ಚಿತ್ರ : ಟಾಕ್ಸಿಕ್
ನಿರ್ದೇಶನ : ನೀತು ಮೋಹನ್ ದಾಸ್
ನಿರ್ಮಾಪಕರು : ಕೆವಿಎನ್ – ಮಾನ್ ಸ್ಟರ್ ಮೈಂಡ್ ಕ್ರಿಯೇಷನ್
ಕಲಾವಿದರು : ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನ್ ತಾರಾ, ತಾರಾ ಸುತಾರಿಯ, ಹುಮಾ ಖುರೇಷಿ ಇನ್ನಿತರರು.
ಅದು 1940 ರಿಂದ 1970 ರ ಕಾಲಘಟ್ಟ,ಆ ಸಮಯದಲ್ಲಿ ಪೋರ್ಚುಗೀಸರ ಅಧೀನದಲ್ಲಿದ್ದ ಗೋವಾದ ಹಾಗೂ ಅದರ ಸುತ್ತ ಮುತ್ತ ಹೇರಳವಾಗಿ ನಡೆಯುತ್ತಿದ್ದ ಡ್ರಗ್ಸ್ ದಂಧೆ,ಅಂಡರ್ವರ್ಲ್ಡ್, ಮಾಫಿಯಾ,ಮತ್ತು ಡೇಂಜರಸ್ ರೌಡಿಗಳ ಅಟ್ಟಹಾಸ ಇಂತಹ ಭಯಂಕರವಾದ ಕರಾಳ ಪ್ರಪಂಚದಲ್ಲಿ ತನ್ನ ಗತ್ತು ಗಾಂಭೀರ್ಯ ಹಾಗೂ ಬಲಿಷ್ಠವಾದ ಟೆರರ್ ಪಡೆಯಿಂದ ಅಖಾಡದಲ್ಲಿ ಹೆಸರು ಗಳಿಸಿ ತುಂಬಾನೇ ರೆಬೆಲ್ ಆಗಿದ್ದವನು ರಾಯ ( ಯಶ್ )..
ರಾಯನಿಗೆ ಬಲಗೈ ಬಂಟಳ ಹಾಗೆ ಅಷ್ಟೇ ಯಾಕೆ ರಾಯನ ಉಸಿರಿಗೆ ಉಸಿರಾಗಿ,ಅವನ ಹಿಂದೆ ನಿಂತು ಸಖತ್ ಮಾಸ್ಟರ್ ಪ್ಲಾನ್ ಮಾಡ್ತಾ ಇದ್ದ,ಮತ್ತೊಂದು ವೆಪನ್ ರಾಯನ ಅಕ್ಕ ಗಂಗಾ ( ನಯನ ತಾರಾ )
ಎಲ್ಲಿ ನೋಡಿದರೂ ರಾಯ, ಎಲ್ಲಿ ಹೋದರು ರಾಯ,ಯಾರ ಬಳಿ ಏನೇ ಚರ್ಚೆ ಮಾಡಿದರು ರಾಯ,ಅಖಾಡದ ತುಂಬೆಲ್ಲ ರಾಯನ ಹೆಸರು ಓಡಾಡುತ್ತಿದ್ದರಿಂದ, ಹೇಗಾದರೂ ಮಾಡಿ ರಾಯನ ಬಗ್ಗು ಬಡೆಯಬೇಕು ಅವನ ಅಧಿಪತ್ಯವನ್ನು ಅಂತ್ಯಗೊಳಿಸಬೇಕು ಎಂದು ಹೊಂಚು ಹಾಕುವ ಯಾವೊಂದು ಪಡೆಯು ರಾಯಣ್ಣ ಮುಂದೆ ನಿಲ್ಲಲು ಆಗದೆ ಶರಣಾಗತಿ ಹೊಂದುವಂತಹ ಪ್ರಸಂಗ,
ಇಂಥದ್ದೇ ಘನಘೋರ ಪರಿಸ್ಥಿತಿ ರಾಯನ ಜೊತೆ ದ್ವೇಷ ಕಟ್ಟಿಕೊಂಡು ಹೈರಾಣಾದ ಎಲಿಜಬೆತ್ ( ಹುಮಾ ಖುರೇಷಿ ) ಮತ್ತು ಆಕೆಯ ತಂಡದ್ದು,,ಎಲಿಜೆಬೆತ್ ಜತೆಗಿದ್ದ ಮತ್ತೊಬ್ಬ ದೊಡ್ಡ ರೌಡಿ ಪಂಟರ್ ರಾಯನ ಜೊತೆ ವೈರತ್ವ ಕಟ್ಟಿಕೊಳ್ಳಲಾಗದೆ ಅದಾಗಲೇ ರಾಯನ ಪ್ರೇಮದಲ್ಲಿ ಬಿದ್ದಿದ್ದ ತನ್ನ ಮಗಳ ರೆಬಿಕಾಳನ್ನ ( ತಾರಾ ಸುತಾರಿಯಾ ) ರಾಯನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ.
ಇದರ ಮಧ್ಯೆ ರಾಯನ ಬದುಕಿನಲ್ಲಿ ಪ್ರೀತಿಯ ಸುನಾಮಿಯನ್ನ ಹತ್ತಿಸುವ ಸರ್ಕಸ್ ನ ಚೆಲುವೆ ನಾಡಿಯಾ ( ಕಿಯಾರ ಅಡ್ವಾಣಿ ) ಒಂದು ಕಡೆಯಾದರೆ,
ರಾಯನ ದಿಟ್ಟ ನಡೆ-ನುಡಿಗೆ ಮನಸೋತ ಮತ್ತೊಬ್ಬ ಚೆಲುವೆ ಮೆಲ್ಲಿಸಾ ( ರುಕ್ಮಿಣಿ ವಸಂತ್ ) ಇನ್ನೊಂದು ಕಡೆ.
ನಾಡಿಯಾ,ರೆಬಿಕಾ ಮತ್ತು ಮೆಲ್ಲಿಸಾ ಈ ಮೂರಲ್ಲಿ ರಾಯ ಯಾರ ಜೊತೆ ಮದುವೆಯಾಗುತ್ತಾನೆ ಅನ್ನುವುದು ಹೈ ವೋಲ್ಟೇಜ್ ನ ಸಸ್ಪೆನ್ಸ್.
ಟಾಕ್ಸಿಕ್ ಚಿತ್ರದಲ್ಲಿ ಇಬ್ಬರು ಯಶ್ ದ್ವಯರು ನಮ್ಮನ್ನು ಕಾಡುತ್ತಾರೆ ಒಬ್ಬ ರಾಯನಾಗಿ, ಇನ್ನೊಬ್ಬ ಟಿಕೆಟ್ ಆಗಿ.
ಚಿತ್ರದ ಮೊದಲ ದೃಶ್ಯದಿಂದ ಕೊನೆಯ ತನಕ ರಾಯ ಕಂಪ್ಲೀಟ್ ಹೀರೋ ಆಗಿ ಘರ್ಜಿಸಿದರೆ,
ದ್ವಿತೀಯಾರ್ಧದ ನಂತರ ಬರುವ ಟಿಕೆಟ್ ಒಂತರ ಹೀರೋ ಆಗಿ ಕಾಣಿಸುತ್ತಾನೆ,
ರಾಯನನ್ನ ಕಂಡರೆ ಟಿಕೆಟಿಗೆ ಕೆಂಡದಂತಹ ಕೋಪ, ರಾಯ ಕಟ್ಟಿದ್ದ ಸಾಮ್ರಾಜ್ಯವನ್ನು ಟಿಕೆಟ್ ಸಂಪೂರ್ಣವಾಗಿ ಒಡೆಯಲು ಬರುತ್ತಾನೆ ಹಾಗೆ ಸಕ್ಸಸ್ ಕೂಡ ಆಗುತ್ತಾನೆ, ಅಷ್ಟಕ್ಕೂ ಯಾರು ಈ ಟಿಕೆಟ್ ?
ಆದರೆ ಕ್ಲೈಮ್ಯಾಕ್ಸ್ ನಲ್ಲಿ ಬರುವ ರಾಯ ಮತ್ತು ಟಿಕೆಟ್ ಇಬ್ಬರ ಮಧ್ಯದ ಫೈಟ್ ದೃಶ್ಯವನ್ನು ನೋಡಿದಾಗ ನೋಡುಗರಿಗೆ ಯಾರು ಹೀರೋ ಯಾರು ವಿಲನ್ ಅಂತಾನೆ ಗೊತ್ತಾಗುವುದಿಲ್ಲ ಇದುವೇ ಟಾಕ್ಸಿಕ್ ನ ಮತ್ತೊಂದು ಹೈಲೈಟ್.
ರಾಯನಾಗಿ ಹಾಗೂ ಟಿಕೆಟ್ ಆಗಿ ರಾಕಿಂಗ್ ಸ್ಟಾರ್ ಸಂಪೂರ್ಣವಾಗಿ ಟಾಕ್ಸಿಕ್ ಚಿತ್ರವನ್ನು ಆವರಿಸಿಕೊಂಡಿದ್ದಾರೆ, ಅದರಲ್ಲೂ ಟಿಕೆಟ್ ಪಾತ್ರ ನೋಡಿದಾಗ ನಮಗೆ ಹಳೆಯ ರಾಕಿಂಗ್ ಸ್ಟಾರ್ ಯಶ್ ಕಾಣಸಿಗುತ್ತಾರೆ.

ಇನ್ನುಳಿದಂತೆ ಕಿಯಾರ ಅಡ್ವಾಣಿ ಸೋ ಸೋ ಬ್ಯೂಟಿಫುಲ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯ ಓಕೆ ಓಕೆ.
ಆದರೆ ಗಂಗಾ ಪಾತ್ರದಲ್ಲಿ ಮಿಂಚಿರುವ ನಟಿ ನಯನ ತಾರಾ ಮಾತ್ರ ಇಲ್ಲಿ ನಿಜವಾಗಿಯೂ ಲೇಡೀ ಸೂಪರ್ ಸ್ಟಾರ್,ಯಶ್ ಈ ಮಾತನ್ನ ಆವತ್ತೇ ಹೇಳಿದ್ರು. ಹಾಗೆ ಚಿತ್ರದಲ್ಲಿ ಬರುವಂತಹ ಇನ್ನಷ್ಟು ಪಾತ್ರಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ, ವಿಶೇಷವಾಗಿ ಹೇಳುವುದಾದರೆ ಅಕ್ಕ ತಮ್ಮನಾಗಿ ರಾಕಿಂಗ್ ಸ್ಟಾರ್ ಯಶ್ ನಯನ ತಾರಾ ಎಮೋಷನಲ್ ದೃಶ್ಯಗಳನ್ನು ತುಂಬಾ ಅದ್ಭುತವಾಗಿ ಮಾಡಿದ್ದಾರೆ.
ಟಾಕ್ಸಿಟ್ ನಲ್ಲಿ ಭಾವನೆ, ಪ್ರೀತಿ, ಪ್ರೇಮ, ಪ್ರಣಯ, ಅಧಿಕಾರದ ಗದ್ದುಗೆ ಈ ರೀತಿಯ ಸಾಕಷ್ಟು ಎಲಿಮೆಂಟ್ಸ್ ಗಳನ್ನ ಸರಿಯಾದ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಉಣಪಡಿಸಿದ್ದಾರೆ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್.

ರಾಯನಾಗಿ ಟಾಕ್ಸಿಕ್ ಚಿತ್ರದಲ್ಲಿ ಯಶ್ ಹೇಳುವ ಸಂಭಾಷಣೆಗಳು ಪಕ್ಕಾ ಕಮರ್ಷಿಯಲ್ ಫೀಲ್ ಕೊಡುತ್ತವೆ, ಸಂಗೀತ,ಸಾಹಿತ್ಯ,
ಕ್ಯಾಮರಾ ವರ್ಕ್ ಎಲ್ಲವೂ ಓಕೆ.
ಕೆವಿಎನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ನಿರ್ಮಿಸಿರುವ ಟಾಕ್ಸಿಕ್
ಚಿತ್ರ ಮೊದಲ ಪ್ರೇಮ್ ನಿಂದ ಕೊನೆಯ ಫ್ರೇಮ್ ತನಕವೂ ತುಂಬಾ ರಿಚ್ ಆದಂತಹ ಅನುಭವ ಕೊಡುತ್ತದೆ,ಅಷ್ಟೇ ಅಲ್ಲದೇ ಇದೊಂದು ಬಿಗ್ ಕ್ಯಾನ್ವಾಸ್ ನಲ್ಲಿ ತಯಾರಾದಂತಹ ಪ್ರೊಜೆಕ್ಟ್ ಆಗಿದ್ದು,ನಮ್ಮ ರಾಕಿ ಬಾಯ್ ಎಂದು ಕಾಯುತ್ತಿದ್ದ ಎಲ್ಲ ಅಭಿಮಾನಿಗಳಿಗೆ ಟಾಕ್ಸಿಕ್ ಎಂಟರ್ ಟೈನ್ ಮಾಡುತ್ತದೆ.
ರೇಟಿಂಗ್ : 4/5
ರವೀ ಸಾಸನೂರ್
MasterNews365.Com

