ಭಾರತೀಯ ಕ್ರಿಕೆಟ್ ತಂಡದ ಯೋಧರು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಮ್ಯಾಚ್ಗಳನ್ನ ಆಡಲು ಸಜ್ಜಾಗಿದ್ದಾರೆ,
ಲಂ ಕಂಡರನ್ನು ಸದೆ ಬಡಿದು ಅದ್ಭುತವಾದ ಆಟವಾಡಿ ಚಾಂಪಿಯನ್ಶಿಪ್ ಅಂಗಳಕ್ಕೆ ಮರಳಿ ತನ್ನ ಪ್ರಾಬಲ್ಯವನ್ನು ಹಾಗೆ ಉಳಿಸಿಕೊಳ್ಳುವ ಭರವಸೆ ಹೊಂದಿದ್ದಾರೆ.
ಅಂದೊಂದಿತ್ತು ಕಾಲ ಅದೇನಪ್ಪ ಅಂದ್ರೆ,
ಆಸ್ಟ್ರೇಲಿಯಾ ವಿರುದ್ಧ ಯಾರೇ ಆಡಲಿ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು ಜಗಜ್ಜಾಹಿರಾಗಿತ್ತು.
ಒಂದು ವೇಳೆ ಆಸ್ಟ್ರೇಲಿಯಾದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ, ನಾವು ಬಹುಬೇಗನೆ ಆಲೌಟ್ ಆಗುತ್ತೇವೆ ಎಂಬ ಭಯ ಒಂದು ಕಡೆಯಾದರೆ,
ಟಾಸ್ ಸೋತು ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿದರೆ ಅದು ಗಳಿಸುವ ಗರಿಷ್ಠ ಮೊತ್ತವನ್ನು ತಲುಪಲಾಗದೆ ನಾವು ಸೋಲುತ್ತೇವೆ ಎಂಬ ಭಯ ಇನ್ನೊಂದು ಕಡೆ,
ಒಟ್ಟಾಗಿ ಈ ಪರಿಸ್ಥಿತಿ ಯನ್ನು ಬಹುತೇಕ ಇಲ್ಲ ತಂಡಗಳು ಅನುಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
1990 ರಿಂದ 2010ರ ತನಕ ಆಸ್ಟ್ರೇಲಿಯಾ ಕ್ರಿಕೆಟ್ ಇದೆ ಲಯವನ್ನು, ಕಾಪಾಡಿಕೊಂಡು ಬಂದಿದ್ದು ಕ್ರಿಕೆಟ್ ಇತಿಹಾಸದಲ್ಲಿ ಕಾಣಸಿಗುತ್ತದೆ.

ಆದರೆ ಈಗ ಕಾಲ ಬದಲಾಗಿದೆ, ಕಳೆದ 15 ವರ್ಷಗಳಿಂದ ನಮ್ಮ ಭಾರತ ಕ್ರಿಕೆಟ್ ತಂಡ ಆ ಒಂದು ಪಟ್ಟವನ್ನು ಅಲಂಕರಿಸಿ ಸಿಂಹದ ಹೆಜ್ಜೆಯನ್ನು ಇಟ್ಟು ಮುನ್ನಡೆಯುತ್ತಿದೆ,
ಅದ್ಬುತ ಪ್ರತಿಭಾವಂತ ಆಟಗಾರರ ಜೊತೆ,ಕಣಕ್ಕಿಳಿಯುವ ನಮ್ಮ ಭಾರತೀಯರು ಗ್ರೇಟ್ ಕ್ರಿಕೆಟ್ ಆಡಿ,
ಮತ್ತೇ ಮ್ಯಾಜಿಕ ಮಾಡುತ್ತಾರೆ ಎಂಬುದು ನಮ್ಮ ಆಶಯ..
ರವೀ ಸಾಸನೂರ್

