
ರವೀ..
2012 ರಿಂದ 2026 ನೀವು ನೋಡುತ್ತಿರುವ ಸಿನಿಮಾ ಇಂಡಸ್ಟ್ರಿ ಹೇಗಿದೆ ??
ಅರ್ಜುನ್ ದೇವ್..
ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ತುಂಬಾ ಬದಲಾವಣೆಯಾಗಿದೆ, ಕಥೆ ಹೇಳುವ ಸ್ಟೈಲ್ ಚೇಂಜ್ ಆಗಿದೆ, ಮೇಕಿಂಗ್ ಚೇಂಜ್ ಆಗಿದೆ, ಕಲಾವಿದರು ಪಾತ್ರಗಳನ್ನು ಆಯ್ಕೆ ಮಾಡುವಂತಹ ಯೋಚನೆ ಹರಿ ಚೇಂಜ್ ಆಗಿದೆ ಅದು ನನಗೂ ಕೂಡ ಅಪ್ಲೈ ಆಗುತ್ತೆ..
ರವೀ..
ನಟರಾಗಿ ಬಿಜಿಯಾಗಿದ್ದ ನೀವು,ನಿರ್ದೇಶನ ಯಾಕ್ ಶುರು ಮಾಡಿದ್ರಿ ??
ಅರ್ಜುನ್ ದೇವ್..
ನಾನೊಬ್ಬ ರಂಗಭೂಮಿ ಕಲಾವಿದ, ಅಪ್ಪನ ಜೊತೆಗೆ ತುಂಬಾ ಓಡಾಡಿದ್ದೀನಿ ಕೆಲಸ ಮಾಡಿದ್ದೇನೆ, ನಟನಾಗಿ ಕೆಲಸ ಮಾಡುತ್ತಲೆ ನಾನು ಬರೀತಾ ಇದ್ದೆ,
ಆಗಾಗ ನನ್ನಲ್ಲಿದ್ದ ನಿರ್ದೇಶಕ ನನ್ನನ್ನ ಬಡಿದು ಎಚ್ಚರ ಮಾಡುತ್ತಿದ್ದ, ಹಾಗಾಗಿ ನಾನೊಬ್ಬ ನಿರ್ದೇಶಕನ ಕ್ಯಾಪ್ ತೊಟ್ಟೆ, ಹಾಗೆ ಸಕ್ಸಸ್ ಕೂಡ ಆದೆ..

ರವೀ..
ನಟನೆ ಮತ್ತು ನಿರ್ದೇಶನ ಎರಡರಲ್ಲಿ ನಿಮಗೆ ಯಾವುದು ಈಸಿ ಯಾವುದು ಕಷ್ಟ ??
ಅರ್ಜುನ್ ದೇವ್..
ನಮ್ಮ ತಂದೆ ಡಾಕ್ಟರ್ ದೇವದಾಸ್ ಕಾಫಿಕಾಡ್ ಲೆಗಸಿ ತುಂಬಾ ದೊಡ್ಡದು, ಅವರೇ ನನಗೊಂತರ ದೊಡ್ಡ ಯುನಿವರ್ಸಿಟಿ,
ನನಗೆ ನಟನೆನೂ ಈಜಿ ನಿರ್ದೇಶನ ಮುಗಿಸಿ ಯಾವುದೋ ಕಷ್ಟವಲ್ಲ
ರವೀ..
ಟಾಸ್ ಚಿತ್ರದ ಬರವಣಿಗೆ ಬಗ್ಗೆ ಹೇಳಿ ??
ಅರ್ಜುನ್ ದೇವ್..
ಟಾಸ್ ಚಿತ್ರಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಬರೆದಿದ್ದು ಅಪ್ಪ, ಟಾಸ್ ಚಿತ್ರದ ಕಥೆಯನ್ನ ಎಂಟು ವರ್ಷದಲ್ಲಿ ಮಾಡಲಾಗಿದೆ, ಬರವಣಿಗೆ ವಿಚಾರಕ್ಕೆ ಅಪ್ಪ ಕಾಂಪ್ರಮೈಸ್ ಆಗುವುದಿಲ್ಲ..
ರವೀ..
ಟಾಸ್ ಚಿತ್ರದ ನಂತರ ಮುಂದಿನ ಪ್ರಾಜೆಕ್ಟ್ ಗಳು ಯಾವುವು ??
ಅರ್ಜುನ್ ದೇವ್..
ಸೆಪ್ಟೆಂಬರ್ 18ಕ್ಕೆ ಟಾಸ್ ಚಿತ್ರ ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ,
ಅದರ ನಂತರ ವಿಭಿನ್ನ ಜಾನರ್ ಕಥೆ ಕೇಳುತ್ತಿದ್ದೇನೆ ಕೆಲವು ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ..
Best Of Luck To ಅರ್ಜುನ್ ದೇವ್

