Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಸೆಪ್ಟೆಂಬರ್ 18ಕ್ಕೆ” ಅನಿರೀಕ್ಷಿತ ಅತಿಥಿಗಳು
- ಸಿನಿಮಾ

“ಸೆಪ್ಟೆಂಬರ್ 18ಕ್ಕೆ” ಅನಿರೀಕ್ಷಿತ ಅತಿಥಿಗಳು

ನೀನಾಸಂ ಎಂಬ ಶಬ್ದ ಕಿವಿಗೆ ಬಿದ್ದಾಗ ಎಂತವರು ಕೂಡ ಒಂದು ಕ್ಷಣ ಸಂಭ್ರಮಿಸುತ್ತಾರೆ, ಕಲಾ ಲೋಕ ಕಂಡಂತಹ ಒಂದು ಮಹಾ ಅಸ್ತಿತ್ವದ ಸಂಕೇತವೇ ನೀನಾಸಂವೆಂಬ ಚೈತನ್ಯಶೀಲ ಸಂಸ್ಥೆ,ಅಂತಹ ನೀನಾಸಂ ಗರಡಿಯಿಂದ ಯಾರೇ ಚಂದನವನಕ್ಕೆ ಬಂದರೂ ಅಂತವರ ಬಗ್ಗೆ ಎಲ್ಲರೂ ವಿಶೇಷ ಹೆಮ್ಮೆ ಪಡುತ್ತಾರೆ,ನೀನಾಸಮ್ನ ಮತ್ತೊಂದು ಪ್ರತಿಭೆ ಮನೋಜ್ ಅಣ್ಣಯ್ಯ ಚಂದನವನಕ್ಕೆ ಚಂದದೊಂದು ಸಿನಿಮಾ ಮಾಡಿ ಅದಕ್ಕೆ ಅನಿರೀಕ್ಷಿತ ಅತಿಥಿಗಳು ಎಂಬ ಶೀರ್ಷಿಕೆ ಇಟ್ಟಿದ್ದಾರೆ. ನಗರದಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೋಜ್ ಅಣ್ಣಯ್ಯ ತಾವು ನಿರ್ದೇಶನ ಮಾಡಿದ […]

ನೀನಾಸಂ ಎಂಬ ಶಬ್ದ ಕಿವಿಗೆ ಬಿದ್ದಾಗ ಎಂತವರು ಕೂಡ ಒಂದು ಕ್ಷಣ ಸಂಭ್ರಮಿಸುತ್ತಾರೆ, ಕಲಾ ಲೋಕ ಕಂಡಂತಹ ಒಂದು ಮಹಾ ಅಸ್ತಿತ್ವದ ಸಂಕೇತವೇ ನೀನಾಸಂವೆಂಬ ಚೈತನ್ಯಶೀಲ ಸಂಸ್ಥೆ,
ಅಂತಹ ನೀನಾಸಂ ಗರಡಿಯಿಂದ ಯಾರೇ ಚಂದನವನಕ್ಕೆ ಬಂದರೂ ಅಂತವರ ಬಗ್ಗೆ ಎಲ್ಲರೂ ವಿಶೇಷ ಹೆಮ್ಮೆ ಪಡುತ್ತಾರೆ,
ನೀನಾಸಮ್ನ ಮತ್ತೊಂದು ಪ್ರತಿಭೆ ಮನೋಜ್ ಅಣ್ಣಯ್ಯ ಚಂದನವನಕ್ಕೆ ಚಂದದೊಂದು ಸಿನಿಮಾ ಮಾಡಿ ಅದಕ್ಕೆ ಅನಿರೀಕ್ಷಿತ ಅತಿಥಿಗಳು ಎಂಬ ಶೀರ್ಷಿಕೆ ಇಟ್ಟಿದ್ದಾರೆ.

ನಗರದಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೋಜ್ ಅಣ್ಣಯ್ಯ ತಾವು ನಿರ್ದೇಶನ ಮಾಡಿದ ಎರಡು ಶಾರ್ಟ್ ಫಿಲಂಸ್ ಹಾಗೂ ನಟಿಸಿದ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ,
ಸದ್ಯ ತಾವು ಮಾಡಿ ಮುಗಿಸಿದ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ ಸೇರಿ ಒಳ್ಳೆಯ ಕಂಟೆಂಟ್ ಇರುವ ಅನಿರೀಕ್ಷಿತ ಅತಿಥಿಗಳು ಚಿತ್ರ ಎಲ್ಲರ ಗಮನ ಸೆಳೆಯುತ್ತದೆ ಎಂಬ ಅಭಿಪ್ರಾಯ ಪಟ್ಟರು.

ಚಿತ್ರಕ್ಕೆ ಬಂಡವಾಳ ಹೂಡಿರುವ ಬಿ ವಿನೋದ್ ಕುಮಾರ್ ಒಬ್ಬ ಪಕ್ಕ ಸಿನಿಮಾ ಕಸಬುದಾರ, ನಿರ್ಮಾಪಕನಾಗುವ ಮೊದಲು ಇವರು ಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ತಂತ್ರಜ್ಞನಾಗಿ ತೊಡಗಿಸಿಕೊಂಡು ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ,
ಇಂತಹ ಸಿನಿಮಾ ಉತ್ಸಾಹಿ ಬಂಡವಾಳ ಹೂಡಿದ್ದು ಮಾತ್ರ ಅಪ್ಪಟ ಹೊಸ ಪ್ರತಿಭೆಗಳ ಮೇಲೆ ಎಂದರೆ ತಪ್ಪಾಗದು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೇವರೆಟ್ ಚಿತ್ರ ಮೈತ್ರಿಯಲ್ಲಿ ನಟಿಸಿ ಮೈತ್ರಿ ಜಗ್ಗಿ ಎಂದೆ ಖ್ಯಾತಿಗಳಿಸಿರುವ, ಜಗದೀಶ್, ವಿವೇಕ್ ಸಿಂಹ,ಸಂಪ್ರತಿ ಆಳ್ವ, ಹರಿತ್ ಷಾ,ಶ್ರೀದತ್ತ ದಯ ಪಲ್ಲವಗೆರೆ ಮುಂತಾದವರು ಈ ಚಿತ್ರದಲ್ಲಿ ಕಲಾವಿದರಾಗಿ ನಟಿಸಿದ್ದು ಪ್ರತಿಯೊಬ್ಬರ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ,
ಅಭಿಪ್ರಾಯ.ಸಿನಿಮಾದಲ್ಲಿ ನಟಿಸುವ ಪ್ರತಿಯೊಬ್ಬ ಕಲಾವಿದರು ತಮಗೆ ಒಂದಾದರೂ ಸೋಲೊ ಹಾಡು ಇರಬೇಕು ಎಂಬುದು ಅವರ ಕನಸಾಗಿರುತ್ತದೆ,


ಅಂತಹ ಕನಸು ಈ ಚಿತ್ರದಲ್ಲಿ ಈಡೇರಿದೆ ಅನ್ನೋದು ಜಗ್ಗಿಯ ಕೃಷಿ ಮಾತಾಗಿತ್ತು,ಇನ್ನು ನಿರ್ದೇಶಕ ಮನೋಜ್ ಅಣ್ಣಯ್ಯ ಮತ್ತು ತಾನು ಕಳೆದ 14 ವರ್ಷಗಳಿಂದ ಒಳ್ಳೆಯ ಸ್ನೇಹಿತರು ಇಬ್ಬರ ಮಧ್ಯದ ಬಾಂಡಿಂಗ್ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ ಎಂಬುದು ವಿವೇಕ್ ಹೇಳಿಕೆಯಾಗಿತ್ತು,

ಅನಿರೀಕ್ಷಿತ ಅತಿಥಿಗಳು ಚಿತ್ರಕ್ಕೆ ಏರಿಕ್ ಛಾಯಾಗ್ರಹಣ, ಸ್ವಾಮಿನಾಥನ್ ಮ್ಯೂಸಿಕ್ ಇದ್ದು, ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ ಎಂಬ ಮಾಹಿತಿ ಚಿತ್ತ ತಂಡ ನೀಡಿತು.ಅನಿರೀಕ್ಷಿತ ಅಥಿತಿಗಳು ಮುಂದಿನ ತಿಂಗಳು ಸಪ್ಟಂಬರ್ 18ಕ್ಕೆ ಬಿಡುಗಡೆಯಾಗುತ್ತಿದೆ ಎಂಬುದು ಸದ್ಯದ ಮಾಹಿತಿ


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.