ಚಿತ್ರದ ನಾಯಕ ರಾಮ ಶಾಸ್ತ್ರಿ ಒಬ್ಬ ಬುದ್ಧಿವಂತ ಮತ್ತು ಸೌಮ್ಯ ಸ್ವಭಾವದ ಎಂಬಿಬಿಎಸ್ (MBBS) ವೈದ್ಯಕೀಯ ವಿದ್ಯಾರ್ಥಿ. ಆದರೆ, ಪ್ರೀತಿಯಲ್ಲಿ ಎದುರಾಗುವ ತೀವ್ರ ದ್ರೋಹ ಮತ್ತು ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಆತ ಸ್ಥಳೀಯ ಗೂಂಡಾಗಳ ಜಗಳದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ತನ್ನ ಹೆತ್ತವರನ್ನು ಮತ್ತು ಕುಟುಂಬವನ್ನು ರಕ್ಷಿಸಲು ತಾನು ಸತ್ತಿರುವುದಾಗಿ ನಾಟಕವಾಡಿ ಭೂಗತ ಜಗತ್ತಿಗೆ (Underworld) ಪ್ರವೇಶಿಸುತ್ತಾನೆ. ಮುಂದೆ ಆತ ಬಡವರನ್ನು ರಕ್ಷಿಸುವ ಮತ್ತು ಕ್ರೂರ ಎದುರಾಳಿ ಡಾನ್‌ಗಳ ವಿರುದ್ಧ ಹೋರಾಡುವ ಒಬ್ಬ ಶಕ್ತಿಶಾಲಿ ಹಾಗೂ ಜನಪ್ರಿಯ ಡಾನ್ ಆಗಿ ಬದಲಾಗುತ್ತಾನೆ,
ಇದು ದರ್ಶನ್ ಅಭಿನಯದ ಶಾಸ್ತ್ರಿ.

ನಿಜ ಜೀವನದಲ್ಲಿಯೂ ದರ್ಶನ್ ರವರ ಅಪ್ಪಟ ಅಭಿಮಾನಿಯಾಗಿ,ಹಾಗೇ ಚಿತ್ರದಲ್ಲಿಯೂ ಸಹ ದರ್ಶನ್ ಅವ್ರ ಅಭಿಮಾನಿಯಾಗಿ ಕಾಣಿಸಿಕೊಂಡಿರುವ,
ಯುವರೈತ ಚೇತನ್ ಗೌಡ ತಾವೇ ನಿರ್ಮಿಸಿ,ನಾಯಕ ನಟರಾಗಿ ನಟಿಸುತ್ತಿರುವ ಭವ್ಯ ಗೌಡ ಅಭಿನಯದ ‘ ದೇವಿ’ ಚಿತ್ರದ ಸಾಹಸ ಸನ್ನಿವೇಷದ ಚಿತ್ರೀಕರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ 50 ಅಡಿ ಕಟೌಟ್ ಹಾಗೂ ಚಿತ್ರ ಪ್ರದರ್ಶನದ ಹಿನ್ನೆಲೆ ಯಲ್ಲಿ ಸಾಹಸ ಸನ್ನಿವೇಷದ ಚಿತ್ರೀಕರಣವನ್ನು,
ಲಗ್ಗೆರೆಯ
ಆಕಾಶ್ ಚಿತ್ರಮಂದಿರದ ಮುಂದೆ ಮಾಡಲಾಯಿತು.

ಚಿತ್ರದ ಪ್ರಮುಖ ಸಾಹಸ,ದೃಶ್ಯ ವೊಂದರ ಚಿತ್ರೀಕರಣದಲ್ಲಿ,
ನಾಯಕ ಚೇತನ್ ಗೌಡ, ಹುಲಿ ಕಾರ್ತಿಕ್ ಸೇರಿ ಸುಮಾರು ಜನ,
ಸಾಹಸ ಕಲಾವಿದರು ಭಾಗವಹಿಸಿದ್ದರು,ದೇವಿ ಚಿತ್ರದಲ್ಲಿ ಪಾತ್ರಧಾರಿಗಳಾಗಿ ಇಂದು ಅಧಿಕೃತವಾಗಿ ಎಂಟ್ರಿಯಾಗಿದ್ದು,
ಕಾಕ್ರೋಚ್ ಸುಧಿ ಮತ್ತು ಯಶ್ ಶೆಟ್ಟಿ,ಇಬ್ಬರದೂ ಇಲ್ಲಿ ಬಹುತೇಕ ನೆಗೆಟಿವ್ ಶೇಡ್ ಇರಬಹುದು ಎಂಬ ಸುಳಿವು,ನಿರ್ದೇಶಕ ಪ್ರಕಾಶ್ ಕೊಟ್ಟರು.


