸ್ಟಿಕ್ ಕಲಾವಿದ ಅಂತಾ ಕೂಡ ಸಾಬೀತು ಮಾಡಿ ತೋರಿಸಿದ್ದಾರೆ.

ಇಂತಹ ಎರಡ ನಿರ್ದೇಶಕನೊಬ್ಬ ಟೆರರ್ ಆಕ್ಟರ್ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಜೊತೆಗೆ ಜಿಲ್ಲಾಧಿಕಾರಿ ಚಿತ್ರವನ್ನು ಈ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಘೋಷಣೆ ಮಾಡಲಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ಡೇಟ್.

ಈ ನೂತನ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದ್ದು ಇದೊಂದು ಪಕ್ಕ ಮಾಸ್ ಎಂಟರ್ಟೈನ್ಮೆಂಟ್ ಕಥೆಯಾಗಿದ್ದು ನೈಜ ಘಟನೆಗಳು ಈ ಚಿತ್ರಕ್ಕೆ ಪೂರ್ತಿ ಆಗಿವೆ ಎನ್ನುತ್ತಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.
ಒಪಿಆರ್ ಪಿಚ್ಚರ್ಸ್ ಲಾಂಛನದಲ್ಲಿ ಲಲಿತಮ್ಮ ಹಾಗೂ ಸುಶೀಲ ತಿಪಟೂರು ಅರ್ಪಿಸುತ್ತಿರುವ ಜಿಲ್ಲಾಧಿಕಾರಿ ಚಿತ್ರಕ್ಕೆ ಉಮೇಶ್ ಸಕ್ಕರೆ ನಾಡು ಬಂಡವಾಳ ಹೂಡುತ್ತಿದ್ದು ರವಿಕುಮಾರ್ ಛಾಯಾಗ್ರಹಣ ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ,
ಜಿಲ್ಲಾಧಿಕಾರಿ ಚಿತ್ರದ ಕಥೆಯನ್ನ ಡೆನ್ನಿಸಾ ಪ್ರಕಾಶ್ ಬರೆದಿದ್ದಾರೆ.
ನಾಯಕ ನಟ ಆದಿತ್ಯಗೆ ಜೋಡಿಯಾಗಿ ನಾಯಕಿಯಾಗಿ ನಡೆಸುತ್ತಿರುವ ರೂಪಾ ಸಿದ್ದಗಂಗಾ ಇವರಿಗೆ ಇದು ಮೊದಲ ಚಿತ್ರ,
ಇನ್ನುಳಿದಂತೆ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್, ಭಾಸ್ಕರ್ ಶೆಟ್ಟಿ, ಸ್ಮಿತಾ, ಯಶಸ್ ಅಭಿ ,ಅತ್ಯುತ್ ಕುಮಾರ್, ರಂಗಾಯಣ ರಘು, ಅವಿನಾಶ್, ಸ್ವಸ್ತಿಕ್ ಶಂಕರ್, ಚಿತ್ರ ಶಣೈ ಸುಧಾ ಬೆಳವಾಡಿ ಹಾಗೂ ಉಮೇಶ್ ಸಕ್ಕರೆನಾಡು ಇದ್ದಾರೆ.
ಹಾಗಿದ್ದರೆ ಆದಿತ್ಯಗೆ ಓಂಕಾರ ಬೀಳುವುದು ಗ್ಯಾರಂಟಿ.
ರವೀ ಸಾಸನೂರ್

