Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಎಸ್ ಕೆ ಉಮೇಶ್ ಬರೆದ ಕಥೆ, ಚಾರ್ಜ್ ಶೀಟ್ ಆದಾಗ ??
- ರಿವ್ಯೂ

ಎಸ್ ಕೆ ಉಮೇಶ್ ಬರೆದ ಕಥೆ, ಚಾರ್ಜ್ ಶೀಟ್ ಆದಾಗ ??

ಚಿತ್ರ : ಚಾರ್ಜ್ ಶೀಟ್ ನಿರ್ಮಾಪಕರು : ಅರ್ಜುನ್ ಫಿಲಂಸ್ ನಿರ್ದೇಶನ : ವೆಂಕಟ್ ಭಾರದ್ವಾಜ್ ಕಲಾವಿದರು :ಹರ್ಷ ಅರ್ಜುನ್, ಸುಂದರ್ ರಾಜ್, ಅಮರ್,ಸತ್ಯಶ್ರೀ, ವೆಂಕಟ್ ಭಾರದ್ವಾಜ್ ಇನ್ನಿತರರು ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್,ರವರ ಕಥೆ ಶಾಕ್ ಚಾರ್ಜ್ ಶೀಟ್ ಆದಾಗ ?? ದೂರದ ಮಲೇಶಿಯಾಗೆ ಗಗನಯಾತ್ರಿ ಯಾಗಿ ಕೆಲಸ ಮಾಡುವಂತಹ ಅವಕಾಶವನ್ನ ತಪ್ಪಿಸಿ ಕೊಳ್ಳಬಾರದು ಎಂಬ ಆಶಯ ಮಗಳದ್ದಾದರೆ, ಅಷ್ಟು ದೂರ ಮಗಳನ್ನು ಕಳಿಸಲು ಮನಸ್ಸಾಗದ ತಂದೆ ರಾಮಣ್ಣ,.ಇಷ್ಟಾದ ಮೇಲೆ […]

ಚಿತ್ರ : ಚಾರ್ಜ್ ಶೀಟ್

ನಿರ್ಮಾಪಕರು : ಅರ್ಜುನ್ ಫಿಲಂಸ್

ನಿರ್ದೇಶನ : ವೆಂಕಟ್ ಭಾರದ್ವಾಜ್

ಕಲಾವಿದರು :
ಹರ್ಷ ಅರ್ಜುನ್, ಸುಂದರ್ ರಾಜ್, ಅಮರ್,ಸತ್ಯಶ್ರೀ, ವೆಂಕಟ್ ಭಾರದ್ವಾಜ್ ಇನ್ನಿತರರು

ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್,ರವರ ಕಥೆ ಶಾಕ್ ಚಾರ್ಜ್ ಶೀಟ್ ಆದಾಗ ??

ದೂರದ ಮಲೇಶಿಯಾಗೆ ಗಗನಯಾತ್ರಿ ಯಾಗಿ ಕೆಲಸ ಮಾಡುವಂತಹ ಅವಕಾಶವನ್ನ ತಪ್ಪಿಸಿ ಕೊಳ್ಳಬಾರದು ಎಂಬ ಆಶಯ ಮಗಳದ್ದಾದರೆ, ಅಷ್ಟು ದೂರ ಮಗಳನ್ನು ಕಳಿಸಲು ಮನಸ್ಸಾಗದ ತಂದೆ ರಾಮಣ್ಣ,.ಇಷ್ಟಾದ ಮೇಲೆ ಮಗಳು ಕೆಲಸಕ್ಕೆ ಅಂತ ಮಲೇಶಿಯಾಗಿ ಹೋಗುತ್ತಾಳೆ, ಅಲ್ಲಿಂದ ಅಪ್ಪನಿಗೆ ಆಗಾಗ ಪತ್ರ ಬರೆಯುತ್ತಿರುತ್ತಾಳೆ, ಅವಳಿಂದ ಪತ್ರ ಬರದೆ ಇದ್ದಾಗ ಆತಂಕಗೊಂಡ ಅಪ್ಪ ರಾಮಣ್ಣ, ಪೊಲೀಸ್ ಕಂಪ್ಲೇಂಟ್ ಕೊಡುತ್ತಾನೆ ಆದರೂ ಪೊಲೀಸರಿಂದ ತಕ್ಕ ಪ್ರತಿಕ್ರಿಯೆ ಸಿಗದೇ ಇರುವ ಕಾರಣ ನೊಂದು ಬೆಂದು ಹೋಗುತ್ತಾನೆ.

ಐದು ವರ್ಷಗಳಿಂದ ಕಾಣದೆ ನಾಪತ್ತೆಯಾದ ರಾಮಣ್ಣನ ಮಗಳ ಹುಡುಕಾಟದ ಕೆಲಸಕ್ಕೆ, ಕಲಾಸಿಪಾಳ್ಯ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಅಖಾಡಕ್ಕೆ ಇಳಿಯುತ್ತಾರೆ,ದೂರದ ಮಲೇಶಿಯಾಗೆ ಹೋಗಿದ್ದ,ರಾಮಣ್ಣನ ಮಗಳು ಪ್ರೀತಿಯಲ್ಲಿ ಬಿದ್ದ ವಿಚಾರ,ಇದರ ಮಧ್ಯೆ ಸುಪಾರಿ ಕಿಲ್ಲರ್ ನರಸಾರೆಡ್ಡಿಯ ಕ್ರೂರತನ ಹಾಗೆ ಕೆಲವು ದುಷ್ಟ ಜನರ ಅಟ್ಟಹಾಸ,
ಇದೆಲ್ಲವನ್ನು ಎಸ್ ಕೆ ಉಮೇಶ್ ತಂಡ ತುಂಬಾ ಕಟ್ಟುನಿಟ್ಟಾಗಿ ಪರಿಶೀಲಿಸಿ ತನಿಖೆ ಮಾಡಿ ಅಪರಾಧಿಯನ್ನು ಹಿಡಿದು ಶಿಕ್ಷೆ ಕೊಡುತ್ತಾರೆ,

ಅಷ್ಟಕ್ಕೂ ರಾಮಣ್ಣನಿಗೆ ಮಗಳು ಸಿಗುತ್ತಾಳ ಅಥವಾ ಇಲ್ಲವಾ ಅನ್ನುವುದೇ
ಚಾರ್ಜ್ ಶೀಟ್ ??ವೆಂಕಟ್ ಭಾರದ್ವಾಜ್ ನಿರ್ದೇಶನದ ಚಾರ್ಜ್ ಶೀಟ್ ನಲ್ಲಿ,ದಕ್ಷ ಪೊಲೀಸ್ ಅಧಿಕಾರಿ
ಎಸ್ ಕೆ ಉಮೇಶ್ ಪಾತ್ರದಲ್ಲಿ ಉತ್ತರ ಕರ್ನಾಟಕದ ದೈತ್ಯ ಪ್ರತಿಭೆ ಹರ್ಷ ಅರ್ಜುನ್, ತಮಗೆ ಸಿಕ್ಕ ಅವಕಾಶಕ್ಕೆ ಅದ್ಭುತವಾದ ನ್ಯಾಯ ಸಲ್ಲಿಸಿದ್ದಾರೆ..


ರಾಮಣ್ಣನಾಗಿ ಹಿರಿಯ ನಟ ಸುಂದರರಾಜ್ ಇದು ಇವರ 250ನೇ ಚಿತ್ರ,ಇವರ ಜತೆ ಸತ್ಯಶ್ರೀ,
ವೆಂಕಟ್ ಭಾರದ್ವಾಜ್, ಡಾ. ಪ್ರಮೋದ್, ಸಂತೋಷ್, ರೂಪೇಶ್, ಚೇತನಾ ಖೋತ್, ಡಾ. ಸುಧಾಕರ್ ಶೆಟ್ಟಿ ಹಾಗೂ ಇತರರು.

ಚಾರ್ಜ್ ಶೀಟ್ ಸಿನಿಮಾವನ್ನ ಒಮ್ಮೆ ನೋಡಬಹುದು..

ರೇಟಿಂಗ್ 3.5 / 5

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.