ಲಾಕ್ ಡೌನ್ 21 ಡೇಸ್

ಈಗಾಗಲೇ ನಾನು ಕೆಲವು ಶಾರ್ಟ್ ಫಿಲಂಸ್ ಗಳನ್ನ ನಿರ್ದೇಶನ ಮಾಡಿದ್ದೇನೆ, ದೊಡ್ಡ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು, ಅದಕ್ಕೆ ಅವಕಾಶಕೊಟ್ಟ ನಿರ್ಮಾಪಕರಿಗೆ ಧನ್ಯವಾದ ಎಂದು ಹೇಳಿದ್ದು ನಿರ್ದೇಶಕ ಮಧುಮೋಹನ್ ಮಾಚಯ್ಯ..

ಅರುಣಾ ಯಾದವ್ ಫಿಲ್ಮ್ ಹೌಸ್ ಬ್ಯಾನರ್ ಅಡಿಯಲ್ಲಿ,
ಒಬ್ಬ ಮಹಿಳಾ ನಿರ್ಮಾಪಕೀಯಾಗಿ ಇಂತದ್ದೊಂದು ಸದಭಿ ರುಚಿಯ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ ಎನ್ನುವುದು ಚಿತ್ರತಂಡದ ಮಾತಾಗಿತ್ತು..

ಲಾಕ್ ಡೌನ್ ಎನ್ನುವಂತಹ ಗಂಭೀರವಾದಂತಹ ವಿಚಾರ, lಭಾರತದಲ್ಲಿ ಎಷ್ಟೆಲ್ಲಾ ಗೊಂದಲಗಳಿಗೆ ಸಮಸ್ಯೆಗಳಿಗೆ ಹಾಗೂ ಆರ್ಥಿಕ ಹೊಡೆತಕ್ಕೆ ಕಾರಣವಾಯಿತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ..

ಅದರಲ್ಲೂ 21 ದಿನಗಳ ಲಾಕ್ ಡೌನ್, ಅಂತಹ ದಿನಗಳಲ್ಲಿ ಜನರ ಬದುಕು ಬವಣೆ ಅವರು ಎದುರಿಸಿದ ಸಮಸ್ಯೆ ಇದೆಲ್ಲವನ್ನ ಸೂಚ್ಯಂಕವಾಗಿಟ್ಟುಕೊಂಡು ಲಾಕ್ ಡೌನ್ 21 ಡೇಸ್ ಸಿನಿಮಾವನ್ನ ಮಾಡುತ್ತಿದ್ದೇವೆ.

ನಾವು ಮಾಡುತ್ತಿರುವಂತಹ ಲಾಕ್ ಡೌನ್ 21ಡೇಸ್ ಚಿತ್ರದಲ್ಲಿ ಒಂದೊಳ್ಳೆಯ ಪ್ರೇಮ ಕಥೆ ಇದ್ದು ಸಂಬಂಧಗಳ ಗಟ್ಟಿ ವಿಚಾರವನ್ನು ಇಲ್ಲಿ ಹೇಳಲಾಗಿದೆ ಎನ್ನುವುದು ನಿರ್ದೇಶಕರ ಮಾತಾಗಿತ್ತು..
ರವೀ ಸಾಸನೂರ್

