Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರಿವ್ಯೂ / ರೇಟಿಂಗ್ ಎಷ್ಟು ಇಂಪಾರ್ಟೆಂಟ್ ??
- ರಿವ್ಯೂ - ವಿಶೇಷ ಸಮಾಚಾರ

ರಿವ್ಯೂ / ರೇಟಿಂಗ್ ಎಷ್ಟು ಇಂಪಾರ್ಟೆಂಟ್ ??

ರಿವ್ಯೂ / ರೇಟಿಂಗ್ಎಷ್ಟು ಇಂಪಾರ್ಟೆಂಟ್ ?? ಗ್ರಾಹಕನೊಬ್ಬ ತಾನು ಕೊಂಡುಕೊಳ್ಳುವ ಯಾವುದೇ ವಸ್ತುವನ್ನಾಗಲಿ ಒಂದೇ ಸಾರಿ ಖರೀದಿಸಲಾರ ಅದರ ಬಗ್ಗೆ ಅದರ ಗುಣಮಟ್ಟ ಅದರ ಬಳಕೆಯ ವಿಧಾನ ಮುಂತಾದವುಗಳ ಬಗ್ಗೆ ವಿಚಾರಿಸಿ ಪರಾಮರ್ಶಿಸಿ ಅದನ್ನು ಈಗಾಗಲೇ ಉಪಯೋಗಿಸಿರುವ ನಾಲ್ಕು ಜನರ ಹೇಳಿಕೆ ಮತ್ತು ಅಭಿಪ್ರಾಯಗಳ ಮೇಲೆ ಆ ಗ್ರಾಹಕ ತನಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾನೆ, ಇತ್ತೀಚಿಗೆ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸೌಂಡ್ ಮಾಡುತ್ತಿರುವ ಒಂದು ಹೆಸರು ಅದು ರಿವ್ಯೂ ಮತ್ತು ರೇಟಿಂಗ್ ಅನ್ನೋದು, ರಿವ್ಯೂ ಅನ್ನುವುದಾಗಲಿ ಅಥವಾ ರೇಟಿಂಗ್ […]

ರಿವ್ಯೂ / ರೇಟಿಂಗ್
ಎಷ್ಟು ಇಂಪಾರ್ಟೆಂಟ್ ??

ಗ್ರಾಹಕನೊಬ್ಬ ತಾನು ಕೊಂಡುಕೊಳ್ಳುವ ಯಾವುದೇ ವಸ್ತುವನ್ನಾಗಲಿ ಒಂದೇ ಸಾರಿ ಖರೀದಿಸಲಾರ ಅದರ ಬಗ್ಗೆ ಅದರ ಗುಣಮಟ್ಟ ಅದರ ಬಳಕೆಯ ವಿಧಾನ ಮುಂತಾದವುಗಳ ಬಗ್ಗೆ ವಿಚಾರಿಸಿ ಪರಾಮರ್ಶಿಸಿ ಅದನ್ನು ಈಗಾಗಲೇ ಉಪಯೋಗಿಸಿರುವ ನಾಲ್ಕು ಜನರ ಹೇಳಿಕೆ ಮತ್ತು ಅಭಿಪ್ರಾಯಗಳ ಮೇಲೆ ಆ ಗ್ರಾಹಕ ತನಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾನೆ,

ಇತ್ತೀಚಿಗೆ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸೌಂಡ್ ಮಾಡುತ್ತಿರುವ ಒಂದು ಹೆಸರು ಅದು ರಿವ್ಯೂ ಮತ್ತು ರೇಟಿಂಗ್ ಅನ್ನೋದು,

ರಿವ್ಯೂ ಅನ್ನುವುದಾಗಲಿ ಅಥವಾ ರೇಟಿಂಗ್ ಅನ್ನುವುದಾಗಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವೇಸಾಮಾನ್ಯವಾಗಿರುವ ಕಡ್ಡಾಯ ಮಾನದಂಡವಾದ, ತುಂಬಾ ಹರಿತವಾದ ಅಸ್ತ್ರವಾಗಿ ನಿಂತಿದೆ.

ಅದರಲ್ಲೂ ವಿಶೇಷವಾಗಿ ಸಿನಿಮಾಗಳ ಚರ್ಚೆ ಬಂದಾಗ,
ಭಾಷೆ ಯಾವುದೇ ಆಗಿರಲಿ ಅದರ ಪೋಸ್ಟರ್ ಟೀಸರ್ ಟ್ರೈಲರ್ ಹಾಡುಗಳು ಹಾಗೂ ಬಿಡುಗಡೆಯಾದ ಇನ್ನಿತರ ಕಂಟೆಂಟ್ಗಳಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ತಮ್ಮ ಹೇಳಿಕೆಗಳನ್ನ ಕೊಡುವುದನ್ನು ರಿವ್ಯೂ ರೂಪದಲ್ಲಿ ನಾವು ಗಮನಿಸಿರುತ್ತೇವೆ,

ಅಷ್ಟಕ್ಕೂ ರಿವ್ಯೂ ಎಂದರೇನು ??

ಒಂದು ವಿಷಯದ ಬಗ್ಗೆಯಾಗಲಿ ಅಥವಾ ಒಂದು ವಸ್ತುವಿನ ಬಗ್ಗೆಯಾಗಲಿ ಅಥವಾ ಒಂದು ಅಂಶದ ಬಗ್ಗೆ ಆಗಲಿ ಗ್ರಹಣವಾಗಿ ನೋಡಿ ಪರಾಮರ್ಶಿಸಿ ವಿಶ್ಲೇಷಿಸಿ ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಂಗ್ರಹಣೆ ಮಾಡಿ ನಾವು ನೀಡುವ ಪ್ರಾಮಾಣಿಕ ಅಭಿಪ್ರಾಯವೇ ರಿವ್ಯೂ ಆಗಿರುತ್ತದೆ,

ಒಂದೇ ಒಂದು ರಿವ್ಯೂ ಒಂದು ಪ್ರಾಡಕ್ಟ್ ಅನ್ನು ಜನರತ್ತ ತಲುಪಿಸಲು ಬಹುದು ಹಾಗೆ ಜನರನ್ನ ತಲುಪದೇ ಕೂಡ ಇರಬಹುದು,

ಪ್ರಾಡಕ್ಟ್ ಮತ್ತು ಗ್ರಾಹಕರ ಮಧ್ಯದ ಗಟ್ಟಿಯಾದ ಕುಂಡಿ ಅಂತಿರುವ ಈ ರವಿಯು ಅಥವಾ ರೇಟಿಂಗ್ ಅನ್ನೋದು ಸಿನಿಮಾ ಸೇರಿ ಎಲ್ಲ ಕ್ಷೇತ್ರಕ್ಕೂ ನೇರವಾಗಿ ಸಂಬಂಧವನ್ನು ಹೊಂದಿದೆ ಎಂದರೆ ತಪ್ಪಾಗದು,

ಯಾವುದೋ ಒಂದು ಕಂಪನಿಯ ವಸ್ತುವನ್ನಾಗಲಿ, ಅಥವಾ ವ್ಯಕ್ತಿಯನ್ನಾಗಲಿ, ಅಥವಾ ಒಂದು ವಿಷಯವನ್ನಾಗಲಿ ಸುಖಾ ಸುಮ್ಮನೆ ಬಹುವಾಗಿ ಮೆಚ್ಚಿಕೊಂಡು ಹೊಗಳುವುದು ಅಥವಾ ಸುಮ್ಮನೆ ಟೀಕಿಸುವುದು ಅದು ನಿಜವಾದ ರಿವ್ಯೂ ಅಲ್ಲವೇ ಅಲ್ಲ,

ಬೇರೆಯವರಿಗಾಗಲಿ ಇಲ್ಲ ಗ್ರಾಹಕರಿಗಾಗಲಿ ಇಲ್ಲ ಆಯಾ ವಸ್ತುಗಳನ್ನ ಆಯಾ ಚಿತ್ರಗಳನ್ನ ನೋಡುವಂತವರಿಗಾಗಲಿ ಕಾಣದೆ ಇರುವ ಕೆಲವು ಅಂಶಗಳನ್ನು ತುಂಬಾ ನ್ಯಾಯಯುತವಾಗಿ ಹಾಗೂ ಸಕಾರಾತ್ಮಕ ವಾದಂತಹ ಕಾರಣಗಳೊಂದಿಗೆ ಕನ್ವಿನ್ಸ್ ಮಾಡಿ,
ಒಳ್ಳೆಯ ಮಾಹಿತಿಯನ್ನ ಸಮಾಜಕ್ಕೆ ಹಂಚುವುದೇ
ಅಸಲಿ ರಿವ್ಯೂ..

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.